ಸಂಸತ್ತಿನಲ್ಲಿ 2026-27ರ ಬಜೆಟ್‌ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಆದಾಯ ತೆರಿಗೆ ಕ್ಷೇತ್ರದಲ್ಲಿ ಬದಲಾವಣೆ ತರಲಾಗಿದೆ ಹೇಳಿದ್ದಾರೆ. ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ ಎಂದು ಘೋಷಿಸಿದ್ದಾರೆ. ಆದರೆ, ಆದಾಯ ತೆರಿಗೆ ಪ್ರಮಾಣದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
“ಹೊಸ ಕಾಯ್ದೆಯು ತಾಂತ್ರಿಕ ದೋಷಗಳನ್ನು ದಂಡಗಳಾಗಿ ಪರಿವರ್ತಿಸಲು ಹೊಸ ಕಾನೂನು ಪ್ರಸ್ತಾಪಿಸುತ್ತದೆ. ಸಣ್ಣ ತೆರಿಗೆ ಅಪರಾಧಗಳು ದಂಡವನ್ನು ಮಾತ್ರ ಆಕರ್ಷಿಸುತ್ತವೆ. ಅದಾಯ ತೆರಿಗೆ ಸಲ್ಲಿಕೆ ವಿಳಂಬಕ್ಕೆ 10% ದಂಡ ವಿಧಿಸಲಾಗುತ್ತದೆ” ಎಂದಿದ್ದಾರೆ.
“ವಿದೇಶಿ ಪ್ರಯಾಣದ ಮೇಲಿನ ತೆರಿಗೆ ಪ್ರಮಾನವು ಕಡಿಮೆಯಾಗಲಿದೆ. ವಿದೇಶಿ ಶಿಕ್ಷಣ ಪ್ರವಾಸದ ಟಿಸಿಎಸ್ ದರವನ್ನು 5%ಕ್ಕೆ ಇಳಿಸಲಾಗಿದೆ. ಈ ಕಾನೂನು ಅಘೋಷಿತ ಆದಾಯವನ್ನು ಒಂದು ಕೋಟಿ ರೂಪಾಯಿಗಳಿಗೆ ಮಿತಿಗೊಳಿಸಲು ಪ್ರಸ್ತಾಪಿಸುತ್ತದೆ” ಎಂದು ಹೇಳಿದ್ದಾರೆ.
“ಅಪಘಾತ ವಿಮೆ ಮೇಲೆ ಟಿಡಿಎಸ್ ಇರುವುದಿಲ್ಲ” ಎಂದು ಘೋಷಿಸಿದ್ದಾರೆ.
ಸಾಲದ ಕುರಿತು ಮಾತನಾಡಿರುವ ವಿತ್ತ ಸಚಿವೆ, “ಸಾಲ ಮತ್ತು ಜಿಡಿಪಿ ನಡುವಿನ ಅಂತರ ಕಡಿಮೆಯಾಗಿದೆ. 26.7 ಲಕ್ಷ ಕೋಟಿ ರೂ.ಗಳನ್ನು ತೆರಿಗೆಯಾಗಿ ಸಂಗ್ರಹಿಸಲಾಗಿದೆ. ಆದರೆ, 34 ಲಕ್ಷ ಕೋಟಿ ರೂ.ಗಳನ್ನು ಇತರ ಮೂಲಗಳಿಂದ ಪಡೆದಿದ್ದೇವೆ. 2026-27ರಲ್ಲಿ ಸಾಲ ಕೊರತೆ 36.5 ಲಕ್ಷ ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. 53.5 ಲಕ್ಷ ಕೋಟಿ ರೂಪಾಯಿಗಳ ವೆಚ್ಚವನ್ನು ಘೋಷಿಸಲಾಗಿದೆ. ಹಣಕಾಸಿನ ಕೊರತೆಯನ್ನು ಸರಿದೂಗಿಸಲು ನಾವು ಮಾರುಕಟ್ಟೆಯಿಂದ ಸಾಲ ಪಡೆಯುತ್ತೇವೆ” ಎಂದು ಹೇಳಿದ್ದಾರೆ.




