ಏರ್ ಇಂಡಿಯಾ ದುರಂತಕ್ಕೆ ‘ಇವರೇ ಕಾರಣ’ ಎಂದ ‘ವಾಲ್‌ ಸ್ಟ್ರೀಟ್’; ಭಾರತೀಯ ಪೈಲಟ್‌ಗಳ ಆಕ್ರೋಶ

Date:

ಸಂಪೂರ್ಣ ವರದಿ ಬರುವ ಮುನ್ನವೇ ಪೈಲಟ್‌ಗಳೇ ತಪ್ಪಿತಸ್ಥರು ಎನ್ನುವಂತಹ ಊಹೆಯನ್ನು ಬಿತ್ತರಿಸಿರುವ ಎಎಐಬಿ ವರದಿಯನ್ನು ಈಗಾಗಲೇ  ಭಾರತದ ಏರ್‌ ಲೈನ್ ಪೈಲಟ್‌ಗಳ ಸಂಘ (ALPA-I) ಟೀಕಿಸಿದೆ

ಏರ್ ಇಂಡಿಯಾ 171 ವಿಮಾನ ದುರಂತಕ್ಕೆ ಸಂಬಂಧಿಸಿದ ಪ್ರಾಥಮಿಕ ತನಿಖಾ ವರದಿಯ ಸುತ್ತ ಹಬ್ಬಿರುವ ಊಹಾಪೋಹಗಳನ್ನು ಭಾರತೀಯ ಪೈಲಟ್ ಸಂಘಗಳು ಖಂಡಿಸಿವೆ. ವಿಮಾನದ ಕ್ಯಾಪ್ಟನ್ ಉದ್ದೇಶಪೂರ್ವಕವಾಗಿ ವಿಮಾನದ ಎರಡು ಎಂಜಿನ್‌ಗಳ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಆಫ್ ಮಾಡಿದ್ದಾರೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದ ಬಳಿಕ ಆಕ್ರೋಶ ವ್ಯಕ್ತವಾಗಿದೆ.

ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯದ ವರದಿಯು ತನ್ನ ಪ್ರಾಥಮಿಕ ತನಿಖೆಯಲ್ಲಿ ಪೈಲಟ್ ದೋಷವನ್ನು ಸ್ಪಷ್ಟವಾಗಿ ಸೂಚಿಸಿಲ್ಲ ಎಂದು ಭಾರತೀಯ ಪೈಲಟ್‌ಗಳ ಒಕ್ಕೂಟ (FIP) ಪ್ರತಿಕ್ರಿಯಿಸಿದೆ. ಭಾರತೀಯ ವಿಮಾನಯಾನ ಪೈಲಟ್‌ಗಳ ಸಂಘ (ALPA-I) ಹೇಳಿಕೆ ಬಿಡುಗಡೆ ಮಾಡಿದ್ದು, “ಖಚಿತವಲ್ಲದ ಮತ್ತು ಊಹಾಪೋಹಗಳಿಂದ ಕೂಡಿದ ಥಿಯರಿಗಳನ್ನು ಮಾಧ್ಯಮಗಳು ಹರಿಬಿಡಬಾರದು” ಎಂದು ಮನವಿ ಮಾಡಿದೆ.

ಭಾರತದ ‘ವಿಮಾನ ಅಪಘಾತ ತನಿಖಾ ಬ್ಯೂರೋ (AAIB)’ ಜುಲೈ 11 ರಂದು ಬಿಡುಗಡೆ ಮಾಡಿದ ಪ್ರಾಥಮಿಕ ತನಿಖಾ ವರದಿಯೇ ಈ ಊಹಾಪೋಹಗಳಿಗೆ ಪ್ರೊತ್ಸಾಹಿಸಿದಂತೆ ಕಾಣುತ್ತಿದೆ. ಇಂಧನ ನಿಯಂತ್ರಣ ಸ್ವಿಚ್‌ಗಳು ‘ರನ್’ ಮೋಡ್‌ನಲ್ಲಿರಬೇಕಿತ್ತು. ಆದರೆ ‘ಕಟ್ಆಫ್’ ಮೋಡ್‌ಗೆ ಬದಲಿಸಲಾಗಿತ್ತು ಎಂದು ಎಎಐಬಿ ತಿಳಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಎಲ್ಲ ರಾಜ್ಯಗಳಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ: ಇದು ಪರೋಕ್ಷ NRC, CAA ಜಾರಿ ಅಲ್ಲವೇ?

“ಪೈಲಟ್‌ಗಳಲ್ಲಿ ಒಬ್ಬರು ಇನ್ನೊಬ್ಬರನ್ನು ಏಕೆ ಕಟ್ಆಫ್ ಮಾಡಿದ್ದೀಯ ಎಂದು ಕೇಳಿರುವುದು ಹಾಗೂ ಇನ್ನೊಬ್ಬ ಪೈಲಟ್ ನಾನು ಹಾಗೆ ಮಾಡಲಿಲ್ಲ ಎಂದು ಪ್ರತಿಕ್ರಿಯಿಸಿರುವುದು” ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್‌ನಲ್ಲಿ ದಾಖಲಾಗಿರುವುದಾಗಿ ವರದಿ ಹೇಳಿತ್ತು. ಆದರೆ ಯಾವ ಪೈಲಟ್, ಯಾವ ಮಾತನ್ನು ಹೇಳಿದರು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿರಲಿಲ್ಲ.

