ಗೋವಾ ನೈಟ್‌ಕ್ಲಬ್‌ ದುರಂತ | ಸ್ಥಳದಿಂದ ಪರಾರಿಯಾದ ‘ಲೂಥ್ರಾ ಬ್ರದರ್ಸ್‌’ ಯಾರು ಗೊತ್ತೇ?

Date:

ತಮ್ಮ ಮಾಲೀಕತ್ವ ಇರುವ ಗೋವಾದಲ್ಲಿನ ‘ಬಿರ್ಚ್‌ ಬೈ ರೋಮಿಯೋ ಲೇನ್‌’ ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ದುರ್ಘಟನೆ ಸಂಭವಿಸುತ್ತಿದ್ದಂತೆಯೇ ಲೂಥ್ರಾ ಸಹೋದರರು ದೇಶ ತೊರೆದಿದ್ದಾರೆ. ಇವರ ಪಲಾಯನವು ಗೋವಾ ಪೊಲೀಸರು, ದೆಹಲಿ ಪೊಲೀಸರು ಹಾಗೂ ಸಿಬಿಐನ ಇಂಟರ್‌ಪೋಲ್ ವಿಭಾಗಕ್ಕೆ ಸವಾಲುವೊಡ್ಡಿದೆ. ಸಹೋದರರ ಬಂಧನಕ್ಕಾಗಿ ತನಿಖಾ ತಂಡಗಳು ತ್ವರಿತ ಕ್ರಮಕ್ಕೆ ಮುಂದಾಗಿವೆ.

ಗೋವಾದ ಅರ್ಪೋರಾ ಪ್ರದೇಶದಲ್ಲಿರುವ ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್ ಅಗ್ನಿ ದುರಂತದ ತನಿಖೆ ತೀವ್ರವಾಗಿ ನಡೆಯುತ್ತಿದೆ. ದುರಂತ ಘಟನೆಯಲ್ಲಿ 25 ಜನರನ್ನು ಬಲಿ ಪಡೆದ ನೈಟ್‌ಕ್ಲಬ್‌ನ ಮಾಲೀಕರು ಮತ್ತು ಸಹ ಮಾಲೀಕರನ್ನು ಗೋವಾ ಪೊಲೀಸರು ಗುರುತಿಸಿದ್ದಾರೆ. ನೈಟ್‌ಕ್ಲಬ್ ಮಾಲೀಕರು ಲೂಥ್ರಾ ಸಹೋದರರು ಎಂಬುದು ಬಹಿರಂಗಗೊಂಡಿದೆ. ಈ ಸಹೋದರರು ಘಟನೆ ನಡೆದ ಕೆಲವೇ ಗಂಟೆಗಳನ್ನು ಭಾರತವನ್ನು ತೊರೆದು, ಥೈಲ್ಯಾಂಡ್‌ಗೆ ಪಲಾಯನ ಮಾಡಿದ್ದಾರೆ ಎಂದು ತಳಿದುಬಂದಿದೆ.

