ಮೂವರು ಪ್ರಭಾವಿ ಬಿಜೆಪಿ ನಾಯಕರುಗಳಿಗೆ ಮೋದಿ ಸಂಪುಟದಲ್ಲಿ ಅವಕಾಶವಿಲ್ಲ

Date:

ಬಿಜೆಪಿಯ ಮೂವರು ಪ್ರಭಾವಿ ನಾಯಕರುಗಳಿಗೆ ನರೇಂದ್ರ ಮೋದಿ ಮೂರನೇ ಅವಧಿಯ ಸಂಪುಟದಲ್ಲಿ ಸ್ಥಾನ ಲಭಿಸುತ್ತಿಲ್ಲ. ಸ್ಮೃತಿ ಇರಾನಿ, ಅನುರಾಗ್‌ ಠಾಕೂರ್ ಹಾಗೂ ನಾರಾಯಣ ರಾಣೆ ಸಂಪುಟ ಸೇರದ ಮಾಜಿ ಕೇಂದ್ರ ಸಚಿವರು.

ಮೋದಿಯವರ ಎರಡನೇ ಅವಧಿಯ ಸರ್ಕಾರದಲ್ಲಿ ಸ್ಮೃತಿ ಇರಾನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಿಯಾಗಿದ್ದರು. ಈ ಹಿಂದೆ ರಾಹುಲ್‌ ಗಾಂಧಿ ಪ್ರತಿನಿಧಿಸುತ್ತಿದ್ದ ಅಮೇಥಿಯಿಂದ ಸ್ಪರ್ಧಿಸಿದ್ದ ಇವರು ಕಾಂಗ್ರೆಸಿನ ಕಿಶೋರಿ ಲಾಲ್‌ ಶರ್ಮಾ ಅವರ ವಿರುದ್ಧ 1.6 ಲಕ್ಷ ಮತಗಳ ಅಂತರದಿಂದ ಸೋತಿದ್ದರು. 2019ರಲ್ಲಿ ರಾಹುಲ್‌ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿ ಸ್ಮೃತಿ ಇರಾನಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿಲ್ಲ.

ಹಿಮಾಚಲ ಪ್ರದೇಶದ ಹಮಿರ್‌ಪುರ್‌ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿರುವ ಅನುರಾಗ್‌ ಠಾಕೂರ್‌ ಈ ಬಾರಿಯ ಸಚಿವ ಸ್ಥಾನದಿಂದ ಅವಕಾಶ ಸಿಗುತ್ತಿಲ್ಲ. ಎನ್‌ಡಿಎ ಸರ್ಕಾರದ ಎರಡನೇ ಅವಧಿಯಲ್ಲಿ ಅನುರಾಗ್‌ ಠಾಕೂರ್‌ ಅವರು ಕ್ರೀಡಾ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ

ಮಹಾರಾಷ್ಟ್ರದ ನಾರಾಯಣ ರಾಣೆಗೂ ಮೋದಿ ಮೂರನೇ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗುತ್ತಿಲ್ಲ. ರಾಣೆ ಅವರು ಮೋದಿ ಅವರ ಎರಡನೇ ಅವಧಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಬಾರಿ ಮಹಾರಾಷ್ಟ್ರದ ರತ್ನಗಿರಿ ಸಿಂಧುದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.

ಮೋದಿ ಮೂರನೇ ಸಂಪುಟದಲ್ಲಿ ಕಳೆದ ಬಾರಿ ಸಚಿವರಾಗಿದ್ದ ಬಿಜೆಪಿ ನಾಯಕರಲ್ಲಿ ಅಮಿತ್‌ ಶಾ, ರಾಜನಾಥ್ ಸಿಂಗ್‌, ನಿರ್ಮಲಾ ಸೀತಾರಾಮನ್‌, ಎಸ್‌ ಜೈಶಂಕರ್‌, ನಿತಿನ್‌ ಗಡ್ಕರಿ, ಮನ್ಸುಕ್‌ ಮಾಂಡವ್ಯ, ಪಿಯೂಶ್ ಗೋಯಲ್‌, ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಪ್ರಲ್ಹಾದ್ ಜೋಷಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರಿಗೆ ಸಚಿವ ಸ್ಥಾನ ಸಿಗುತ್ತಿದೆ.

ರಾಜೀವ್‌ ಚಂದ್ರಶೇಖರ್‌ ಅವರಿಗೂ ಈ ಬಾರಿ ಸಚಿವ ಸ್ಥಾನ ಸಿಗುತ್ತಿಲ್ಲ. ರಾಜ್ಯಸಭಾ ಸದಸ್ಯರಾಗಿದ್ದ ರಾಜೀವ್‌ ಚಂದ್ರಶೇಖರ್‌ ಅವರು ಕೇರಳದ ತಿರುವನಂತಪುರಂನಿಂದ ಕಾಂಗ್ರೆಸ್‌ನ ಶಶಿ ತರೂರ್‌ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

