‘ನೀವೇ ಅತಿದೊಡ್ಡ ನುಸುಳುಕೋರರು’: ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಮಮತಾ ವಾಗ್ದಾಳಿ

Date:

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಅನೇಕ ಜನರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರ ವಿರುದ್ಧ ನಾನು ಕಲ್ಕತ್ತಾ ಹೈಕೋರ್ಟ್, ದೆಹಲಿ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇನೆ. ಜನರ ಹಕ್ಕುಗಳನ್ನು ರಕ್ಷಿಸಲಾಗುತ್ತದೆ ಎಂಬ ಭರವಸೆ ಇನ್ನೂ ನನಗಿದೆ. ಬಂಗಾಳದ ಜನರನ್ನು ಹೊರಗಿಡಲು ಯತ್ನಿಸುತ್ತಿರುವ ಪ್ರಧಾನಿ ಮತ್ತು ಬಿಜೆಪಿಗರೇ, ‘ನೀವೇ ಅತಿದೊಡ್ಡ ನುಸುಳುಕೋರರು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ, ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ನಡೆದ ಈದ್ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಬಂಗಾಳದ ಜನರ ಪರವಾಗಿ ನಾವು ಸದಾ ನಿಲ್ಲುತ್ತೇವೆ. ನಾವು ಬಂಗಾಳ ಜನರ ಕುಟುಂಬದ ಸದಸ್ಯೆಯಾಗಿ,  ಎಲ್ಲ ಧರ್ಮ, ಜಾತಿ ಮತ್ತು ಪಂಗಡಗಳನ್ನು ಮೀರಿ ಜೊತೆನಿಲ್ಲುತ್ತೇನೆ,” ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ, “ನಮ್ಮ ಹಕ್ಕುಗಳನ್ನು ನಾವು ಮೋದಿಜಿಯವರಿಗೆ ಬಿಟ್ಟುಕೊಡುವುದಿಲ್ಲ. ಅವರು ಸೌದಿ ಅರೇಬಿಯಾಕ್ಕೆ ಹೋಗಿ ಅಲ್ಲಿ ಹಸ್ತಲಾಘವ ಮಾಡುತ್ತಾರೆ — ಅದು ಅವರ ಇಷ್ಟ. ನಾನು ಎಲ್ಲ ದೇಶಗಳನ್ನು ಗೌರವಿಸುತ್ತೇನೆ. ಆದರೆ, ನನ್ನ ದೇಶದ ಬಗ್ಗೆ ನನಗೆ ಹೆಮ್ಮೆಯಿದೆ. ಶಾಂತಿ ಮತ್ತು ಭ್ರಾತೃತ್ವದ ಭಾರತೀಯ ಸಂದೇಶವು ಇಡೀ ಜಗತ್ತಿಗೆ ತಲುಪಲಿ. ಆದರೆ, ನೀವು ವಿದೇಶದಲ್ಲಿ ಹಸ್ತಲಾಘವ ಮಾಡುವಾಗ ಎಲ್ಲವನ್ನೂ ಮರೆತಂತೆ ನಟಿಸುತ್ತೀರಿ, ಭಾರತಕ್ಕೆ ಮರಳಿದ ಕೂಡಲೇ ಹಿಂದು-ಮುಸ್ಲಿಂ ನಿರೂಪಣೆ ಮತ್ತೆ ಶುರುವಾಗುತ್ತದೆ. ನಂತರ ನೀವು ಹೆಸರುಗಳನ್ನು ಅಳಿಸಲು, ಜನರನ್ನು ನುಸುಳುಕೋರರು ಎಂದು ಹಣೆಪಟ್ಟಿ ಕಟ್ಟಲು ಕರೆ ನೀಡುತ್ತೀರಿ. ನಾನಂತೂ ಹೇಳುತ್ತೇನೆ, ನೀವೇ ಅತಿದೊಡ್ಡ ನುಸುಳುಕೋರರು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಬಿಜೆಪಿ ‘ಸರ್ಕಾರವನ್ನು ವಶಪಡಿಸಿಕೊಳ್ಳಲು’ ಯತ್ನಿಸುತ್ತಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಅವರು (ಬಿಜೆಪಿ) ಎಲ್ಲರನ್ನೂ ತೆಗೆದುಹಾಕಿ ಆ ಸ್ಥಾನಗಳಲ್ಲಿ ಬಿಜೆಪಿ ನಾಯಕರನ್ನು ಕೂರಿಸಲು ಯೋಜಿಸುತ್ತಿದ್ದಾರೆ. ಇದು ಕಳ್ಳರು, ದರೋಡೆಕೋರರು ಹಾಗೂ ಗೂಂಡಾಗಳ ಪಕ್ಷ — ಇದು ದ್ರೋಹಿಗಳ ಪಕ್ಷ. ಮತಗಳನ್ನು ವಿಭಜಿಸಲು ಬಿಜೆಪಿಯಿಂದ ಹಣ ಪಡೆಯಲು ಪ್ರಾರಂಭಿಸಿರುವ ಕೆಲವು ದ್ರೋಹಿಗಳೂ ಇಲ್ಲಿದ್ದಾರೆ. ಆದರೆ, ಅಂತಿಮವಾಗಿ ಸರ್ವಶಕ್ತನ ಇಚ್ಛೆಯಂತೆ ನಡೆಯುತ್ತದೆಯೇ ಹೊರತು ಅದಕ್ಕಿಂತ ಮಿಗಿಲಾಗಿ ಏನೂ ನಡೆಯುವುದಿಲ್ಲ” ಎಂದಿದ್ದಾರೆ.