ಸೌರಭ್ ಲೂಥ್ರಾ ಮತ್ತು ಗೌರವ್ ಲೂಥ್ರಾ – ಈ ಇಬ್ಬರು ಸಹೋದರರು ‘ಬಿರ್ಚ್ ಬೈ ರೋಮಿಯೋ ಲೇನ್’ನ ಮಾಲೀಕರು. ಸೌರಭ್ ಲುಥ್ರಾ ಅವರು ತಮ್ಮ ಲಿಂಕ್ಡ್‌ಇನ್ ಖಾತೆಯ ಬಯೋದಲ್ಲಿ ‘ರೋಮಿಯೋ ಲೇನ್‌’, ‘ಬಿರ್ಚ್‌’, ‘ಮಾಮಾಸ್‌ ಬುವೋಯ್‌’ನ ಅಧ್ಯಕ್ಷರು ಎಂದು ಬರೆದುಕೊಂಡಿದ್ದಾರೆ. ಈ ಇಬ್ಬರೂ ರೋಮಿಯೋ ಲೇನ್ ಅಡಿಯಲ್ಲಿ ದೆಹಲಿ ಸೇರಿದಂತೆ ಭಾರತದ ಅನೇಕ ನಗರಗಳು ಮತ್ತು ವಿದೇಶಗಳಲ್ಲಿ ಜನಪ್ರಿಯ ದುಬಾರಿ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳನ್ನು ನಡೆಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಮ್ಮ ಮಾಲೀಕತ್ವ ಇರುವ ಗೋವಾದಲ್ಲಿನ ‘ಬಿರ್ಚ್‌ ಬೈ ರೋಮಿಯೋ ಲೇನ್‌’ ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ದುರ್ಘಟನೆ ಸಂಭವಿಸುತ್ತಿದ್ದಂತೆಯೇ ಲೂಥ್ರಾ ಸಹೋದರರು ದೇಶ ತೊರೆದಿದ್ದಾರೆ. ಇವರ ಪಲಾಯನವು ಗೋವಾ ಪೊಲೀಸರು, ದೆಹಲಿ ಪೊಲೀಸರು ಹಾಗೂ ಸಿಬಿಐನ ಇಂಟರ್‌ಪೋಲ್ ವಿಭಾಗಕ್ಕೆ ಸವಾಲುವೊಡ್ಡಿದೆ. ಸಹೋದರರ ಬಂಧನಕ್ಕಾಗಿ ತನಿಖಾ ತಂಡಗಳು ತ್ವರಿತ ಕ್ರಮಕ್ಕೆ ಮುಂದಾಗಿವೆ.

ದುರ್ಘಟನೆಯ ಪ್ರಾಥಮಿಕ ತನಿಖೆಗಳು ನೈಟ್‌ಕ್ಲಬ್ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಸುರಕ್ಷತಾ ಪ್ರೋಟೋಕಾಲ್‌ಗಳ ಉಲ್ಲಂಘನೆಗಳನ್ನು ಗುರುತಿಸಿದೆ. ಅರ್ಪೋರಾ ನದಿಯ ಹಿನ್ನೀರಿನಲ್ಲಿ ಕ್ಲಬ್ ನಿರ್ಮಾಣಕ್ಕೆ ಅನುಮತಿ ಇಲ್ಲದಿದ್ದರೂ, ಲೂಥ್ರಾ ಸಹೋದರರು ನೈಟ್‌ಕ್ಲಬ್ ಆರಂಭಿಸಿದ್ದರು ಎಂಬ ಗಂಭೀರ ವಿಚಾರವನ್ನು ಮುನ್ನೆಗೆ ತಂದಿದೆ. ನೈಟ್‌ಕ್ಲಬ್‌ನ ಮಾಲೀಕರು ಮತ್ತು ಜನರಲ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಬರ್ಜ್‌ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್‌ – ಸಮುದ್ರದ ನೋಟಗಳು (ಸೀ ವೀವ್), ಜೋರು ಧ್ವನಿವರ್ಧಕಗಳು, ಬಾಲಿವುಡ್ ರಾತ್ರಿಗಳು, ಬಂಡೆಗಳನ್ನು ಹೊಳೆಯುವಂತೆ ಮಾಡುವ ಲೈವ್‌ಗಳು, ನೃತ್ಯ ಪ್ರದರ್ಶನಗಳು ಹಾಗೂ ತೆರೆದ ವಾತಾವರಣವನ್ನು ಹೊಂದಿದ್ದರಿಂದ ಜನರನ್ನು ಆಕರ್ಷಿಸುತ್ತಿತ್ತು. ಗೋವಾದಲ್ಲಿ ಹೆಚ್ಚುತ್ತಿರುವ ನೈಟ್‌ ಪಾರ್ಟಿಗಳು ಮತ್ತು ರೆಸ್ಟೋರೆಂಟ್‌ಗಳ ನಡುವಿನ ಸ್ಪರ್ಧೆಗಳಲ್ಲಿ ರೋಮಿಯೋ ಲೇನ್ ಚಮತ್ಕಾರ ಮಾಡಿತ್ತು.

