ಮೇಘಸ್ಫೋಟಗಳು ಮತ್ತು ದಿಢೀರ್ ಪ್ರವಾಹಗಳು ಘಟಿಸುವುದೇಕೆ? ಇಲ್ಲಿದೆ ವೈಜ್ಞಾನಿಕ ಕಾರಣ…

Date:

ಕಳೆದ ನಾಲ್ಕೈದು ದಶಕಗಳಿಂದ ಮಳೆಗಾಲಕ್ಕೆ ತಕ್ಕಂತೆ ಬೀಳುತ್ತಿದ್ದ ಮಳೆ ತಾಳತಪ್ಪಿಹೋಗಿದೆ. ಇದಕ್ಕೆ ಕಾರಣ ಸಮುದ್ರದ ತಾಪಮಾನ ಏರಿ ಸಮುದ್ರಗಳ ಉಬ್ಬರದಿಂದ ಮೋಡಗಳು ಎಲ್ಲಾ ಕಾಲದಲ್ಲೂ ಎದ್ದು ಬರುತ್ತಿರುವುದು ಮುಖ್ಯ ಕಾರಣವಾಗಿದೆ.

ಇತ್ತೀಚಿನ ದಶಕದಲ್ಲಿ ಹಿಮಾಲಯದ ಉದ್ದಕ್ಕೂ ಹೆಚ್ಚೆಚ್ಚು ಮೇಘಸ್ಫೋಟಗಳು ಘಟಿಸುತ್ತಿದ್ದು, ಹತ್ತಿರದ ಹಳ್ಳಿಗಳು ದಿಢೀರ್ ಪ್ರವಾಹಕ್ಕೆ ತುತ್ತಾಗುತ್ತಿವೆ. ಭೂಮಿಯ ಮೇಲೆ ಸಂಭವಿಸುತ್ತಿರುವ ಪ್ರತಿಯೊಂದು ನೈಸರ್ಗಿಕ ವಿಪತ್ತುಗಳ ಹಿನ್ನೆಲೆಯನ್ನು ಕೆದಕುತ್ತಾ ಹೋದರೆ ಅದು ಜಾಗತಿಕ ತಾಪಮಾನದ ಕಡೆಗೆ ಕೈ ತೋರಿಸುತ್ತದೆ. ಕಳೆದ ನಾಲ್ಕೈದು ದಶಕಗಳಿಂದ ಮಳೆಗಾಲಕ್ಕೆ ತಕ್ಕಂತೆ ಬೀಳುತ್ತಿದ್ದ ಮಳೆ ತಾಳತಪ್ಪಿಹೋಗಿದೆ. ಇದಕ್ಕೆ ಕಾರಣ ಸಮುದ್ರದ ತಾಪಮಾನ ಏರಿ ಸಮುದ್ರಗಳ ಉಬ್ಬರದಿಂದ ಮೋಡಗಳು ಎಲ್ಲಾ ಕಾಲದಲ್ಲೂ ಎದ್ದು ಬರುತ್ತಿರುವುದು ಮುಖ್ಯ ಕಾರಣವಾಗಿದೆ. ಜೊತೆಗೆ ‘ಎಲ್ ನೀನೋ’ ಮತ್ತು ‘ಲಾ ನೀನೋ’ಗಳು ಕಾರಣವಾಗಿವೆ. ಈ ಎರಡೂ ಪ್ರಕ್ರಿಯೆಗಳು ಸಾಮಾನ್ಯವಾಗಿ ಎರಡು ವಿರುದ್ಧ ಹವಾಮಾನ ವೈಪರೀತ್ಯಗಳಾಗಿವೆ. ಎಲ್ ನಿನೋ ಭೂಮಿಯ ದಕ್ಷಿಣ ಭಾಗದ ಸಮುದ್ರಗಳ ವಾಯು ಆಂದೋಲನವಾದರೆ, ಲಾ ನೀನೋ ಭೂಮಿಯ ಉತ್ತರ ಭಾಗದ ಸಮುದ್ರಗಳ ವಾಯು ಆಂದೋಲನವಾಗಿದೆ.

