ಆ್ಯಪ್‌ನಲ್ಲಿ ಎರಡು ನಂಬರ್ ಅಕೌಂಟ್ ಬಳಸುವ ಆಯ್ಕೆ ಪರಿಚಯಿಸಿದ ವಾಟ್ಸಾಪ್

Date:

ನಂಬರ್‌ ಒನ್‌ ಜನಪ್ರಿಯ ಮಾಧ್ಯಮ ವಾಟ್ಸಾಪ್ ಎರಡು ಅಕೌಂಟ್ ಬಳಸುವ ಆಯ್ಕೆಯನ್ನು ಪರಿಚಯಿಸಿದೆ. ಇನ್ನು ಮುಂದೆ ವಾಟ್ಸಾಪ್ ಬಳಕೆದಾರರು ತಮ್ಮ ಆ್ಯಪ್‌ನಲ್ಲಿ ಎರಡು ಅಕೌಂಟ್‌ಗಳನ್ನು ಬಳಸಬಹುದು.

ಈಗಾಗಲೇ ಈ ವಿನೂತನ ಫೀಚರ್‌ ಆಂಡ್ರಾಯ್ಡ್‌ ಹಾಗೂ ಐಫೋನ್‌ನಲ್ಲಿ ಲಭ್ಯವಿದೆ. ಈ ಮೊದಲು ಎರಡು ನಂಬರ್‌ ಅಕೌಂಟ್ ಬಳಸಬೇಕಾದರೆ ಎರಡು ಮೊಬೈಲ್‌ಗಳನ್ನು ಇಟ್ಟುಕೊಳ್ಳಬೇಕಿತ್ತು ಅಥವಾ ಇನ್ನೊಂದು ನಂಬರ್‌ಗೆ ಲಾಗೌಟ್ ಮಾಡಿ ಬದಲಿಸಿಕೊಳ್ಳಬೇಕಿತ್ತು.

ಕೆಲವು ದಿನಗಳ ಹಿಂದೆ ಮೆಟಾ ಸಿಇಓ ಮಾರ್ಕ್‌ ಜುಕರ್‌ಬರ್ಗ್, ”ವಾಟ್ಸ್ ಆ್ಯಪ್‌ನಲ್ಲಿ ಎರಡು ಅಕೌಂಟ್‌ಗಳ ನಡುವೆ ಬದಲಾಯಿಸಿಕೊಳ್ಳಿ. ಶೀಘ್ರದಲ್ಲೇ ನೀವು ಅಪ್ಲಿಕೇಶನ್‌ನಲ್ಲಿ ಒಂದು ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಹೊಂದಲು ಸಾಧ್ಯವಾಗುತ್ತದೆ” ಎಂದು ತಿಳಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ವಿನೂತನ ಆಯ್ಕೆಯಿಂದ ಒಂದು ಮೊಬೈಲ್‌ನಲ್ಲಿ ಎರಡು ಸಿಮ್‌ ಹೊಂದಿರುವ ಸ್ಮಾರ್ಟ್ ಫೋನ್‌ ಬಳಕೆದಾರರು ಇನ್ನೊಂದು ವಾಟ್ಸಾಪ್ ಅಕೌಂಟ್‌ ಬಳಕೆಗೆ ಬೇರೆ ಫೋನ್‌ ಬಳಸುವ ಅಗತ್ಯವಿರುವುದಿಲ್ಲ.

ಎರಡು ಅಕೌಂಟ್‌ ಬಳಸುವುದು ಹೇಗೆ?

ವಾಟ್ಸಾಪ್ನಲ್ಲಿ ಏಕಕಾಲದಲ್ಲಿ ಎರಡು ಅಕೌಂಟ್‌ಗಳ ನಂಬರ್‌ಗಳನ್ನು ಹೊಂದುವುದು ಸರಳ ಪ್ರಕ್ರಿಯೆಯಾಗಿದೆ.

ಮೊದಲಿಗೆ, ‘ಸೆಟ್ಟಿಂಗ್ಸ್’ಗೆ ಹೋಗಬೇಕು. ‘ಸೆಟ್ಟಿಂಗ್‌ಗಳು’ ಅಡಿಯಲ್ಲಿ, ನಿಮ್ಮ ಹೆಸರಿನ ಮುಂದೆ ಸಣ್ಣ ಬಾಣದ ಗುರುತಿರುತ್ತದೆ. ಅದನ್ನು ಸ್ಪರ್ಶಿಸಿದರೆ ‘Add Account’ ಆಯ್ಕೆ ಬರುತ್ತದೆ. ನಂತರ, ‘Add Account’ನಲ್ಲಿ ನಿಮ್ಮ ಫೋನ್‌ ನಂಬರ್‌ ನಮೂದಿಸಿದರೆ ವೆರಿಫೈ ಕೋಡ್‌ ನಿಮ್ಮ ಸಂಖ್ಯೆಗೆ ಬರುತ್ತದೆ. ಅದನ್ನು ನಮೂದಿಸಿದ ನಂತರ ಎರಡೂ ನಂಬರ್‌ ಚಾಲ್ತಿಗೊಳ್ಳುತ್ತದೆ.

