ಭಾನುವಾರ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು, ಚೊಚ್ಚಲ ವಿಶ್ವಕಪ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ದೇಶಾದ್ಯಂತ ಭಾರೀ ಮೆಚ್ಚುಗೆ ಮತ್ತು ಅಭಿನಂದನೆಯ ಮಹಾಪೂರವೇ ಹರಿಯುತ್ತಿದೆ. ಮಹಿಳಾ ತಂಡವು ಟ್ರೋಫಿ ಗೆದ್ದ ಐತಿಹಾಸಿಕ ಸಮಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ದಿಗ್ಗಜರಾದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಹಾಗೂ ಅಂಜುಮ್ ಚೋಪ್ರಾ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಹಾಜರಿದ್ದರು. ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವ ಮೆರವಣಿಗೆ ವೇಳೆ, ಹರ್ಮನ್‌ಪ್ರೀತ್ ಮತ್ತು ತಂಡವು ಮಿಥಾಲಿ ಮತ್ತು ಜೂಲನ್‌ಗೆ ಟ್ರೋಫಿಯನ್ನು ಹಸ್ತಾಂತರಿಸಿತು, ಎಲ್ಲರೂ ಭಾವುಕರಾದರು. ಈ ಕ್ಷಣವನ್ನು ಪುರುಷರ ತಂಡದ ಸ್ಟಾರ್ ಬೌಲರ್ ಆರ್ ಆಶ್ವಿನ್ ಶ್ಲಾಘಿಸಿದ್ದಾರೆ. ‘ಪುರುಷರ ತಂಡ ಎಂದಿಗೂ ಹೀಗೆ ಮಾಡಲಿಲ್ಲ’ ಎಂದಿದ್ದಾರೆ.
“ಭಾನುವಾರ, ಭಾರತೀಯ ಮಹಿಳಾ ತಂಡವು ಮಿಥಾಲಿ ರಾಜ್ ಅವರಿಗೆ ಟ್ರೋಫಿ ನೀಡಿ ಸಂಭ್ರಮಿಸಿತು. ಅವರು ಯಾಕೆ ಹಾಗೆ ಮಾಡಿದರು? ತಂಡವು ನಡೆಯುನ್ನು ನಾನು ಅಭಿನಂದಿಸುತ್ತೇನೆ. ಭಾರತೀಯ ಪುರುಷರ ತಂಡ ಎಂದಿಗೂ ಈ ರೀತಿ ಮಾಡಿಲ್ಲ. ಕೆಲವೊಮ್ಮೆ ಮಾಧ್ಯಮಗಳ ಮುಂದೆ, ನಾವು ‘ಈ ವ್ಯಕ್ತಿ ಇದನ್ನು ಮಾಡಿದರು’ ಅಥವಾ ‘ಆ ವ್ಯಕ್ತಿ ಅದನ್ನು ಮಾಡಿದರು’ ಎಂದೆಲ್ಲ ಹೇಳುತ್ತೇವೆ, ಆರೋಪಿಸುತ್ತೇವೆ. ಆದರೆ, ಹಿಂದಿನ ತಂಡಕ್ಎಕ ನಾವು ನಿಜವಾದ ಮನ್ನಣೆ ನೀಡುವುದನ್ನು ನಾನು ಹೆಚ್ಚಾಗಿ ನೋಡಿಲ್ಲ. ಬದಲಾಗಿ, ‘ನನ್ನ ಕಾಲದ ತಂಡ ಉತ್ತಮವಾಗಿದೆ’ ಮತ್ತು ‘ನಿಮ್ಮ ಕಾಲದ ತಂಡ ಅಷ್ಟು ಉತ್ತಮವಾಗಿರಲಿಲ್ಲ’ ಎಂದು ದೂಷಿಸಲಾಗುತ್ತದೆ. ನಾನು ಅಂತಹ ಬಹಳಷ್ಟು ಚರ್ಚೆಗಳನ್ನು ನೋಡಿದ್ದೇನೆ,” ಎಂದು ಅವರು ಹೇಳಿದ್ದಾರೆ.
🚨🚨 Ravi Ashwin's salute to Indian women cricket team
— Rajiv (@Rajiv1841) November 3, 2025
"They gave the trophy to Mithali Raj, Jhulan Goswami & dedicated this to previous generation superstars.
Indian men team has never done something like this, we say in front of media but I never seen they gave the credit to… pic.twitter.com/SUCKS5oeTj
“ಈ ಮಹಿಳಾ ತಂಡವು ಮಾಜಿ ಆಟಗಾರರಾದ ಅಂಜುಮ್ ಚೋಪ್ರಾ, ಮಿಥಾಲಿ ರಾಜ್ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸುವ ಮೂಲಕ, ಅವರು ಒಂದು ಕಾಲದಲ್ಲಿ ನೆಟ್ಟು, ಪೋಷಿಸಿದ ಬೀಜಗಳು ಇಂದು ವಿಜೇತರಾಗಿ ಎತ್ತರದ ಸ್ಥಾನದಲ್ಲಿ ನಿಂತಿವೆ ಎಂಬುದನ್ನು ಸಂಭ್ರಮಿಸಲು ಅವಕಾಶ ಮಾಡಿಕೊಟ್ಟರು. ಅದು ಎಂಥಹ ಕ್ಷಣ. ನಂಬಲಾಗದಷ್ಟು ಅತ್ಯುತ್ತಮ ಗಳಿಗೆಯೆಂದು ನಾನು ಭಾವಿಸಿದ್ದೇನೆ. ಭಾರತೀಯ ಮಹಿಳೆಯರು ಸಾಧಿಸಿದ ಈ ಗೆಲುವು – ಇಂದಿನದ್ದು ಮಾತ್ರವಲ್ಲ, 25 ವರ್ಷಗಳ ಶ್ರಮದ ಫಲಿತಾಂಶ” ಎಂದು ಅಶ್ವಿನ್ ಹೇಳಿದ್ದಾರೆ.