ಇನ್ನೂ ಸರಳವಾಗಿ ಹೇಳುವುದಾದರೆ: ಸಮಭಾಜಕ ವೃತ್ತದ ಪೆಸಿಪಿಕ್ ಸಾಗರದ ಮೇಲ್ಮೈ ನೀರು ವಾರ್ಷಿಕ ಸರಾಸರಿಗಿಂತ ಹೆಚ್ಚು ತಾಪಮಾನಗೊಂಡು ಬೆಚ್ಚಗಾದಾಗ (26 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚು) ಮತ್ತು ಪೂರ್ವ ದಿಕ್ಕಿನ ಮಾರುತಗಳು ಸಾಮಾನ್ಯಕ್ಕಿಂತ ದುರ್ಬಲವಾಗಿ ಬೀಸಿದಾಗ ಎಲ್ ನಿನೋ (ತಣ್ಣನೆ ಗಾಳಿ) ಪರಿಸ್ಥಿತಿ ಉಂಟಾಗುತ್ತದೆ. ಇದಕ್ಕೆ ವಿರುದ್ಧವಾದ ಸ್ಥಿತಿಯನ್ನು ಲಾ ನಿನೋ ಎಂದು ಕರೆಯಲಾಗುತ್ತದೆ. ಅಂದರೆ ಪೂರ್ವ-ಮಧ್ಯ ಸಮಭಾಜಕ ಪೆಸಿಫಿಕ್‌ನಲ್ಲಿ ಸಮುದ್ರ-ಮೇಲ್ಮೈ ತಾಪಮಾನದ ಆವರ್ತಕ ತಂಪಾಗುವಿಕೆಯನ್ನು ಸೂಚಿಸುತ್ತದೆ. ಈ ಎರಡೂ ಪ್ರಕ್ರಿಯೆಗಳು ಸಮಭಾಜಕ ಪೆಸಿಫಿಕ್ ವಲಯದಲ್ಲಿನ ಸಮುದ್ರದ ತಾಪಮಾನದಲ್ಲಿನ ವ್ಯತ್ಯಾಸಗಳಿಂದ ಕೂಡಿದ ಸಂಕೀರ್ಣ ಹವಾಮಾನ ಮಾದರಿಗಳಾಗಿವೆ. ತಣ್ಣನೆ ಪ್ರಕ್ರಿಯೆ ಮೂರರಿಂದ ಐದು ವರ್ಷಗಳವರಗೆ ಘಟಿಸಿದರೆ ಬಿಸಿ ತಾಪಮಾನ 18 ತಿಂಗಳಿಂದ ಮೂರು ವರ್ಷಗಳವರಗೆ ಘಟಿಸುತ್ತದೆ. ಈ ಎರಡೂ ಪ್ರಕ್ರಿಯೆಗಳ ಕಾಲದಲ್ಲಿ ಮಳೆಯ ಏರುಪೇರು ತೀವ್ರವಾಗಿ ಕಾಣಿಸಿಕೊಳ್ಳುತ್ತದೆ.

ಇದನ್ನು ಓದಿದ್ದೀರಾ?: ಗಿಡ ನೆಡುವುದರಿಂದಲೂ ಹವಾಮಾನ ವೈಪರೀತ್ಯ ಉಂಟಾಗುತ್ತದೆ, ನಂಬುತ್ತೀರಾ?    

