ದೇಶದಲ್ಲಿ ಹಿಂದುಗಳ ಸಂಖ್ಯೆ ಕುಸಿಯುತ್ತಿದೆ ಎಂದು ಸಂಘಿಗಳು ಹೇಳುತ್ತಲೇ ಇರುವುದೇಕೆ?

Date:

ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ‘ಹಿಂದುಗಳು ಅಪಾಯದಲ್ಲಿದ್ದಾರೆ – ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ’ ಎಂಬ ಭ್ರಾಂತಿಯನ್ನ ಹೆಚ್ಚಾಗಿ ಬಿತ್ತಿದ್ದರು. ಗುಜರಾತ್‌ನಲ್ಲಿ ಮುಸ್ಲಿಮರು ಆಶ್ರಯ ಪಡೆದಿದ್ದ ನಿರಾಶ್ರಿತರ ಶಿಬಿರಗಳನ್ನು ‘ಮಕ್ಕಳನ್ನು ಉತ್ಪಾದಿಸುವ ಕಾರ್ಖಾನೆಗಳು’ ಎಂದಿದ್ದರು. ಈಗ, ಅದನ್ನೇ ಬಿ.ಎಲ್ ಸಂತೋಷ್ ಸೇರಿದಂತೆ ಬಿಜೆಪಿ/ಸಂಘಪರಿವಾರದ ನಾಯಕರಿಂದ ಹಿಡಿದು ಕಾಲಾಳುಗಳವರೆಗೆ ಎಲ್ಲರೂ ಪ್ರತಿಪಾದಿಸುತ್ತಿದ್ದಾರೆ.

“ದೇಶದಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪರಿಣಾಮ, ಹಿಂದುಗಳ ಧಾರ್ಮಿಕ ನಂಬಿಕೆಗಳ ಮೇಲೆ ನಿಧಾನವಾಗಿ ನಿರ್ಬಂಧ ಹೇರುವ ವಾತಾವರಣ ಸೃಷ್ಟಿಯಾಗುತ್ತಿದೆ. ರಾಜ್ಯ ಮತ್ತು ದೇಶದ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದು, ಅಲ್ಲಿ ಹಿಂದುಗಳು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗಬಾರದು, ಬೇರೆಯವರ ಸಂಖ್ಯೆಯೂ ಹೆಚ್ಚಬಾರದು”, ಇದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ನುಡಿಮುತ್ತುಗಳು!

ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಸಂಘಪರಿವಾರದವರ ಈ ರೋಧನೆ ಇಂದು-ನಿನ್ನೆಯದಲ್ಲ. ದಿನ ಬೆಳಗಾದರೆ, ಭಾರತದಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಸ್ಲಿಮರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಪಾಕಿಸ್ತಾನ, ಬಾಂಗ್ಲಾದೇಶದಂತೆ ಭಾರತದಲ್ಲಿಯೂ ಹಿಂದುಗಳು ಅಲ್ಪಸಂಖ್ಯಾತರಾಗಿಬಿಡುತ್ತಾರೆ ಎಂದು ಪ್ರಧಾನಿ ಮೋದಿ ಆದಿಯಾಗಿ ಹಿಂದುತ್ವ ಕೋಮುವಾದಿ ಸಂಘಟನೆಗಳ ನಾಯಕರು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಹಿಂದುಗಳಲ್ಲಿ ಆತಂಕ ಹುಟ್ಟಿಸುವುದರ ಜೊತೆಗೆ, ಕೋಮುದ್ವೇಷದ ವಿಷವನ್ನೂ ಬಿತ್ತುತ್ತಿದ್ದಾರೆ. ಕೋಮು ಗಲಭೆ, ಹಿಂಸಾಚಾರಗಳಿಗೆ ಪ್ರಚೋದನೆ ನೀಡುತ್ತಲೇ ಇದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂದಹಾಗೆ, ದೇಶದಲ್ಲಿ ಜನಗಣತಿ ನಡೆದು 15 ವರ್ಷಗಳಾಗಿವೆ. 2011ರ ಜನಗಣತಿ ಪ್ರಕಾರ ಭಾರತದಲ್ಲಿ ಒಟ್ಟು ಜನಸಂಖ್ಯೆ 121.09 ಕೋಟಿ. ಇವರಲ್ಲಿ, ಹಿಂದುಗಳು 96.63 ಕೋಟಿ (79.8%), ಮುಸ್ಲಿಮರು 17.22 ಕೋಟಿ (14.2%). ಆದರೆ, 2017ರಿಂದೀಚೆಗೆ ಬಿಜೆಪಿ ಮತ್ತು ಸಂಘಪರಿವಾರವು ಮುಸ್ಲಿಮರ ಸಂಖ್ಯೆ 43%ರಷ್ಟು ಹೆಚ್ಚಾಗಿದೆ ಎಂದು ಬಡಬಡಾಯಿಸುತ್ತಿದೆ. ಇದಕ್ಕೆ ಕಾರಣ, ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ರಚಿಸಿದ  ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ (PMEAC) ಕೊಟ್ಟ ತರ್ಕರಹಿತ ವರದಿ.

