ನಿರುದ್ಯೋಗವು ದೇಶದ ಜ್ವಲಂತ ಸಮಸ್ಯೆಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಎಕ್ಸ್‌ನಲ್ಲಿ ಬರೆದುಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಪ್ರತಿ ವರ್ಷದ ಎರಡು ಕೋಟಿ ಉದ್ಯೋಗ ಎಲ್ಲಿ ಎಂದು ದೇಶದ ಯುವಕರು ಪ್ರಶ್ನಿಸುತ್ತಿದ್ದಾರೆ. ಇರುವ ಉದ್ಯೋಗಗಳ ಪೈಕಿ ನೇಮಕಾತಿ ಪ್ರಕ್ರಿಯೆಗಳು ಉದ್ಯೋಗವನ್ನು ಖಾತ್ರಿಪಡಿಸುವವರೆಗೆ ಹಂತದವರೆಗೆಏಕೆ ಸಂಕೀರ್ಣವಾಗಿವೆ’ ಎಂದು ಪ್ರಶ್ನಿಸಿದ್ದಾರೆ.
ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ(ಪಿಎಲ್‌ಎಫ್‌ಎಸ್)ಯ ಜುಲೈ 2022 –ಜೂನ್ 2023ವರೆಗಿನ ವರದಿಯನ್ನು ಉಲ್ಲೇಖಿಸಿಸುವ ಖರ್ಗೆ, ’15-29 ವರ್ಷದವರೆಗಿನ ನಿರುದ್ಯೋಗ ಪ್ರಮಾಣ ಶೇ.10ರಷ್ಟಿದೆ. ಗ್ರಾಮೀಣ ಪ್ರದೇಶದಲ್ಲಿ 15-19ರ ನಡುವಿನ ನಿರುದ್ಯೋಗ ಪ್ರಮಾಣ ಶೇ.8.3 ಇದ್ದರೆ, ನಗರ ಪ್ರದೇಶದಲ್ಲಿ ಈ ಪ್ರಮಾಣ 13.8 ರಷ್ಟಿದೆ’ ಎಂದು ಖರ್ಗೆ ಪಿಎಲ್‌ಎಫ್‌ಎಸ್ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದ ಸಾಂಸ್ಥೀಕರಣದತ್ತ ಭಾರತ, ಇನ್ನೊಂದು ಗುಲಾಮಗಿರಿಯತ್ತ ದೇಶ
“ ಎಂಎಸ್‌ಎಂಇ ವಲಯ ಏಕೆ ನಾಶವಾಗಿದೆ. ಇದರಿಂದ ಕೋಟ್ಯಂತರ ಯುವಕರ ಉದ್ಯೋಗವನ್ನು ಕಿತ್ತುಕೊಂಡು ಅವರ ಭವಿಷ್ಯವನ್ನು ನಾಶಪಡಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
बेरोज़गारी ही देश का सबसे ज्वलंत मुद्दा है।
15-29 वर्ष की आयु के व्यक्तियों की बेरोजगारी दर 10% है। (PLFS : July 2022-June 2023)
🔸ग्रामीण 8.3%
🔸शहरी 13.8%देश का युवा पूछ रहा है —
1️⃣ सालाना दो करोड़ नौकरियाँ कहाँ गई ?
2️⃣ भर्ती परीक्षाओं से नौकरी मिलने तक का सफ़र इतना… pic.twitter.com/ofxKwsvnfT
— Mallikarjun Kharge (@kharge) December 24, 2023





