ಹಿನ್ನೋಟ | ಕಳೆದ ಐದು ಚುನಾವಣೆಗಳಲ್ಲಿ ‘ಎಕ್ಸಿಟ್‌ ಪೋಲ್‌’ ಭವಿಷ್ಯ ಸುಳ್ಳಾಗಿದ್ದೇ ಹೆಚ್ಚು!

Date:

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮುಗಿದಿದೆ. ಫಲಿತಾಂಶ ಪ್ರಕಟವಾಗುವುದು ಬಾಕಿ ಇದೆ. ಮಂಗಳವಾರ ಸಂಜೆ ಹಲವು ಸಂಸ್ಥೆಗಳು ತಮ್ಮ ‘ಚುನಾವಣೋತ್ತರ ಸಮೀಕ್ಷೆ’ (ಎಕ್ಸಿಟ್‌ ಪೋಲ್‌) ಅಂಕಿಅಂಶಗಳನ್ನು ಹಂಚಿಕೊಂಡಿವೆ. ಎನ್‌ಡಿಎ ಸರಾಸರಿ 130-142 ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಸರ್ಕಾರ ರಚಿಸಬಹುದು. ಮಹಾಘಟಬಂಧನ್ ಮೈತ್ರಿಕೂಟವು 85-105 ಸ್ಥಾನಗಳವರೆಗೆ ಗೆಲ್ಲಬಹುದು ಎಂದು ಹೇಳುತ್ತಿವೆ.

ಈ ಚುನಾವಣೋತ್ತರ ಸಮೀಕ್ಷೆಯನ್ನು ನಂಬುವುದೋ-ಬೇಡವೋ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿವೆ. ಅದಕ್ಕೆ ಕಾರಣ, ಈ ಹಿಂದೆ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು ಲೋಕಸಭಾ ಚುನಾವಣೆಯಲ್ಲಿ ಎಕ್ಸಿಟ್‌ ಪೋಲ್‌ಗಳು ಹೇಳಿದ್ದ ಅಂಕಿಅಂಶಕ್ಕಿಂತ ಫಲಿತಾಂಶಗಳು ಅಗಾಧ ವ್ಯತ್ಯಾಸವನ್ನು ಹೊಂದಿದ್ದವು. ಈ ಬಾರಿ, ಬಿಹಾರದಲ್ಲಿಯೂ ಇಂತಹದ್ದೇ ಫಲಿತಾಂಶ ಬರಬಹುದು. ಎಕ್ಸಿಟ್ ಪೋಲ್ ಅಂಕಿಅಂಶಗಳು ಮತ್ತೊಮ್ಮೆ ತಲೆಕೆಳಗಾಗಬಹುದು ಎಂಬ ಅಭಿಪ್ರಾಯಗಳಿವೆ.

ಇದೇ ಸಮಯದಲ್ಲಿ ಇತ್ತೀಚೆಗೆ ನಡೆದ ಐದು ಪ್ರಮುಖ ಚುನಾವಣೆಗಳಾದ ಮಹಾರಾಷ್ಟ್ರ, ದೆಹಲಿ, ಹರಿಯಾಣ, ಜಾರ್ಖಂಡ್ ಹಾಗೂ ಲೋಕಸಭೆಯಲ್ಲಿನ ಎಕ್ಸಿಟ್‌ ಪೋಲ್‌ ಭವಿಷ್ಯವಾಣಿಗಳು ಹೇಗಿದ್ದವು? ಫಲಿತಾಂಶ ಏನಾಯಿತು? ನೋಡೋಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಕ್ಸಿಟ್‌ ಪೋಲ್‌ಗಳ ಹಿನ್ನೋಟ

ಮಹಾರಾಷ್ಟ್ರ
ಎಕ್ಸಿಟ್ ಪೋಲ್‌ಗಳು ಹೇಳಿದ್ದು: ಮಹಾರಾಷ್ಟ್ರದ 288 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ (ಬಿಜೆಪಿ, ಎನ್‌ಸಿಪಿ (ಅಜಿತ್ ಬಣ) ಹಾಗೂ ಶಿವಸೇನೆ (ಶಿಂದೆ ಬಣ)) 150 ರಿಂದ 170 ಸ್ಥಾನಗಳನ್ನು ಗಳಿಸಲಿವೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) 110 ರಿಂದ 130 ಸ್ಥಾನಗಳನ್ನು, ಸಣ್ಣ ಪಕ್ಷಗಳು 8 ರಿಂದ 10 ಸ್ಥಾನಗಳನ್ನು ಗೆಲ್ಲಲಿವೆ ಎಂದು ಹೇಳಿದ್ದವು.