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನು ಹಿಮಾಲಯದಲ್ಲಿ ಘಟಿಸುವ ಮೇಘಸ್ಫೋಟಗಳ ಬಗ್ಗೆ ಹೇಳುವುದಾದರೆ: ಇದನ್ನು ಭೂಗೋಳಶಾಸ್ತ್ರದ ಎತ್ತುವಿಕೆ ಮತ್ತು ಮೇಘಸ್ಫೋಟ ಎನ್ನುತ್ತಾರೆ. ಇದರಲ್ಲಿ ಐದು ಹಂತಗಳಿರುತ್ತವೆ. ತೇವಾಂಶವುಳ್ಳ ಗಾಳಿ ಪರ್ವತಗಳನ್ನು ಎದುರುಗೊಂಡು ಬಲವಂತವಾಗಿ ಮೇಲಕ್ಕೆ ಏರಬೇಕಾಗುತ್ತದೆ. ಉದಾಹರಣೆಗೆ ಬಾಂಗ್ಲಾದೇಶದ ಬಯಲುಗಳಿಂದ 450-600 ಮೀಟರುಗಳ ಎತ್ತರದ ಮೇಘಾಲಯದ ಬೆಟ್ಟಗಳನ್ನು ಬಂಗಾಳ ಕೊಲ್ಲಿಯಿಂದ ಬರುವ ಮಳೆಯ ಮೋಡಗಳು ಏರಬೇಕಾಗುತ್ತದೆ. ಈ ಮೋಡಗಳು ಕೊಲ್ಲಿಯಿಂದ ಏರಿ ಪರ್ವತಗಳ ಮಧ್ಯ ಸಿಕ್ಕಿಕೊಂಡು ಮಳೆಯನ್ನು ಧಾರಾಕಾರವಾಗಿ ತಿಂಗಳುಗಟ್ಟಲೇ ಸುರಿಯುತ್ತಾ ನಿಂತುಕೊಳ್ಳುತ್ತವೆ. ಈ ಹಂತದಲ್ಲಿ ಪರ್ವತಗಳ ಕಡೆಗೆ ಬೀಸುವ ಗಾಳಿ ತಣ್ಣಗೆ ಬೀಸುತ್ತಾ ಏರಿ ಮೋಡಗಳನ್ನು ಘನೀಕರಿಸುತ್ತದೆ. ಮುಂದಿನ ಹಂತವೆಂದರೆ ಗಾಳಿಯ ಬಲವಾದ ಮೇಲ್ಮುಖ ಹರಿವು ಘನೀಕರಣಗೊಳ್ಳುವ ಮಳೆಹನಿಗಳು ನೆಲಕ್ಕೆ ಬೀಳದಂತೆ ತಡೆಯುತ್ತವೆ. ಇದು ತೇವಾಂಶದ ಪ್ರಸರಣವನ್ನು ತಡೆಯುತ್ತದೆ. ಇದು ಒಂದು ಹಂತ ತಲುಪಿದ ಮೇಲೆ ಅಪಾರವಾಗಿ ಸಂಗ್ರಹಗೊಂಡಿರುವ ಮಳೆ ಮೋಡಗಳು ಒಮ್ಮೆಲೆ ಕೆಳಕ್ಕೆ ಮುರಿದು ಬೀಳುತ್ತದೆ. ಆಗ ಬೆಟ್ಟಗಳ ಮೇಲೆ ದಿಢೀರನೆ ಕೆಲವು ನೂರು ಮಿಲಿಮೀಟರುಗಳ ಮಳೆ ಕೆಲವೇ ಗಂಟೆಗಳಲ್ಲಿ ಬೀಳುತ್ತದೆ. ಇದನ್ನು ಮೇಘಸ್ಫೋಟ ಎಂದು ಕರೆಯಲಾಗುತ್ತದೆ. ಒಮ್ಮೆ ಮೇಘಸ್ಫೋಟಗೊಂಡರೆ, ಮಣ್ಣು ತುಂಬಿಕೊಂಡಿರುವ ಕೆಳ ಹಂತದ ನದಿಗಳು ಅಪಾರ ಮಳೆಯಿಂದ ಕಲ್ಲುಮಣ್ಣು ಎದುರಿಗೆ ಸಿಕ್ಕಿದ ಎಲ್ಲವನ್ನೂ ತಳ್ಳಿಕೊಂಡು ಕೆಳಕ್ಕೆ ನುಗ್ಗಿಬರುತ್ತದೆ. ಇದನ್ನ ದಿಢೀರ್ ಪ್ರವಾಹ ಎಂದು ಕರೆಯಲಾಗುತ್ತದೆ.  

cloud

ಯಾವುದೇ ಪ್ರದೇಶದಲ್ಲಿ ಹೀಗೆ ದಿಢೀರನೆ ಅಂದರೆ 24 ಗಂಟೆಗಳಲ್ಲಿ 20 ಸೆಂಟಿಮೀಟರಿಗಿಂತ ಹೆಚ್ಚು ಮಳೆ ಸುರಿಯುವುದನ್ನು ಮೇಘಸ್ಫೋಟ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ 24 ಗಂಟೆಗಳಲ್ಲಿ 50, 100 ಸೆಂಟಿಮೀಟರುಗಳಷ್ಟು ಮಳೆ ಸುರಿದುಬಿಡುತ್ತದೆ. ಆಗ ನೀರು ನೆಲದಲ್ಲಿ ಹಿಂಗುವುದಕ್ಕೆ ಸಮಯ ದೊರಕದೆ ಅದು ತುಂಬಾ ರಭಸದಿಂದ ಹರಿದುಬರುತ್ತದೆ. ಇಡೀ ಹಿಮಾಲಯಗಳು ಟೊಳ್ಳು ಮಣ್ಣಿನಿಂದ ರೂಪುಗೊಂಡಿದ್ದರ ಕಾರಣ ಒಂದೆರಡು ಗಂಟೆಗಳ ಕಾಲ ಮಳೆ ಬಿದ್ದರೆ ಸಾಕು ಮಣ್ಣು ನೆನೆದು ಬೆಟ್ಟಗಳ ಮೇಲ್ಮೈ ಮಣ್ಣು ಕುಸಿಯಲು ಪ್ರಾರಂಭಿಸುತ್ತದೆ.