ಆದರೆ, ಈ ಕ್ಲಬ್ ಇರುವ ಪ್ರದೇಶವನ್ನು ‘ಪರಿಸರ ಸೂಕ್ಷ್ಮ ತಾಣ’ವೆಂದು ಪರಿಗಣಿಸಲಾಗಿದೆ. ಸ್ಥಳವು ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ ವ್ಯಾಪ್ತಿಯಲ್ಲಿದೆ. ಈ ಅಧಿಸೂಚನೆಯ ಅಡಿಗೆ ಬರುವ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣವನ್ನು ನಿಷೇಧಿಸಲಾಗಿದೆ. ಜೊತೆಗೆ, ಈ ಕ್ಲಬ್‌ ನಿರ್ಮಾಣಗೊಂಡಿದ್ದ ಭೂಮಿಗೆ ಸಂಬಂಧಿಸಿದಂತೆ ಸೌರಭ್ ಲೂಥ್ರಾ ಮತ್ತು ಭೂಮಾಲೀಕರ ನಡುವೆ ವಿವಾದವಿತ್ತು. ಕ್ಲಬ್‌ ನಿರ್ಮಿಸಲಾಗಿರುವ ವಿನ್ಯಾಸಕ್ಕೆ ಪರವಾನಗಿಯೂ ದೊರೆತಿಲ್ಲ. ಕ್ಲಬ್‌ ನಡೆಸುವವರು ಅಗ್ನಿಶಾಮಕ ಎನ್‌ಒಸಿ ಕೂಡ ಪಡೆದಿರಲಿಲ್ಲ. ಆದರೂ, ಅನಧಿಕೃತವಾಗಿ ತಮ್ಮಿಚ್ಚೆಯ ವಿನ್ಯಾಸದಂತೆ ಲೂಥ್ರಾ ಸಹೋದರರು ಕ್ಲಬ್ ನಿರ್ಮಾಣ ಮಾಡಿದ್ದಾರೆ. ಆದ್ದರಿಂದಲೇ, ಕ್ಲಬ್‌ಅನ್ನು ನೆಲಸಮಗೊಳಿಸಲು ಪಂಚಾಯತಿಯಿಂದ ನೋಟಿಸ್‌ ನೀಡಲಾಗಿತ್ತು. ಆದರೆ, ಅವರು ಮೇಲ್ಮನವಿ ಸಲ್ಲಿಸಿದ್ದರಿಂದ, ನೋಟಿಸ್‌ಗೆ ತಡೆ ನೀಡಲಾಗಿದೆ ಎಂದು ಅರ್ಪೋರಾ ಗ್ರಾಮ ಪಂಚಾಯತಿ ಸರಪಂಚ ರೋಶನ್ ರೆಡ್ಕರ್ ಹೇಳುತ್ತಾರೆ.

ಈ ಲೇಖನ ಓದಿದ್ದೀರಾ?: ಇಂಡಿಗೋ ವಿಮಾನ ಸಂಚಾರ ಅಸ್ತವ್ಯಸ್ತ- ಧೂಮಪರದೆಯ ಹಿಂದಿನ ಅಸಲು ಕಾರಣವೇನು? ಏರ್‌ಬಸ್ ತಂತ್ರಾಂಶ ದೋಷವೇ?

