ಗಣಿಗಾರಿಕೆ ಹಾಗೂ ಖನಿಜ ಚಟುವಟಿಕೆಗಳಿಗೆ ರಾಜ್ಯಗಳು ರಾಜಧನ ತೆರಿಗೆ ವಿಧಿಸುವ ಹಕ್ಕನ್ನು ಹೊಂದಿವೆ ಎಂದು ಮಹತ್ವಪೂರ್ಣ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ 9 ಮಂದಿ ನ್ಯಾಯಮೂರ್ತಿಗಳಲ್ಲಿ 8:1 ತೀರ್ಪಿನಲ್ಲಿ ಕೋರ್ಟ್ ಎತ್ತಿಹಿಡಿದಿದೆ.
ರಾಜ್ಯಗಳ ಪರವಾಗಿ ತೀರ್ಪು ನೀಡಿದ 8 ನ್ಯಾಯಮೂರ್ತಿಗಳು, ರಾಜಧನವು ಕೇಂದ್ರದ ತೆರಿಗೆಯ ರೀತಿಯಲ್ಲ, ರಾಜ್ಯಗಳು ರಾಜಧನ ವಿಧಿಸುವ ಅಧಿಕಾರವನ್ನು ಹೊಂದಿವೆ ಎಂದು ಆದೇಶ ನೀಡಿದ್ದಾರೆ. ನ್ಯಾಯಮೂರ್ತಿ ಬಿ ವಿ ನಾಗರತ್ನ ಭಿನ್ನ ತೀರ್ಪು ನೀಡಿದ್ದಾರೆ.
ಈ ತೀರ್ಪು ಖನಿಜ ಶ್ರೀಮಂತ ರಾಜ್ಯಗಳಾದ ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಹಾಗೂ ಛತ್ತೀಸ್‌ಗಢ ಒಳಗೊಂಡ ಇತರ ರಾಜ್ಯಗಳಿಗೆ ದೊಡ್ಡ ಗೆಲುವಾಗಿದೆ.
“ರಾಜಧನವು ಕೇಂದ್ರದ ತೆರಿಗೆ ಸ್ವರೂಪವಲ್ಲ. ರಾಜಧನವನ್ನು ತೆರಿಗೆ ಎನ್ನುವುದು ತಪ್ಪು. ಸರ್ಕಾರಕ್ಕೆ ನೀಡಲಾಗುವ ಪಾವತಿಗಳನ್ನು ತೆರಿಗೆ ಎಂದು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಬಾಕಿಯನ್ನು ಮರಳಿಸುವುದು ಎಂದು ಕಾನೂನು ತಿಳಿಸುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.
“ಗಣಿ ಮತ್ತು ಕ್ವಾರಿಗಳು ಒಳಗೊಂಡಿರುವ ಭೂಮಿಗಳಿಗೆ ತೆರಿಗೆಯ ಪಟ್ಟಿ 2ರಲ್ಲಿ ನಮೂದಿಸಲಾಗಿರುವ 49ರ ಅಡಿಯಲ್ಲಿ ಸುಂಕವನ್ನು ಸೇರಿಸುವಾಗ ರಾಜ್ಯವು ಅದರ ಹಕ್ಕನ್ನು ಹೊಂದಿರುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿಜಕ್ಕೂ ಮೋದಿಯವರು ಕುರ್ಚಿ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಇದು
ರಾಜ್ಯಗಳ ಪರವಾಗಿ ತೀರ್ಪು ನೀಡಿದ 7 ನ್ಯಾಯಮೂರ್ತಿಗಳು ಗಣಿ – ಖನಿಜ ಮುಂತಾದ ಚಟುವಟಿಕೆಗಳಲ್ಲಿ ರಾಜ್ಯಗಳು ಸುಂಕ ವಿಧಿಸುವ ಹಕ್ಕು ಹೊಂದಿದೆ ಎಂದು ತಮ್ಮ ಆದೇಶದಲ್ಲಿ ತಿಳಿಸಿದರು.
ಗಣಿ – ಖನಿಜ ಮುಂತಾದ ಚಟುವಟಿಕೆಗಳಲ್ಲಿ ಸುಂಕ ವಿಧಿಸಲು ರಾಜ್ಯಗಳು ಅಧಿಕಾರ ಹೊಂದಿವೆ. ಸಂಸತ್ತು ರಾಜಧನ ವಿಧಿಸುವ ಯಾವುದೇ ಅಧಿಕಾರವನ್ನು ಹೊಂದಿರುವುದಿಲ್ಲ. ಈ ವಿಷಯಕ್ಕೆ ಸಂಸತ್ತು ಯಾವುದೇ ಅಧಿಕಾರವನ್ನು ಹೊಂದಿರುವುದಿಲ್ಲ.ಸಂವಿಧಾನದ ವಿಧಿ 246ರ ಅಡಿಯ ಪಟ್ಟಿ 2ರಲ್ಲಿ ನಮೂದಿಸಲಾಗಿರುವ 49ರಲ್ಲಿ ಭೂಮಿಗಳಲ್ಲಿರುವ ಖನಿಜ ಹಾಗೂ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯ ಶಾಸಕಾಂಗ ಶಾಸಕಾಂಗದ ಹಕ್ಕನ್ನು ಹೊಂದಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಈ ತೀರ್ಪಿಗೆ ಭಿನ್ನ ತೀರ್ಪು ನೀಡಿದ ನ್ಯಾಯಮೂರ್ತಿ ನಾಗರತ್ನ, ರಾಜಧನ ಕೂಡ ತೆರಿಗೆಯು ಒಂದು ಸ್ವರೂಪ ಎಂದು ನಾನು ಭಾವಿಸುತ್ತೇನೆ. ರಾಜ್ಯಗಳು ಭೂಮಿಗಳಲ್ಲಿರುವ ಖನಿಜ ಹಾಗೂ ಗಣಿಗಾರಿಕೆಗೆ ಸಂಬಂಧಿಸಿದಂತೆ ತೆರಿಗೆ ವಿಧಿಸಲು ಯಾವುದೇ ಅಧಿಕಾರ ಹೊಂದಿಲ್ಲ ಎಂದು ಹೇಳಿದರು.





