ಮೋದಿ ಆಡಳಿತದ 10 ವರ್ಷಗಳಲ್ಲಿ ಅತಿ ಹೆಚ್ಚು ಅರಣ್ಯ ನಾಶ; ಕರ್ನಾಟಕವೂ ಹಿಂದೆ ಬಿದ್ದಿಲ್ಲ

Date:

ಅರಣ್ಯನಾಶವು ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ಪ್ರವಾಹವು ವನ್ಯಜೀವಿಗಳ ನಾಶಕ್ಕೆ ಕಾರಣವಾಗುತ್ತದೆ. ಮಾನವನ ಜೀವನಮಟ್ಟವನ್ನು ಕಡಿಮೆ ಮಾಡುತ್ತದೆ. ಸಾಗರಗಳ ಆಮ್ಲೀಕರಣ ಮತ್ತು ಕ್ರಮೇಣ ಜೀವವೈವಿಧ್ಯತೆಯ ನಷ್ಟಕ್ಕೆ ಕೂಡ ಕಾರಣವಾಗುತ್ತದೆ.

ಕಳೆದ 10 ವರ್ಷಗಳಲ್ಲಿ ಭಾರತವು ಅರಣ್ಯನಾಶದಲ್ಲಿ ದಾಖಲೆ ನಿರ್ಮಿಸಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಡುಗಳ ನಾಶ ಶೇ.91.4 ರಷ್ಟು ಹೆಚ್ಚಾಗಿದೆ. ಅರಣ್ಯ ನಾಶಗೊಳಿಸುವುದರಲ್ಲಿ ವಿಶ್ವದಲ್ಲಿ ಬ್ರೆಜಿಲ್‌ ಮೊದಲ ಸ್ಥಾನದಲ್ಲಿದ್ದರೆ, ಭಾರತವು ಎರಡನೇ ಸ್ಥಾನದಲ್ಲಿರುವುದು ಕಳವಳಕಾರಿಯಾದ ಬೆಳವಣಿಗೆಯಾಗಿದೆ. 2014ರಿಂದ 2023ರವರೆಗೆ ಭಾರತದ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ 1,12,85,002 ಹೆಕ್ಟೇರ್ ಪ್ರದೇಶ ಅರಣ್ಯ ನಾಶವಾಗಿರುವ ಬಗ್ಗೆ ಸರ್ಕಾರಿ ವರದಿಗಳು ಸೇರಿದಂತೆ ವಿವಿಧ ಅಂಕಿಅಂಶಗಳು ಬಹಿರಂಗಪಡಿಸಿವೆ.

ವಿಶ್ವದ ಮೊದಲ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ, ಭಾರತವು ಜನರ ಹೆಚ್ಚಳಕ್ಕೆ ಸಮನಾಗಿ ಅರಣ್ಯವನ್ನು ಸರಿದೂಗಿಸಿಕೊಂಡು ಬರಬೇಕಿತ್ತು. ಆದರೆ ಆಳುವ ಸರ್ಕಾರಗಳ ಅಧಿಕಾರ ದಾಹ, ಶ್ರೀಮಂತರನ್ನು ಮಾತ್ರ ಓಲೈಸುವ ದೃಷ್ಟಿಯಿಂದ ಅರಣ್ಯ ನಾಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ.

