AI ಜೊತೆ ಕೂತು ಕೆಲಸ ಮಾಡಬೇಕಿದೆ; ಅದಕ್ಕೆ ಡಿಗ್ರಿಗಳಷ್ಟೇ ಸಾಲದು…

Date:

ಇತ್ತೀಚೆಗಷ್ಟೇ, 2026 ನಿರುದ್ಯೋಗ ವರ್ಷವಾಗಲಿದೆ ಎಂದು ಸ್ವತಃ AI ಪಿತಾಮಹ ಜೆಫ್ರಿ ಹಿಂಟನ್‌ ಅವರು ಭವಿಷ್ಯ ನುಡಿದಿರುವುದಾಗಿ ವರದಿಯೊಂದು ಹೇಳಿತ್ತು.‌ ಬಹುತೇಕ ಕೆಲಸಗಳನ್ನು AI ಕಸಿದುಕೊಳ್ಳಲಿದೆ ಎಂಬ ಭೀತಿಯ ಚರ್ಚೆಗಳ ನಡುವೆ, ಇದೇ AI ಬೆಳವಣಿಗೆ ಕುರಿತ ಮತ್ತೊಂದು ವರದಿಯು, 2027ರ ಹೊತ್ತಿಗೆ ಕೆಲಸದ ಸ್ಥಳದಲ್ಲಿ ಮಾನವನ ಸಹೋದ್ಯೋಗಿಯಾಗಿ AI ಆಧಾರಿತ ಸಾಧನವಿರಲಿದೆ ಎನ್ನುತ್ತಿದೆ.

ಹೌದು, ಮುಂದಿನ ದಿನಗಳಲ್ಲಿ ಮಾನವ ಹಾಗೂ AI ಪರಸ್ಪರ ಸಹಕಾರದಿಂದ ಒಂದೇ ಸೂರಿನಡಿ ಕೆಲಸ ಮಾಡುತ್ತಾರೆ ಎನ್ನುವ ಮೈಂಡ್‌ ಬ್ಲೋಯಿಂಗ್ ವರದಿಯೊಂದು ಬಿಡುಗಡೆಯಾಗಿದೆ. ದೇಶದ ಸುಮಾರು 284 ಬಿಲಿಯನ್ ಡಾಲರ್ ಮೌಲ್ಯದ ತಂತ್ರಜ್ಞಾನ ಉದ್ಯಮವನ್ನು ಪ್ರತಿನಿಧಿಸುವ ನಾಸ್ಕಾಂ (The National Association of Software and Service Companies-NASSCOM) ಹಾಗೂ ಜಾಗತಿಕ ಉದ್ಯೋಗ ವೇದಿಕೆ ಇಂಡೀಡ್ ಒಟ್ಟಿಗೆ ಇಂಥದ್ದೊಂದು ಪ್ರಯತ್ನ ಮಾಡಿವೆ. “ವರ್ಕ್ ರೀಇಮ್ಯಾಜಿನ್ಡ್: ದಿ ರೈಸ್ ಆಫ್ ಹ್ಯೂಮನ್–AI ಸಹಯೋಗ” ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಿರುವ ಈ ವರದಿ, AIಯನ್ನು ಮಾನವನ ಪರ್ಯಾಯವಾಗಿ ಅಲ್ಲ, ಬದಲಾಗಿ ಮಾನವನ ಸಹದ್ಯೋಗಿಯಾಗಿ ಕಾಣಬೇಕೆಂಬ ವಾಸ್ತವಾಧಾರಿತ ಚಿತ್ರಣವನ್ನು ಮುಂದಿಟ್ಟಿದೆ. ಶೇ.97ರಷ್ಟು HR ಲೀಡರ್ಸ್, 2027ರ ಹೊತ್ತಿಗೆ ಕೆಲಸದ ಸ್ವರೂಪವು AIಯೊಂದಿಗೆ ಕೆಲಸ ಮಾಡುವುದಲ್ಲ, ಬದಲಾಗಿ ಮಾನವ ಮತ್ತು AIನಿರಂತರವಾಗಿ ಜೊತೆಯಾಗಿ ಕೆಲಸ ಮಾಡುವ ರೀತಿಯಲ್ಲಿ ರೂಪುಗೊಳ್ಳಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ.

