ತೆರಿಗೆ ಹಂಚಿಕೆ | ಹಣಕಾಸು ತಜ್ಞ ಅಜಯ್ ರೊಟ್ಟಿಗೆ ಎಕ್ಸ್‌ನಲ್ಲಿ ತೆರಿಗೆ ಪಾಠ ಮಾಡಿದ ಅರುಣ್ ಜಾವಗಲ್

Date:

ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ, ಅದರಲ್ಲೂ ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ನಂತರ ತೆರಿಗೆ ಹಂಚಿಕೆ ವಿಚಾರ ಮತ್ತೆ-ಮತ್ತೆ ಚರ್ಚೆಗೆ ಬರುತ್ತಿದೆ. ಕರ್ನಾಟಕಕ್ಕೆ ಮೋದಿ ಸರ್ಕಾರ ನಿರಂತರವಾಗಿ ಅನ್ಯಾಯ ಮಾಡುತ್ತಿದೆ ಎಂಬ ಆರೋಪಗಳು ಬಲಗೊಳ್ಳುತ್ತಲೇ ಇವೆ. ಈ ನಡುವೆ, ಹಣಕಾಸು ತಜ್ಞ ಅಜಯ್ ರೊಟ್ಟಿ ಅವರು ಕರ್ನಾಟಕಕ್ಕೆ ಕೇಂದ್ರದಿಂದ ಭರಪೂರ ತೆರಿಗೆ ಹಂಚಿಕೆಯಾಗುತ್ತಿದೆ ಎಂದು ವಾದಿಸಿದ್ದರು. ಅವರಿಗೆ ಕನ್ನಡ ಹೋರಾಟಗಾರ ಅರುಣ್‌ ಜಾವಗಲ್ ಅವರು ಆರ್ಥಿಕತೆ ಮತ್ತು ಲೆಕ್ಕಾಚಾರದ ಪಾಠ ಮಾಡಿದ್ದಾರೆ.

ಇತ್ತೀಚೆಗೆ, ಬೆಂಗಳೂರಿನ ರಸ್ತೆಗುಂಡಿಗಳು ಸೇರಿದಂತೆ ಮೂಲಸೌಕರ್ಯಗಳ ಕುರಿತು ‘ಬಯೋಕಾನ್ ಲಿಮಿಟೆಡ್‌’ನ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರುಣ್ ಮಜುಂದಾರ್ ಶಾ ಮತ್ತು ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿ.ವಿ. ಮೋಹನ್‌ದಾಸ್ ಪೈ ಟೀಕಿಸಿದ್ದರು. ‘ತಮಗೆ ತೆರಿಗೆ ಅನ್ಯಾಯ ಆಗುತ್ತಿದೆ ಎಂದು ಕರ್ನಾಟಕದವರು ನಿರಂತರವಾಗಿ ಆರೋಪಿಸುತ್ತಾರೆ. ಬೆಂಗಳೂರಿನಲ್ಲಿ ನಾವು ತೆರಿಗೆ ಕಟ್ಟುತ್ತೇವೆ. ಆದರೆ, ಮೂಲಸೌಕರ್ಯಗಳನ್ನು ಪಡೆಯಲಾಗುತ್ತಿಲ್ಲ’ ಎಂದು ಇಬ್ಬರೂ ಟೀಕಿಸಿದ್ದರು.

