ಮೋದಿಗೆ ಪದೇ-ಪದೇ ಟ್ರಂಪ್ ಅವಮಾನ; ವಿಶ್ವಗುರು ಮೌನದ ನಿಗೂಢವೇನು?

Date:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಖಾಸಾ ದೋಸ್ತ್‌ಗಳಂತೆ ಇದ್ದವರು. ಅವರ ಸಂಬಂಧವು ಜಾಗತಿಕವಾಗಿ ‘ಹಗ್ ಡಿಪ್ಲಮಸಿ’ ಎಂದೇ ಹೆಸರು ಪಡೆದುಕೊಂಡಿತ್ತು. ಮೋದಿಗಾಗಿ ಟ್ರಂಪ್ ‘ಹೌಡಿ ಮೋದಿ’ ಕಾರ್ಯಕ್ರಮವನ್ನೂ, ಟ್ರಂಪ್‌ಗಾಗಿ ಮೋದಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನೂ ನಡೆಸಿದ್ದರು. ತಾವಿಬ್ಬರು ಅತ್ಯುತ್ತಮ ಮಿತ್ರರು ಹೇಳಿಕೊಂಡಿದ್ದರು. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ, ‘ಮತ್ತೊಮ್ಮೆ ಟ್ರಂಪ್’ ಎಂದು ಮೋದಿ ಹೇಳಿದ್ದರು. ಆದರೆ, ಟ್ರಂಪ್ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ, ಟ್ರಂಪ್-ಮೋದಿ ಸಂಬಂಧ ಹಳಸಿದೆ. ಮೋದಿ ಅವರನ್ನು ಟ್ರಂಪ್ ನಿರಂತರವಾಗಿ ಅಪಹಾಸ್ಯ ಮಾಡುತ್ತಲೇ ಇದ್ದಾರೆ.

ಟ್ರಂಪ್ ಅವರು ಮೋದಿ ಅವರನ್ನು ಗುರಿಯಾಗಿಸಿಕೊಂಡು ಪದೇಪದೇ ಹೇಳಿಕೆ ನೀಡುತ್ತಲೇ ಇದ್ದಾರೆ. ಇದು, ಉಭಯ ರಾಷ್ಟ್ರಗಳ ಸಂಬಂಧವನ್ನೂ ದಾಟಿ, ವೈಯಕ್ತಿಕ ಹಂತಕ್ಕೂ ಇಳಿದಿದೆ. ಮಂಗಳವಾರ, ಮೋದಿ ಕುರಿತು ಮಾತನಾಡಿರುವ ಟ್ರಂಪ್, ‘ಮೋದಿ ಬಂದು ನಿಮ್ಮನ್ನು ಭೇಟಿ ಮಾಡಬಹುದೇ ಸರ್ ಎಂದು ಕೇಳಿದ್ದಕ್ಕೆ, ನಾನು ಆಗಬಹುದು ಎಂದೆ’ ಎಂದು ಹೇಳಿಕೊಂಡಿದ್ದಾರೆ. ಮೋದಿ ಅವರನ್ನು ಕೆಳದರ್ಜೆಗಿಟ್ಟು ಮಾತನಾಡಿದ್ದಾರೆ. ಇಂತಹ ಅಪಹಾಸ್ಯ-ಅವಮಾನಕಾರಿ ಹೇಳಿಕೆಗಳನ್ನು ಟ್ರಂಪ್ ಆಗಾಗ್ಗೆ ನೀಡುತ್ತಲೇ ಇದ್ದರೂ, ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಟ್ರಂಪ್ ಅವರ ಯಾವುದೇ ನಡೆ-ನುಡಿ-ಧೋರಣೆಗಳನ್ನು ಟ್ರಂಪ್ ಖಂಡಿಸುತ್ತಿಲ್ಲ. ಮೌನಕ್ಕೆ ಶರಣಾಗಿದ್ದಾರೆ. ಈ ಮೌನ ರಾಜತಾಂತ್ರಿಕತೆಯ ತಾಳ್ಮೆಯೇ ಅಥವಾ ಟ್ರಂಪ್‌ ಮೇಲಿನ ಭಯವೇ ಎಂಬ ಪ್ರಶ್ನೆ ಭಾರತೀಯರನ್ನು ಕಾಡುತ್ತಿದೆ.

