ಮಹಿಳಾ ವಿಶ್ವಕಪ್ | ಭಾರತ vs ದ.ಆಫ್ರಿಕಾ ಫೈನಲ್: 2011ರ ಮ್ಯಾಜಿಕ್‌ ಕ್ಷಣಗಳು ಮರುಕಳಿಸುತ್ತವೆಯೇ?

Date:

ಇಂದು (ನವೆಂಬರ್ 2) ಮಹಿಳಾ ವಿಶ್ವಕಪ್‌ನ (ಏಕದಿನ) ಫೈನಲ್‌ ಪಂದ್ಯವು ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಗಳ ನಡುವೆ ನವಿ ಮುಂಬೈ ಕ್ರೀಡಾಂಗಣದಲ್ಲಿ ನಡೆಯಲಿವೆ. ವಿಶ್ವಕಪ್‌ಅನ್ನು ತನ್ನ ಹೆಗಲಿಗೇರಿಸಿಕೊಳ್ಳಲು ಟೀಮ್‌ ಇಂಡಿಯಾ ಮಹಿಳಾ ತಂಡ ಎದುರು ನೋಡುತ್ತಿದೆ. ಹರ್ಮನ್‌ಪ್ರೀತ್‌ ಕೌರ್ ಅವರ ನೇತೃತ್ವದ ಭಾರತೀಯ ತಂಡವು ತವರು ನೆಲದಲ್ಲಿ ಅಬ್ಬರಿಸಲು ಸಜ್ಜಾಗಿದೆ. ಫೈನಲ್‌ ಪಂದ್ಯವು 2011ರಲ್ಲಿ ಮುಂಬೈನಲ್ಲಿಯೇ ನಡೆದಿದ್ದ ಪುರುಷರ ವಿಶ್ವಕಪ್ (ಏಕದಿನ) ಫೈನಲ್‌ ಪಂದ್ಯದ ರೀತಿಯ ಕ್ಷಣವನ್ನು ಸೃಷ್ಟಿಸುವುದೇ ಎಂಬ ಕುತೂಹಲ ಕ್ರಿಕೆಟ್‌ ಅಭಿಮಾನಿಗಳಲ್ಲಿದೆ. ಆ ಪಂದ್ಯದಲ್ಲಿ ತಂಡದ ನಾಯಕ ಎಂ.ಎಸ್‌ ಧೋನಿ ಅವರು ಕೊನೆ ಕ್ಷಣದಲ್ಲಿ ಅದ್ಭುತ ಸಿಕ್ಸರ್‌ ಸಿಡಿಸಿದ್ದರು. ಇದು ಭಾರತದ ಕ್ರೀಡಾ ಇತಿಹಾಸದಲ್ಲಿ ಗಮನಾರ್ಹ ಕ್ಷಣವಾಗಿತ್ತು.

ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ ಮಹಿಳಾ ಕ್ರಿಕೆಟ್‌ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವು ಕೆಲವು ಸಂದರ್ಭಗಳಲ್ಲಿ ಎಡವಿದರೂ, ಮತ್ತೆ ಪುಟಿದೆದ್ದು ಫೈನಲ್‌ ಹಂತಕ್ಕೆ ತಲುಪಿದೆ. ತವರಿನಲ್ಲಿ ಫೈನಲ್ ಆಡುವಾಗ ತಂಡಕ್ಕೆ ಅನುಕೂಲ ಇರುತ್ತದೆ ಎಂದು ಹೇಳಲಾಗುತ್ತಿದ್ದರೂ, ಅಷ್ಟೇ ಪ್ರಮಾಣದ ಹೊರೆಯೂ ಇರುತ್ತದೆ. ಅನುಕೂಲ ಮತ್ತು ಹೊರೆಯ ವಿಶಿಷ್ಟ ಮಿಶ್ರಣವನ್ನು ನಿಭಾಯಿಸುವುದು ಹಲವು ಸಂದರ್ಭದಲ್ಲಿ ಅಭದ್ರತೆಯನ್ನೂ ಸೃಷ್ಟಿಸಿಬಿಡುತ್ತವೆ.

