‘ವಂದೇ ಮಾತರಂ’ ಇತಿಹಾಸ ಬೇರೆಯೇ ಹೇಳುತ್ತದೆ; ಆದರೆ, ಬಿಜೆಪಿ ಅಜೆಂಡಾಗೆ ಸರಿ ಹೊಂದುತ್ತದೆ!

Date:

ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ತನ್ನ 150ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರ್ಷಿಕೋತ್ಸವವನ್ನು ವರ್ಷಪೂರ್ತಿ ಆಚರಿಸುವುದಾಗಿ ಘೋಷಿಸಿದ್ದಾರೆ.

ವಂದೇ ಮಾತರಂ ಎಂದರೆ, ತಾಯಿಗೆ ನಮಸ್ಕರಿಸು ಎಂದರ್ಥ. ಈ ಗೀತೆಯನ್ನು ಬಂಕಿಮ ಚಂದ್ರ ಚಟರ್ಜಿ ಅವರು ಸ್ವತಂತ್ರ ಗೀತೆಯಾಗಿ ರಚಿಸಿದರು. ನಂತರ 1882ರಲ್ಲಿ ಅವರದೇ ಕಾದಂಬರಿ ‘ಆನಂದಮಠ್‌’ದಲ್ಲಿ ಸೇರಿಸಲಾಯಿತು.

ಈ ಗೀತೆಯನ್ನು ಹೆಚ್ಚಿನ ರಾಷ್ಟ್ರೀಯವಾದಿಗಳು ಅಂದು ಸ್ವಾತಂತ್ರ್ಯ ಚಳವಳಿಯ ಒಗ್ಗೂಡುವಿಕೆಗಾಗಿ ಹಾಡುತ್ತಿದ್ದರು. ‘ಆನಂದಮಠ್’ ಕಾದಂಬರಿ ಮತ್ತು ‘ವಂದೇ ಮಾತರಂ’ ಗೀತೆ ಪರಸ್ಪರ ಪೂರಕವಾಗಿವೆ. ಹಾಡಿನ ನಿಜವಾದ ಉದ್ದೇಶ ಮತ್ತು ಅರ್ಥವು ಮರೆಮಾಡಲ್ಪಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಗೀತೆಯು ಇಂದು ನಾವು ನೋಡುತ್ತಿರುವಂತೆ ಕೇವಲ ಎರಡು ಚರಣಗಳಿಗೆ ಸೀಮಿತವಾಗಿಲ್ಲ. ಅದು ವಿಸ್ತೃತ ಗೀತೆಯಾಗಿದೆ. ಆದರೆ, ಇಂದು ಎರಡು ಪ್ಯಾರಾಗಳನ್ನು ಮಾತ್ರವೇ ಹಾಡಲಾಗುತ್ತಿದೆ. ಯಾಕೆಂದರೆ, ಗೀತೆಯ ಉಳಿದ ಭಾಗವು ಸಾಕಷ್ಟು ವಿರೋಧಾಭಾಸವನ್ನು ಹೊಂದಿದೆ.

‘ವಂದೇ ಮಾತರಂ’ ಎಂಬುದು ಮಾತೃಭೂಮಿಯ ದೇವತೆಗಾಗಿ ಬರೆದ ಒಂದು ಸ್ತುತಿಗೀತೆ. ಬಂಕಿಮ ಚಂದ್ರ ಚಟರ್ಜಿ ಅವರು ತಾವೇ ಸ್ವತಃ ಕಲ್ಪಿಸಿಕೊಂಡ ದೇವತೆ. ಆ ದೇವತೆ ಕೆಲವೇ ವರ್ಷಗಳಲ್ಲಿ ಹಿಂದು ದೇವತಾಗಣದಲ್ಲಿ ಕೇಂದ್ರ ಸ್ಥಾನಕ್ಕೆ ಹಾರಿದಳು. 1920ರ ದಶಕದಲ್ಲಿ ಜವಾಹರಲಾಲ್ ನೆಹರು ಅವರು ಉತ್ತರ ಪ್ರದೇಶದ ರೈತರನ್ನು ‘ರೈತರೇ ನಿಜವಾದ ದೇಶ’ ಎಂದು ಮನವೊಲಿಸಲು ಪ್ರಯತ್ನಿಸಿದರು. ಆದರೆ, ನೆಹರೂ ಅವರ ಪರಿಕಲ್ಪನೆಯು ಅಪಹಾಸ್ಯಕ್ಕೀಡಾಯಿತು. ಯಾಕೆಂದರೆ, ದೇಶವು ದೇವತೆ, ನಾವು ಎಲ್ಲ ದೇವಾಲಯಗಳಲ್ಲಿ ಪೂಜಿಸುತ್ತಿರುವುದು ದೇಶವೆಂಬ ದೇವತೆಯ ಪ್ರತಿರೂಪವನ್ನು ಎಂಬ ವಾದ ಎಲ್ಲೆಡೆ ಬೇರೂರಿತು. ಈ ವಾದ ಪರಿಕಲ್ಪನೆಯ ಮೂಲ ‘ವಂದೇ ಮಾತರಂ’ ಆಗಿತ್ತು.