ಅನಧಿಕೃತ ವಿನ್ಯಾಸದೊಂದಿಗೆ ಕ್ಲಬ್‌ ನಿರ್ಮಾಣಗೊಂಡಿದ್ದರ ಪರಿಣಾಮವಾಗಿ, ಶನಿವಾರ ರಾತ್ರಿ, ‘ಬಿರ್ಜ್‌ ಬೈ’ ಕ್ಲಬ್‌ನಲ್ಲಿ ಭೀಕರ ಘಟನೆ ನಡೆದಿದೆ. ಕ್ಲಬ್‌ನ ರಚನೆಯು ಘಟನೆ ಭೀಕರ ದುರಂತವಾಗಿ ಮಾರ್ಪಡಲು ಕರಣವಾಗಿದೆ. ಈ ಕ್ಲಬ್‌ಗೆ ಇದ್ದದ್ದು ಏಕೈಕ ಕಿರಿದಾದ ನಿರ್ಗಮನ ಮಾರ್ಗ. ಈ ಕಿರುಹಾದಿಯಲ್ಲಿ ಕೆಲವರು ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರೆ, ಹಲವರು ಸಿಲುಕಿಕೊಂಡರು. ಹಲವಾರು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕ್ಲಬ್ ನಿರ್ಮಾಣಗೊಂಡಿದ್ದರಿಂದ, ತುರ್ತು ಸೇವೆಗಳೂ ಕ್ಲಬ್‌ ಬಳಿಗೆ ಧಾವಿಸಲಾಗಲಿಲ್ಲ. ಕಿರಿದಾದ ಸಂಪರ್ಕ ಮಾರ್ಗದಿಂದಾಗಿ, ಅಗ್ನಿಶಾಮಕ ವಾಹನಗಳು ಕ್ಲಬ್‌ನಿಂದ 400 ಮೀಟರ್‌ ದೂರದಲ್ಲಿ ನಿಲ್ಲಿಸಬೇಕಾಯಿತು. ಇದು, ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿ ಮತ್ತು ವಿಳಂಬ ಉಂಟುಮಾಡಿತು.

ಘಟನೆ ನಡೆದಾಗ ಕ್ಲಬ್‌ನಲ್ಲಿ ಸುಮಾರು 100 ಮಂದಿ ಇದ್ದರು. ಸಿಲಿಂಡರ್‌ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿತು ಎಂದು ಪೊಲೀಸರು ಹೇಳುತ್ತಿದ್ದರೂ,ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೊದಲಿಗೆ ಬೆಂಕಿ ಹೊತ್ತಿಕೊಂಡದ್ದು ಕ್ಲಬ್‌ನ ಮೊದಲ ಮಹಡಿಯಲ್ಲಿ. ಅಲ್ಲಿದ್ದವರು ತಕ್ಷಣವೇ ಹೊರಬರಲು ದೌಡಾಯಿಸಿದರು. ಕೆಲವರು ತಪ್ಪಿಸಿಕೊಳ್ಳಲು ನೆಲಮಹಡಿಗೆ ತೆರಳಿ ಅಲ್ಲಿದ್ದ ಸಿಬ್ಬಂದಿಗಳೊಂದಿಗೆ ಬೆಂಕಿಯಲ್ಲಿ ಸಿಕ್ಕಿಕೊಂಡರು. ದಾರುಣ ಅಂತ್ಯ ಕಂಡರು.

ಈ ರೋಮಿಯೋ ಲೇನ್‌ನ ಮಾಲೀಕ ಸೌರಭ್ ಲೂಥ್ರಾ ಮತ್ತು ಗೌರವ್ ಲೂಥ್ರಾ ಸುಮಾರು 10 ವರ್ಷಗಳ ಹಿಂದೆ, 2016ರಲ್ಲಿ, ದೆಹಲಿಯಲ್ಲಿ ಹಡ್ಸನ್ ಲೇನ್‌ನಲ್ಲಿ  ಮಾಮಾಸ್ ಬುಯೊಯ್‌ ಎಂಬ ರೆಸ್ಟೋರೆಂಟ್‌ ತೆರೆದರು. ಸಿವಿಲ್ ಲೈನ್ಸ್ ಬಳಿ ಇರುವ ಹಡ್ಸನ್ ಲೇನ್, ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್‌ನ ಸಮೀಪದಲ್ಲಿದೆ. ಇದು ಕಾಲೇಜು ವಿದ್ಯಾರ್ಥಿಗಳಿಗೆ ನೆಚ್ಚಿನ ಹ್ಯಾಂಗ್‌ಔಟ್ ಪಾಯಿಂಟ್ ಆಗಿದೆ. ಆದ್ದರಿಂದ, ಮಾಮಾಸ್ ಬಯೊಯ್‌ ರೆಸ್ಟೋರೆಂಟ್‌  ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಜನಪ್ರಿಯತೆ ಪಡೆದುಕೊಂಡಿತು. ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಲೂಥ್ರಾ ಸಹೋದರರು ತಮ್ಮ ಉದ್ಯಮವನ್ನು ತ್ವರಿತವಾಗಿ ವಿಸ್ತರಿಸಬೇಕೆಂಬ ಧಾವಂತಕ್ಕೆ ಬಿದ್ದರು. ರೋಮಿಯೋ ಲೇನ್‌ಅನ್ನು ಆರಂಭಿಸಿದರು. ಈ ರೋಮಿಯೋ ಲೇನ್‌ ಲೂಥ್ರಾ ಸಹೋದರರಿಗೆ ಬಹುದೊಡ್ಡ ಲಾಭವನ್ನು ಕೊಟ್ಟಿತು.