ಆದರೆ, ಫಲಿತಾಂಶವು ಎಕ್ಸಿಟ್‌ ಪೋಲ್‌ನ ನಿರೀಕ್ಷೆಗಳನ್ನು ಮೀರಿತ್ತು. ಒಟ್ಟು 288 ಸ್ಥಾನಗಳಲ್ಲಿ ಮಹಾಯುತಿ 235 ಸ್ಥಾನಗಳನ್ನು ಗೆದ್ದು, ಭದ್ರ ಸರ್ಕಾರ ರಚಿಸಿತು. ಎಂವಿಎ ತೀರಾ ಹೀನಾಯವಾಗಿ ಸೋಲುಂಡಿತು.

ದೆಹಲಿ
ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದು, ಬಿಜೆಪಿ ಭಾರೀ ಸಂಖ್ಯೆಯಲ್ಲಿ ಗೆಲ್ಲಲಿದೆ. ದೆಹಲಿಯ ಒಟ್ಟು 70 ಸ್ಥಾನಗಳ ಪೈಕಿ ಬಹುತೇಕ ಸರಾಸರಿ 60 ಸ್ಥಾನಗಳನ್ನು ಬಿಜೆಪಿ ಗೆಲ್ಲಬಹುದು ಎಂದು ಹಲವು ಸಮೀಕ್ಷೆಗಳು ಹೇಳಿದ್ದವು.

ಆದರೆ, ಫಲಿತಾಂಶವು ಬಿಜೆಪಿಗೆ 48, ಎಎಪಿ 22 ಹಾಗೂ ಕಾಂಗ್ರೆಸ್ ಶೂನ್ಯ ಸಾಧನೆಯೊಂದಿಗೆ ಬಂದಿತು.

ಎಕ್ಸಿಟ್‌ ಪೋಲ್‌ಗಳಲ್ಲಿ P-Marq ಕೊಂಚ ನಿಖರ ಭವಿಷ್ಯವನ್ನು ಮುಂದಿಟ್ಟಿತ್ತು. ಪಿ-ಮಾರ್ಕ್‌- ಎಎಪಿ 26, ಬಿಜೆಪಿ 44 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿತ್ತು. ಆದಾಗ್ಯೂ, ಬಿಜೆಪಿ 2 ಸ್ಥಾನಗಳನ್ನು ಹೆಚ್ಚಾಗಿ ಗೆದ್ದುಕೊಂಡಿತು.

ಹರಿಯಾಣ
ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದು, ಕಾಂಗ್ರೆಸ್‌ಗೆ 44 ರಿಂದ 64 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆಯುತ್ತದೆ. ಬಿಜೆಪಿ 15 ರಿಂದ 32 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದ್ದವು.

ಆದರೆ, ಫಲಿತಾಂಶವು ಮತದಾರರನ್ನು ಮತ್ತು ವಿರೋಧಿಗಳನ್ನು ಅಚ್ಚರಿಗೊಳಿಸಿತು. 48 ಸ್ಥಾನಗಳನ್ನು ಬಿಜೆಪಿ ಗೆದ್ದಿತು. ಇದು ಹರಿಯಾಣದಲ್ಲಿ ಪಕ್ಷಕ್ಕೆ ಸಾರ್ವಕಾಲಿಕ ಅತೀ ಹೆಚ್ಚು ಸ್ಥಾನಗಳ ಗೆಲುವಾಗಿತ್ತು. ಕಾಂಗ್ರೆಸ್ 37 ಸ್ಥಾನಗಳನ್ನು ಗಳಿಸಿ ವಿಪಕ್ಷವಾಗಿಯೇ ಉಳಿಯಿತು. ಬಹುಮತಕ್ಕೆ 9 ಸ್ಥಾನಗಳನ್ನು ಕಡಿಮೆ ಗೆದ್ದಿತು.