ಅಂತಹ ಪರಿಸ್ಥಿತಿಯನ್ನು ನಿಭಾಯಿಸಿ ಫೈನಲ್‌ ಗೆಲ್ಲುವ ವಿಶ್ವಾಸದಲ್ಲಿ ಕೌರ್ ಪಡೆ ಸಿದ್ದವಾಗಿದೆ. ಕ್ರಿಕೆಟ್ ಅಭಿಮಾನಿಗಳು ಕೂಡ ಮಹಿಳಾ ವಿಶ್ವಕಪ್‌ನಲ್ಲಿ ತಂಡವು ತನ್ನ ಚೊಚ್ಚಲ ಟ್ರೋಫಿಯನ್ನು ಗೆಲ್ಲಬೇಕೆಂದು ಆಶಿಸುತ್ತಿದ್ದಾರೆ. ಇದೇ ಸಮಯದಲ್ಲಿ, 2011ರ ಪುರುಷರ ವಿಶ್ವಕಪ್‌ ಟೂರ್ನಿಯ ಫೈನಲ್ ಪಂದ್ಯವನ್ನು ನೆನೆಯುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2011ರಲ್ಲಿ ಧೋನಿ ನೇತೃತ್ವದ ಟೀಮ್‌ ಇಂಡಿಯಾ ಮೇಲೆ ಭಾರೀ ಒತ್ತಡವಿತ್ತು. 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತಂಡ ಕಡೆಯ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿದ್ದರಿಂದ, 28 ವರ್ಷಗಳ ನಂತರ, ಕಪ್ ಗೆಲ್ಲಲೇಬೇಕೆಂಬ ಒತ್ತಡದಲ್ಲಿಯೇ ಭಾರತ ತಂಡ ವಾಂಖೆಡೆ ಕ್ರೀಡಾಂಗಣ ಪ್ರವೇಶಿಸಿತ್ತು. ಭಾರತ-ಶ್ರೀಲಂಕಾ ನಡುವಿನ ಈ ಪಂದ್ಯದಲ್ಲಿ ಲಂಕಾ ಪಡೆ ಭಾರತಕ್ಕೆ 275 ರನ್‌ಗಳ ಗುರಿ ನೀಡಿತ್ತು. ಗುರಿಯ ಬೆನ್ನತ್ತಿದ ಟೀಮ್‌ ಇಂಡಿಯಾ ಕಡೆಯ 4 ಬಾಲ್‌ಗಳಲ್ಲಿ 4 ರನ್ ಗಳಿಸಬೇಕಿತ್ತು. 85 ರನ್‌ಗಳೊಂದಿಗೆ ಸ್ಕ್ರೀಜ್‌ನಲ್ಲಿದ್ದ ಧೋನಿ ತಮ್ಮ ಖ್ಯಾತಿಯ ‘ಹೆಲಿಕ್ಯಾಪ್ಟರ್ ಶಾಟ್‌’ನೊಂದಿಗೆ ಸಿಕ್ಸರ್‌ ಸಿಡಿಸಿದರು. ಪಂದ್ಯವನ್ನು ಮುಗಿಸಿ, ಟೀಮ್‌ ಇಂಡಿಯಾದ ಗೆಲುವಿಗೆ ಕಾರಣರಾದರು.

ಈ ಲೇಖನ ಓದಿದ್ದೀರಾ?: ಜೆಮಿಮಾ ರಾಡ್ರಿಗ್ಸ್ | ಭಾರತದ ಹೆಮ್ಮೆ; ಕಣ್ಣೀರಿನೊಳಗೆ ಕಂಗೊಳಿಸಿದ ಗೆಲುವು

ಈಗ, ಮಹಿಳಾ ತಂಡವು ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಸತತ ಮೂರು ಪಂದ್ಯಗಳ ಸೋಲಿನ ನಂತರ ನಾಲ್ಕನೇ ಸ್ಥಾನದೊಂದಿಗೆ ಸೆಮಿಫೈನಲ್‌ಗೆ ತಲುಪಿದ್ದರು. ನ್ಯೂಜಿಲೆಂಡ್ ವಿರುದ್ಧ ಅಳಿವು-ಉಳಿವಿನ ನಿರ್ಣಾಯಕ ಪಂದ್ಯದಲ್ಲಿ ಸ್ಟಾರ್ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ದಾಖಲೆಯ 127* ರನ್‌ಗಳೊಂದಿಗೆ ತಂಡವನ್ನು ಗೆಲ್ಲಿಸಿ, ಫೈನಲ್‌ಗೆ ಕರೆ ತಂದಿದ್ದಾರೆ. ಜೆಮಿಮಾ ಅವರಿಗೆ ನಾಯಕಿ ಹರ್ಮನ್‌ಪ್ರೀತ್ ಅವರು 89 ರನ್‌ಗಳೊಂದಿಗೆ ಸಾಥ್ ನೀಡಿದ್ದರು.

ಇಂದಿನ ಫೈನಲ್‌ ಪಂದ್ಯದಲ್ಲಿ ಈ ಜೋಡಿ (ಜೆಮಿಮಾ – ಹರ್ಮನ್‌ಪ್ರೀತ್) ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಅಲ್ಲದೆ, ನಾಯಕಿ ಹರ್ಮನ್‌ಪ್ರೀತ್ ಅವರು ಧೋನಿಯಂತೆಯೇ ಇತಿಹಾಸ ಬರೆಯುವರೇ, ಕ್ರಿಕೆಟ್‌ ದಂತಕಥೆಗಳಲ್ಲಿ ಇಂದಿನ ಕ್ಷಣವನ್ನು ದಾಖಲಿಸುವರೇ ಎಂಬ ಕಾತುರ ಅಭಿಮಾನಿಗಳಲ್ಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...