ಅವರ ಟೀಕೆಗೆ ಪ್ರಕ್ರಿಯಿಸಿದ್ದ ಅರುಣ್ ಜಾವಗಲ್, ”ದೆಹಲಿ ಏಜೆಂಟರಾದ ಗುಜರಾತಿ ಕಿರಣ್ ಶಾ ಮತ್ತು ಕೊಂಕಣಿ ಮೋಹನದಾಸ್ ಪೈ ಅವರು ಕರ್ನಾಟಕದಲ್ಲಿನ ‘ಜವಾಬ್ದಾರಿ’ಯ ಬಗ್ಗೆ ಬೋಧಿಸಲು ಮುಂದಾಗಿದ್ದಾರೆ. ಆದರೆ, ಸತ್ಯಗಳನ್ನು ಪರಿಶೀಲಿಸೋಣ. ಕಾರ್ಪೊರೇಟ್ ಮತ್ತು ಆದಾಯ ತೆರಿಗೆಯಾಗಿ ಸಂಗ್ರಹಿಸಲಾದ ಪ್ರತಿ 100 ರೂ.ಗಳಲ್ಲಿ ಕೇಂದ್ರ ಸರ್ಕಾರಕ್ಕೆ 59 ರೂ. ಹೋಗುತ್ತದೆ. ಉಳಿದ 41 ರೂ.ಗಳನ್ನು ಎಲ್ಲ ರಾಜ್ಯಗಳಿಗೆ ಹಂಚಲಾಗುತ್ತದೆ. ಈ ಪೈಕಿ ಕರ್ನಾಟಕಕ್ಕೆ ದೊರೆಯುವುದು 3.64% ಅಂದರೆ, 1.5 ರೂ. ಮಾತ್ರ. ಅಲ್ಲದೆ, ಕೆಲವು ರಫ್ತು ಮಾರಾಟ ಮತ್ತು ಸೇವೆಗಳು GST ವಿನಾಯಿತಿ ಪಡೆದಿವೆ. ಅಂತಹ ಉದ್ದಿಮೆಗಳಿಂದ ಕರ್ನಾಟಕವು ಪಡೆಯುವುದು 0 ರೂ. ಅಂದರೆ, ಶೂನ್ಯ. ಆದರೂ, ಶಾ ಮತ್ತು ಪೈ ರೀತಿಯ ಜನರು ಕೈಗಾರಿಕೆಗಳನ್ನು ತೆರೆಯಲು ಕರ್ನಾಟಕದಿಂದ ತೆರಿಗೆ ವಿನಾಯಿತಿ ಮತ್ತು ಪ್ರೋತ್ಸಾಹಕಗಳನ್ನು ಕೇಳುತ್ತಾರೆ. ಅವರು ತೆರಿಗೆ ಬಗ್ಗೆ ಮಾತನಾಡುವ ಮೊದಲು, ತಾವು ನಿಜವಾಗಿಯೂ ಯಾರ ಹಿತಾಸಕ್ತಿಗಳನ್ನು ರಕ್ಷಿಸುತ್ತಿದ್ದಾರೆ – ಕರ್ನಾಟಕದ್ದಾ ಅಥವಾ ಅವರ ಸ್ವಂತ ವ್ಯವಹಾರ ಲಾಭದ್ದಾ?” ಎಂದು ಪ್ರಶ್ನಿಸಬೇಕು ತಿರುಗೇಟು ನೀಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅರುಣ್ ಅವರ ಪೋಸ್ಟ್‌ ವಿರುದ್ಧ, ಶಾ ಮತ್ತು ಪೈ ಅವರನ್ನು ಸಮರ್ಥಿಸಿಕೊಂಡು ಪೋಸ್ಟ್‌ ಹಂಚಿಕೊಂಡಿರುವ ಆರ್ಥಿಕ ತಜ್ಞ ಅಜಯ್ ರೊಟ್ಟಿ, ”ಕರ್ನಾಟಕದಲ್ಲಿ ಉತ್ಪಾದನೆಯಾಗುವ ಎಲ್ಲ ರಫ್ತುಗಳು, ಉದ್ಯೋಗಗಳು ಹಾಗೂ ಉದ್ಯೋಗಿಗಳು ಸ್ಥಳೀಯ ತೆರಿಗೆಗಳನ್ನು ಪಾವತಿಸುತ್ತಾರೆ. ಅವರು ಇಲ್ಲಿ ಖರ್ಚು ಮಾಡಿದಾಗ, ಕರ್ನಾಟಕಕ್ಕೆ GST ಪಾವತಿಸುತ್ತಾರೆ. ಇಲ್ಲಿರುವ ಪ್ರತಿಯೊಬ್ಬ ವಲಸಿಗ ಅಥವಾ ಇತರ ವ್ಯಕ್ತಿಗಳು ಬಳಸುವ ಇಂಧನಕ್ಕೆ ವಿಧಿಸುವ ವ್ಯಾಟ್ ನೇರವಾಗಿ ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ಆರ್ಥಿಕ ಚಟುವಟಿಕೆ ಇರುವಲ್ಲಿ ತೆರಿಗೆ ಸಂಗ್ರಹವಿದೆ. ಕೇವಲ ಒಂದು ಕೇಂದ್ರ ಲೆವಿಯನ್ನು ತೆಗೆದುಕೊಂಡು ಈ ತೀರ್ಮಾನಗಳನ್ನು ತೆಗೆದುಕೊಳ್ಳುವುದು ತಪ್ಪು” ಎಂದಿದ್ದಾರೆ.

