ತಮಿಳುನಾಡು | ಅಕ್ರಮ ಗಣಿಗಾರಿಕೆ ವಿರುದ್ಧ ವಿಚಾರಣೆ‌, ಪಿಯುಸಿಎಲ್ ಡಾ. ವಿ ಸುರೇಶ್ ಮೇಲೆ ಹಲ್ಲೆ: ರಕ್ಷಣೆ ನೀಡುವಂತೆ ಆಗ್ರಹ

Date:

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮದ್ರಾಸ್ ಹೈಕೋರ್ಟ್‌ನ ಹಿರಿಯ ವಕೀಲ ಡಾ. ವಿ ಸುರೇಶ್ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ಪಿಯುಸಿಎಲ್ ರಾಷ್ಟ್ರೀಯ ಮತ್ತು ಪಿಯುಸಿಎಲ್ ತಮಿಳುನಾಡು, ಪುದುಚೇರಿ ಘಟಕ ಅವರಿಗೆ ರಕ್ಷಣೆ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಒತ್ತಾಯಿಸಿದೆ.

ತಮಿಳುನಾಡು ರಾಜ್ಯದ ತಿರುನಲ್ವೇಲಿ ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಗ್ರಾಮಸ್ಥರು ಎದುರಿಸುತ್ತಿರುವ ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಕುರಿತು ಅರಪ್ಪೋರ್ ಇಯಕ್ಕಂ ಇಯಕ್ಕಂ(ನ್ಯಾಯಕ್ಕಾಗಿ ಪೀಪಲ್ಸ್ ಕ್ಯಾಂಪೇನ್) ಆಯೋಜಿಸಿದ್ದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಈ ಹಿನ್ನೆಲೆಯಲ್ಲಿ ಪಿಯುಸಿಎಲ್ ಸಂಘಟನಾಕಾರರು ಪತ್ರಿಕೆ ಹೇಳಿಕೆ ನೀಡಿದ್ದು, “ಹಲವು ದಶಕಗಳಿಂದ ತಿರುನಲ್ವೇಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖನಿಜ ಸಂಪನ್ಮೂಲಗಳ ಅಕ್ರಮ, ಶೋಷಣೆ ಅನಿಯಂತ್ರಿತವಾಗಿ ನಡೆಯುತ್ತಿದೆ. ಇದು ಜಿಲ್ಲಾದ್ಯಂತ ತೀವ್ರ ಪರಿಸರ ನಾಶಕ್ಕೆ ಕಾರಣವಾಗಿದೆ” ಎಂದು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಇದಕ್ಕೆ ಪ್ರತಿಕ್ರಿಯೆಯಾಗಿ, ಅರಪ್ಪೋರ್ ಇಯಕ್ಕಂ ತಿರುನಲ್ವೇಲಿಯ ರೋಸ್ ಮಹಲ್‌ನಲ್ಲಿ ಸಾರ್ವಜನಿಕ ವಿಚಾರಣೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಅರಪ್ಪೋರ್ ಇಯಕ್ಕಂನ ಸಂಘಟಕರಾದ ಜಯರಾಮನ್, ರಾಷ್ಟ್ರೀಯ ಪಿಯುಸಿಎಲ್‌ನ ಪ್ರಧಾನ ಕಾರ್ಯದರ್ಶಿ ವಕೀಲ ಡಾ. ವಿ ಸುರೇಶ್ ಮತ್ತು ತನ್ನಚ್ಚಿ(ಸ್ವಯಂ-ಆಡಳಿತ ಚಳುವಳಿ)ಯ ನಂದಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು. ನವೆಂಬರ್‌ 2ರ ಬೆಳಿಗ್ಗೆ 10.30ಕ್ಕೆ ಪ್ರಾರಂಭವಾದ ವಿಚಾರಣೆ ಶಾಂತಿಯುತವಾಗಿ ನಡೆಯಿತು. ಆದಾಗ್ಯೂ, ಬೆಳಿಗ್ಗೆ 11 ಗಂಟೆ ಸುಮಾರಿಗೆ, 25 ಮಂದಿ ಬಂದು ಸಭಾಂಗಣದ ಹಿಂಭಾಗದಲ್ಲಿ ಕುಳಿತರು. ಅವರು ನಂತರ ಕ್ವಾರಿ ಮಾಲೀಕರ ಪರ ವಕೀಲರೆಂದು ಹೇಳಿಕೊಂಡರು. ಈ ಪೈಕಿ ಒಬ್ಬರಾದ ವಿನೋದ್ ಕುಮಾರ್ ಮತ್ತು ಆರೋಗ್ಯಸಾಮಿ ಗುಂಪನ್ನು ಮುನ್ನಡೆಸಿದರು. ಅಲ್ಲದೆ ಬಲವಂತವಾಗಿ ವಿಚಾರಣೆಗೆ ಅಡ್ಡಿಪಡಿಸಲು ಪ್ರಾರಂಭಿಸಿದರು. ಸಾರ್ವಜನಿಕ ವಿಚಾರಣೆಯನ್ನು ಮುಂದುವರೆಸಲು ನಾವು ಬಿಡುವುದಿಲ್ಲ. ಗ್ರಾಮಸ್ಥರು ಸಲ್ಲಿಕೆ ಇಡುವುದನ್ನು ಮುಂದುವರಿಸುತ್ತೇವೆಂದು ಕೂಗಾಡುತ್ತಿದ್ದರು” ಎಂದು ತಿಳಿಸಿದ್ದಾರೆ.