ಮಂಗಳವಾರ, ಸುದ್ದಿಗೋಷ್ಠಿ ನಡೆಸಿದ ಟ್ರಂಪ್, ಪ್ರಧಾನಿ ಮೋದಿ ಅವರು ತಮಗೆ ‘ಅಧೀನ’ರಾಗಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. “ಅಮೆರಿಕದಿಂದ ಭಾರತ ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಿದೆ. ಆದರೆ, 5 ವರ್ಷಗಳ ಕಾಲ ಅವುಗಳನ್ನು ಪಡೆಯಲಿಲ್ಲ. ಈಗ, ಪ್ರಧಾನಿ ಮೋದಿ ನನ್ನನ್ನು ನೋಡಲು ಬಂದರು. ಸರ್, ದಯವಿಟ್ಟು ನಾನು ನಿಮ್ಮನ್ನು ಭೇಟಿ ಮಾಡಬಹುದೇ? ಎಂದರು. ನಾವು ಹೌದು! ಎಂದೆ. ಆದಾಗ್ಯೂ, ಸುಂಕಗಳ ವಿಚಾರಕ್ಕಾಗಿ ನನ್ನ ಬಗ್ಗೆ ಮೋದಿ ಅತೃಪ್ತರಾಗಿದ್ದಾರೆ. ಏಕೆಂದರೆ, ಈಗ ಅವರು ಬಹಳಷ್ಟು ಸುಂಕಗಳನ್ನು ಪಾವತಿಸುತ್ತಿದ್ದಾರೆ” ಎಂದು ಅಪಹಾಸ್ಯ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೋದಿ ಕುರಿತು ಟ್ರಂಪ್ ಅಪಹಾಸ್ಯ ಇದೇ ಮೊದಲೇನೂ ಅಲ್ಲ. ಇದು ಹಲವು ಬಾರಿ ಘಟಿಸಿದೆ. 2025 ಮೇ ತಿಂಗಳಲ್ಲಿ ನಡೆದ ಭಾರತ-ಪಾಕಿಸ್ತಾನ ಸಂಘರ್ಷದ ವಿಚಾರದಲ್ಲಿ ಮೋದಿಯನ್ನು ಮಾತ್ರವಲ್ಲ, ಭಾರತವನ್ನೇ ಅಪಹಾಸ್ಯ ಮಾಡುವಂತೆ ಟ್ರಂಪ್ ನಡೆದುಕೊಂಡಿದ್ದಾರೆ. “ಭಾರತ-ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಾನೇ ನಿಲ್ಲಿಸಿದ್ದೇನೆ. ಉಭಯ ನಾಯಕರೊಂದಿಗೆ ಮಾತುಕತೆ ನಡೆಸಿ ಕದನ ವಿರಾಮ ಘೋಷಿಸಿದ್ದೇನೆ. ‘ಸೀಸ್‌ಫೈರ್’ಗೆ ಅವರು ಸಿದ್ದರಿರಲಿಲ್ಲ. ಸುಂಕದ ಬೆದರಿಕೆಯೊಡ್ಡಿ, ಕದನ ವಿರಾಮ ಘೋಷಿಸುವಂತೆ ಮಾಡಿದೆ” ಎಂದು ಟ್ರಂಪ್ ಈವರೆಗೆ ಸುಮಾರು 60ಕ್ಕೂ ಹೆಚ್ಚು ಬಾರಿ ಹೇಳಿಕೊಂಡಿದ್ದಾರೆ.

ಅವರ ಹೇಳಿಕೆಯು ‘ಭಾರತದ ಸ್ವಾಭಿಮಾನ’ಕ್ಕೆ ಧಕ್ಕೆ ತಂದಿದೆ. ಅವರ ಹೇಳಿಕೆಯನ್ನು ಭಾರತ ಸರ್ಕಾರ ನಿರಾಕರಿಸಿದ್ದರೂ, ಮೋದಿ ಅವರು ಈವರೆಗೆ ಟ್ರಂಪ್ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ‘ಟ್ರಂಪ್‌ಗೆ ಮೋದಿ ಸರೆಂಡರ್’ ಆಗಿದ್ದಾರೆಂದು ವಿಪಕ್ಷಗಳು ಮತ್ತು ವಿಶ್ಲೇಷಕರು ವಿಮರ್ಶಿಸಿದ್ದಾರೆ.

