ಕಳ್ಳರು ಲೂಟಿ ಮಾಡುವಾಗ ತಾವು ಗಳಿಸಿದ್ದಕ್ಕಿಂತ ಹೆಚ್ಚು ಕಳೆದುಕೊಂಡ ಘಟನೆ ಭೋಪಾಲ್‌ನ ಅಯೋಧ್ಯಾ ನಗರ ಪ್ರದೇಶದಲ್ಲಿ ನಡೆದಿದೆ. ಸುಮಾರು 80,000 ರೂಪಾಯಿ ಲೂಟಿ ಮಾಡಿ ಪರಾರಿಯಾಗುವಾಗ ಎರಡು ಲಕ್ಷ ರೂಪಾಯಿ ಮೌಲ್ಯದ ಬೈಕನ್ನು ಕಳೆದುಕೊಂಡಿದ್ದಾರೆ.
ಇತ್ತೀಚೆಗೆ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ನಸಿ ವ್ಯಾಪಾರಿ ನೀರಜ್ ಎಂಬವರು ಸಂಪಾದಿಸಿದ ಹಣದೊಂದಿಗೆ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಬೈಕ್ ಬಂದ ಮೂವರು ವ್ಯಾಪಾರಿಯ ಬ್ಯಾಗ್ ಅನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿಯಲ್ಲಿ ವೃದ್ಧೆಯ ಸರ ಕಳವು – ಕಳ್ಳರು ಪರಾರಿ
ಈ ವೇಳೆ ನೀರಜ್ ಬೈಕ್ ಪಲ್ಟಿಯಾಗಿದ್ದು, ನಗದು ಇದ್ದ ಬ್ಯಾಗ್ ಅವರ ಕೈಯಿಂದ ಜಾರಿದೆ. ಈ ವೇಳೆ ದಾಳಿಕೋರರು ಬ್ಯಾಗ್ ಕಸಿದುಕೊಂಡು ತಮ್ಮ ಬೈಕನ್ನು ಸ್ಟಾರ್ಟ್ ಮಾಡಲು ಯತ್ನಿಸುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದಾಗಿ ಭಯಭೀತರಾದ ಖದೀಮರು ಬೈಕ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಮೂಲಕ ತಾವು ಗಳಿಸಿದ್ದಕ್ಕಿಂತ ಹೆಚ್ಚು ಮೊತ್ತವನ್ನು ಕಳ್ಳರು ಕಳೆದುಕೊಂಡಿದ್ದಾರೆ.
ನಂತರ ಪೊಲೀಸರು ಬೈಕನ್ನು ವಶಕ್ಕೆ ಪಡೆದುಕೊಂಡಿದ್ದು ಬೈಕ್‌ನ ಮೌಲ್ಯ ಎರಡು ಲಕ್ಷ ರೂಪಾಯಿ ಆಗಿದೆ. ಅದರ ನೋಂದಣಿ ಸಂಖ್ಯೆಯ ಮೂಲಕ ಗ್ಯಾಂಗ್ ಅನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ತನಿಖೆ ನಡೆಸಲಾಗುತ್ತಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.