ಒಮ್ಮೆ ಹೀಗೆ ಕುಸಿತ ಪ್ರಾರಂಭಗೊಂಡರೆ ಅದು ರೈಲಿನ ಬೋಗಿಗಳಂತೆ ಅಪಾರವಾಗಿ ಮೇಲಿಂದ ಕುಸಿದು ನದಿಗಳನ್ನು ಸೇರುವುದರೊಳಗೆ ಅದು ಅಪಾರ ಕಲ್ಲುಮಣ್ಣು-ನೀರಿನಿಂದ ಕೂಡಿರುತ್ತದೆ. ನದಿಗಳ ಪಕ್ಕದಲ್ಲಿ ಕಟ್ಟಿಕೊಂಡಿರುವ ವಸತಿಗಳು ಮೇಲಿನಿಂದ ಬರುವ ಕಲ್ಲುಮಣ್ಣು-ನೀರಿನ ವೇಗಕ್ಕೆ ತಡೆಯಲಾರದೆ ನದಿಗಳಿಗೆ ಬಿದ್ದು ಕೊಚ್ಚಿಕೊಂಡು ಹೋಗುತ್ತವೆ. ಅರಣಾಚಲ ಪ್ರದೇಶದಿಂದ ಜಮ್ಮು-ಕಾಶ್ಮೀರದವರೆಗಿನ ಬೆಟ್ಟಗಳು ಟೊಳ್ಳು ಮಣ್ಣಿನಿಂದ ಕೂಡಿವೆ. ಇದಕ್ಕೆ ಕಾರಣ ಒಂದು ಕಾಲದಲ್ಲಿ ಇಡೀ ಹಿಮಾಲಯಗಳು ಟೆತೀಸ್ ಹೆಸರಿನ ಮಹಾ ಸಮುದ್ರವಾಗಿತ್ತು. ಇನ್ನು ಚಾರ್‌ಧಾಮ್ ರಸ್ತೆಗಳನ್ನು ನಾಲ್ಕು ಮಾರ್ಗಗಳಿಂದ ನಿರ್ಮಿಸಿರುವುದು ಕೂಡ ಸ್ವಲ್ಪಮಟ್ಟಿಗೆ ರಸ್ತೆಗಳು ಕುಸಿಯುವುದಕ್ಕೆ ಕಾರಣವಾಗಿವೆ.   

