ಪ.ಬಂಗಾಳದ ಗುಂಪು ಹತ್ಯೆಯ ಕೇಸಿನಲ್ಲಿ 13 ಮಂದಿ ಅಲ್ಪಸಂಖ್ಯಾತರಿಗೆ ಜೀವಾವಧಿ ಶಿಕ್ಷೆ

Date:

ಈ ವರ್ಷದ ಏಪ್ರಿಲ್ ನಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ ತಂದೆ ಮಗನ ಹತ್ಯೆಯ ವಿಚಾರವಾಗಿ ಮುರ್ಷಿದಾಬಾದ್ ಜಿಲ್ಲೆಯ ನ್ಯಾಯಾಲಯವು ಇದೇ ಸೋಮವಾರ(22/12/2025) ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಒಟ್ಟು 15 ಲಕ್ಷ ರೂ.ಗಳ ದಂಡ ವಿಧಿಸಿದೆ.

ಇದೇ ವರ್ಷದ ಏಪ್ರಿಲ್ 12 ರಂದು ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಹರ್ಗೋಬಿಂದ ದಾಸ್ (72) ಮತ್ತು ಅವರ ಮಗ ಚಂದನ್ ದಾಸ್ (42) ಅವರನ್ನು ಕೊಂದ ಆರೋಪದಲ್ಲಿ ನ್ಯಾಯಾಧೀಶ ಅಮಿತಾಭ್ ಮುಖೋಪಾಧ್ಯಾಯ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಹತ್ಯೆಯಾದ ಕುಟುಂಬಕ್ಕೆ 15 ಲಕ್ಷ ಪರಿಹಾರ ಕೊಡಬೇಕೆಂದು ನ್ಯಾಯಾಲಯ ಹೇಳಿದೆ.

ಕೋಮು-ವೈವಿಧ್ಯಮಯವಾದ ಸಮ್ಸರ್‌ಗಂಜ್ ಪ್ರದೇಶವನ್ನು ಅಶಾಂತಿ ಮತ್ತು ಉದ್ವಿಗ್ನತೆಗೆ ದೂಡಿದ ಘಟನೆಗೆ ತೀರ್ಪು ನೀಡಿದೆ. ಕೊಲೆಯಾಗಿ ಎಂಟು ತಿಂಗಳ ನಂತರ 13 ಜನರನ್ನು ತಪ್ಪಿತಸ್ಥರೆಂದು ಘೋಷಿಸಲಾಯಿತು. ದಿಲ್ದಾರ್ ನದಾಬ್ (28), ಅಸ್ಮಾವುಲ್ ನದಾಬ್ ಅಲಿಯಾಸ್ ಕಾಲು (27), ಇಂಜಾಮುಲ್ ಹಕ್ ಅಲಿಯಾಸ್ ಬಬ್ಲು (27), ಜಿಯಾ-ಉಲ್ ಹಕ್ (45), ಫೆಕರುಲ್ ಶೇಖ್ ಅಲಿಯಾಸ್ ಮಹಾಕ್ (25), ಅಜ್ಫರುಲ್ ಶೇಖ್ ಅಲಿಯಾಸ್ ಬಿಲಾಯ್ (24), ಮೊನಿರುಲ್ ಶೇಖ್ (9), ಮೊನಿರುಲ್ ಶೇಖ್ (9), ನೂರುಲ್ ಇಸ್ಲಾಂ (23), ಸಾಬಾ ಕರೀಂ (25), ಹಜರತ್ ಶೇಖ್ ಅಲಿಯಾಸ್ ಹಜರತ್ ಅಲಿ (36), ಅಕ್ಬರ್ ಅಲಿ ಅಲಿಯಾಸ್ ಅಲ್ಬರ್ ಶೇಖ್ (30) ಮತ್ತು ಯೂಸುಫ್ ಶೇಖ್ (49) ಶಿಕ್ಷೆಗೊಳಗಾದವರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೇಂದ್ರ ಸರ್ಕಾರ ಇದೇ ಏಪ್ರಿಲ್ 3 ಮತ್ತು 4 ರಂದು ಸಂಸತ್ತಿನಲ್ಲಿ ವರ್ಷ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಅಂಗೀಕರಿಸಲಾಯಿತು. ಈ ತಿದ್ದುಪಡಿಯು, ವಕ್ಫ್ ಆಸ್ತಿಗಳನ್ನು ನಿಯಂತ್ರಿಸುವಲ್ಲಿ ಮತ್ತು ಅಂತಹ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸುವಲ್ಲಿ ಸರ್ಕಾರಕ್ಕೆ ಅವಕಾಶವನ್ನು ನೀಡುತ್ತದೆ. ಈ ವೇಳೆ ಪಶ್ಚಿಮ ಬಂಗಾಳದಲ್ಲಿ ಅನೇಕ ಪ್ರತಿಭಟನೆಗಳು ನಡೆದವು. ಈ ರೀತಿಯ ಪ್ರತಿಭಟನೆಗಳಿಂದ ಹೊರಹೊಮ್ಮಿದ ಗುಂಪೊಂದು ಪಶ್ಚಿಮ ಬಂಗಾಳದ ಸಮ್ಸೇರ್‌ಗಂಜ್‌ನ ಧುಲಿಯನ್ ಮಾರುಕಟ್ಟೆಯ ಮೇಲೆ ದಾಳಿ ಮಾಡಲಾಯಿತು. ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಯಿತು.

