ಚಳಿಗಾಲ ಸಮೀಪಿಸುತ್ತಿದೆ. ಚಳಿ ಹೆಚ್ಚುತ್ತಿದೆ. ಭಾರತದಾದ್ಯಂತ ತಣ್ಣನೆಯ ಗಾಳಿ ಬೀಸಲು ಆರಂಭಿಸಿದೆ. ಇದೇ ಸಂದರ್ಭದಲ್ಲಿ, ವಿಶೇಷವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿತದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣ್ಣಮಟ್ಟ ಸೂಚ್ಯಂಕ (ಎಕ್ಯೂಐ)ವು ಅಪಾಯಕಾರಿ ಹಂತಕ್ಕೆ ಕುಸಿಯುತ್ತಿದೆ.
AQI ಮೇಲ್ವಿಚಾರಣಾ ಸಂಸ್ಥೆ aqi.in ಪ್ರಕಾರ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಜನರು ಉಸಿರಾಡುವ ಗಾಳಿಯು ಓರ್ವ ವ್ಯಕ್ತಿ ದಿನಕ್ಕೆ 4.1 ಸಿಗರೇಟ್ ಸೇದುವಷ್ಟು ಹಾನಿಕಾರಕವಾಗಿದೆ.
ದೆಹಲಿಯಲ್ಲಿ ಈಗಾಗಲೇ ಜನರು ಉಸಿರಾಟ ಸಮಸ್ಯೆ ಎದುರಿಸುತ್ತಿದ್ದು, ಜನರಿಗೆ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಅನಗತ್ಯವಾಗಿ ಮನೆಯಿಂದ ಹೊರಬಾರದಂತೆ ಮನವಿ ಮಾಡಲಾಗಿದೆ,.ನಡಿಗೆ, ಜಾಗಿಂಗ್ ಅಥವಾ ವ್ಯಾಯಾಮದಂತಹ ಹೊರಾಂಗಣ ಚಟುವಕೆಗಳನ್ನು ನಡೆಸದಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಭಾರತದ ಟಾಪ್ 10 ಅತಿ ಹೆಚ್ಚು AQI ನಗರಗಳು:

ಮೇಲ್ವಿಚಾರಣಾ ಸಂಸ್ಥೆಗಳ ಪ್ರಕಾರ, AQI ಪ್ರಮಾಣವು 150–301 ಇದ್ದರೆ, ಅನಾರೋಗ್ಯಕರವಾಗಿರುತ್ತದೆ. ಇದು ಆಸ್ತಮಾದಂತಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.