ಇನ್ನು, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಭಾರತಕ್ಕೆ ಟ್ರಂಪ್ ಬೆದರಿಕೆ ಹಾಕಿದ್ದರು. ‘ಭಾರತವು ನನ್ನನ್ನು ಸಂತೋಷಪಡಿಸದೇ ಇದ್ದರೆ, ಬಹಳಷ್ಟು ಬೆಲೆ ತೆರಬೇಕಾಗುತ್ತದೆ’ ಎಂದು ಬೆದರಿಸಿದ್ದರು. ಮಾತ್ರವಲ್ಲದೆ, ಭಾರತದ ಸರಕುಗಳ ಮೇಲೆ 50% ತೆರಿಗೆಯನ್ನೂ ಹೇರಿದರು. ಇದು ನೇರವಾಗಿ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ವ್ಯಾಪಾರ-ವಹಿವಾಟುಗಳಿಗೆ ಧಕ್ಕೆ ತಂದಿದೆ. ಆದರೂ, ಮೋದಿ ಮೌನಕ್ಕೆ ಜಾರಿದ್ದಾರೆ.

ಅಲ್ಲದೆ, ಮೋದಿ ಅವರನ್ನು ಟ್ರಂಪ್, ‘ಸುಂದರ ವ್ಯಕ್ತಿ, ಆದರೆ ಕೊಲೆಗಾರ, ನರಕದಷ್ಟು ಕಠಿಣ’ ಎಂದು ಹೊಗಳಿಕೆಯ ದಾಟಿಯಲ್ಲಿ ಜರಿದಿದ್ದಾರೆ. ಈಗ, ‘ಮೋದಿ ನನ್ನ ವಿಚಾರದಲ್ಲಿ ಸಂತೋಷವಾಗಿಲ್ಲ. ಅವರು ಹೆಚ್ಚು ಸುಂಕ ಪಾವತಿಸುತ್ತಿರುವುದರಿಂದ ಬೇಸರಗೊಂಡಿದ್ದಾರೆ’ ಎಂದು ಟ್ರಂಪ್ ಮತ್ತೊಮ್ಮೆ ಅಪಹಾಸ್ಯ ಮಾಡಿದ್ದಾರೆ. ಈಗಲೂ ಮೋದಿ ಅವರ ಮೌನ ಮುಂದುವರೆದಿದೆ.

ಈ ಲೇಖನ ಓದಿದ್ದೀರಾ?: ಮುಗಿಯದ ಅಮೆರಿಕದ ‘ಸಾಮ್ರಾಜ್ಯಶಾಹಿ’ ಹಸಿವು: ವೆನೆಜುವೆಲಾ ನಂತರ ಗ್ರೀನ್‌ಲ್ಯಾಂಡ್‌ ಸರದಿ?

ಮೋದಿ ಅವರ ಮೌನವು ರಾಜತಾಂತ್ರಿಕತೆಯ ತಾಳ್ಮೆಯೇ ಎಂಬ ಪ್ರಶ್ನೆಗಳೂ ಇವೆ. ಯಾಕೆಂದರೆ, ಕ್ವಾಡ್, ಚೀನಾ ವಿರೋಧಿ ತಂತ್ರಗಾರಿಕೆ, ರಕ್ಷಣಾ ಒಪ್ಪಂದಗಳು, ವಾಣಿಜ್ಯ ಸಂಬಂಧ ಹಾಗೂ ತಂತ್ರಜ್ಞಾನ ಸಹಕಾರದಲ್ಲಿ ಭಾರತಕ್ಕೆ ಅಮೆರಿಕ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಹೀಗಾಗಿ, ಅಮೆರಿಕವನ್ನು ದೂರ ಮಾಡಿಕೊಳ್ಳಲು ಟ್ರಂಪ್‌ ಅವರು ಸಿದ್ದರಿಲ್ಲ. ತಮ್ಮ ರಾಜತಾಂತ್ರಿಕತೆಯ ತಂತ್ರಗಾರಿಕೆಯ ಭಾಗವಾಗಿ ಮೋದಿ ಮೌನವಾಗಿದ್ದಾರೆ ಎಂದು ಭಾವಿಸಬಹುದೇ?