ಈ ‘ಪಿಎಂಇಎಸಿ’ಯನ್ನು 2017ರಲ್ಲಿ ರಚಿಸಲಾಯಿತು. ಇದರ ಕೆಲಸ, ಆರ್ಥಿಕ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಗೆ ಸಲಹೆ ನೀಡಲು ಸಂಶೋಧನೆಗಳನ್ನು ನಡೆಸುವುದು. ಈ ಮಂಡಳಿಯು 2019ರ ಲೋಕಸಭಾ ಚುನಾವಣೆಯ ಅಸುಪಾಸಿನಲ್ಲಿ ದೇಶದ ಜನಸಂಖ್ಯೆ ಕುರಿತು ವರದಿ ನೀಡಿತ್ತು. ಅದರಲ್ಲಿ, “1950 ಮತ್ತು 2015ರ ನಡುವೆ ಹಿಂದೂಗಳ ಜನಸಂಖ್ಯೆಯ ಪಾಲು ಸುಮಾರು 8% ರಷ್ಟು ಕಡಿಮೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಮುಸ್ಲಿಂ ಜನರ ಪಾಲು 43%ಗೆ ಏರಿಕೆಯಾಗಿದೆ. 1950ರ ಜನಗಣತಿಯ ಪ್ರಕಾರ, ದೇಶದಲ್ಲಿ 84% ಹಿಂದುಗಳಿದ್ದರು. ಆದರೆ, ಇದು 2015ರ ವೇಳೆಗೆ 78%ಗೆ ಇಳಿದಿದೆ. ಆದರೆ, ಅದೇ ಅವಧಿಯಲ್ಲಿ, ಮುಸ್ಲಿಮರು, ಕ್ರಿಶ್ಚಿಯನ್, ಬೌದ್ಧರು ಮತ್ತು ಸಿಖ್ಖರು ಸೇರಿದಂತೆ ಅಲ್ಪಸಂಖ್ಯಾತರ ಪಾಲು ಹೆಚ್ಚಾಗಿದೆ” ಎಂದು ಹೇಳಿತ್ತು.

ಇದೇ ವರದಿಯನ್ನು ಆಧರಿಸಿ ಬಿಜೆಪಿ/ಸಂಘಪರಿವಾರ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಸ್ಲಿಮರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರುತ್ತಿದೆಯಲ್ಲ ಎಂದು ವಾದಿಸುತ್ತಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಗರು 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮುಸ್ಲಿಮರನ್ನು ‘ಹೆಚ್ಚು ಮಕ್ಕಳು ಹೆರುವವರು’, ‘ಭಾರತದ ಕ್ರಿಕೆಟ್‌ ತಂಡದಲ್ಲೂ ಮುಸ್ಲಿಮರೇ ತುಂಬಿ ಹೋಗುತ್ತಾರೆ’, ಹಿಂದುಗಳು ಹೆಚ್ಚಿರುವ ಭಾರತದಲ್ಲಿ ಹಿಂದುಗಳೇ ಎರಡನೇ ದರ್ಜೆಯ ಪ್ರಜೆಗಳಾಗಿಬಿಡುತ್ತಾರೆ’, ಎಲ್ಲ ಸವಲತ್ತುಗಳನ್ನು ಮುಸ್ಲಿಮರು ಕಸಿದುಕೊಳ್ಳುತ್ತಾರೆ’ ಎಂದೆಲ್ಲ ದ್ವೇಷ ಭಾಷಣ ಮಾಡಿದ್ದಾರೆ. ‘ಹಿಂದೂ ಖತ್ರೆ ಮೇ ಹೈ’ (ಹಿಂದೂಗಳು ಅಪಾಯದಲ್ಲಿದ್ದಾರೆ) ಎಂಬ ಆತಂಕ ಹಡುತ್ತಿದ್ದಾರೆ.