ಎರಡೂ ನಂಬರ್‌ಗಳಲ್ಲಿ ನಿಮಗೆ ಬೇಕಾದ ನಂಬರ್‌ ಅಕೌಂಟ್‌ ಆಯ್ಕೆ ಮಾಡಿಕೊಳ್ಳಲು ಕೆಳಗೆ ಎರಡು ನಂಬರ್‌ಗಳ ಆಯ್ಕೆಯಿರುತ್ತದೆ. ನಿಮಗೆ ಬೇಕಾದಾಗ ಯಾವುದು ಬೇಕೋ ಅದನ್ನು ಬಳಸಬಹುದು. ಈ ರೀತಿಯ ಸೌಲಭ್ಯ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನಲ್ಲಿ ಈಗಾಗಲೇ ಲಭ್ಯವಿದೆ.

ಈ ಸುದ್ದಿ ಓದಿದ್ದೀರಾ? ಅನ್‌ವೆರಿಫೈಡ್ ಟ್ವಿಟರ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಪೋಸ್ಟ್, ಲೈಕ್, ರೀಟ್ವಿಟ್ಗೂ ಇನ್ಮುಂದೆ ಹಣ ಪಾವತಿಸಬೇಕು !

ವಾಯ್ಸ್‌ ಚಾಟ್ ಪರಿಚಯ

ವಾಟ್ಸಾಪ್‌ ದೊಡ್ಡ ಗುಂಪುಗಳಿಗೆ ವಾಯ್ಸ್‌ ಚಾಟ್‌ ವೈಶಿಷ್ಟ್ಯವನ್ನು ಅಧಿಕೃತವಾಗಿ ಹೊರತರಲು ಪ್ರಾರಂಭಿಸಿದೆ. ಈ ಬಗ್ಗೆ ವಾಟ್ಸ್ ಆ್ಯಪ್‌ ಮಾಹಿತಿ ನೀಡಿದೆ. ಈ ಹಿಂದೆ ಬೀಟಾದಲ್ಲಿ ಗುರುತಿಸಲಾಗಿದ್ದ ಈ ವೈಶಿಷ್ಟ್ಯವು, ಈಗಾಗಲೇ ಲಭ್ಯವಿರುವ ಗ್ರೂಪ್ ಚಾಟ್ ವೈಶಿಷ್ಟ್ಯಕ್ಕಿಂತ ಬಹುವಿಧದಲ್ಲಿ ಭಿನ್ನವಾಗಿದೆ.

ಹೊಸ ಫೀಚರ್‌ ಬಳಸಬೇಕಾದರೆ ಬಳಕೆದಾರರು ಮೊದಲು ವಾಯ್ಸ್‌ ಚಾಟ್ ಪ್ರಾರಂಭಿಸಲು ಬಯಸುವ ಗ್ರೂಪ್ ಚಾಟ್ ತೆರೆಯಬೇಕು. ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ವೀವ್ ಐಕಾನ್ ಅನ್ನು ಸ್ಪರ್ಶಿಸಬೇಕು. ನಂತರ ವಾಯ್ಸ್ ಚಾಟ್ ಆರಂಭಿಸಿ ಎಂಬ ಆಯ್ಕೆಯನ್ನು ಟ್ಯಾಪ್ ಮಾಡಬೇಕು.

ವಾಯ್ಸ್ ಚಾಟ್‌ನಿಂದ ಹೊರಬರಲು ಎಕ್ಸ್‌ ಎಂಬ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಇದರ ಜೊತೆಗೆ ವಾಟ್ಸ್ ಆ್ಯಪ್‌ 33 ರಿಂದ 128 ಸದಸ್ಯರು ಇರುವ ದೊಡ್ಡ ಗ್ರೂಪ್‌ಗಳಿಗೆ ಜಾಗತಿಕವಾಗಿ ವಾಯ್ಸ್‌ ಚಾಟ್‌ಗಳನ್ನು ಹೊರತರುತ್ತಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...