ಗಮನಾರ್ಹವಾಗಿ, ‘ಆನಂದಮಠ್’ ಕಾದಂಬರಿಯು 18ನೇ ಶತಮಾನದ ಅಂತ್ಯದಲ್ಲಿ ರಚನೆಯಾದದ್ದು. ಆ ಸಮಯದಲ್ಲಿ, ಭೀಕರ ಕ್ಷಾಮವು ಬಂಗಾಳವನ್ನು ಧ್ವಂಸಗೊಳಿಸಿತ್ತು. ಆಗ ಬ್ರಿಟಿಷರ ಕೈಗೊಂಬೆಯಂತಿದ್ದ ನವಾಬರು ಬಂಗಾಳವನ್ನು ಆಳುತ್ತಿದ್ದರು. ಬರ, ಬೆಳೆ ನಷ್ಟದ ನಡುವೆಯೂ ಬ್ರಿಟಿಷ್ ಅಧಿಕಾರಿಗಳು ರೈತರಿಂದ ಹೆಚ್ಚು ತೆರಿಗೆ (ಧಾನ್ಯ) ವಸೂಲಿ ಮಾಡುತ್ತಿದ್ದರು. ಆ ಸಮಯದಲ್ಲಿ, ಒಂದು ಕಡೆ ನವಾಬರು, ಈಸ್ಟ್‌ ಇಂಡಿಯಾ ಕಂಪನಿ ವಿರುದ್ಧ ಹಿಂದು-ಮುಸ್ಲಿಮರು ಯುದ್ಧಗಳನ್ನು ನಡೆಸಿದರು. ಆದರೆ, ಬಂಕಿಮ್ ಚಂದ್ರ ಅವರು ಮುಸ್ಲಿಂ ನವಾಬನನ್ನು ಸಂಪೂರ್ಣವಾಗಿ ತಪ್ಪಿತಸ್ಥನೆಂದು ಪರಿಗಣಿಸಿದರು. ತಮ್ಮ ನಿರೂಪಣೆಯಲ್ಲಿ ಮುಸ್ಲಿಂ ಫಕೀರರು ನಡೆಸಿದ ದಂಗೆಗಳನ್ನು ಮರೆಮಾಚಿದರು. ಪರಿಣಾಮ, ನವಾಬನ ವಿರುದ್ಧದ ನಿರೂಪಣೆಯು ಮುಸ್ಲಿಂ ದುಷ್ಕೃತ್ಯದ ಚಿತ್ರಣವಾಗಿ ಪಸರಿಸಿತು.

