ಪೋಷಕರು, ಅತ್ತೆ ಮಾವನೊಂದಿಗೆ ಸಮಯ ಕಳೆಯಲು ಅಸ್ಸಾಂ ಸರ್ಕಾರಿ ನೌಕರರಿಗೆ ವಿಶೇಷ ರಜೆ!

Date:

ಪೋಷಕರು ಅಥವಾ ಅತ್ತೆ ಮಾವನೊಂದಿಗೆ ಸಮಯ ಕಳೆಯಲು ಅಸ್ಸಾಂ ಸರ್ಕಾರವು ಸರ್ಕಾರಿ ಉದ್ಯೋಗಿಗಳಿಗೆ ವಿಶೇಷ ರಜೆಯನ್ನು ಘೋಷಣೆ ಮಾಡಿದೆ.

ಅಸ್ಸಾಂ ಸರ್ಕಾರಿ ನೌಕರರಿಗೆ ನವೆಂಬರ್‌ನಲ್ಲಿ ಎರಡು ದಿನಗಳ ವಿಶೇಷ ಕ್ಯಾಶುಯಲ್ ರಜೆಯನ್ನು ಘೋಷಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಕಚೇರಿ (ಸಿಎಂಒ) ಇಂದು (ಜುಲೈ 11) ಎಕ್ಸ್ ಪೋಸ್ಟ್ ಮೂಲಕ ತಿಳಿಸಿದೆ.

ಈ ವಿಶೇಷ ರಜೆಗಳನ್ನು ಇತರೆ ವೈಯಕ್ತಿಕ ಕಾರ್ಯಗಳಿಗಾಗಿ ಬಳಸಲು ಅವಕಾಶವಿಲ್ಲ. ಪೋಷಕರು, ಅತ್ತೆ ಮಾವನೊಂದಿಗೆ ಸಮಯ ಕಳೆಯಲು ಮಾತ್ರ ಬಳಸಬಹುದಾಗಿದೆ. ಹಾಗೆಯೇ ಪೋಷಕರು ಅಥವಾ ಅತ್ತೆ- ಮಾವಂದಿರಿಲ್ಲದವರು ಈ ರಜೆಗೆ ಅರ್ಹರಾಗಿರುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಕಚೇರಿ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?  ಸಾಲು ಸಾಲು ರಜೆ | ಕೆಎಸ್‌ಆರ್‌ಟಿಸಿಯಿಂದ 1,500 ವಿಶೇಷ ಬಸ್‌ ಸಂಚಾರ

“ಮುಖ್ಯಮಂತ್ರಿ ಹಿಮಂತ ಬಿಸ್ವಾ ಅವರ ನೇತೃತ್ವದಲ್ಲಿ ಅಸ್ಸಾಂ ಸರ್ಕಾರವು ನವೆಂಬರ್ 6 ಮತ್ತು 8ರಂದು ರಾಜ್ಯ ಸರ್ಕಾರಿ ನೌಕರರಿಗೆ ಅವರ ಪೋಷಕರು ಅಥವಾ ಮಾವಂದಿರೊಂದಿಗೆ ಸಮಯ ಕಳೆಯಲು ವಿಶೇಷ ಕ್ಯಾಶುಯಲ್ ರಜೆಯನ್ನು ಘೋಷಿಸಿದೆ” ಎಂದು ಅಸ್ಸಾಂ ಸಿಎಂಒ ಎಕ್ಸ್‌ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ನವೆಂಬರ್ 7ರಂದು ಛತ್ ಪೂಜೆ, ನವೆಂಬರ್ 9ರಂದು ಎರಡನೇ ಶನಿವಾರದ ರಜೆ ಮತ್ತು ನವೆಂಬರ್ 10ರಂದು ಭಾನುವಾರದ ರಜೆಯಿದ್ದು ಈ ನಡುವೆ ಬರುವ ನವೆಂಬರ್ 6 ಮತ್ತು 8ರ ವಿಶೇಷ ರಜೆಯನ್ನು ಸೇರಿಸಿ ತೆಗೆದುಕೊಳ್ಳಬಹುದು ಎಂದು ಸಿಎಂಒ ತಿಳಿಸಿದೆ.

ಅಂದರೆ ಜೊತೆಯಾಗಿ ಐದು ದಿನ ರಜೆ ತೆಗೆದುಕೊಳ್ಳಬಹುದಾಗಿದೆ. ವಿಶೇಷ ಸೇವೆಯಲ್ಲಿರುವ ನೌಕರರು ಈ ರಜೆಯನ್ನು ಬೇರೆ ಸಮಯದಲ್ಲಿ ಪಡೆಯಬಹುದು.

2021ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ತಮ್ಮ ಮೊದಲ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸರ್ಕಾರಿ ನೌಕರರಿಗೆ ಪೋಷಕರು ಮತ್ತು ಮಾವಂದಿರೊಂದಿಗೆ ಸಮಯ ಕಳೆಯಲು ಎರಡು ವಿಶೇಷ ಕ್ಯಾಶುಯಲ್ ರಜೆಗಳನ್ನು ಘೋಷಿಸಿದ್ದರು.

?s=150&d=mp&r=g
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...