ಆರಂಭದಲ್ಲಿ ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿ ಸಾಧಾರಣ ಯಶಸ್ಸನ್ನು ಕಂಡಿದ್ದ ರೋಮಿಯೋ ಲೇನ್‌ ಎಂಬ ಬ್ರ್ಯಾಂಡ್, ಕೋವಿಡ್-19 ನಂತರದ ಪ್ರವಾಸೋದ್ಯಮ ಪುನಶ್ಚೇತನದ ಸಮಯದಲ್ಲಿ ಗೋವಾದ ವ್ಯಾಗೇಟರ್‌ನಲ್ಲಿ ತನ್ನ ಪ್ರಾಂಚೈಸಿಯನ್ನು ತೆರೆಯಿತು.

ಗೋವಾ 1

ಸೌರಭ್ ಲೂಥ್ರಾ ಅವರು ‘ಎಂಜಿನಿಯರಿಂಗ್‌’ನಲ್ಲಿ ಚಿನ್ನದ ಪದಕ ವಿಜೇತರು. ವೇಗವಾಗಿ ಬೆಳೆಯುತ್ತಿರುವ ಭರವಸೆಯ ರೆಸ್ಟೋರೆಂಟ್ ಮಾಲೀಕರು. ‘F&B ಉದ್ಯಮದಲ್ಲಿ ಅದ್ಭುತ ಕೆಲಸ’ ಮಾಡಿದ್ದಾರೆಂದೂ ಖ್ಯಾತಿ ಪಡೆದಿದ್ದಾರೆ ಎಂದು ರೋಮಿಯೋ ಲೇನ್‌ ವೆಬ್‌ಸೈಟ್‌ ವಿವರಿಸುತ್ತದೆ.

ಲೂಥ್ರಾ ಸಹೋದರರ ರೋಮಿಯೋ ಲೇನ್ ಸಂಸ್ಥೆಯು ಭಾರತದ 22 ನಗರಗಳಲ್ಲಿ ಮತ್ತು 4 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ತಮ್ಮ ಬಾರ್‌, ರೆಸ್ಟೋರೆಂಟ್‌ ಹಾಗೂ ನೈಟ್‌ಕ್ಲಬ್‌ಗಳಲ್ಲಿ ತಮ್ಮದೇ ಆದ ‘ಆರ್ಗ್ಯಾನಿಕ್‌ ಕಾಕ್‌ಟೈಲ್‌’ಗಳನ್ನು ಒದಗಿಸುತ್ತಾರೆಂದು ಈ ಸಹೋದರರು ಹೆಸರುವಾಸಿಯಾಗಿದ್ದಾರೆ.