ದೇಶದ ಒಟ್ಟು ಅರಣ್ಯ ಮತ್ತು ವೃಕ್ಷಗಳ ವ್ಯಾಪ್ತಿಯು 80.9 ದಶಲಕ್ಷ ಹೆಕ್ಟೇರ್ ಇದೆ. ಇದು ದೇಶದ ಭೌಗೋಳಿಕ ಪ್ರದೇಶದ ಶೇ. 24.62ರಷ್ಟು. ‘ಕಾಡಿಲ್ಲದಿದ್ದರೆ ನಾಡಿಲ್ಲ, ಮರವಿದ್ದರೆ ಬರವಿಲ್ಲ’ ಎನ್ನುವ ಹಿತನುಡಿ ಹೊಸದೇನೂ ಅಲ್ಲ. ಈ ಘೋಷಣೆಗಳು ಸದಾ ಕಾಲಕ್ಕೂ ಇರುವಂತವು. ಅರಣ್ಯವಿಲ್ಲದಿದ್ದರೆ ನಾಡು ಉಳಿಯುವುದು ಹೇಗೆ ಸಾಧ್ಯ, ಗಿಡಮರಗಳನ್ನೆಲ್ಲ ನೆಲಸಮಗೊಳಿಸಿದರೆ ಬರ ಮಾತ್ರವಲ್ಲ, ಮನುಕುಲವು ಉಳಿಯುವುದಿಲ್ಲ. ಕಾಡುಗಳಿದ್ದರೆ ನಾಡು ಎನ್ನುವುದು ಹಿಂದಿನ ಕಾಲದಿಂದಲೂ ನಾವು ಅನುಸರಿಸಿಕೊಂಡು ಬಂದಿರುವ ನಿಯಮವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಇತ್ತೀಚಿನ ಜಾಗತಿಕ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನ(ಎಫ್‌ಆರ್‌ಎ)ದ ಪ್ರಕಾರ ಕಳೆದ ದಶಕದಲ್ಲಿ ಅರಣ್ಯ ಪ್ರದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ದೇಶದ ಒಟ್ಟು ಅರಣ್ಯ ಮತ್ತು ವೃಕ್ಷಗಳ ವ್ಯಾಪ್ತಿಯು 80.9 ದಶಲಕ್ಷ ಹೆಕ್ಟೇರ್‍‌ನಷ್ಟಿದೆ. ಅಂಕಿಅಂಶಗಳ ಪ್ರಕಾರ ಇದು ದೇಶದ ಭೌಗೋಳಿಕ ಪ್ರದೇಶದ ಶೇ. 24.62ರಷ್ಟು ಎನ್ನುತ್ತವೆ. ವಿಶ್ವದಲ್ಲಿ ಭಾರತ ಹೊರತುಪಡಿಸಿ ಉಳಿದ ರಾಷ್ಟ್ರಗಳು ಅರಣ್ಯ ಕಡಿದರೆ ಅದಕ್ಕೆ ಸರಿಸಮನಾದ ಇಲ್ಲವೇ ಅದಕ್ಕಿಂತ ಹೆಚ್ಚು ಗಿಡಗಳನ್ನು ನೆಟ್ಟು ಪ್ರಕೃತಿ ಸಮತೋಲನಕ್ಕೆ ಆದ್ಯತೆ ನೀಡುತ್ತವೆ. ನ್ಯೂಜಿಲೆಂಡ್‌, ಚಿಲಿಯಂಥ ರಾಷ್ಟ್ರಗಳು ಕೂಡ ಅರಣ್ಯ ವೃದ್ಧಿಯಲ್ಲಿ ಮುಂದಿವೆ. ಆದರೆ ಭಾರತ ಸರ್ಕಾರ ಮಾತ್ರ ಅರಣ್ಯ ನಾಶಕ್ಕೆ ಪ್ರತಿಯಾಗಿ ಗಿಡಮರಗಳನ್ನು ಬೆಳಸುವ ಕೆಲಸಕ್ಕೆ ಕಳೆದ 10 ವರ್ಷಗಳಿಂದ ಮುಂದಾಗಿಲ್ಲ.

India Deforestetion

ಈಶಾನ್ಯ ಭಾರತ, ಕೇರಳ, ಕರ್ನಾಟಕದಲ್ಲಿ ಹೆಚ್ಚು ಅರಣ್ಯ ನಾಶ

2004ರಿಂದ 2013ರವರೆಗೆ ಭಾರತದಲ್ಲಿ 58,96,513 ಹೆಕ್ಟೇರ್‌ ಅರಣ್ಯ ಪ್ರದೇಶ ನಾಶವಾಗಿದ್ದರೆ, 2014ರಿಂದ 2023ರವರೆಗೆ 1,12,85,002 ಹೆಕ್ಟೇರ್ ಪ್ರದೇಶ ಕಾಡು ಮಾಯವಾಗಿದೆ. ಇದು ಶೇಕಡವಾರಿನಲ್ಲಿ 91.4 ರಷ್ಟು ಹೆಚ್ಚು. ಕಳೆದ 10 ವರ್ಷದಲ್ಲಿ ಈಶಾನ್ಯ ರಾಜ್ಯದಲ್ಲಿ ಅತೀ ಹೆಚ್ಚು ಅರಣ್ಯ ಅವನತಿ ಹೊಂದಿದೆ. ಅಸ್ಸಾಂ, ತ್ರಿಪುರ, ಮಣಿಪುರ, ನಾಗಾಲ್ಯಾಂಡ್‌, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೊರಾಂ ಭಾಗದಲ್ಲಿ ಹಸಿರಿನ ಪ್ರಮಾಣ ಗಣನೀಯ ಇಳಿಕೆ ಕಂಡಿದೆ. ಅದನ್ನು ಹೊರತು ಪಡಿಸಿದರೆ ಕೇರಳ, ಒಡಿಶಾ, ಕರ್ನಾಟಕದಲ್ಲಿ ಹೆಚ್ಚು ಭಾಗದ ಅರಣ್ಯವನ್ನು ನಾಶ ಮಾಡಲಾಗಿದೆ. ಈ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡು, ತೆಲಂಗಾಣ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಆಗಿರುವ ನಾಶದ ಪ್ರಮಾಣ ಕಡಿಮೆ.