ಜುಲೈ 17ರಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ್ದು ಮರಣ ಹೊಂದಿದ ಕ್ಯಾಪ್ಟನ್‌ ಸುಮೀತ್ ಸಭರ್ವಾಲ್ ಅವರ ಹೆಸರನ್ನು ಉಲ್ಲೇಖಿಸಿರುವುದು ಆಕ್ರೋಶಕ್ಕೆ ಗುರಿಯಾಗಿದೆ. ಬಹಿರಂಗಪಡಿಸಲಿಚ್ಛಿಸದ ಅಮೆರಿಕದ ಅಧಿಕಾರಿಗಳ ತನಿಖೆಯನ್ನು ಉಲ್ಲೇಖಿಸಿರುವ ಈ ವರದಿಯು, “ಸ್ವಿಚ್ ಬದಲಾಯಿಸಿದ್ದು ಏಕೆ ಎಂದು ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರನ್ನು ಫಸ್ಟ್ ಆಫೀಸರ್ ಕ್ಲೈವ್ ಕುಂದರ್ ಕೇಳಿದ್ದಾರೆ” ಎಂದಿದೆ.

ಸಂಪೂರ್ಣ ವರದಿ ಬರುವ ಮುನ್ನವೇ ಪೈಲಟ್‌ಗಳೇ ತಪ್ಪಿತಸ್ಥರು ಎನ್ನುವಂತಹ ಊಹೆಯನ್ನು ಬಿತ್ತರಿಸಿರುವ ಎಎಐಬಿ ವರದಿಯನ್ನು ಈಗಾಗಲೇ  ಭಾರತದ ಏರ್‌ ಲೈನ್ ಪೈಲಟ್‌ಗಳ ಸಂಘ (ALPA-I) ಟೀಕಿಸಿದೆ.

ಇದನ್ನೂ ಓದಿರಿ: ‘ಬಿ’ ಖಾತಾ ಆಸ್ತಿಗಳಿಗೆ ‘ಎ’ ಖಾತಾ ನೀಡಲು ಸರ್ಕಾರ ನಿರ್ಧಾರ: ಯಾರಿಗೆ ಲಾಭ, ಯಾರಿಗೆ ಹೊರೆ?

ಕ್ಯಾಪ್ಟನ್ ಸಭರ್ವಾಲ್ ಅವರನ್ನು ಹೆಸರಿಸಿರುವ ‘ವಾಲ್ ಸ್ಟ್ರೀಟ್ ಜರ್ನಲ್‌’ನ ಇತ್ತೀಚಿನ ವರದಿಯ ಬಗ್ಗೆ ಕಟುವಾಗಿ ಟೀಕಿಸಿರುವ ALPA-I, “ಏರ್‌ ಇಂಡಿಯಾ 171 ವಿಮಾನ ದುರಂತದ ಬಗ್ಗೆ ಖಚಿತವಲ್ಲದ ಮತ್ತು ಊಹಾತ್ಮಕ ವಿಷಯವನ್ನು ಒಳಗೊಂಡಿರುವ ವರದಿ ಇದಾಗಿದೆ. ವಿಶೇಷವಾಗಿ ಮಾನಸಿಕ ಆರೋಗ್ಯ, ಆತ್ಮಹತ್ಯೆಯಂತಹ ಸೂಕ್ಷ್ಮ ವಿಷಯಗಳನ್ನು ಆರೋಪಿಸಿ, ತನಿಖಾ ಆಧಾರವಿಲ್ಲದೆ ವಿಮಾನ ಸಿಬ್ಬಂದಿಯ ಮೇಲೆ ದುರಂತದ ಹೊಣೆ ಹೊರಿಸುವುದನ್ನು ತಡೆಯಬೇಕು ಎಂದು ಎಲ್ಲಾ ಮಾಧ್ಯಮಗಳು ಮತ್ತು ಪತ್ರಕರ್ತರಿಗೆ ಪ್ರಾಮಾಣಿಕವಾಗಿ ತುರ್ತು ಮನವಿ ಮಾಡುತ್ತೇವೆ” ಎಂದಿದೆ.

“ಎಎಐಬಿ ವರದಿಯಾಗಲಿ ಅಥವಾ ನಾಗರಿಕ ವಿಮಾನಯಾನ ಸಚಿವರಾಗಲಿ ಇದು ಪೈಲಟ್ ದೋಷದಿಂದಾದ ದುರಂತ ಎಂದು ಹೇಳಿಲ್ಲ” ಎಂದು ಎಫ್‌ಐಪಿ ಅಧ್ಯಕ್ಷ ಕ್ಯಾಪ್ಟನ್ ಸಿಎಸ್ ರಾಂಧವ ಅವರು ಎಎನ್‌ಐಗೆ ತಿಳಿಸಿದ್ದಾರೆ. ಪೈಲಟ್‌ಗಳು, ಎಂಜಿನಿಯರ್‌ಗಳು ಮತ್ತು ವಾಯು ಸುರಕ್ಷತಾ ತಜ್ಞರನ್ನು ಒಳಗೊಂಡ ತನಿಖಾ ಸಮಿತಿಯನ್ನು ಪುನರ್ರಚಿಸುವಂತೆ ಅವರು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಒತ್ತಾಯಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...