ರೋಮಿಯೋ ಲೇನ್‌ ಭಾರೀ ಜನರನ್ನು ಸೆಳೆಯುತ್ತಿದೆ ಎಂಬ ಮಾತುಗಳು ಹೋಟೆಲ್ ಉದ್ಯಮದಲ್ಲಿ ಸದ್ದು ಮಾಡಲಾರಂಭಿಸಿತು. ಈ ಬೆನ್ನಲ್ಲೇ, ತನ್ನನ್ನು ತಾನು ‘ಚಿನ್ನದ ಪದಕ ವಿಚೇತ ಎಂಜಿನಿಯರ್‌’ ಎಂದು ಸೌರಭ್ ಬಣ್ಣಿಸಿಕೊಂಡರು, ಎಲ್ಲೆಲ್ಲೂ ಅದನ್ನು ಹೇಳಿಕೊಂಡರು. ಬಹುಬೇಡಿಕೆ ರೆಸ್ಟೋರೆಂಟ್‌ ಮಾಲೀಕರಾಗಿ ಗುರುತಿಸಿಕೊಂಡರು. ಇಂದೋರ್, ನಾಗ್ಪುರ, ಆಗ್ರಾ, ಡೆಹ್ರಾಡೂನ್‌ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಯೊಂದು ಹೊಸ ಮಾಲ್‌ಗಳು ತಮ್ಮ ಕಟ್ಟಡಗಳಲ್ಲಿ ‘ರೋಮಿಯೋ ಲೇನ್’ನ ನೈಟ್‌ಕ್ಲಬ್‌ಗಳು ಇರಬೇಕೆಂದು ಬಯಸಲಾರಂಭಿಸಿದವು. ಯಶಸ್ಸು ದೊರೆತಂತೆಲ್ಲ, ಲೂಥ್ರಾ ಸಹೋದರರು ನಿಮಯಗಳನ್ನು ಗಾಳಿಗೆ ತೂರಿ ತಮ್ಮ ಉದ್ಯಮಗಳನ್ನು ನಿರ್ವಹಿಸಲು ಮತ್ತು ವಿಸ್ತರಿಸಲು ಆರಂಭಿಸಿದರು.

ಲೂಥ್ರಾ ಸಹೋದರರ ಎಲ್ಲ ಫ್ರಾಂಚೈಸಿಗಳು ಅದ್ಭುತ ಯಶಸ್ಸನ್ನು ಕಂಡಿಲ್ಲ. ಕೆಲವು ಉತ್ತಮವಾಗಿ ನಡೆಯುತ್ತಿದ್ದರೆ, ಇನ್ನೂ ಕೆಲವು ನಷ್ಟದ ಹಾದಿಯಲ್ಲಿದ್ದವು. ಆದರೂ, ಇವರಿಗೆ ಅತೀ ಹೆಚ್ಚು ಯಶಸ್ಸಿನ ಮೂಲವಾಗಿದ್ದು ಗೋವಾದ ನೈಟ್‌ಕ್ಲಬ್ ‘ಬರ್ಚ್‌ ಬೈ ರೋಮಿಯೋ ಲೇನ್’.

ಆದರೆ, ಹಲವು ಉಲ್ಲಂಘನೆಗಳಿಂದ ನಿರ್ಮಾಣಗೊಂಡಿದ್ದ ನೈಟ್‌ಕ್ಲಬ್‌ನಲ್ಲಿ ದುರ್ಘಟನೆ ಸಂಭವಿಸಿದೆ. ಘಟನೆಯ ಕೆಲವೇ ಗಂಟೆಗಳಲ್ಲಿ, ಕ್ಲಬ್‌ನ ಲೂಥ್ರಾ ಸಹೋದರರು ಗೋವಾದಿಂದ ದೆಹಲಿಗೆ ಮತ್ತು ದೆಹಲಿಯಿಂದ ಥೈಲ್ಯಾಂಡ್‌ಗೆ ಪಲಾಯನ ಮಾಡಿದ್ದಾರೆ. ಅದೂ, ಈಗಾಗಲೇ ಸಾವಿರಾರು ಪ್ರಯಾಣಗಳನ್ನು ರದ್ದುಮಾಡಿರುವ ಇಂಡಿಗೋ ಸಂಸ್ಥೆಯ ವಿಮಾನದಲ್ಲಿಯೇ ಅವರು ‘ಎಸ್ಕೇಪ್’ ಆಗಿದ್ದಾರೆ ಎಂಬುದು ಆಶ್ಚರ್ಯಕರ.