ಕರ್ನಾಟಕದಲ್ಲಿ ಪ್ರತಿ ವರ್ಷವೂ ಅತಿ ಹೆಚ್ಚು ಅರಣ್ಯ ನಾಶವಾಗುತ್ತಿದೆ. ಅಂಕಿಅಂಶಗಳ ಪ್ರಕಾರ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಕಾಡು ನಷ್ಟವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವಿರುವುದು ಮಹಾರಾಷ್ಟ್ರದಲ್ಲಿ. ಕರ್ನಾಟಕವು ಹೆಚ್ಚಿನ ಅರಣ್ಯ ಪ್ರದೇಶಗಳ ಪೈಕಿ 6ನೇ ಸ್ಥಾನದಲ್ಲಿದೆ. ಶೇ. 25 ರಷ್ಟು ಅರಣ್ಯವಿದೆ. ಐದು ರಾಷ್ಟ್ರೀಯ ಉದ್ಯಾನವನಗಳು, 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ.

ಅರಣ್ಯ ನಾಶದಿಂದ ಹಲವು ಗಂಭೀರ ಪರಿಣಾಮಗಳು

ಅರಣ್ಯನಾಶವು ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ಪ್ರವಾಹವು ವನ್ಯಜೀವಿಗಳ ನಾಶಕ್ಕೆ ಕಾರಣವಾಗುತ್ತದೆ. ಮಾನವನ ಜೀವನಮಟ್ಟವನ್ನು ಕಡಿಮೆ ಮಾಡುತ್ತದೆ. ಸಾಗರಗಳ ಆಮ್ಲೀಕರಣ ಮತ್ತು ಕ್ರಮೇಣ ಜೀವವೈವಿಧ್ಯತೆಯ ನಷ್ಟಕ್ಕೆ ಕೂಡ ಕಾರಣವಾಗುತ್ತದೆ.

Karnataka Deforestation

ಅರಣ್ಯನಾಶವು ಹವಾಮಾನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಕಾಡುಗಳು ನಮ್ಮ ಭೂಗ್ರಹದ ಶ್ವಾಸಕೋಶಗಳಾಗಿವೆ. ಮರಗಳು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಆಮ್ಲಜನಕ ಮತ್ತು ನೀರಿನ ಆವಿಗಳನ್ನು ಗಾಳಿಯಲ್ಲಿ ಬಿಡುಗಡೆ ಮಾಡುತ್ತವೆ ಮತ್ತು ಉಷ್ಣವಲಯದ ಮಳೆಕಾಡುಗಳು ಅತ್ಯಂತ ಆರ್ದ್ರತೆಯಿಂದ ಕೂಡಿರುತ್ತವೆ. ಮರಗಳು ನೆರಳನ್ನು ಒದಗಿಸುತ್ತವೆ. ಅದು ಮಣ್ಣನ್ನು ತೇವವಾಗಿರಿಸುತ್ತದೆ. ಮರಗಳ ಅನುಪಸ್ಥಿತಿಯಿಂದ ಇದೆಲ್ಲವೂ ಅಪಾಯಕ್ಕೆ ಸಿಲುಕಿದೆ. ಇದು ವಾತಾವರಣದ ತಾಪಮಾನದಲ್ಲಿ ಅಸ್ಥಿರತೆ, ಶುಷ್ಕ ಹವಾಮಾನ ಮುಂತಾದ ಹಲವು ಬದಲಾವಣೆಗೆ ಕಾರಣವಾಗುತ್ತದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಷ್ಟ್ರಪತಿ ಮುರ್ಮು ‘ಘಾಸಿʼಗೊಳ್ಳಲು ಕೋಲ್ಕತ್ತ ಪ್ರಕರಣದ ತನಕ ಕಾಯಬೇಕಿತ್ತೇ?