“ವಿಚಾರಣೆಯಲ್ಲಿ ಮಾತನಾಡಲು ಮತ್ತು ಗ್ರಾಮಸ್ಥರ ಸಾಕ್ಷ್ಯಗಳಿಗೆ ಪ್ರತಿಕ್ರಿಯಿಸಲು ಸಮಾನ ಅವಕಾಶ ನೀಡಲಾಗುವುದೆಂದು ಭರವಸೆ ನೀಡಿ, ಶಾಂತವಾಗುವಂತೆ ಡಾ. ಸುರೇಶ್ ವಿನಂತಿಸಿದರೂ ಕೂಡ ಅವರ ಕೋರಿಕೆಗೆ ಅವರು ಕಿವಿಗೊಡಲಿಲ್ಲ. ಹಾಗಾಗಿ ಡಾ. ಸುರೇಶ್‌ ಅವರು ನಿರ್ದಿಷ್ಟವಾಗಿ ವಿನೋದ್ ಕುಮಾರ್ ಮತ್ತು ಆರೋಗ್ಯಸಾಮಿ ಅವರಿಗೆ, ‘ನೀವು ಬಯಸಿದರೆ ನೀವೂ ಕೂಡ ತಕ್ಷಣ ಮಾತನಾಡಬಹುದುʼ ಎಂದು ಹೇಳಿದರು. ಅಲ್ಲದೆ ಅವರಿಗೆ ಮೈಕನ್ನೂ ನೀಡಿದರು. ಆದರೆ ಇದನ್ನು ನಿರಾಕರಿಸಿದ ಅವರು ಕೂಡಲೇ ಸಭೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು” ಎಂದು ಹೇಳಿದರು.‌

ಈ ಸುದ್ದಿ ಓದಿದ್ದೀರಾ? ಗದಗ | ಬೆಳೆ ಹಾನಿ; ರೈತರಿಗೆ ₹91 ಕೋಟಿ ರೂ ಪರಿಹಾರ ವಿತರಣೆಗೆ ಚಾಲನೆ 

“ಈ ಸಮಯದಲ್ಲಿ, ವಿನೋದ್ ಕುಮಾರ್ ಮತ್ತು ಆರೋಗ್ಯಸಾಮಿ ಜತೆಗಿದ್ದ ಸದಸ್ಯರಲ್ಲಿ ಒಬ್ಬರು ಡಾ. ಸುರೇಶ್ ಅವರ ತಲೆಗೆ ಗುರಿಯಿಟ್ಟು ಕುರ್ಚಿಯನ್ನು ಎಸೆದು ಹಲ್ಲೆ ಮಾಡಿದರು. ಕುರ್ಚಿ ಡಾ. ಸುರೇಶ್ ಅವರ ತಲೆಯ ಬಲಭಾಗಕ್ಕೆ ಕುತ್ತಿಗೆಯ ಮೇಲೆ ಬಡಿದು ರಕ್ತಸ್ರಾವವಾಗುವುದರ ಜತೆಗೆ ಗಾಯವಾಯಿತು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈಗ ಅವರ ಸ್ಥಿತಿ ಸ್ಥಿರವಾಗಿದೆ. ಆದರೂ ಅವರ ತಲೆಯಲ್ಲಿನ ನೋವು ಹಾಗೆಯೇ ಇದೆ. ವಿನೋದ್ ಅವರ ಗುಂಪಿನ ಇತರ ಇಬ್ಬರು ಸಭೆಯ ಮೇಲೆ ಕುರ್ಚಿಗಳನ್ನು ಎಸೆದು, ಶಾಂತಿಯುತ ಸಭೆಯನ್ನು ಚದುರಿಸಲು ಪ್ರಯತ್ನಿಸಿದ್ದಾರೆ” ಎಂದು ಆರೋರಪಿಸಿದರು.

ಈ ವೇಳೆ ಪಿಯುಸಿಎಲ್ ರಾಷ್ಟ್ರೀಯ ಅಧ್ಯಕ್ಷೆ ಕವಿತಾ ಶ್ರೀವಾಸ್ತವ, ತಮಿಳುನಾಡು ಮತ್ತು ಪುದುಚ್ಚರಿ ಅಧ್ಯಕ್ಷ ಆರ್ ಮುರಳಿ, ತಮಿಳುನಾಡು, ಪುದುಚೇರಿ ಕಾರ್ಯದರ್ಶಿ ಶೇಖರ್ ಅಣ್ಣಾ ದುರೈ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಹೆಚ್ಚಳ

ಹಣದುಬ್ಬರಕ್ಕೆ ಅನುಗುಣವಾಗಿ ನಡೆಯುವ ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿ ಏಪ್ರಿಲ್ 1ರಿಂದ...

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮೈಸೂರು | ನಂಜನಗೂಡಿನಲ್ಲಿ ಮರಗಳ ಹನನ; ಸಂಘಟನೆಗಳಿಂದ ಪ್ರತಿಭಟನೆ

ದಿನಾಂಕ-07-03-2026ರಂದು ಮೈಸೂರು ಜಿಲ್ಲೆ, ನಂಜನಗೂಡಿನ ಹೆಜ್ಜಿಗೆ ಗ್ರಾಮದ ಬಳಿ ಕಪಿಲಾ ನದಿ...