‘ಭಾರತಕ್ಕಿಂತ ಮೋದಿ ದೊಡ್ಡವರೆ?’: ಸರ್ಕಾರದ ಪ್ರಚಾರ ರಥಯಾತ್ರೆ ತಡೆದು ಪ್ರಶ್ನಿಸಿದ ಯುವಕ, ವಿಡಿಯೋ ವೈರಲ್

Date:

ಕೇಂದ್ರದ ಯೋಜನೆಗಳ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಮೋದಿ ಹೆಸರಿನಲ್ಲಿ ‘ವಿಕಾಸ ಭಾರತ ಸಂಕಲ್ಪ ಯಾತ್ರಾ’ ರಥಯಾತ್ರೆ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಯೋಜನಾ ರಥಯಾತ್ರೆಯನ್ನು ಪ್ರಶ್ನಿಸಿ ಯುವಕನೊಬ್ಬ ತಡೆದು ನಿಲ್ಲಿಸಿರುವ ಘಟನೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಡೆದಿದೆ.

ಕೊಲ್ಹಾಪುರ ಜಿಲ್ಲೆಯ ಗ್ರಾಮವೊಂದರ ಇಂಜಿನಿಯರಿಂಗ್ ಪದವೀಧರನಾದ ಯುವಕ ರಾಜ್‌ವೈಭವ್‌ ಸೋಬಾ ರಾಮಚಂದ್ರ ಅವರು ‘ವಿಕಾಸ ಭಾರತ ಸಂಕಲ್ಪ ಯಾತ್ರಾ’ ರಥಯಾತ್ರೆಯನ್ನು ತಡೆದು ನಿಲ್ಲಿಸಿದ್ದಾರೆ. ಸಂಕಲ್ಪ ಯಾತ್ರೆಯಲ್ಲಿ ‘ಮೋದಿ ಗ್ಯಾರಂಟಿ ಯೋಜನೆಗಳು’ ಎಂದು ಅಡಿಬರಹ ಬಳಸಲಾಗಿದ್ದು, ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಪ್ರಶ್ನಿಸಿದ್ದಾರೆ.

ಘಟನೆಯು ಡಿಸೆಂಬರ್‌ 13ರಂದು ನಡೆದಿದ್ದು, ಇಂಜಿಯರಿಂಗ್ ಪದವೀಧರರಾದ 30 ವರ್ಷದ ರಾಮಚಂದ್ರ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ತಾಲೂಕಿನ ಯುವಕನ ಸ್ವಗ್ರಾಮ ಸೋನ್ಯಾಚಿ ಶಿರೋಳಿ ಗ್ರಾಮದಲ್ಲಿ ಸಂಕಲ್ಪ ಯಾತ್ರೆ ಬರುತ್ತಿದ್ದ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯುವಕ ಪ್ರಶ್ನಿಸಿರುವ ವಿಡಿಯೋ ಮಹಾರಾಷ್ಟ್ರದ ವಿವಿಧ ಭಾಗಗಳ ಗ್ರಾಮದಲ್ಲಿ ವೈರಲ್‌ ಆಗಿದ್ದು, ಆತನಿಂದ ಪ್ರೇರೇಪಣೆ ಪಡೆದ ಅನೇಕರು ತಮ್ಮ ಗ್ರಾಮಗಳಲ್ಲಿ ವಿಕಾಸ್ ಭಾರತ್‌ ರಥಯಾತ್ರೆ ವಾಹನವನ್ನು ತಡೆದಿದ್ದಾರೆ. ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಸಾರ್ವಜನಿಕರ ಹಣವನ್ನು ಆಡಳಿತ ಪಕ್ಷ ಬಿಜೆಪಿ ಪೋಲು ಮಾಡುತ್ತಿದೆ ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ಈ ಕಚ್ಚಾಟ, ‘ಆತ್ಮಹತ್ಯೆ’ಯ ಹುಚ್ಚಾಟ