ಅರಣ್ಯವನ್ನು ವಿಪರೀತವಾಗಿ ಕಡಿಯುವುದರಿಂದ ತೇವಾಂಶದ ಮಟ್ಟವು ಕಡಿಮೆಯಾಗುತ್ತದೆ. ಇದರಿಂದಾಗಿ ಇತರ ಎಲ್ಲ ರೀತಿಯ ಸಸ್ಯಗಳು ಒಣಗುತ್ತವೆ. ಉಷ್ಣವಲಯದ ಮಳೆಕಾಡುಗಳನ್ನು ಒಣಗಿಸುವುದರಿಂದ ಕಾಡ್ಗಿಚ್ಚಿನಂತಹ ಬೆಂಕಿಯ ಹಾನಿ ಹೆಚ್ಚಾಗುತ್ತದೆ. ಇದು ಕಾಡುಗಳನ್ನು ತ್ವರಿತವಾಗಿ ನಾಶಪಡಿಸುತ್ತದೆ. ಕಾಡುಗಳು ಮತ್ತು ಹವಾಮಾನವು ಅಂತರ್ಗತವಾಗಿ ಸಂಬಂಧವನ್ನು ಹೊಂದಿದೆ. ಮರಗಳ ನಷ್ಟವು ಪ್ರವಾಹ, ಮಣ್ಣಿನ ಸವೆತ, ಮರಳುಗಾರಿಕೆ ಮತ್ತು ಹೆಚ್ಚಿನ ತಾಪಮಾನವು ವೇಗವಾಗಿ ಸಂಭವಿಸಲು ಅನುವು ಮಾಡಿಕೊಡುತ್ತದೆ.

ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸುವಲ್ಲಿ ಮರಗಳು ಪ್ರಮುಖ ಪಾತ್ರವಹಿಸುತ್ತವೆ. ಮರಗಳು ವಾತಾವರಣದಲ್ಲಿ ಸಮತೋಲನವನ್ನು ಪುನಃಸ್ಥಾಪಿಸಲು ಹಸಿರುಮನೆ ಅನಿಲಗಳನ್ನು ಬಳಸುತ್ತವೆ. ಅರಣ್ಯನಾಶವನ್ನು ಮುಂದುವರಿಸುವುದರೊಂದಿಗೆ, ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣವು ಹೆಚ್ಚಾಗುತ್ತದೆ. ಇದು ನಮ್ಮ ಜಾಗತಿಕ ತಾಪಮಾನದ ತೊಂದರೆಗಳನ್ನು ಹೆಚ್ಚಿಸುತ್ತದೆ. ಇಂಗಾಲದ ಡೈಆಕ್ಸೈಡ್ ಮತ್ತು ಇತರ ವಿಷಕಾರಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಅರಣ್ಯಗಳು ಸಹಾಯ ಮಾಡುತ್ತವೆ. ಆದಾಗ್ಯೂ, ಗಿಡಮರಗಳನ್ನು ಕತ್ತರಿಸಿದಾಗ, ದಹಿಸಿದಾಗ, ಗಣಿಗಾರಿಕೆ, ಒತ್ತುವರಿ ಮಾಡಿದಾಗ ಅವು ಇಂಗಾಲದ ಮೂಲವಾಗುತ್ತವೆ.

ಮರಗಳು ನಮ್ಮ ಸ್ಥಳೀಯ ನೀರಿನ ಚಕ್ರಗಳಿಗೆ ಸಹ ನಿರ್ಣಾಯಕವಾಗಿದ್ದು ಅವು ವಾತಾವರಣಕ್ಕೆ ನೀರಿನ ಆವಿ ಹಿಂತಿರುಗಿಸುವುದನ್ನು ಮುಂದುವರಿಸುತ್ತವೆ. ಮಳೆನೀರಿನ ಮಣ್ಣಿನ ಮೂಲಕ ಸುತ್ತುವರಿಯುವುದರಿಂದ ಮಣ್ಣು ತೇವವಾಗಿರುತ್ತದೆ. ಮರಗಳಿಲ್ಲದಿದ್ದರೆ ಸವೆತವು ಆಗಾಗ್ಗೆ ಸಂಭವಿಸುತ್ತದೆ. ಕಾಡುಗಳು ಪ್ರಕೃತಿಯ ನೀರಿನ ಸಂಸ್ಕರಣಾ ಘಟಕಗಳಾಗಿ ಕಾರ್ಯನಿರ್ವಹಿಸಲಿದ್ದು, ಮಣ್ಣಿನ ಸವೆತದಿಂದ ನೀರಿನ ಸರಬರಾಜಿನಲ್ಲಿ ಸಿಲುಕುವ ನಮ್ಮ ಕುಡಿಯುವ ನೀರಿನ ಗುಣಮಟ್ಟಕ್ಕೆ ಹಾನಿಯುಂಟುಮಾಡುವ ಮಾಲಿನ್ಯಕಾರಕಗಳಿಗೆ ಮಣ್ಣನ್ನು ಒಡ್ಡುತ್ತದೆ.