ಹಿಂದೂ ಪ್ರಬಲ ಜಾತಿಯ ಒಂದು ಗುಂಪು ಮುಸ್ಲಿಮರನ್ನು ಕೊಲ್ಲುವಂತೆ, ಅವರ ಗುಡಿಸಲುಗಳನ್ನು ದೋಚುವಂತೆ, ಅವರ ಮಸೀದಿಗಳನ್ನು ಕೆಡವುವಂತೆ, ಮುಸ್ಲಿಂ ಮಹಿಳೆಯರನ್ನು ಸೆರೆಹಿಡಿಯಲು ಹಾಗೂ ಸತ್ತ ಮುಸ್ಲಿಮರ ಮುಖಗಳ ಮೇಲೆ ಮುದ್ರೆ ಹಾಕುವಂತೆ ಹಿಂದೂಗಳನ್ನು ಪ್ರಚೋದಿಸಿತು. ಈ ಕೃತ್ಯಗಳು ನಡೆಯುವವರೆಗೆ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದಾಗಿಯೂ, ವಿಜಯದ ನಂತರ ವ್ಯವಸ್ಥೆಯನ್ನು ಮರುಸ್ಥಾಪಿಸುವುದಾಗಿಯೂ ಅವರು ಭರವಸೆಯನ್ನೂ ನೀಡುತ್ತಾರೆ. ಮುಸ್ಲಿಮರ ಮೇಲಿನ ರಕ್ತಪಾತವು ತಮ್ಮ ಅತ್ಯುನ್ನತ ಪವಿತ್ರ ಕರ್ತವ್ಯವಾಗಿದ್ದು, ಇದನ್ನು ದೇವತೆ ಸೂಚಿಸಿದ್ದಾಳೆಂದು ಬಡ ಹಿಂದೂಗಳನ್ನು ನಂಬಿಸಲಾಗುತ್ತದೆ.

ಮಾತೃಭೂಮಿ ದೇವತೆಯು ಮೂರು ದೇವತೆಗಳಾದ ‘ಜಗದ್ಧಾತ್ರಿ, ಕಾಳಿ ಮತ್ತು ದುರ್ಗಾ’ ಪ್ರತಿರೂಪವಾಗಿದ್ದಾಳೆ. ಆಕೆಯ ಮಕ್ಕಳು ಶತ್ರುವನ್ನು ಸದೆಬಡಿದು, ಆನಂತರ, ಆಕೆಯ ಹಿಂದಿನ ವೈಭವವನ್ನು ಮರುಕಳಿಸುವಂತೆ ಮಾಡಬೇಕು ಎಂದು ಪ್ರಚಾರ ಮಾಡಲಾಗುತ್ತದೆ. ಅದಕ್ಕೆ ಪೂರಕವಾಗಿ ‘ಆನಂದಮಠ್’ ಮತ್ತು ‘ವಂದೇ ಮಾತರಂ’ ಇದೆ.

vande tcEV0L2

ಈ ಹಾಡು ನಿಧಾನವಾಗಿ ಮತ್ತು ಮೃದುವಾಗಿ ಪ್ರಾರಂಭವಾಗುತ್ತದೆ. ಮೊದಲ ಎರಡು ಚರಣಗಳಲ್ಲಿ ಸಮೃದ್ಧಗೊಂಡ ಶಾಂತ ಭೂಮಿಯನ್ನು ಸೊಂಪಾದ ಸಂಸ್ಕೃತ ಪದಗಳನ್ನು ಬಳಸಿ ಆಹ್ವಾನಿಸುತ್ತದೆ. ಆದರೆ, ಕ್ಷಣಾರ್ಧದಲ್ಲಿ ಗೀತೆಯು ಕತ್ತಿಗಳ ಘರ್ಜನೆಯಾಗಿ, ಶತ್ರುಗಳಿಗೆ ವಿನಾಶ ಉಂಟುಮಾಡುವ ಗುಡುಗಿನ ಧ್ವನಿಗಳಾಗಿ ರೂಪಾಂತರಗೊಳ್ಳುತ್ತದೆ. ಭೂಮಿಯು ರಾಕ್ಷಸರನ್ನು ಸಂಹರಿಸುವ, ಹತ್ತು ಕೈಗಳಲ್ಲಿ ಮಾರಕ ಆಯುಧಗಳನ್ನು ಹೊಂದಿರುವ ಕಾಳಿಯಾಗಿ ಬದಲಾಗುತ್ತದೆ. ಧ್ವನಿಯು ಯುದ್ಧಘೋಷಕ್ಕೆ ತಕ್ಕಂತೆ ಕಠಿಣವೂ ಗದ್ದಲವೂ ಆಗಿ ಮಾರ್ಪಡುತ್ತದೆ. ಪದಗಳ ಮೇಲಿರುವ ಬಂಕಿಮ್ ಅವರ ಅಪ್ರತಿಮ ಪಾಂಡಿತ್ಯದಲ್ಲಿ ಕಾವ್ಯ ಮತ್ತು ಗದ್ಯ ಎರಡರಲ್ಲೂ ನಿರೂಪಿತವಾಗಿವೆ. ಅವು ತಮ್ಮ ಸಂಕುಚಿತ ಶಕ್ತಿ ಮತ್ತು ಭಾವೋದ್ರಿಕ್ತ ವಾಕ್ಚಾತುರ್ಯದಿಂದ ಓದುಗರನ್ನು ಆಕರ್ಷಿಸುತ್ತವೆ.

