ಭಾನುವಾರ ನಡೆದ 18ನೇ ಲೋಕಸಭೆಯ ಪ್ರಮಾಣ ವಚನ ಸಮಾರಂಭದಲ್ಲಿ ಒಟ್ಟು ಏಳು ಮಹಿಳೆಯರು ಪ್ರಮಾಣ ವಚನ ಸ್ವೀಕರಿಸಿ ನೂತನ ಸಂಪುಟದ ಭಾಗವಾಗಿದ್ದಾರೆ.
ಜೂನ್ 5ರಂದು ವಿಸರ್ಜನೆಗೊಂಡ ಹಿಂದಿನ ಕೇಂದ್ರ ಸಚಿವ ಸಂಪುಟದಲ್ಲಿ 10 ಮಹಿಳಾ ಸಚಿವರು ಇದ್ದರು. ಆದರೆ ಈ ಬಾರಿ ಹಲವು ಮಹಿಳಾ ಸಚಿವರನ್ನು ಕೈಬಿಡಲಾಗಿದೆ.
ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಜ್ಯ ಸಚಿವೆ ಭಾರತಿ ಪವಾರ್, ಸಾಧ್ವಿ ನಿರಂಜನ್ ಜ್ಯೋತಿ, ದರ್ಶನಾ ಜರ್ದೋಶ್, ಮೀನಾಕ್ಷಿ ಲೇಖಿ ಮತ್ತು ಪ್ರತಿಮಾ ಭೂಮಿಕ್‌ರನ್ನು ಸಂಪುಟದಿಂದ ಕೈಬಿಡಲಾಗಿದೆ.
ಇದನ್ನು ಓದಿದ್ದೀರಾ? ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಏಕೈಕ ವಿಪಕ್ಷ ನಾಯಕ ಖರ್ಗೆ
ಮಾಜಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ಸಂಸದರಾದ ಅನ್ನಪೂರ್ಣ ದೇವಿ, ಶೋಭಾ ಕರಂದ್ಲಾಜೆ, ರಕ್ಷಾ ಖಡ್ಸೆ, ಸಾವಿತ್ರಿ ಠಾಕೂರ್, ನಿಮುಬೆನ್ ಬಂಬಾನಿಯಾ ಮತ್ತು ಅಪ್ನಾ ದಳದ ಸಂಸದೆ ಅನುಪ್ರಿಯಾ ಪಟೇಲ್ ನೂತನ ಮಹಿಳಾ ಸಚಿವರಾಗಿದ್ದಾರೆ. ಸೀತಾರಾಮನ್ ಮತ್ತು ದೇವಿ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡರೆ, ಇತರರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Watch: Shobha Karandlaje takes the oath as a Union Minister in the Prime Minister Narendra Modi-led NDA government pic.twitter.com/KqtiSBOvXG
— IANS (@ians_india) June 9, 2024
ಸ್ಮೃತಿ ಇರಾನಿ ಅಮೇಥಿಯಲ್ಲಿ ಮತ್ತು ಭಾರತಿ ಪವಾರ್ ದಂಡೋರಿಯಲ್ಲಿ ಪರಾಭವಗೊಂಡಿದ್ದಾರೆ. ಸಾಧ್ವಿ ನಿರಂಜನ್ ಜ್ಯೋತಿ, ದರ್ಶನಾ ಜರ್ದೋಶ್, ಮೀನಾಕ್ಷಿ ಲೇಖಿ ಮತ್ತು ಪ್ರತಿಮಾ ಭೂಮಿಕ್ ಬಿಜೆಪಿಯ ಟಿಕೆಟ್ ಪಡೆದಿರಲಿಲ್ಲ.
ಇನ್ನು ಅನ್ನಪೂರ್ಣ ದೇವಿ, ಶೋಭಾ ಕರಂದ್ಲಾಜೆ, ರಕ್ಷಾ ಖಡ್ಸೆ, ಕಮಲ್‌ಜೀತ್ ಸೆಹ್ರಾವತ್, ಅನುಪ್ರಿಯಾ ಪಟೇಲ್ ಇತ್ತೀಚಿನ ಚುನಾವಣೆಯಲ್ಲಿ ಗೆದ್ದು ಹೊಸ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| 74 ಮಹಿಳೆಯರಿಗೆ ಗೆಲುವು, 2019ಕ್ಕಿಂತ ಕಡಿಮೆ
ನರೇಂದ್ರ ಮೋದಿ ತಮ್ಮ 71 ಮಂತ್ರಿಗಳ ಮಂಡಳಿಯೊಂದಿಗೆ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವರ್ಷ ಲೋಕಸಭೆ ಚುನಾವಣೆಯಲ್ಲಿ ಒಟ್ಟು 74 ಮಹಿಳೆಯರು ಗೆದ್ದಿದ್ದಾರೆ, 2019 ರಲ್ಲಿ ಚುನಾಯಿತರಾದ 78ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.
2014ರಲ್ಲಿ ಮೋದಿಯವರ ಮೊದಲ ಅವಧಿಯಲ್ಲಿ ಎಂಟು ಮಹಿಳಾ ಸಚಿವರು ಇದ್ದರು. 17ನೇ ಲೋಕಸಭೆಯ ಅಂತ್ಯದ ವೇಳೆಗೆ, ಹತ್ತು ಮಹಿಳಾ ಮಂತ್ರಿಗಳಿದ್ದರು.





