ಬುಡಕಟ್ಟು ಸಮುದಾಯದ ದಂಪತಿಯನ್ನು ಅಪರಿಚಿತ ದುಷ್ಕರ್ಮಿಗಳು ಥಳಿಸಿ ಕೊಂದ ಘಟನೆ ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯ ಭೆಂದ್ರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮೃತರನ್ನು ಗುರುವರ್ ಸಿಂಗ್ ರಥಿಯಾ(35) ಮತ್ತು ಅವರ ಪತ್ನಿ ಮನಿತಾ ರಥಿಯಾ(30) ಎಂದು ಗುರುತಿಸಲಾಗಿದೆ. ಗುರುವರ್ ಅವರು ಕಾರ್ಮಿಕರಾಗಿದ್ದರು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಜಾತಿ ವಿಕೃತಿ | ದಲಿತ ಯುವಕರ ಅರ್ಧ ತಲೆ ಬೋಳಿಸಿ, ದನಗಳಂತೆ ನಡೆಸಿ, ಹುಲ್ಲು ತಿನ್ನಿಸಿ ದೌರ್ಜನ್ಯ
ಬುಧವಾರ ದಂಪತಿಯ ಮೃತದೇಹವು ಅವರ ಮನೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದಂಪತಿಗೆ ಒಂದರಿಂದ ಆರು ವರ್ಷದೊಳಗಿನ ವಯಸ್ಸಿನ ಮೂವರು ಮಕ್ಕಳಿದ್ದಾರೆ. ಮಕ್ಕಳ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ಹೇಳಲಾಗಿದೆ.
ದಂಪತಿಗೆ ಕೋಲಿನಿಂದ ಥಳಿಸಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತ ದೇಹವನ್ನು ಗರ್ಗೋಡ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಸದ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ. ಇಬ್ಬರು ಶಂಕಿತರ ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.