ಮಳೆ ಬಂದಾಗ ಮರಗಳು ತಮ್ಮ ಬೇರುಗಳ ಸಹಾಯದಿಂದ ದೊಡ್ಡ ಪ್ರಮಾಣದ ನೀರನ್ನು ಹೀರಿಕೊಳ್ಳುತ್ತವೆ ಮತ್ತು ಸಂಗ್ರಹಿಸುತ್ತವೆ. ಅವುಗಳನ್ನು ಕತ್ತರಿಸಿದಾಗ, ನೀರಿನ ಹರಿವು ತೊಂದರೆಗೊಳಗಾಗುತ್ತದೆ ಮತ್ತು ಮಣ್ಣು ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದು ಕೆಲವು ಪ್ರದೇಶಗಳಲ್ಲಿ ಪ್ರವಾಹ ಮತ್ತು ಇತರರಲ್ಲಿ ಬರಗಳಿಗೆ ಕಾರಣವಾಗುತ್ತದೆ. ಬೃಹತ್ ಪ್ರಮಾಣದಲ್ಲಿ ಮರಗಳನ್ನು ಕಡಿಯುವುದರಿಂದ ವಿವಿಧ ಪ್ರಾಣಿ ಪ್ರಭೇದಗಳು ನಶಿಸಿಹೋಗುತ್ತವೆ. ಅವು ತಮ್ಮ ಆವಾಸಸ್ಥಳವನ್ನು ಕಳೆದುಕೊಳ್ಳುತ್ತವೆ ಮತ್ತು ಹೊಸ ಸ್ಥಳಕ್ಕೆ ಹೋಗಲು ಒತ್ತಾಯಿಸಲ್ಪಡುತ್ತವೆ. ಈಗಾಗಲೇ ಹಲವು ಅಳಿವಿನಂಚಿನಲ್ಲಿವೆ. ನಮ್ಮ ಪ್ರಪಂಚ ಕಳೆದ ಕೆಲವು ದಶಕಗಳಲ್ಲಿ ಅಸಂಖ್ಯಾತ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಕಳೆದುಕೊಂಡಿದೆ. ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಅರಣ್ಯನಾಶದಿಂದಾಗಿ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಮಟ್ಟ ಹೆಚ್ಚಾಗುತ್ತದೆ ಮತ್ತು ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ನಮ್ಮ ಸಾಗರಗಳು ಹೆಚ್ಚು ಆಮ್ಲೀಯವಾಗುತ್ತವೆ. ಕೈಗಾರಿಕಾ ಕ್ರಾಂತಿಯ ನಂತರ, ಕಡಲತೀರಗಳು ಈಗಾಗಲೇ ಶೇಕಡಾ 30 ರಷ್ಟು ಹೆಚ್ಚು ಆಮ್ಲೀಯವಾಗಿದ್ದು, ಸಾಗರ ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ತೀವ್ರ ಅಪಾಯಕ್ಕೆ ದೂಡಿವೆ. ಅರಣ್ಯನಾಶವು ಕೋಟ್ಯಂತರ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿ ಸಾಮಾಜಿಕ ಸಂಘರ್ಷ ಮತ್ತು ವಲಸೆಗೆ ಕಾರಣವಾಗಿದೆ. ಆಹಾರಕ್ಕಾಗಿ ಅರಣ್ಯನಾಶವು ಭವಿಷ್ಯದಲ್ಲಿ ಆಹಾರ ಅಭದ್ರತೆಗೆ ಕಾರಣವಾಗಬಹುದು. ದೀರ್ಘಾವಧಿಯಲ್ಲಿ, ಫಲವತ್ತಾದ ಮಣ್ಣಿನ ಕೊರತೆಯು ಕಡಿಮೆ ಇಳುವರಿ ಮತ್ತು ಆಹಾರ ಅಭದ್ರತೆಯುಂಟಾಗಬಹುದು.