“ಬದಲಾಗುತ್ತಿರುವುದು ಉದ್ಯೋಗಗಳ ಸಂಖ್ಯೆಯಲ್ಲ. ಆ ಉದ್ಯೋಗಗಳು ಜನರಿಂದ ಏನು ನಿರೀಕ್ಷಿಸುತ್ತವೆ ಎಂಬುದು. ಜೊತೆಗೆ, ಹೊಸ ನೇಮಕಾತಿ ಸೂಚನೆಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳುವುದಕ್ಕೂ ಮುನ್ನವೇ, ಸಂಸ್ಥೆಗಳ ಒಳಗೇ ಹಲವು ವ್ಯವಸ್ಥೆಗಳು ಈಗಾಗಲೇ ರಚನಾತ್ಮಕವಾಗಿ ಬದಲಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ತಂತ್ರಜ್ಞಾನ ಸಂಸ್ಥೆಗಳಾದ್ಯಂತ ಈಗಾಗಲೇ ಶೇ.20ರಿಂದ 40ರಷ್ಟು ಕೆಲಸಗಳು ವಿವಿಧ ವಿಭಾಗಗಳಲ್ಲಿ AI ಮೂಲಕ ನಡೆಯುತ್ತಿವೆ. ಅಲ್ಲದೆ, ವರದಿ ವೇಳೆ ಪ್ರತಿಕ್ರಿಯಿಸಿದ ಶೇ.45ರಷ್ಟುಉದ್ಯೋಗಿಗಳು, ತಮ್ಮ ಸಂಸ್ಥೆಗಳಲ್ಲಿ ಶೇ.40ಕ್ಕಿಂತ ಹೆಚ್ಚು ಸಾಫ್ಟ್‌ವೇರ್‌ ಅಭಿವೃವೃದ್ಧಿ ಕೆಲಸವನ್ನು ಈಗಾಗಲೇ AI ಮಾಡುತ್ತಿದೆ ಎಂದು ಹೇಳಿದ್ದಾರೆ” ಎಂದು ಇಂಡೀಡ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸಾಶಿಕುಮಾರ್ ಹೇಳಿದ್ದಾರೆ ಎಂದು DH ವರದಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾಸ್ಕಾಂ ಸಂಶೋಧನಾ ವಿಭಾಗದ ಮುಖ್ಯಸ್ಥೆ ಕೇತಕಿ ಕಾರ್ಣಿಕ್ ಅವರ ಪ್ರಕಾರ, “AI ಇನ್ಮುಂದೆ ಭವಿಷ್ಯದ ವಿಚಾರವಾಗಿ ಉಳಿದಿಲ್ಲ. ಅದು ಈಗಾಗಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ನಡೆಯುವ ರೀತಿಯನ್ನು ಮರು ರೂಪಿಸುತ್ತಿದೆ. ಈಗಿನ ದೊಡ್ಡ ಅವಕಾಶ ಎಂದರೆ, ಜನರನ್ನು AI ನೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಿದ್ಧಗೊಳಿಸುವುದೇ ಆಗಿದೆ.

