ಹದಿಹರೆಯದ ಯುವಕನೊಬ್ಬ ತನ್ನ ತಂದೆಯನ್ನು ಗುಂಡಿಕ್ಕಿ ಕೊಂದು, ದೇಹವನ್ನು ಕತ್ತರಿಸಿ ಡ್ರಮ್‌ನಲ್ಲಿ ತಿಂಬಿಸಿಟ್ಟದ್ದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಶಿಯಾನಾದಲ್ಲಿ ನಡೆದಿದೆ.
ನೀಟ್‌ಗಾಗಿ ತಯಾರಿ ನಡೆಸುತ್ತಿದ್ದ ಅಕ್ಷತ್ ಎಂಬಾತ ರೋಗ ವಿಜ್ಞಾನ ಪ್ರಯೋಗಾಲಯದ ಮಾಲೀಕನಾಗಿರುವ ತನ್ನ ತಂದೆ ಮನ್ವೇಂದ್ರ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅಗತ್ಯವಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಉತ್ತೀರ್ಣನಾಗುವಂತೆ ಒತ್ತಡ ಹೇರಿದ್ದಕ್ಕಾಗಿ ತಂದೆಯೊಂದಿಗೆ ಅಕ್ಷತ್ ವಾಗ್ವಾದ ನಡೆಸಿದ್ದಾನೆ. ಮಾತಿನ ಚಕಮಕಿಯ ನಡುವೆ ತನ್ನ ಸಹೋದರಿಯ ಎದುರೇ ತಂದೆಯನ್ನು ಅಕ್ಷತ್ ಗುಂಡಿಟ್ಟು ಕೊಂದಿದ್ದಾನೆ ಎಂದು ವರದಿಯಾಗಿದೆ.
ಕೊಲೆಗೈದ ಬಳಿಕ, ತಂದೆಯ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ. ದೇಹದ ಭಾಗಗಳನ್ನು ಡ್ರಮ್‌ನಲ್ಲಿ ತುಂಬಿಸಿಟ್ಟಿದ್ದಾನೆ. ಕೆಲವ ಭಾಗಗಳನ್ನು ವಿಲೇವಾರಿ ಮಾಡಲು ಕಾರಿನಲ್ಲಿ ಕೊಂಡೊಯ್ದಿದ್ದಾನೆ. ತಲೆ ಮತ್ತು ಕೆಲವು ಭಾಗಗಳನ್ನು ಒಂದೆಡೆ ಎಸೆದಿದ್ದು, ಉಳಿದ ಭಾಗಗಳನ್ನು ಮತ್ತೊಂದೆಡೆ ವಿಲೇವಾರಿ ಮಾಡಲು ಹೋಗಿದ್ದಾನೆ. ಈ ವೇಳೆ, ಆತನನ್ನು ಪೊಲೀಸ್ ಗಸ್ತು ತಂಡ ಹಿಡಿದಿದೆ. ನಿರಂತರ ವಿಚಾರಣೆಯ ನಂತರ, ಅಕ್ಷತ್ ನಾನು ಎಸಗಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಭಾರತದಲ್ಲಿ ಮಾವೋವಾದ ಅಳಿಯಿತೇ; ಕಮ್ಯೂನಿಸ್ಟ್ ವಿಚಾರಧಾರೆಗೆ ಸಂಘಪರಿವಾರ ಭಯಪಡುವುದೇಕೆ?
ಮನೆಯಲ್ಲಿ ಶೋಧ ನಡೆಸಿರುವ ಪೊಲೀಸರು ರೈಫಲ್ ಮತ್ತು ಬುಲೆಟ್‌ಗಳನ್ನು ವಶಕ್ಕೆ ಪಡೆದಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಡ್ರಮ್‌ನಲ್ಲಿ ತುಂಬಿಸಿಟ್ಟಿದ್ದ ದೇಹದ ಕೆಲವು ಭಾಗಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ವಿಧಿವಿಜ್ಞಾನ ತಂಡಗಳು ಮನೆ ಮತ್ತು ಕಾರಿನಲ್ಲಿ ರಕ್ತದ ಕಲೆಗಳನ್ನು ಪರಿಶೀಲಿಸಿವೆ. ತಲೆ ಮತ್ತು ಕೆಲವು ಭಾಗಗಳು ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ತನ್ನ ಸಹೋದರಿಗೆ ಕೃತ್ಯದ ಕುರಿತು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದನೆಂದು ಹೇಳಲಾಗಿದೆ.
ಆರೋಪಿ ಅಕ್ಷತ್ ತನ್ನ ತಂದೆ ನಡೆಸುತ್ತಿದ್ದ ಮದ್ಯದಂಗಡಿಯ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು. ಅದಕ್ಕಾಗಿ, ತಿಂಗಳಿಗೆ 17,000 ರೂ. ವೇತನ ಪಡೆಯುತ್ತಿದ್ದರು. ಆದರೆ, ವೇತನ ಕಡಿಮೆಯೆಂದು ಆತ ಅತೃಪ್ತನಾಗಿದ್ದ. ಆತ 12ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದರಿಂದ, ಆತ NEET ಪಾಸು ಮಾಡಿ ವೈದ್ಯಕೀಯ ವೃತ್ತಿ ಪಡೆಯಬೇಕೆಂದು ಆತನ ತಂದೆ ಬಯಸಿದ್ದರು ಎಂದು ಹೇಳಲಾಗಿದೆ.