ಅರಣ್ಯದಿಂದ ಮಾನವರಿಗೆ ಆಗುವ ಲಾಭಗಳು

ಅರಣ್ಯಗಳು ಮಳೆ ಬರಲು ಸಹಾಯಕವಾಗಿವೆ. ಗಾಳಿಯ ಹೊಡೆತ, ನೀರಿನ ಕೊರತೆಗಳಿಂದ ರಕ್ಷಿಸಿ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಂಡು ನೆಲದಲ್ಲಿ ನೀರಿನ ತೇವ ನೆಲೆಸುವಂತೆ ಮಾಡುತ್ತದೆ. ಅರಣ್ಯಗಳು ಸುತ್ತಲಿನ ಪ್ರದೇಶದ ಹವಾಗುಣದ ಮೇಲೆ ವಿಶೇಷ ಪ್ರಭಾವ ಬೀರುತ್ತದೆ. ಕಾರಣಾಂತರಗಳಿಂದ ನೆಲದಲ್ಲಿ ಹುದುಗಿಹೋದ ಅರಣ್ಯಗಳು ಕಾಲಾಂತರದಲ್ಲಿ ಕಲ್ಲಿದ್ದಲು, ಕಲ್ಲೆಣ್ಣೆಗಳಂಥ ಇಂಧನಗಳಾಗಿ ಮಾರ್ಪಡುತ್ತವೆ. ಅರಣ್ಯವನ್ನು ರಕ್ಷಿಸಿದರೆ, ಅರಣ್ಯವು ನಮ್ಮನ್ನು ರಕ್ಷಿಸುತ್ತದೆ. ಹಲವು ಅರಣ್ಯ ಸಸ್ಯಗಳು ಔಷಧ ನೀಡುತ್ತವೆ. ಹಲವಾರು ವಿಧದ ಸಸ್ಯಜನ್ಯ ತೈಲಗಳು ಅರಣ್ಯ ಮೂಲದಿಂದ ದೊರೆಯುತ್ತವೆ. ಕಾಗದ, ಗಂಧದ ಎಣ್ಣೆ, ಅರಗು, ಕರ್ಪೂರದಂಥ ದ್ರವ್ಯಗಳ ಕೈಗಾರಿಕೆಗಳಿಗೆ ಅರಣ್ಯಗಳು ಬೇಕು. ಬಿದಿರು, ಮರಮಟ್ಟು, ಸಾಂಬಾರ ಪದಾರ್ಥಗಳಂಥ ಅವಶ್ಯ ವಸ್ತುಗಳು ಅರಣ್ಯದಲ್ಲಿ ಉತ್ಪತ್ತಿಯಾಗುತ್ತವೆ. ಚರ್ಮ, ದಂತ, ಮಾಂಸ ಮೊದಲಾದ ವಸ್ತುಗಳು ಅರಣ್ಯವಾಸಿಗಳಾದ ಪ್ರಾಣಿಗಳಿಂದ ದೊರಕುತ್ತದೆ.

ಹಾಗೆಯೆ ಅರಣ್ಯಗಳು ಆಮ್ಲಜನಕ ಉತ್ಪಾದನೆ ಹೆಚ್ಚಾಗುತ್ತದೆ. ವಾಯು ಮಾಲಿನ್ಯ ತಡೆಯುತ್ತದೆ. ಭೂಮಿಯ ಫಲವತ್ತತೆ ಕಾಪಾಡುವುದರ ಜೊತೆ ಭೂಮಿಯ ಬಿಸಿಯನ್ನು ತಡೆಯುತ್ತದೆ. ಪ್ರಕೃತಿಯಲ್ಲಿ ಮನುಷ್ಯರಿಗೆ ಸಹಾಯವಾಗುವ ವನ್ಯಜೀವಿಗಳಿಗೆ ಆಶ್ರಯ ಸೇರಿದಂತೆ ನೂರಾರು ಉಪಯೋಗಗಳಿವೆ. ಇವೆಲ್ಲವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾದುದು ಸರ್ಕಾರಗಳ ಕರ್ತವ್ಯದ ಜೊತೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಮುಂದಿನ ತಲೆಮಾರಿಗೆ ಉಸಿರು ಉಳಿಸಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅರಣ್ಯದ ಮಹತ್ವವೇ ಅರ್ಥವಾಗುತ್ತಿಲ್ಲ. ಅವರಿಗೆ ಅರಣ್ಯವೂ ಹಣದಂತೆಯೇ ಕಾಣಿಸುತ್ತದೆ. ದೇಶದ ಜನತೆಯಾದರೂ ಎಚ್ಚೆತ್ತು, ಸರ್ಕಾರಗಳಿಗೆ ಬುದ್ಧಿ ಕಲಿಸಬೇಕಾಗಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...