ಉದ್ಯೋಗ ಮಾರುಕಟ್ಟೆಯಲ್ಲಿ ಸದಾಕಾಲ ಪ್ರಸ್ತುತವಾಗಿರಲು, ಉದ್ಯೋಗಾರ್ಥಿಗಳು AI ಉಪಕರಣಗಳೊಂದಿಗೆ ಪರಿಚಯ ಹೊಂದಬೇಕು ಎಂದು HR ತಜ್ಞರು ಸಲಹೆ ನೀಡಿದ್ದಾರೆ. ಮೆಲೆಂಟೊ (ಹಿಂದಿನ ಸೈನ್‌ಡೆಸ್ಕ್) ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಕ್ರುಪೇಶ್‌ ಔಟ್‌, “ಭಾರತದ ದೊಡ್ಡ ಶಕ್ತಿ ಎಂದರೆ ಅದರ ಪ್ರತಿಭೆ. ಆದರೆ, ರೀ-ಸ್ಕಿಲ್ಲಿಂಗ್ ಅನ್ನು ಆರ್ಥಿಕ ಮೂಲಸೌಕರ್ಯವಾಗಿ ನೋಡಿದರೆ ಮಾತ್ರ ಅದು ಪ್ರಯೋಜನಕಾರಿಯಾಗುತ್ತದೆ” ಎಂದು ಹೇಳಿದ್ದಾರೆ.

ಉದ್ಯೋಗದ ಪಾತ್ರಗಳು ಅವುಗಳನ್ನು ಅಧಿಕೃತವಾಗಿ ವಿವರಿಸುವುದಕ್ಕಿಂತಲೂ ಮತ್ತು ರೂಪುಗೊಳಿಸುವುದಕ್ಕಿಂತಲೂ ಹೆಚ್ಚು ವೇಗವಾಗಿ ಬದಲಾಗುತ್ತಿವೆ. ಹತ್ತು ಮಂದಿ HR ನಾಯಕರಲ್ಲಿ ಏಳು ಮಂದಿ ಈಗಾಗಲೇ ಕೌಶಲ್ಯವೃದ್ಧಿ(upskilling) ಮೇಲೆ ಗಮನ ಹರಿಸುತ್ತಿದ್ದು, ಅರ್ಧಕ್ಕಿಂತ ಹೆಚ್ಚು ಮಂದಿ ತಮ್ಮ ವ್ಯವಸ್ಥೆಗಳನ್ನು ಆಧುನೀಕರಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂಬುದನ್ನೂ ವರದಿ ಬಹಿರಂಗಗೊಳಿಸಿದೆ.

ಟೆಕ್‌ವೇಡ್ (TECHVED) ಸಂಸ್ಥೆಯ ಸಹ-ಸ್ಥಾಪಕ ಮತ್ತು ಸಿಇಒ ಮೊಹರ್‌ ವಿ ಅವರು, “AI ಇನ್ನು ಮುಂದೆ ಪ್ರಯೋಗಾತ್ಮಕ ಯೋಜನೆ (pilot initiative) ಅಲ್ಲ. ಅದು ಈಗ ನೇರವಾಗಿ ಆದಾಯ ತರುವ ಯಂತ್ರವಾಗಿದೆ. ಭಾರತವು ಜಗತ್ತಿನ ಅತ್ಯಂತ ಮೆಚ್ಚಿನ ತಂತ್ರಜ್ಞಾನ ಪಾಲುದಾರನಾಗಿ ಉಳಿಯಬೇಕಾದರೆ, ವಿಶಾಲಮಟ್ಟದ, ಫಲಿತಾಂಶ ಆಧಾರಿತ ಕೌಶಲ್ಯಾಭಿವೃದ್ಧಿ ಅತ್ಯಗತ್ಯ” ಎಂಬುದನ್ನು ಒತ್ತಿ ಹೇಳಿದ್ದಾರೆ.