ಗುಜರಾತ್‌ನಿಂದ ಕೇರಳದವರೆಗೂ ಹಬ್ಬಿಕೊಂಡಿರುವ ಪಶ್ಚಿಮ ಘಟ್ಟಗಳ ಬೆಟ್ಟಗಳ ಮೇಲ್ಮೈ ಕೂಡ ಟೊಳ್ಳು ಮಣ್ಣಿನಿಂದ ಕೂಡಿವೆ. ಗ್ರಾನೈಟ್ ಶಿಲೆಗಳಿಂದ ಕೂಡಿದ ಪರ್ವತಗಳನ್ನು ಬಿಟ್ಟರೆ ಯಾವುದೇ ಬೆಟ್ಟಗಳ ಮೇಲ್ಮೈ ಮಣ್ಣಿನಿಂದ ರೂಪುಗೊಂಡಿರುತ್ತವೆ. ಜೊತೆಗೆ ಈ ಬೆಟ್ಟಗಳ ಇಳಿಜಾರು ಹೆಚ್ಚಿದ್ದಷ್ಟು ಕುಸಿತ ಜಾಸ್ತಿ ಇರುತ್ತದೆ. ಮಳೆ ಬಿದ್ದೂಬಿದ್ದೂ ನೀರು ಹರಿದೂ ಹರಿದೂ ಬೆಟ್ಟಗಳ ಮೇಲ್ಮೈ ಶಿಥಿಲಗೊಂಡು ಮಣ್ಣಿನಿಂದ ರೂಪುಗೊಂಡಿರುತ್ತದೆ. ಇನ್ನು ಇದೇ ರೀತಿಯ ಮಳೆ ಮಹಾನಗರಗಳಲ್ಲಿ ಬಿದ್ದರೂ ನೀರು ಹರಿದುಹೋಗಲು ಸ್ಥಳವಿಲ್ಲದೆ ತಗ್ಗು ಪ್ರದೇಶಗಳ ಹಾದಿಬೀದಿಗಳು ಬಡಾವಣೆಗಳು ಮನೆಮಠಗಳಿಗೆ ನೀರು ನುಗ್ಗುತ್ತದೆ. ಇದು ಮುಂಬೈಯಲ್ಲಿ ಪ್ರತಿವರ್ಷ ಎರಡೂ ಸಲವಾದರೂ ನಡೆಯುತ್ತದೆ. ಕಳೆದ ವರ್ಷ ನಂದಿ ಬೆಟ್ಟದಲ್ಲಿ ಸಣ್ಣ ಮೇಘ ಸ್ಫೋಟ ನಡೆದಿದ್ದೂ ಇದೇ ರೀತಿಯದ್ದು.     

ಮೋಡಗಳ ಸ್ಫೋಟ ಎಂದರೆ ಬಹಳ ಕಡಿಮೆ ಅವಧಿಯಲ್ಲಿ ಬೀಳುವ ದೊಡ್ಡ ಪ್ರಮಾಣದ ಮಳೆ. ಕೆಲವೊಮ್ಮೆ ಆಲಿಕಲ್ಲು ಗುಡುಗು ಸಹಿತ ಮಳೆ ಬೀಳುತ್ತದೆ. ಕೆಲವೊಂದು ಸಲ ಐದು ನಿಮಿಷಗಳ ಅವಧಿಯಲ್ಲಿ ಅಗಾಧ ಮಳೆ ಸುರಿಯಬಹುದು. ಕೆಲವೊಮ್ಮೆ ಎರಡುಮೂರು ದಿನಗಳು ನಿರಂತರ ಮಳೆ ಸುರಿಯಬಹುದು. ಉದಾಹರಣೆಗೆ ಒಂದು ಚದರ ಕಿಲೋಮೀಟರ್‌ನಲ್ಲಿ ಐದು ನಿಮಿಷಗಳಲ್ಲಿ 55 ಮಿಲಿಮೀಟರ್ ಮಳೆಬಿದ್ದರೆ ಅದು 25,000 ಮೆಟ್ರಿಕ್ ಟನ್ ನೀರನ್ನು ಸುರಿಯುತ್ತದೆ. ಇದು ಹತ್ತು ಒಲಿಂಪಿಕ್ ಈಜುಕೊಳಗಳಿಗೆ ಸಮವಾಗಿರುತ್ತದೆ. ಇದು ಸುಲಭವಾಗಿ ಪ್ರವಾಹದ ಪರಿಸ್ಥಿತಿಯನ್ನು ಉಂಟುಮಾಡುತ್ತದೆ.

ಕೆಲವೊಮ್ಮೆ ಪ್ರತಿ ಗಂಟೆಗೆ ಮೇಘಸ್ಪೋಟದಿಂದ 100 ಮಿಲಿಮೀಟರ್ (10 ಸೆಂಟಿಮೀಟರ್) ಮಳೆ ನೆಲಕ್ಕೆ ಬೀಳುತ್ತವೆ. ಕೆಲವು ದೇಶಗಳು ಮೇಘಸ್ಫೋಟಕ್ಕೆ ಕೆಲವು ಪ್ರಮಾಣಗಳನ್ನು ನಿಗದಿಪಡಿಸಿಕೊಂಡಿವೆ. ಮೋಡಗಳು ನೆಲಮಟ್ಟದಿಂದ 15 ಕಿಲೋಮೀಟರುಗಳ ಎತ್ತರದವರೆಗೂ ವಿಸ್ತರಿಸಿರುತ್ತವೆ. ಇನ್ನೊಂದು ಮುಖ್ಯ ವಿಷಯವೆಂದರೆ ಹೆಚ್ಚೆಚ್ಚು ಪರ್ವತಗಳಿಗೆ ಮೋಡಗಳು ಡಿಕ್ಕಿ ಹೊಡೆದಾಗ ಮೇಘಸ್ಫೋಟಗಳು ಸಂಭವಿಸುತ್ತವೆ. ಬಿಸಿನೀರಿನ ಆವಿ ಶೀತದಲ್ಲಿ ಬೆರೆತು ಹಠಾತ್ ಘನೀಕರಣಕ್ಕೆ ಕಾರಣವಾದಾಗಲೂ ಅಪಾರ ಮಳೆ ಸಂಭವಿಸಬಹುದು.

