ಗಾಜಾಗೆ ಬೆಂಬಲ- ಭಾರತೀಯ ಮೂಲದ ಪ್ರೊ.ರೂಪಾ ಅವರಿಗೆ ಕ್ಯಾಲಿಫೋರ್ನಿಯ ಶಿಕ್ಷೆ

Date:

ಇಸ್ರೇಲ್‌ನ ಅಮಾನುಷ ದಾಳಿಗೆ ತುತ್ತಾಗಿರುವ ಗಾಜಾದ ಪರ ನಿಲುವಿನ ಸಾಮಾಜಿಕ ಜಾಲತಾಣ ಪೋಸ್ಟ್ ಗಳಿಗಾಗಿ ಅಮೆರಿಕೆಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಮೆಡಿಸಿನ್ ಪ್ರೊಫೆಸರ್ ರೂಪಾ ಮರ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಅಮಾನತಿನ ಕ್ರಮದಿಂದ ತಮ್ಮ ವಾಕ್ ಸ್ವಾತಂತ್ರ್ಯದ ಹರಣವಾಗಿದೆ ಎಂದು ಭಾರತೀಯ ಮೂಲದ ಪ್ರೊ.ರೂಪಾ  ವಿಶ್ವವಿದ್ಯಾಲಯದ ವಿರುದ್ಧ ಕಾನೂನು ದಾವೆ ಹೂಡಿದ್ದಾರೆ.

ಇಸ್ರೇಲ್ ದಾಳಿಗೆ ತುತ್ತಾಗಿರುವ ಗಾಜಾದ ಆಸ್ಪತ್ರೆಗಳು ಮತ್ತು ಆರೋಗ್ಯ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿ ಪ್ರೊ. ರೂಪಾ ಅವರು ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆಸುವ ಮತ್ತು ತಮ್ಮನ್ನು ಕೊಲ್ಲುವ ಹಾಗೂ ನಿರಂತರ ಕಿರುಕುಳದ ಬೆದರಿಕೆಗಳು ಬಂದಿವೆ ಎಂದು ಅವರು ದೂರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಶ್ರೇಷ್ಠತಾವಾದ ಮತ್ತು ವರ್ಣಭೇದ-ಜನಾಂಗೀಯ ಸಿದ್ಧಾಂತ”ವಾದ ಯಹೂದಿವಾದವು (ಝಿಯೋನಿಸಮ್) ಆರೋಗ್ಯಸೇವೆಗಳ ಮೇಲೆ ಬೀರುವ ಪ್ರಭಾವ ಕುರಿತು ಪ್ರೊ.ರೂಪಾ ಎಕ್ಸ್ ಜಾಲತಾಣದಲ್ಲಿ ಮಾಡಿದ ಟಿಪ್ಪಣಿಗಳಿಗಾಗಿ ಕ್ಯಾಲಿಫೋರ್ನಿಯಾ ಸ್ಯಾನ್ ಫ್ರ್ಯಾನ್ಸಿಸ್ಕೊ ವಿಶ್ವವಿದ್ಯಾಲಯವು ಆಕೆಯನ್ನು 2024ರ ಸೆಪ್ಟಂಬರ್‌ನಲ್ಲಿ ರಜೆಯ ಮೇಲೆ ಇಟ್ಟಿದ್ದಲ್ಲದೆ ಆಕೆಯ ವಿಶೇಷ ಕ್ಲಿನಿಕಲ್ ಹಕ್ಕುಗಳನ್ನು ಅಮಾನತಿನಲ್ಲಿಟ್ಟಿರುವುದಾಗಿ ‘ದಿ ಗಾರ್ಡಿಯನ್’ ವರದಿ ಮಾಡಿತ್ತು.