ಈ ಹಾಡು ಹಲವಾರು ರಾಜಕೀಯ ನೆಲೆಗಳನ್ನು ಹೊಂದಿದೆ. ಕಾಂಗ್ರೆಸ್ ವಸಾಹತುಶಾಹಿ ವಿರೋಧಿ ಪ್ರದರ್ಶನಗಳಲ್ಲಿ ಇದನ್ನು ಘೋಷಣೆಯಾಗಿ ಬಳಸಿಕೊಂಡಿತು. ಆದರೆ, ಹಿಂದೂ ರಾಷ್ಟ್ರೀಯವಾದಿಗಳು ಕೋಮು ಹಿಂಸಾಚಾರದ ಸಮಯದಲ್ಲಿ ಇದನ್ನು ಹೆಚ್ಚಾಗಿ ಜಪಿಸಿದರು. ಬಂಕಿಮ್ ಅವರ ಜೀವಿತಾವಧಿಯಲ್ಲಿಯೂ ಸಹ, ಮುಸ್ಲಿಂ ವಿಮರ್ಶಕರು ಕಾದಂಬರಿ ಮತ್ತು ಹಾಡನ್ನು ತೀವ್ರವಾಗಿ ಖಂಡಿಸಿದರು. ಇದೊಂದು ದುಃಖಕರವೆಂದು ಬಣ್ಣಿಸಿದ್ದರು.

ಬಂಕಿಮ್ ಅವರ ಬರಹದಲ್ಲಿ ಗಂಭೀರ ದೋಷಗಳಿದ್ದವು; ಮುಖ್ಯವಾಗಿ, ಅವರು ಹಿಂದೂಯೇತರರನ್ನು, ವಿಶೇಷವಾಗಿ ಮುಸ್ಲಿಮರನ್ನು ರಾಷ್ಟ್ರೀಯತಾವಾದಿ ರಂಗದಿಂದ ಹೊರಗಿಟ್ಟರು. ಮುಸ್ಲಿಮರು ದೇಶಕ್ಕೆ ಸೇರಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಪಾದಿಸಿದ್ದರು. ಮೇಲಾಗಿ, ದೇವತೆಯು ಯುದ್ಧವನ್ನು ಆಜ್ಞಾಪಿಸುತ್ತಾಳೆ ಎಂಬುದು ಮುಸ್ಲಿಮರಿಗೆ ತೀವ್ರ ಬೆದರಿಕೆಯೊಡ್ಡುವಂತೆ ಮಾಡಿತು.