ಜಾರ್ಖಂಡ್
ಎಕ್ಸಿಟ್ ಪೋಲ್‌ಗಳು ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಇರಲಿದೆ. ಒಟ್ಟು 81 ಸ್ಥಾನಗಳ ಪೈಕಿ ಜೆಎಂಎಂ ನೇತೃತ್ವದ ಐಡಿಯಾ ಕೂಟವು ಸುಮಾರು 38 ಸ್ಥಾನಗಳನ್ನು ಮತ್ತು ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 40 ಸ್ಥಾನಗಳನ್ನು ಗೆಲ್ಲಲಿವೆ ಎಂದು ಹೇಳಿದ್ದವು.

ಆದರೆ, ಫಲಿತಾಂಶದಲ್ಲಿ ಹೇಮಂತ್ ಸೊರೇನ್ ಅವರ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟವು 50 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತು. ಇದು ಅದ್ಭುತ ಜನಾದೇಶವಾಗಿತ್ತು. ಎನ್‌ಡಿಎ 31 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು.

2024ರ ಲೋಕಸಭಾ ಚುನಾವಣೆ
ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎಗೆ ಭಾರಿ ಬಹುಮತ ಗಳಿಸಲಿದೆ. ಬಿಜೆಪಿಯ ಚಾರ್‌ಸೋ ಪಾರ್‌ನಂತೆ 400 ಸ್ಥಾನಗಳನ್ನು ಎನ್‌ಡಿಎ ಗೆಲ್ಲಲಿದೆ ಎಂದು ಹೇಳಿದ್ದವು.

ಆದರೆ, ಫಲಿತಾಂಶವು ಎನ್‌ಡಿಎ 293 ಸ್ಥಾನಗಳನ್ನು ಮಾತ್ರವೇ ಗೆದ್ದಿತು. ಎಕ್ಸಿಟ್‌ ಪೋಲ್‌ಗೆ ಹೋಲಿಸಿದರೆ ತೀರಾ ಕಡಿಮೆ ಸ್ಥಾನಗಳನ್ನು ಬಿಜೆಪಿ ಗಳಿಸಿತು. ಇದು 2019ರ ಚುನಾವಣೆ ಹೋಲಿಸಿದರೆ, 63 ಸ್ಥಾನಗಳಷ್ಟು ಕಡಿಮೆ ಸ್ಥಾನಗಳನ್ನು ಎನ್‌ಡಿಎ ಗೆದ್ದಿತ್ತು. ಆದರೆ, ಇಂಡಿಯಾ ಕೂಟವು 235 ಸ್ಥಾನಗಳನ್ನು ಗೆಲ್ಲುವ ಮೂಲಕ ಸಮೀಕ್ಷೆಗಳನ್ನು ಹುಸಿಗೊಳಿಸಿತು.

ಇನ್ನು 2023ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ಭಾರೀ ಬಹುಮತ ಗಳಿಸುತ್ತದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು. ಆದರೆ, ಈದಿನ.ಕಾಮ್‌ ಮಾತ್ರವೇ ಕಾಂಗ್ರೆಸ್‌ 136 ಸ್ಥಾನಗಳೊಂದಿಗೆ ಅಭೂತಪೂರ್ವ ಗೆಲುವು ಸಾಧಿಸುತ್ತದೆ ಎಂದು ಹೇಳಿತ್ತು. ಅಂತೆಯೇ, ಫಲಿತಾಂಶದಲ್ಲಿ ಕಾಂಗ್ರೆಸ್‌ 134 ಸ್ಥಾನಗಳನ್ನು ಗಳಿಸಿತು. ಈದಿನ.ಕಾಮ್‌ ಸಮೀಕ್ಷೆಯು ನಿಖರವಾಗಿತ್ತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...