ಈ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಬಿವಾಸ್ ಮಾತನಾಡಿ, “ನಾವು ಪ್ರಕರಣವನ್ನು ಏಳು ಸೆಕ್ಷನ್‌ಗಳ ಆಧಾರದಲ್ಲಿ ಗಮನಿಸಿದ್ದೇವೆ. ಅವುಗಳಲ್ಲಿ ಗುಂಪು ಹಲ್ಲೆ, ಗಲಭೆ, ಡಕಾಯಿತಿ, ಮನೆ ಅತಿಕ್ರಮಣ ಮತ್ತು ಕೊಲೆ ಸೇರಿವೆ. ನ್ಯಾಯಾಲಯವು ಎಲ್ಲಾ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಇದರಲ್ಲಿ ಡಕಾಯಿತಿ ಮತ್ತು ಮನೆ ಅತಿಕ್ರಮಣಕ್ಕೆ 10 ವರ್ಷ ಜೈಲು ಶಿಕ್ಷೆ ಮತ್ತು ಗಲಭೆಗೆ ಐದು ವರ್ಷ ಜೈಲು ಶಿಕ್ಷೆ ಸೇರಿವೆ. ಪ್ರತಿ ಅಪರಾಧಕ್ಕೂ ₹5,000 ದಂಡವನ್ನು ವಿಧಿಸಲಾಗಿದೆ. ಬಲಿಪಶುಗಳ ಕುಟುಂಬಕ್ಕೆ ₹15 ಲಕ್ಷ ಪರಿಹಾರವನ್ನು ಪಾವತಿಸಲು ರಾಜ್ಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ” ಎಂದು ಹೇಳಿದ್ದಾರೆ.

ಸಂಶೇರ್‌ಗಂಜ್ ಪೊಲೀಸರು 983 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಅದರಲ್ಲಿ 38 ಸಾಕ್ಷ್ಯಗಳು ಮತ್ತು ವಿಧಿವಿಜ್ಞಾನ ಸಾಕ್ಷ್ಯ ಹಾಗೂ ಪೊಲೀಸ್ ತನಿಖಾ ದಾಖಲೆಗಳು ಈ ಪ್ರಕರಣವನ್ನು ಬಲಪಡಿಸಿವೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ತನಿಖೆಗಾಗಿ ಉಪ ಪೊಲೀಸ್ ಮಹಾನಿರ್ದೇಶಕ ಸೈಯದ್ ವಕ್ವಾರ್ ರಾಝಾ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ಪ್ರಾಥಮಿಕ ಮಾಹಿತಿ ವರದಿಯಲ್ಲಿ ಐದು ಆರೋಪಿಗಳ ಹೆಸರು ಹೆಸರಿಸಲಾಗಿತ್ತು. ಆದರೆ ನಂತರದ ತನಿಖೆಯಲ್ಲಿ ಎಂಟು ಜನರು ಭಾಗಿಯಾಗಿರುವುದು ಬಹಿರಂಗವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ದಕ್ಷಿಣ ಬಂಗಾಳ) ಸುಪ್ರತಿಮ್ ಸರ್ಕಾರ್ ಹೇಳಿದ್ದಾರೆ.

“ತನಿಖೆ ಪೂರ್ಣಗೊಂಡು 56 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಆರೋಪಿಗಳ ಮನೆಗಳ ವಿವರಗಳನ್ನು ಗೂಗಲ್ ನಕ್ಷೆಗಳನ್ನು ಬಳಸಿಕೊಂಡು ಕಂಡುಹಿಡಿಯಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆರೋಪಿಗಳ ಚಲನವಲನ ಗುರುತಿಸಲಾಗಿದೆ. ರಕ್ತದ ಕಲೆಗಳನ್ನು ಹೊಂದಿರುವ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಡಿಎನ್‌ಎ ಪ್ರೊಫೈಲಿಂಗ್ ರಕ್ತದ ಮಾದರಿಗಳನ್ನು ಹರೋಗೋಬಿಂದಾ ಮತ್ತು ಚಂದನ್ ಅವರ ರಕ್ತದ ಮಾದರಿಗಳೊಂದಿಗೆ ಹೊಂದಿಕೆ ಮಾಡಲಾಗಿದೆ ಎಂದು” ಎಂದು ಸರ್ಕಾರ್ ಹೇಳಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...