ಆದಾಗ್ಯೂ, ಕಾಂಗ್ರೆಸ್‌ ಕೆಲವೆಡೆ ಸರ್ಕಾರಿ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳೂ ‘ವಂದೇ ಮಾತರಂ’ಅನ್ನು ಕಡ್ಡಾಯವಾಗಿ ಹಾಡಬೇಕೆಂದು ಘೋಷಿಸಿತು. ಇದಕ್ಕೆ, 1930ರ ದಶಕದಲ್ಲಿ ಮುಸ್ಲಿಂ ಲೀಗ್ ಬಲವಾದ ಆಕ್ಷೇಪಣೆ ವ್ಯಕ್ತಪಡಿಸಲು ಆರಂಭಿಸಿತು. ಪ್ರಸಿದ್ಧ ಬಂಗಾಳಿ ಕವಿ ಜಸಿಮುದ್ದೀನ್ ಅವರು ರವೀಂದ್ರನಾಥ್‌ ಟ್ಯಾಗೋರ್ ಬಳಿ ಗೀತೆಯ ಕುರಿತು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ, ರವೀಂದ್ರನಾಥ ಟ್ಯಾಗೋರ್ ಅವರು ತಮ್ಮ ‘ಘರೆ ಬೈರೆ’ (1915) ಕಾದಂಬರಿಯಲ್ಲಿ ಕೋಮು ಸಾಮರಸ್ಯವನ್ನು ಒತ್ತಿ ಹೇಳಿದರು. ದೇಶವು ವಾಸ್ತವವಾಗಿ ಭೂಮಿ ಮತ್ತು ಜನರಿಂದ ಸಾಕಾರಗೊಂಡಿದೆ ಎಂದು ಪ್ರತಿಪಾದಿಸಿದರು. ಇಷ್ಟೆಲ್ಲ ನಡೆಯುತ್ತಿದ್ದ ಸಮಯದಲ್ಲಿಯೂ, ‘ವಂದೇ ಮಾತರಂ’ ಗೀತೆಯು 1915ರಲ್ಲಿ ಗಾಂಧಿ ಅವರಿಗೆ ಸ್ಫೂರ್ತಿ ನೀಡಿತು. ಆದರೆ, 1946-47ರ ಕೋಮು ಹತ್ಯಾಕಾಂಡದ ನಂತರ 1947ರಲ್ಲಿ ಗಾಂಧಿ ಅವರು ‘ವಂದೇ ಮಾತರಂ’ ಕುರಿತಾದ ತಮ್ಮ ಹೊಗಳಿಕೆಯನ್ನು ಹಿಂಪಡೆದುಕೊಂಡರು.

ಈ ಲೇಖನ ಓದಿದ್ದೀರಾ?: ಮುಂದುವರೆದ ಮೋದಿ ಮುಸ್ಲಿಂ ದ್ವೇಷ ಭಾಷಣ; ವಿಪಕ್ಷಗಳ ಟೀಕೆಗೆ ರಾಮನ ಎಳೆದುತಂದ ಮೋದಿ

ಈ ನಡುವೆ, 1937ರಲ್ಲಿ ನೆಹರು ಅವರು ‘ಆನಂದಮಠ್’ ಕಾದಂಬರಿಯನ್ನು ಓದಲು ಆರಂಭಿಸಿದರು. ಕಾದಂಬರಿಯಲ್ಲಿದ್ದ ವಿರೋಧಾತ್ಮಕ ಅಂಶಗಳನ್ನು ಗಮನಿಸಿದ ಅವರು, ‘ವಂದೇ ಮಾತರಂ’ ಕುರಿತು ರವೀಂದ್ರನಾಥ ಟ್ಯಾಗೋರ್‌ ಬಳಿ ಸಲಹೆ ಕೇಳಿದರು. ‘ಗೀತೆಯ ಮೊದಲ ಎರಡು ಚರಣಗಳು ಸುಂದರವಾದ ಭೂಮಿಯನ್ನು ಹೊಗಳುವುದರಿಂದ, ಅವುಗಳನ್ನು ಕಾಂಗ್ರೆಸ್ ಅಧಿವೇಶನಗಳಲ್ಲಿ ಹಾಡಬಹುದು. ಆದರೆ ಉಳಿದವುಗಳನ್ನು ಬಳಸಬಾರದು’ ಎಂದು ಟ್ಯಾಗೋರ್ ಸಲಹೆ ನೀಡಿದರು. ಆನಂತರ, 1951ರಲ್ಲಿ, ಸಂವಿಧಾನ ಸಭೆಯು ‘ವಂದೇ ಮಾತರಂ’ನ ಎರಡು ಚರಣಗಳನ್ನು ರಾಷ್ಟ್ರೀಯ ಗೀತೆಯಾಗಿ ಉಳಿಸಿಕೊಂಡಿತು. ಟ್ಯಾಗೋರ್ ಅವರ ಮರಣದ ನಂತರ, ಅವರ ‘ಜನ ಗಣ ಮನ’ವನ್ನು ರಾಷ್ಟ್ರಗೀತೆಯಾಗಿ ಸಂವಿಧಾನ ಸಭೆ ಘೋಷಿಸಿತು.