07fire2

ಇದೀಗ, ಅವರ ಬಂಧನಕ್ಕಾಗಿ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ಅವರ ನಿವಾಸಕ್ಕೆ ನೋಟಿಸ್‌ ಅಂಡಿಸಲಾಗಿದೆ. ಅಲ್ಲದೆ, ಇಂಟರ್‌ಪೋಲ್‌ ಬ್ಯೂರೋದಿಂಧ ಲುಕ್ ಔಟ್ ಸರ್ಕ್ಯುಲರ್ (LOC) ಹೊರಡಿಸಲಾಗಿದೆ. ಪರಾರಿಯಾಗಿರುವ ಸಹೋದರರನ್ನು ಆದಷ್ಟು ಬೇಗ ಬಂಧಿಸಲು ಸಿಬಿಐನ ಇಂಟರ್‌ಪೋಲ್ ಮತ್ತು ಗೋವಾ ಪೊಲೀಸರು ಮುಂದಾಗಿದ್ದಾರೆ. ಅದಕ್ಕಾಗಿ, ಬ್ಲೂ ಕಾರ್ನರ್ ನೋಟಿಸ್ಅನ್ನೂ ಜಾರಿಗೊಳಿಸಲು ಸಿದ್ದತೆಗಳು ನಡೆಯುತ್ತಿವೆ.

ಲೂಥ್ರಾ ಸಹೋದರರ ಜೊತೆಗೆ ಅಜಯ್ ಗುಪ್ತಾ ಎಂಬ ಮತ್ತೊಬ್ಬ ವ್ಯಕ್ತಿ ಕೂಡ ಕ್ಲಬ್‌ನಲ್ಲಿ ಪಾಲುದಾರನಾಗಿದ್ದು, ಆತನನ್ನು ಪೊಲೀಸ್ ತಂಡಗಳು ಹುಡುಕುತ್ತಿವೆ. ಇನ್ನು, ಗೋವಾ ನೈಟ್‌ಕ್ಲಬ್‌ನ ಮ್ಯಾನೇಜರ್ ಭರತ್ ಕೊಹ್ಲಿ, ಮುಖ್ಯ ಜನರಲ್ ಮ್ಯಾನೇಜರ್ ರಾಜೀವ್ ಮೋಡಕ್, ಗೇಟ್ ಮ್ಯಾನೇಜರ್ ಪ್ರಿಯಾನ್ಶು ಠಾಕೂರ್, ಬಾರ್ ಮ್ಯಾನೇಜರ್ ರಾಜ್ವೀರ್ ಸಿಂಘಾನಿಯಾ, ಜನರಲ್ ಮ್ಯಾನೇಜರ್ ವಿವೇಕ್ ಸಿಂಗ್ ಎಂಬವರನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಎಲ್ಲರನ್ನೂ ಟ್ರಾನ್ಸಿಟ್ ರಿಮಾಂಡ್‌ಗೆ ಹಸ್ತಾಂತರಿಸಲಾಗಿದೆ.

ಜೊತೆಗೆ, ಮಾನದಂಡಗಳನ್ನು ಉಲ್ಲಂಘಿಸಿದ್ದರೂ, 2023ರಲ್ಲಿ ನೈಟ್‌ಕ್ಲಬ್ ಕಾರ್ಯನಿರ್ವಹಣೆಗೆ ಅನುಮತಿ ನೀಡಿದ್ದಕ್ಕಾಗಿ ಗೋವಾ ಸರ್ಕಾರವು ಅಂದಿನ ಪಂಚಾಯತ್ ನಿರ್ದೇಶಕರಾಗಿದ್ದ ಸಿದ್ಧಿ ತುಷಾರ್ ಹರ್ಲಂಕರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಡಾ. ಶಮಿಲಾ ಮಾಂಟೆರೊ ಹಾಗೂ ಅರ್ಪೋರಾ-ನಾಗೋವಾ ಪಂಚಾಯತಿ ಕಾರ್ಯದರ್ಶಿ ರಘುವೀರ್ ಬಾಗ್ಕರ್ ಅವರನ್ನು ಅಮಾನತು ಮಾಡಿದೆ. ಈ ಮೂವರಿಗೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್‌ ಹೊರಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...