 ಅವರ ಪೋಸ್ಟ್‌ಗೆ ತೀಕ್ಷ್ಣವಾಗಿ ಉತ್ತರಿಸಿರುವ ಅರುಣ್, ”ತೆರಿಗೆ ಗುರು ಅಜಯ್ ರೊಟ್ಟಿ, ‘ಇತರರು ಮೂರ್ಖರು, ನೀವು ಮಾತ್ರ ಬುದ್ಧಿವಂತರು’ ಎಂದು ಭಾವಿಸಬೇಡಿ. ಬೆಂಗಳೂರಿನಲ್ಲಿ ಸಂಗ್ರಹವಾಗುವ ತೆರಿಗೆಗಳಲ್ಲಿ ನಿಜವಾಗಿಯೂ ಸಿಂಹಪಾಲು ಯಾರಿಗೆ ಸಿಗುತ್ತದೆ ಮತ್ತು ನಗರದ ಮೂಲಸೌಕರ್ಯಕ್ಕೆ ಯಾರು ಜವಾಬ್ದಾರರಾಗಿರುತ್ತಾರೆ ಎಂಬುದನ್ನು ಸಂಖ್ಯೆಗಳ ಆಧಾರದಲ್ಲಿ ನೋಡೋಣ. ವಿವಿಧ ತೆರಿಗೆಗಳಲ್ಲಿ ರಾಜ್ಯ ಸರ್ಕಾರದ ಪಾಲು ಹೀಗಿದೆ: ನೇರ ತೆರಿಗೆ – 1.5%, GST – 50%, ಸೆಸ್ – 0%, ಆಸ್ತಿ ತೆರಿಗೆ – 100%, ಪೆಟ್ರೋಲ್ ಮತ್ತು ಅಬಕಾರಿ ಸುಂಕ. ಇದರಲ್ಲಿ, ಕರ್ನಾಟಕದಲ್ಲಿ GST ಎಷ್ಟು ಸಂಗ್ರಹವಾಗುತ್ತದೆ? ಸೆಸ್ ಎಷ್ಟು ಬರುತ್ತದೆ? ಸಿಂಹಪಾಲು ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಎಂಬುದು ವಾಸ್ತವ. ದೆಹಲಿ ಏಜೆಂಟ್‌ಗಳು (ಕಿರಣ್ ಷಾ, ಮೋಹನ್‌ದಾಸ್ ಪೈ) ಅನ್ಯಾಯವನ್ನು ಮರೆಮಾಚುತ್ತಿದ್ದಾರೆ. ಕೇಂದ್ರ ಸರ್ಕಾರವು ಸ್ಥಳೀಯ ಸಂಸ್ಥೆಗಳಿಗೆ ನಿಜವಾಗಿಯೂ ಎಷ್ಟು ಹಣವನ್ನು ನೀಡುತ್ತಿದೆ? ನನ್ನ ಎಲ್ಲ ವಾದಗಳು ಹಣಕಾಸಿನ ಒಕ್ಕೂಟದ ತತ್ವಗಳನ್ನು ಆಧರಿಸಿವೆ. ಕರ್ನಾಟಕಕ್ಕೆ ಕೇಂದ್ರ ಕೊಡುವ ಹಣ ತೀರಾ ಅನ್ಯಾಯ” ಎಂದಿದ್ದಾರೆ.

ಈ ಚರ್ಚೆಗಳ ನಡುವೆ, ಅರುಣ್ ಅವರಿಗೆ ಕೆಲವರು ಬೆದರಿಕೆಯ ಕರೆ ಮಾಡಿದ್ದಾರೆ ಎಂದು ಕೇಳಿಬಂದಿದೆ. ಈ ಬಗ್ಗೆ ‘ಎಕ್ಸ್‌’ನಲ್ಲಿ ಬರೆದಿಕೊಂಡಿರುವ ಅರುಣ್ ಜಾವಗಲ್,  ”ತೆರಿಗೆ ಹಂಚಿಕೆ ಅನ್ಯಾಯದ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಬೆದರಿಕೆ ಕರೆಗಳು ಬರುತ್ತಿವೆ” ಎಂದು ತಿಳಿಸಿದ್ದಾರೆ.

ಅರುಣ್ ಅವರ ದಾಖಲೆ, ದತ್ತಾಂಶಸಹಿತ ವಿಷಯ ಮಂಡನೆ ಮತ್ತು ವಾದವನ್ನು ಅಂಕಿಸಂಖ್ಯೆಗಳೊಂದಿಗೆ ಎದುರಿಸಲಾಗದ ಮೂರ್ಖರು ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ನಿಂದನೆಗೆ ಇಳಿದಿದ್ದಾರೆ ಎಂದು ಹಲವಾರು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರುಣ್‌ ಅವರ ಪರವಾಗಿ ನಿಂತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಗ್ರಾಹಕರಿಗೆ ಬಂಪರ್‌ ಆಫರ್! ಗ್ರಾಂ ಚಿನ್ನಕ್ಕೆ ₹8-10 ಸಾವಿರ?

ದಿನೇ ದಿನೇ ಏರುತ್ತಲೇ ಇದ್ದ ಚಿನ್ನದ ದರ ಕಳೆದ ಒಂದು ವಾರದಿಂದ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...