ಆದಾಗ್ಯೂ,  ‘ಪಿಎಂಇಎಸಿ’ ನಡೆಸಿದ ಈ ಅಧ್ಯಯನದಲ್ಲಿ ಸಂಶೋಧಕರು ತಮ್ಮ ವಿಶ್ಲೇಷಣೆಯಲ್ಲಿ ಹಲವಾರು ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಗಮನಾರ್ಹ. ಮೊದಲಿಗೆ, ಜನಸಂಖ್ಯಾ ಅಧ್ಯಯನಗಳು ಜನಗಣತಿಯನ್ನು ಆಧರಿಸಿರುತ್ತವೆ. ಆದರೆ, ಈ ಅಧ್ಯಯನವು ಸುಮಾರು 23 ಲಕ್ಷ ಜನರನ್ನು ಸಂಪರ್ಕಿಸಿ ಅಸೋಸಿಯೇಷನ್ ಆಫ್ ರಿಲಿಜನ್ ಡಾಟಾ ಆರ್ಕೈವ್ (ARDA) ನಡೆಸಿರುವ ಸಮೀಕ್ಷೆಯನ್ನು ಆಧರಿಸಿದೆ. ಈ ಸಮೀಕ್ಷೆ ಭಾರತದ ವಿಶಾಲ ಜನಸಂಖ್ಯೆಯ ಅತೀ ಸಣ್ಣ ಮಾದರಿ. ಜನಸಂಖ್ಯೆಯ ವಿಚಾರದಲ್ಲಿ ಯಾವಾಗಲೂ ಸಮೀಕ್ಷೆಗಿಂತ ಜನಗಣತಿ ಅಂಕಿಅಂಶಗಳು ಹೆಚ್ಚು ವಿಶ್ವಾಸಾರ್ಹ ಮತ್ತು ಸಮಗ್ರವಾಗಿರುತ್ತವೆ. ಮಾತ್ರವಲ್ಲದೆ, ಜನಸಂಖ್ಯೆಯ ಬೆಳವಣಿಗೆಯ ವಿವಿಧ ಅಂಶಗಳನ್ನು ಹೊರತರುತ್ತವೆ.

ಇದೆಲ್ಲವೂ ಗೊತ್ತಿರುವ ಆಡಳಿತಾರೂಢ ಬಿಜೆಪಿ 2021ರ ಜನಗಣತಿಯನ್ನು ನಡೆಸಿಯೇ ಇಲ್ಲ. ಜೊತೆಗೆ, ಅಧ್ಯಯನ ನಡೆಸಿರುವ ಈ ಮಂಡಳಿ 2011ರ ಜನಗಣತಿಯನ್ನು ಪರಿಗಣಿಸಿಯೇ ಇಲ್ಲ. ಅದನ್ನು ವಿಶ್ಲೇಷಣೆ ಮಾಡಿಯೂ ಇಲ್ಲ. ಹೆಚ್ಚು ವಿಶ್ವಾಸವುಳ್ಳ ಜನಗಣತಿ ವರದಿಯ ಬದಲಾಗಿ, ಜನಸಂಖ್ಯೆ ಸಣ್ಣ ಮಾದರಿಯುಳ್ಳ ಸಮೀಕ್ಷೆಯ ಡೇಟಾವನ್ನು ಅಧ್ಯಯನದ ಸಂಶೋಧಕರು ಬಳಸಿದ್ದಾರೆ. ಮತ್ತೊಂದು ವಿಚಾರ, ಅಧ್ಯಯನವು 1950ರ ಜನಸಂಖ್ಯೆಯ ಅಂಕಿಅಂಶಗಳನ್ನು 2015ರ ಅಂಕಿಅಂಶಗಳೊಂದಿಗೆ ಹೋಲಿಸಿದೆ. ಇದೂ ಕೂಡ ತಪ್ಪು ವಿಧಾನ. ಅಂದರೆ, ಈ ಅಧ್ಯಯನ ಎಷ್ಟು ವಿಶ್ವಾಸಾರ್ಹ ಎಂಬುದಕ್ಕೆ ಇದು ಕನ್ನಡಿ ಹಿಡಿಯುತ್ತದೆ.

ಅಂದಹಾಗೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ‘ಹಿಂದುಗಳು ಅಪಾಯದಲ್ಲಿದ್ದಾರೆ – ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ’ ಎಂಬ ಭ್ರಾಂತಿಯನ್ನ ಹೆಚ್ಚಾಗಿ ಬಿತ್ತಿದ್ದರು. ಗುಜರಾತ್‌ನಲ್ಲಿ ಮುಸ್ಲಿಮರು ಆಶ್ರಯ ಪಡೆದಿದ್ದ ನಿರಾಶ್ರಿತರ ಶಿಬಿರಗಳನ್ನು ಮುಚ್ಚಲು ಮುಂದಾಗಿದ್ದ ಮೋದಿ, ಆ ನಿರಾಶ್ರಿತರ ಶಿಬಿರಗಳನ್ನ ‘ಮಕ್ಕಳನ್ನು ಉತ್ಪಾದಿಸುವ ಕಾರ್ಖಾನೆಗಳು’ ಎಂದಿದ್ದರು. ಈಗ, ಅದನ್ನೇ ಬಿ.ಎಲ್ ಸಂತೋಷ್ ಸೇರಿದಂತೆ ಬಿಜೆಪಿ/ಸಂಘಪರಿವಾರದ ನಾಯಕರಿಂದ ಹಿಡಿದು ಕಾಲಾಳುಗಳವರೆಗೆ ಎಲ್ಲರೂ ಪ್ರತಿಪಾದಿಸುತ್ತಿದ್ದಾರೆ.

ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಿದ್ದಾರೆ ಎಂಬುದು ಸತ್ಯವೇ? ದೇಶದಲ್ಲಿ ಒಟ್ಟು ಫಲವತ್ತತೆ ದರ (TFR) ವಾಸ್ತವವನ್ನು ಬಿಚ್ಚಿಟ್ಟಿದೆ. ರಾಷ್ಟ್ರೀಯ ಆರೋಗ್ಯ ಕುಟುಂಬ ಸಮೀಕ್ಷೆಯ ಪ್ರಕಾರ, ಹೆಚ್ಚಿನ ಸಮುದಾಯಗಳಲ್ಲಿ ಫಲವತ್ತತೆಯ ಪ್ರಮಾಣವು ಕಡಿಮೆಯಾಗುತ್ತಿದೆ. 1992-93ರಲ್ಲಿ ಇದು ಹಿಂದುಗಳಲ್ಲಿ 3.3 ಇದ್ದರೆ, ಮುಸ್ಲಿಮರಲ್ಲಿ 4.41 ಆಗಿತ್ತು. 2019-21ರಲ್ಲಿ ಇದು ಹಿಂದುಗಳಲ್ಲಿ 1.94ಕ್ಕೆ ಕುಸಿದಿದೆ. ಅದೇ ರೀತಿ ಮುಸ್ಲಿಮರಲ್ಲಿಯೂ 2.36ಗೆ ಕುಸಿತಕಂಡಿದೆ. ಫಲವತ್ತತೆಯಲ್ಲಿ ಶೇಕಡಾವಾರು ದರವು ಹಿಂದುಗಳಲ್ಲಿ 41.21% ಕುಸಿತವಾಗಿದ್ದರೆ, ಮುಸ್ಲಿಮರಲ್ಲಿ 46.49% ಕುಸಿತವಾಗಿದೆ. ಅಂದರೆ, ಶೇಕಡಾವಾರು ನೋಡಿದರೆ, ಹಿಂದುಗಳಿಗಿಂತ ಮುಸ್ಲಿಮರಲ್ಲಿಯೇ ಫಲವತ್ತತ್ತೆ ಪ್ರಮಾಣ ಹೆಚ್ಚಾಗಿ ಕುಸಿದಿದೆ. ಇದೇ ರೀತಿ ಮುಂದುವರಿದರೆ, ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆ ದರ ಮತ್ತಷ್ಟು ಕುಸಿಯುತ್ತದೆ. ಹೀಗಾಗಿ, ಎಂದಿಗೂ ಮುಸ್ಲಿಮರ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲು ಸಾಧ್ಯವೇ ಇಲ್ಲ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್ ವಿರಚಿತ ಸಂವಿಧಾನ: ಕುವೆಂಪು ಅನುಸಂಧಾನ

‘ಮುಸ್ಲಿಮರು ಉದ್ದೇಶಪೂರ್ವಕವಾಗಿ ಮತ್ತು ಹಿಂದುಗಳಿಗೆ ವಿರುದ್ಧವಾಗಿ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ’ ಎಂಬ ಸುಳ್ಳು ನಿರೂಪಣೆಯನ್ನು ಹಿಂದುತ್ವ ಕೋಮುವಾದಿಗಳು ಎಗ್ಗಿಲ್ಲದೆ ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆ. ವಾಸ್ತವವೆಂದರೆ, ಭಾರತದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿಬಿಡುತ್ತಾರೆ ಎಂಬುದು ವಾಸ್ತವೂ ಅಲ್ಲ, ಸಾಧ್ಯವೂ ಇಲ್ಲ. ಇದೊಂದು ಕೋಮು ರಾಜಕೀಯದ ಸುಳ್ಳು ನಿರೂಪಣೆಯಷ್ಟೇ.

ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೇಶಿ ಅವರ ಪುಸ್ತಕ, ‘ದಿ ಪಾಪ್ಯುಲೇಶನ್ ಮಿಥ್: ಇಸ್ಲಾಂ. ಫ್ಯಾಮಿಲಿ ಪ್ಲಾನಿಂಗ್ ಅಂಡ್ ಪೊಲಿಟಿಕಲ್ ಇನ್ ಇಂಡಿಯಾ’ (ಜನಸಂಖ್ಯಾ ಸುಳ್ಳು: ಇಸ್ಲಾಂ. ಭಾರತದಲ್ಲಿ ಕುಟುಂಬ ಯೋಜನೆ ಮತ್ತು ರಾಜಕೀಯ) ಮಹಿಳೆಯರಲ್ಲಿನ ಫಲವತ್ತತೆ ಸಮಸ್ಯೆಯನ್ನು ಸಮಗ್ರವಾಗಿ ವಿವರಿಸಿದೆ. ಭಾರತದ 29 ರಾಜ್ಯಗಳ ಪೈಕಿ 24ರಲ್ಲಿ ಮಹಿಳೆಯರ ಫಲವತ್ತತೆ ಪ್ರಮಾಣ ಈಗಾಗಲೇ 2.179ರಿಗೆ ಕುಸಿತ ಕಂಡಿದೆ. ಇದು ಸ್ಥಿರ ಜನಸಂಖ್ಯೆಯ ಒಂದು ಸೂಚಕವಾಗಿದೆ ಎಂದು ಪುಸ್ತಕ ಹೇಳುತ್ತದೆ.

2011ರ ಜನಗಣತಿಯ ಪ್ರಕಾರ 14.2% ರಷ್ಟಿರುವ ಮುಸ್ಲಿಂ ಜನಸಂಖ್ಯೆಯು 2050ರ ವೇಳೆಗೆ 18%ಕ್ಕೆ ಸ್ಥಿರಗೊಳ್ಳುತ್ತದೆ ಅಥವಾ ಇನ್ನು ಕಡಿಮೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯ ದಶಮಾನದ ದರವು ಗಣನೀಯ ಕುಸಿತವನ್ನ ಇದು ತೋರಿಸುತ್ತದೆ.

ನಿಷ್ಕಳಂಕವಾಗಿ ನಡೆಯುವ ಹಲವಾರು ಅಧ್ಯಯನಗಳನ್ನು ಲೆಕ್ಕಿಸದ ಕೋಮುವಾದಿಗಳು ಸುಳ್ಳು-ಪೊಳ್ಳು ನಿರೂಪಣೆಗಳೊಂದಿಗೆ ಮುಸ್ಲಿಂ ಸಮುದಾಯವನ್ನು ವಿವಿಧ ರೀತಿಯಲ್ಲಿ ಅಪಹಾಸ್ಯ ಮಾಡುತ್ತಾರೆ. ಇದೇ ಜನಸಂಖ್ಯೆಯಾಧಾರಿತ ಅಪಹಾಸ್ಯಗಳನ್ನು ಖಂಡಿಸಿದ್ದ ಮುಸ್ಲಿಂ ಗಣ್ಯರ ತಂಡವೊಂದು ಆರ್‌ಎಸ್‌ಎಸ್‌ ಸರಸಂಘಚಾಲಕನ ಜೊತೆ ಚರ್ಚಿಸಲು ಸಮಯ (ಅಪಾಯಿಂಟ್‌ಮೆಂಟ್) ಕೇಳಿದ್ದನ್ನು ನಾವು ಮರೆಯಲಾಗದು. ಖುರೇಶಿ ಅವರು ಆ ತಂಡದ ಭಾಗವಾಗಿದ್ದರು. ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ತಮ್ಮ ಪುಸ್ತಕವನ್ನು ನೀಡಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...