ತರುವಾಯ ಪ್ರೊ.ರೂಪಾ ಅವರ ಹೆಸರನ್ನು ನಮೂದಿಸದೆ ವಿಶ್ವವಿದ್ಯಾಲಯವು ಹೇಳಿಕೆಯೊಂದನ್ನು ನೀಡಿತ್ತು. ಯಹೂದಿವಾದಿ ವೈದ್ಯರು ಅರಬ್, ಪ್ಯಾಲೆಸ್ತೀನಿಯನ್, ದಕ್ಷಿಣ ಏಷ್ಯನ್ನರು, ಮುಸಲ್ಮಾನರು ಹಾಗೂ ಕಪ್ಪು ವರ್ಣೀಯ ರೋಗಿಗಳ ಪಾಲಿಗೆ ಬೆದರಿಕೆಯಾಗಿ ಪರಿಣಮಿಸಿದ್ದಾರೆ ಎಂಬ ಸಂಚುಕೋರ ಪ್ರಮೇಯವನ್ನು ಕೇಳಿ ಸಾಕಾಗಿದೆ. ಈ ಪ್ರಮೇಯವನ್ನು ಖಂಡಿಸಬೇಕು ಎಂದು ವಿಶ್ವವಿದ್ಯಾಲಯ ತನ್ನ ಹೇಳಿಕೆಯಲ್ಲಿ ವಾದಿಸಿತ್ತು.

ಪ್ರೊ. ರೂಪಾ ಅವರು ಜನಾಂಗೀಯ ಯಹೂದಿದ್ವೇಷಿ ಮತ್ತು ಜನಾಂಗೀಯವಾದಿ ಸಂಚುಕೋರ ಪ್ರಮೇಯಗಳನ್ನು ಪ್ರೋತ್ಸಾಹಿಸುತ್ತಿದ್ದಾರೆಂದು ವಿಶ್ವವಿದ್ಯಾಲಯ ತನ್ನ ಹೇಳಿಕೆಯಲ್ಲಿ ಆರೋಪಿಸಿತ್ತು. ಸಂಭವನೀಯ ಅಪಾಯ ಎಂದು ಆಕೆಯನ್ನು ಬಣ್ಣಿಸಿತು. ಕಳೆದ ತಿಂಗಳು ಆಕೆಯ ವಿವರಣೆಯನ್ನು ಕೂಡ ಆಲಿಸದೆ ಕೆಲಸದಿಂದ ಅಮಾನತುಗೊಳಿಸಲಾಯಿತು. ಈ ಕ್ರಮವು ರೂಪಾ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ. ಇಂತಹುದೇ ಬೆದರಿಕೆಯ ಕತ್ತಿ ನಮ್ಮೆಲ್ಲರ ತಲೆಯ ಮೇಲೆ ನೇತಾಡಿದೆ ಎಂದು ರೂಪಾ ಅವರ ಪರ ನ್ಯಾಯವಾದಿ ಮಾರ್ಕ್ ಕ್ಲೀಮನ್ ಹೇಳಿದ್ದಾರೆ.

ಇದನ್ನೂ ಓದಿ ವಿಮಾನ ದುರಂತ | ಮೃತರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಅಧಿಕಾರಿ ಅಮಾನತು

2007ರಲ್ಲಿ ಇದೇ ವಿಶ್ವವಿದ್ಯಾಲಯದಲ್ಲಿ ಇಂಟರ್ನಲ್ ಮೆಡಿಸಿನ್ ರೆಸಿಡೆನ್ಸಿ ಪೂರ್ಣಗೊಳಿಸಿದ ರೂಪಾ ಅವರಿಗೆ ಅಲ್ಲಿಯೇ ಉದ್ಯೋಗಕ್ಕೆ ಸೇರುವ ಆಹ್ವಾನ ದೊರೆಯಿತು. ವಿವಿಯ ಬೋಧಕ ವರ್ಗವನ್ನು ಸೇರಿಕೊಂಡಿದ್ದರು. ಸರ್ವರಿಗೂ ಆರೋಗ್ಯಕರ ಕ್ಯಾಲಿಫೋರ್ನಿಯಾ ಆಯೋಗಕ್ಕೆ ಅಂದಿನ ಕ್ಯಾಲಿಫೋರ್ನಿಯಾದ ಗವರ್ನರ್ ಗವಿನ್ ನ್ಯೂಸೊಮ್ ಅವರು ಪ್ರೊ.ರೂಪಾ ಅವರನ್ನು ನೇಮಕ ಮಾಡಿದ್ದರು. ನ್ಯೂಸೊಮ್ ಮತ್ತು ಅಮೆರಿಕೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಣ ರಾಜಕೀಯ ಸಂಬಂಧ ಇತ್ತೀಚಿನ ದಿನಗಳಲ್ಲಿ ತೀರಾ ಹದಗೆಟ್ಟಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...