ಅದೇ ರೀತಿ ರಾಜ್ಯ ಸಚಿವರು ಸೇರಿ 35 ಮಂದಿ ಸಚಿವ ಸ್ಥಾನ ಕಳೆದುಕೊಳ್ಳುತ್ತಿರುವವರ ಪಟ್ಟಿ

  1. ಅರ್ಜುನ್ ಮುಂಡಾ, ಬುಡಕಟ್ಟು ವ್ಯವಹಾರ ಸಚಿವ
  2. ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ
  3. ಅನುರಾಗ್ ಠಾಕೂರ್: ಮಾಹಿತಿ ಮತ್ತು ಪ್ರಸರಣ; ಯುವಜನ ಮತ್ತು ಕ್ರೀಡೆ ಸಚಿವ
  4. ನಾರಾಯಣ್ ತಾಟು ರಾಣೆ: ಎಸ್​ಎಂಇ ಸಚಿವ
  5. ರಾಜಕುಮಾರ್ ಸಿಂಗ್: ವಿದ್ಯುತ್, ಮರುಬಳಕೆ ಇಂಧನ ಸಚಿವ
  6. ಮಹೇಂದ್ರನಾಥ್ ಪಾಂಡೆ: ಬೃಹತ್ ಕೈಗಾರಿಕೆಗಳ ಸಚಿವ
  7. ಪುರುಷೋತ್ತಮ್ ರೂಪಾಲ: ಮೀನುಗಾರಿಕೆ, ಪಶುಸಂಗೋಪನೆ ಸಚಿವ
  8. ಫಗ್ಗನ್ ಸಿಂಗ್ ಕುಲಸ್ತೆ: ಉಕ್ಕು ಖಾತೆ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ
  9. ಅಶ್ವಿನಿ ಕುಮಾರ್ ಚೌಬೆ: ಗ್ರಾಹಕ ವ್ಯವಹಾರಗಳು, ಸಾರ್ವಜನಿಕ ವಿತರಣೆ, ಪರಿಸರ ಖಾತೆ ರಾಜ್ಯ ಸಚಿವ
  10. ವಿ.ಕೆ. ಸಿಂಗ್: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಪರಿಸರ ಖಾತೆ ರಾಜ್ಯ ಸಚಿವ
  11. ದಾನ್ವೆ ರಾವಸಾಹೇಬ್: ರೈಲ್ವೆ ಖಾತೆ ರಾಜ್ಯ ಸಚಿವ
  12. ನಿರಂಜನ್ ಜ್ಯೋತಿ: ಗ್ರಾಹಕ ವ್ಯವಹಾರಗಳ ಖಾತೆ ರಾಜ್ಯ ಸಚಿವ
  13. ಸಂಜೀವ್ ಕುಮಾರ್ ಬಾಲ್ಯಾನ್: ಮೀನುಗಾರಿಕೆ, ಪಶುಸಂಗೋಪನೆ ಖಾತೆ ರಾಜ್ಯ ಸಚಿವ.
  14. ರಾಜೀವ್ ಚಂದ್ರಶೇಖರ್: ಕೌಶಲ್ಯ ಅಭಿವೃದ್ಧಿ ಖಾತೆ ರಾಜ್ಯ ಸಚಿವ.
  15. ಭಾನುಪ್ರತಾಪ್ ಸಿಂಗ್: ಎಂಎಸ್​ಎಂಇ ಖಾತೆ ರಾಜ್ಯ ಸಚಿವ
  16. ದರ್ಶನ ಹರ್ದೋಷ್: ಜವಳಿ ಖಾತೆ ರಾಜ್ಯ ಸಚಿವ
  17. ವಿ ಮುರಳೀಧರನ್: ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ
  18. ಮೀನಾಕ್ಷಿ ಲೇಖಿ: ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ
  19. ಸೋಮ್ ಪ್ರಕಾಶ್: ವಾಣಿಜ್ಯ ಮತ್ತು ಉದ್ಯಮ ಖಾತೆ ರಾಜ್ಯ ಸಚಿವ
  20. ಕೈಲಾಷ್ ಚೌಧರಿ: ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ
  21. ರಾಮೇಶ್ವರ್ ತೇಲಿ: ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ
  22. ಎ ನಾರಾಯಣಸ್ವಾಮಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ
  23. ಕೌಶಲ್ ಕಿಶೋರ್: ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ
  24. ಅಜಯ್ ಉಮಾರ್: ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ
  25. ಕಪಿಲ್ ಪಾಟೀಲ್: ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವ
  26. ಸುಭಾಷ್ ಸರ್ಕಾರ್: ಶಿಕ್ಷಣ ಖಾತೆ ರಾಜ್ಯ ಸಚಿವ
  27. ಪ್ರತಿಮಾ ಭೌಮಿಕ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ
  28. ಭಗವತ್ ಕರಾಡ್: ಹಣಕಾಸು ಖಾತೆ ರಾಜ್ಯ ಸಚಿವ
  29. ರಾಜಕುಮಾರ್ ರಂಜನ್ ಸಿಂಗ್: ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ
  30. ಭಾರತಿ ಪವಾರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ
  31. ಬಿಶ್ವೇಶ್ವರ್ ತುಡು: ಬುಡಕಟ್ಟು ವ್ಯವಹಾರಗಳು, ಜಲಶಕ್ತಿ ಖಾತೆ ರಾಜ್ಯ ಸಚಿವ
  32. ಡಾ. ಮುಂಜಪಾರ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವ.
  33. ಜಾನ್ ಬಾರ್ಲಾ: ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ
  34. ನಿಸಿತ್ ಪ್ರಾಮಾಣಿಕ್: ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ.
  35. ಭಗವಂತ್‌ ಖೂಬಾ: ರಾಸಾಯನಿಕ ಮತ್ತು ಗೊಬ್ಬರ ರಾಜ್ಯ ಸಚಿವ
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...