*

ಹೆಚ್ಚು ಪ್ರಮಾಣದ ಮಳೆಯ ಪರಿಸ್ಥಿತಿಗಳು ಮತ್ತು ಮಳೆಯನ್ನು ಪತ್ತೆಹಚ್ಚುವಲ್ಲಿ ಉಪಗ್ರಹಗಳು ವ್ಯಾಪಕವಾಗಿ ಉಪಯುಕ್ತವಾಗಿದ್ದರೂ ಮೇಘಸ್ಫೋಟಗಳನ್ನು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ತೇವಾಂಶದ ಒಮ್ಮುಖ ಮತ್ತು ಗುಡ್ಡಗಾಡು ಭೂಪ್ರದೇಶಗಳು, ಮೋಡಗಳ ಸೂಕ್ಷ್ಮ ಭೌತಶಾಸ್ತ್ರ ಮತ್ತು ವಿಭಿನ್ನ ವಾತಾವರಣದ ಮಟ್ಟಗಳಲ್ಲಿನ ತಾಪಮಾನ-ತಂಪಾಗಿಸುವ ಕಾರ್ಯವಿಧಾನಗಳ ನಡುವಿನ ಪರಸ್ಪರ ಕ್ರಿಯೆಯಲ್ಲಿನ ಅನಿಶ್ಚಿತತೆಯಿಂದಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಯ ಕೌಶಲ್ಯಪೂರ್ಣ ಮುನ್ಸೂಚನೆಯು ವಿಜ್ಞಾನಿಗಳಿಗೆ ಸವಾಲಾಗಿದೆ. ಆದರೆ ಮಳೆಯ ಮುನ್ಸೂಚನೆಯನ್ನು ಆದಷ್ಟು ನಿಖರವಾಗಿ ಹೇಳಲಾಗುತ್ತದೆ. 

cloud1

2025 ಆಗಸ್ಟ್ 5ರಂದು ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಸಂಭವಿಸಿದ ವಿಪತ್ತು ಬೇರೆ ರೀತಿಯದ್ದೇ ಆಗಿದೆ. ಬಹುಶಃ ಇದು ಮೇಲಿನ ಹಿಮನದಿ ಕುಸಿತಕ್ಕೆ ಸಂಬಂಧಿಸಿದ ಹಠಾತ್ ವಿಪತ್ತಾಗಿದೆ. ನೀರು ಕಲ್ಲು-ಮಣ್ಣು ರಾಶಿಗಳು ಒಮ್ಮೆಲೇ ಹರಿದುಬಂದು ಹಳ್ಳಿಗಳನ್ನು ಕೊಚ್ಚಿಕೊಂಡು ಹರಿಯಿತು. ಮನೆ ಮಠ ಹೋಟಲುಗಳು, ದೇವಾಲಯಗಳು ಎಲ್ಲವೂ ಕೊಚ್ಚಿಕೊಂಡುಹೋದವು. ನದಿ ದಡಗಳಲ್ಲಿ ಮಣ್ಣು ಕವಚಗಳ ಮೇಲೆಯೇ ವಸತಿಗಳನ್ನು ಕಟ್ಟಿಕೊಂಡಿರುವುದರಿಂದ ಅನಾಹುತಕ್ಕೆ ಹೆಚ್ಚು ಕಾರಣವಾಗಿದೆ. ವಿಜ್ಞಾನಿಗಳು ಈಗ ಹಿಮನದಿಯ ಸರೋವರದ ಪ್ರವಾಹ, ಹಿಮನದಿ ಕುಸಿತ, ಭೂಕುಸಿತ ಅಥವಾ ಇನ್ನಿತರ ಕ್ರಿಯೆಗಳು ಖೀರ್ ಗಂಗಾ ನದಿಯನ್ನು ಅಪಾರ ಶಕ್ತಿಯಿಂದ ಉಕ್ಕಿಹರಿಯಲು ಕಾರಣವಾಗಿರಬಹುದು ಎಂದು ಊಹಿಸುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಜಮ್ಮು ಪ್ರವಾಹ: ಕೋಟ್ಯಂತರ ರೂಪಾಯಿ ನಷ್ಟ ಕಂಡ ಹಣ್ಣು ಬೆಳೆಗಾರರ ಕಣ್ಣೀರು ಒರೆಸುವವರಾರು?