“ರಾಜಕೀಯ ಪಕ್ಷಗಳು ಮತ್ತು ಕೇಂದ್ರ ಸರ್ಕಾರದ ನಡುವಿನ ವ್ಯತ್ಯಾಸ ಹಾಗೂ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ನನಗೆ ಅರಿವಿದೆ. ನಾನು ಕೆಲವೊಂದನ್ನು ಗಮನಿಸಿ ಅವರನ್ನು ಪ್ರಶ್ನಿಸಿದೆ. ಮೊದಲನೆಯದಾಗಿ, ಸರ್ಕಾರವೇ ತನ್ನ ಕೆಲಸವನ್ನು ನಿರ್ವಹಿಸುತ್ತಿರುವಾಗ ಇಷ್ಟು ದೊಡ್ಡ ಮಟ್ಟದ ಪ್ರಚಾರ ಏಕೆ ಮಾಡುತ್ತಿದೆ? ಸರ್ಕಾರಿ ಕಾರ್ಯಕ್ರಮಗಳ ಗ್ಯಾರಂಟಿಗಳನ್ನು ಮೋದಿ ಗ್ಯಾರಂಟಿ ಎಂದು ಏಕೆ ಘೋಷಿಸುತ್ತಿದ್ದಾರೆ” ಎಂದು ರಾಮಚಂದ್ರ ಪ್ರಶ್ನಿಸಿದ್ದಾರೆ.

“ಇದು ಸರ್ಕಾರಿ ಕಾರ್ಯಕ್ರಮ ಎಂದು ಪ್ರಚಾರದಲ್ಲಿ ತೊಡಗಿದ್ದ ಅಧಿಕಾರಿಗಳೆ ನಮಗೆ ತಿಳಿಸಿದ್ದಾರೆ. ನನ್ನ ಸರಳ ಪ್ರಶ್ನೆ ಎಂದರೆ, ಒಂದು ನಿರ್ದಿಷ್ಟ ಆಡಳಿತ ಪಕ್ಷಕ್ಕಾಗಿ ಪ್ರಚಾರ ನಡೆಸಲು ಸಾರ್ವಜನಿಕ ಹಣವನ್ನು ದೊಡ್ಡ ಮಟ್ಟದಲ್ಲಿ ಏಕೆ ವೆಚ್ಚ ಮಾಡಲಾಗುತ್ತಿದೆ. ಮೋದಿ ಭಾರತಕ್ಕಿಂತ ದೊಡ್ಡವರೆ? ರಾಷ್ಟ್ರ ಲಾಂಛನವನ್ನು ಒಬ್ಬ ವ್ಯಕ್ತಿಯ ಹಾಗೂ ಒಂದು ಪಕ್ಷದ ಪರವಾಗಿ ಬಳಸಲಾಗುತ್ತದೆ. ಇದನ್ನು ಹೇಗೆ ಅನುಮತಿಸಲಾಗಿದೆ? ಭಾರತದ ಧ್ವಜವನ್ನು ಕೂಡ ರಥಯಾತ್ರೆಯಲ್ಲಿ ಬಿಜೆಪಿ ಧ್ವಜದಂತೆ ಮಾರ್ಪಡಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮೋದಿ ಹೆಸರನ್ನು ಪ್ರಶ್ನಿಸಿರುವುದಕ್ಕೆ ಕೋಪಗೊಂಡಿರುವ ಸ್ಥಳೀಯ ಬಿಜೆಪಿ ನಾಯಕರು ಪೊಲೀಸ್ ದೂರು ನೀಡುವುದಾಗಿ ರಾಮಚಂದ್ರನಿಗೆ ಬೆದರಿಕೆಯೊಡ್ಡಿದ್ದಾರೆ. ಆದರೆ ತಾವು ಇದ್ಯಾವುದಕ್ಕೂ ಜಗ್ಗುವುದಿಲ್ಲ. ಅಗತ್ಯ ದಾಖಲೆಗಳೊಂದಿಗೆ ಪೊಲೀಸ್ ದೂರು ನೀಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿರುವುದಾಗಿ ರಾಮಚಂದ್ರ ಹೇಳಿದ್ದಾರೆ.

ರಾಮಚಂದ್ರನಿಂದ ಸ್ಪೂರ್ತಿ ಪಡೆದ ಹಲವು ಯುವಕರು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳ 60 ಕಡೆ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯನ್ನು ಶಾಂತಿಯುತವಾಗಿ ಕೈಗೊಳ್ಳಿ ಯಾವುದೇ ಕಾರಣಕ್ಕೂ ಗಲಭೆ, ಹಾನಿ ಮಾಡಬೇಡಿ ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ರಾಮಚಂದ್ರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...