2027ರ ಹೊತ್ತಿಗೆ ಮಾನವ ಸಂಪನ್ಮೂಲ (HR) ವಿಭಾಗದಲ್ಲಿ AI ಟ್ಯಾಲೆಂಟ್ ಹುಡುಕಿಕೊಡುವ ಸಹಾಯಕನಾಗಿರಬಹುದು; ಪತ್ರಕರ್ತನಿಗೆ ಡೇಟಾ ವಿಶ್ಲೇಷಣೆಯಲ್ಲಿ ನೆರವಾಗುವ ಸಾಧನವಾಗಿರಬಹುದು; ವೈದ್ಯರಿಗೆ ರೋಗ ಪತ್ತೆ ಪ್ರಕ್ರಿಯೆಯಲ್ಲಿ ಸಹಾಯ ಮಾಡುವ ಸಹಾಯಕನಾಗಿರಬಹುದು; ಮ್ಯಾನೇಜರ್‌ಗೆ ಕಾರ್ಯಕ್ಷಮತೆಯ ವಿಶ್ಲೇಷಣೆಯನ್ನು ಒದಗಿಸುವ ಉಪಕರಣವಾಗಿರಬಹುದು. ಆದರೆ ಈ ಎಲ್ಲ ಸಂದರ್ಭಗಳಲ್ಲಿಯೂ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಮಾನವನಲ್ಲೇ ಇರುತ್ತದೆ. ವರದಿ ಇದನ್ನು automation ಬದಲಿಗೆ augmentation ಎಂದು ವರ್ಣಿಸಿದೆ.

ಇದನ್ನೂ ಓದಿ: ನಿರುದ್ಯೋಗ ವರ್ಷವಾಗಲಿದೆ 2026: AI ಪಿತಾಮಹ ಜೆಫ್ರಿ ಹಿಂಟನ್‌ ಎಚ್ಚರಿಕೆ!

AIಗೆ ಭಯಪಡುವುದಕ್ಕಿಂತ, ಅದನ್ನು ಸಮರ್ಥವಾಗಿ ಬಳಸಲು ಕಲಿಯುವುದು ಅತ್ಯವಶ್ಯಕ. ನಿರಂತರ ಕಲಿಕೆ, ಡಿಜಿಟಲ್ ಕೌಶಲ್ಯ, ವಿಮರ್ಶಾತ್ಮಕ ಚಿಂತನೆ ಮತ್ತು ಮಾನವೀಯ ಸಂವಹನ ಕೌಶಲ್ಯಗಳೇ ಮುಂದಿನ ಕೆಲಸದ ಮಾರುಕಟ್ಟೆಯಲ್ಲಿ ಮೌಲ್ಯಯುತವಾಗಲಿವೆ. AI ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ, ಮಾನವನ ವಿಶಿಷ್ಟ ಗುಣಲಕ್ಷಣಗಳಾದ ಸೃಜನಶೀಲತೆ, ನೈತಿಕತೆ ಮತ್ತು ಸಹಾನುಭೂತಿಯೇ ಅವನ ಅಸ್ತಿತ್ವವನ್ನು ಉಳಿಸಿಕೊಳ್ಳಲಿವೆ ಎಂಬ ಸಂದೇಶವನ್ನು ಈ ವರದಿ ಬಲವಾಗಿ ಪ್ರತಿಪಾದಿಸುತ್ತದೆ.

ನಾಸ್ಕಾಂ–ಇಂಡೀಡ್ ವರದಿ ಉದ್ಯೋಗದ ಭವಿಷ್ಯವನ್ನು ʼಮಾನವ ಮತ್ತು AI ಸಹಯೋಗʼ ಎಂದು ಹೊಸದಾಗಿ ವ್ಯಾಖ್ಯಾನಿಸಿಕೊಳ್ಳುವುದು ವಾಸ್ತವದ ಅನಿವಾರ್ಯ. 2027ರ ಹೊತ್ತಿಗೆ AI ನಮ್ಮ ಕೆಲಸಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಹದ್ಯೋಗಿಯಾಗಿ, ಕೆಲಸದ ಸ್ಥಳದಲ್ಲಿ ನಮ್ಮ ಪಕ್ಕದಲ್ಲೇ ಕೂತು ಕೌಶಲ್ಯಗಳನ್ನೂ ಕಲಿಸಬಲ್ಲದು ಎನ್ನುವ ನಿರೀಕ್ಷೆಯಂತೂ ಇದೆ!

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...