ಇದಕ್ಕೆ ಇನ್ನಷ್ಟು ಕಾರಣಗಳೆಂದರೆ ಹಿಮಾಲಯಗಳಲ್ಲಿನ ಹಿಮನದಿಗಳು ತಾಪಮಾನದಿಂದ ಹಿಂದಕ್ಕೆ ಸರಿಯುತ್ತಿರುವುದು ಮತ್ತು ಹಿಮಾಲಯದಲ್ಲಿ ಹಿಮರಾಶಿ ಕಡಿಮೆಯಾಗುತ್ತಿದ್ದು ಅದು ಬೆಟ್ಟ ಕಣಿವೆಗಳ ಹಿಮ ಕವಚವನ್ನು ಕಡಿಮೆ ಮಾಡುತ್ತಿದ್ದ ಬೆಟ್ಟಗಳು ತಮ್ಮ ಹಿಡಿತವನ್ನು ಕಳೆದುಕೊಳ್ಳುತ್ತಿವೆ. ಉತ್ತರಾಖಂಡ್, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಒಟ್ಟಿನಲ್ಲಿ ಅರುಣಾಚಲ ಪ್ರದೇಶದಿಂದ ಜಮ್ಮು-ಕಾಶ್ಮೀರದವರೆಗೂ ಇಡೀ ಹಿಮಾಲಯಗಳು 2025ರಲ್ಲಿ ಜನವರಿಯಿಂದ ಇಂದಿನವರೆಗೆ ಬಹುತೇಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವುದು ತಿಳಿಯುತ್ತದೆ. ಬ್ರಹ್ಮಪುತ್ರಾ ನದಿಯ ಇಕ್ಕೆಲಗಳಲ್ಲಿರುವ ಜನರು ಕನಿಷ್ಠ ವರ್ಷಕ್ಕೆ ಎರಡು ಸಲವಾದರೂ ನೆರೆಯ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಈ ವರ್ಷ ಈಗಾಗಲೆ ಕೆಲವು ನೂರು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ.

ದೇಶದಲ್ಲಿ ಯಾವುದೇ ನೈಸರ್ಗಿಕ ದುರಂತಗಳು ಸಂಭವಿಸಿದರೂ ಭಾರತೀಯ ಸೇನೆಯ ಐಬೆಕ್ಸ್ ಬ್ರಿಗೇಡ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯದ ವಿಪತ್ತು ನಿರ್ವಹಣಾ ಪಡೆಗಳು ಮತ್ತು ಪೊಲೀಸರು ತಕ್ಷಣವೇ ವಿಪತ್ತು ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ವಾಯುದಳದ ಎಲಿಕಾಪ್ಟರುಗಳು ಸಣ್ಣ ವಿಮಾನಗಳು ಕಾರ್ಯದಲ್ಲಿ ತೊಡಗಿಕೊಳ್ಳುತ್ತವೆ. ಇದು ಸದ್ಯದ ಸಣ್ಣ ಸಮಾಧಾನದ ಸಂಗತಿ.

WhatsApp Image 2025 11 17 at 3.52.37 PM
ಡಾ ಎಂ ವೆಂಕಟಸ್ವಾಮಿ
+ posts

ಭೂವಿಜ್ಞಾನಿ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಎಂ ವೆಂಕಟಸ್ವಾಮಿ
ಡಾ ಎಂ ವೆಂಕಟಸ್ವಾಮಿ
ಭೂವಿಜ್ಞಾನಿ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...