ಅಥವಾ, ವೈಯಕ್ತಿಕವಾಗಿ ತಾವಿಬ್ಬರೂ ಉತ್ತಮ ಸ್ನೇಹಿತರು ಎಂದು ಟ್ರಂಪ್ ಪದೇ-ಪದೇ ಹೇಳಿಕೊಳ್ಳುತ್ತಿದ್ದಾರೆ. ನೀತಿ-ನಿರ್ಧಾರಗಳಿಂದ ಈ ಸ್ನೇಹದಲ್ಲಿ ಬಿರುಕು ಮೂಡುತ್ತಿದೆ. ಟ್ರಂಪ್ ಅವರ ಹೇಳಿಕೆಗಳು ವ್ಯಾಪಾರ ಒತ್ತಡದ ಭಾಗವೇ ಹೊರತು ವೈಯಕ್ತಿಕ ದ್ವೇಷವಲ್ಲವೇ ಎಂಬ ವಾದವೂ ಇದೆ. ಅದೇ ಕಾರಣಕ್ಕೆ, ತಮ್ಮ ಸ್ನೇಹದ ಡ್ಯಾಮೆಜ್ ಕಂಟ್ರೋಲ್‌ಗಾಗಿ ಮೋದಿ ಮೌನಕ್ಕೆ ಜಾರಿದ್ದಾರೆಯೇ?

ತಮ್ಮ ಆಡಳಿತದಲ್ಲಿ ಭಾರತವು ‘ವಿಶ್ವಗುರು’ ಆಗಿದೆಯೆಂದು ಮೋದಿ ಅಬ್ಬರಿಸಿ-ಬೊಬ್ಬಿರಿದಿದ್ದಾರೆ. ಈಗ, ಈ ವಿಶ್ವಗುರು ಹೆಗ್ಗಳಿಕೆಗೆ ಮೋದಿ ಅವರೇ ಧಕ್ಕೆ ತರುತ್ತಿದ್ದಾರೆ. ವಿದೇಶಿ ನಾಯಕನಿಂದ ಪದೇ-ಪದೇ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದರೂ, ಮೋದಿ ಮೌನವಾಗಿರುವುದು ‘ವಿಶ್ವಗುರು’ ಹೆಗ್ಗಳಿಕೆಯನ್ನೂ ಅಪಹಾಸ್ಯ ಮಾಡಿದೆ. ಭಾರತದ ಆತ್ಮಗೌರವಕ್ಕೆ ಧಕ್ಕೆ ತರುತ್ತಿದೆ.

ಟ್ರಂಪ್ ಅವರ ಹೇಳಿಕೆಗಳು ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುವಂತಿದ್ದರೂ, ಮೋದಿ ಮೌನವಾಗಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕರಾಗಿ ಮೋದಿ ಅವರು ಇಷ್ಟೊಂದು ಅವಹೇಳನಗಳನ್ನು ಸಹಿಸುವುದು ಭಾರತದ ಸಾರ್ವಭೌಮತೆಯನ್ನು ಅಪಹಾಸ್ಯ ಮಾಡುತ್ತದೆ. ಮಾತ್ರವಲ್ಲ, ಮೋದಿ ಅವರು ಅಮೆರಿಕದ ಆರ್ಥಿಕ-ಸೈನಿಕ ಶಕ್ತಿಗೆ ಮಣಿದಿದ್ದಾರೆಯೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ. ವಿಶ್ವಗುರು ಮೋದಿ ಅವರು ಇಂತಹ ಅವಮಾನಗಳ ವಿರುದ್ಧ ದನಿ ಎತ್ತಬೇಕಲ್ಲವೇ?

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...