ಬದಲಾದ ಸಂದರ್ಭಗಳು ಗಾಂಧಿ ಮತ್ತು ನೆಹರೂ ಅವರ ದೃಷ್ಟಿಕೋನಗಳನ್ನು ಬದಲಾಯಿಸಿವೆ. ಕಾದಂಬರಿಯನ್ನು ಹಾಡಿನ ಜೊತೆಗೆ ಓದಿದಾಗ, ಅದರೊಳಗಿನ ಕೋಮುದ್ವೇಷದ ಕುರಿತು ಅವರಿಗೆ ಅರಿವಾಯಿತು. ಇತ್ತೀಚಿನ ಲೇಖನವೊಂದರಲ್ಲಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕ ರಾಮ್ ಮಾಧವ್, ‘ವಂದೇ ಮಾತರಂ ವಿಚಾರದಲ್ಲಾದ ಬದಲಾವಣೆಗಳ ಹಿಂದೆ ಮುಸ್ಲಿಂ ಕೈವಾಡವಿದೆ’ ಎಂದು ಆರೋಪಿಸಿದ್ದಾರೆ. 1937ರ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಪಡೆಯಲು ಕಾಂಗ್ರೆಸ್ ನಾಯಕರು ಅವಕಾಶವಾದಿಯಾಗಿ ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ. ಆದರೆ, ಅವರು ‘ಆನಂದಮಠ್’ ಕಾದಂಬರಿಯಲ್ಲಿ ಹುದುಗಿಸಿರುವ ‘ವಂದೇ ಮಾತರಂ’ ಗೀತೆಯ ಕೋಮುವಾದಿ ಭಾಗಗಳ ಬಗ್ಗೆ ಜಾಣಮೌನ ಪ್ರದರ್ಶಿಸಿದ್ದಾರೆ.

ಈ ಗೀತೆಯನ್ನು ಆರ್‌ಎಸ್‌ಎಸ್‌-ಬಿಜೆಪಿ ತಮ್ಮ ಉತ್ಸವ ಕಾರ್ಯಕ್ರಮಗಳಲ್ಲಿ ಹಾಡಲು ಮತ್ತು ವಾರ್ಷಿಕೋತ್ಸವವಾಗಿ ಆಚರಿಸಲು ನಿರ್ಧರಿಸಿರುವುದು ಸಹಜವಾದ ನಡೆ. ಧಾರ್ಮಿಕ ಮತ್ತು ಕೋಮುದ್ವೇಷವನ್ನು ಬಿತ್ತರಿಸುವ, ಕೋಮುದ್ವೇಷದ ಫಲವನ್ನು ನಿಜವಾದ ದೇಶಭಕ್ತಿ ಎಂದು ವ್ಯಾಖ್ಯಾನಿಸುವ ಈ ಗೀತೆ ಸಂಘಪರಿವಾರದ ಅಜೆಂಡಾಗೆ ಸರಿ ಹೊಂದಿಕೊಳ್ಳುತ್ತದೆ. ಗೀತೆಯಲ್ಲಿ ಹೇಳುವಂತೆ, ದೇವಿಯ ಮಕ್ಕಳು ಅವಳ ವೈಭವವನ್ನು ಮರುಸ್ಥಾಪಿಸಲು ಯುದ್ಧಕ್ಕೆ ಹೋಗಬೇಕು. ಇದು, ರಾಮನ ಭಕ್ತರು ರಾಮನ ಜನ್ಮಸ್ಥಳವನ್ನು ರಾಮನಿಗೆ ಹಿಂದಿರುಗಿಸಬೇಕೆಂಬ ಹಿಂದುತ್ವದ ಚಿಂತನೆಯನ್ನು ಪ್ರತಿಧ್ವನಿಸುತ್ತದೆ.

ಆದಾಗ್ಯೂ, ಬಂಕಿಮರು ಮುಸ್ಲಿಂ ದ್ವೇಷವನ್ನು ನಿರಂತರವಾಗಿ ಮುಂದುವರಿಸಲಿಲ್ಲ ಎಂಬುದು ಸ್ಪಷ್ಟ. ಅವರ ಕೊನೆಯ ಕಾದಂಬರಿ ‘ಸೀತಾರಾಮ್’ನಲ್ಲಿ ಮುಸ್ಲಿಂ ವಿರೋಧಿ ಧೋರಣೆಗಳನ್ನು ಮೀರುತ್ತಾರೆ. ಪರಿಣಾಮ, ಅವರ ಹಿಂದೂ ಸಹಚರರು ಅವರಿಂದ ದೂರವಾಗುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...