ಈ ಲೇಖನ ಓದಿದ್ದೀರಾ?: ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಕಾರ್ಯಕ್ರಮದಲ್ಲಿ ಮಾತನಾಡಿದ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, “ನೆನಪಿಡಿ, ರಂಜಾನ್‌ನಲ್ಲಿ ರಾಮನಿದ್ದಾನೆ… ದೀಪಾವಳಿಯಲ್ಲಿ ಅಲಿ ಇದ್ದಾನೆ. ಚಂದಿರನನ್ನು ನೋಡಿ ನಾವು ಈದ್ ಮತ್ತು ಕರ್ವಾ ಚೌತ್ ಎರಡನ್ನೂ ಆಚರಿಸುತ್ತೇವೆ. ಇದೇ ನಮ್ಮ ದೇಶದ ಸಂಪ್ರದಾಯ ಮತ್ತು ಸಂಸ್ಕೃತಿ” ಎಂದಿದ್ದಾರೆ.

“ಈದ್ ಇರಲಿ ಅಥವಾ ಇನ್ನಾವುದೇ ಹಬ್ಬವಿರಲಿ, ಅಲ್ಲಿ ನಾಲ್ಕು ಅಂತರಾರ್ಥದ ಸಂದೇಶಗಳಿವೆ: ತಾಳ್ಮೆ, ಸಹೋದರತ್ವ, ಪರೀಕ್ಷೆ ಹಾಗೂ ಪ್ರೀತಿ. ಇವುಗಳೇ ಮಾನವೀಯತೆಯ ಮೌಲ್ಯಗಳು. ಸಹೋದರರನ್ನು ಪರಸ್ಪರ ಕಚ್ಚಾಡುವಂತೆ ಮಾಡುತ್ತಿರುವ ಈ ಸಮಯದಲ್ಲಿ ನಾವು ಈ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಮತ್ತು ರಕ್ಷಿಸಬೇಕು. ನಾವು ಒಗ್ಗಟ್ಟಾಗಿ ನಿಂತು ಪರಸ್ಪರರ ಸಮುದಾಯದ ಹಬ್ಬಗಳನ್ನು ಆಚರಿಸಬೇಕು. ನಿಮ್ಮ ಹಬ್ಬದ ಆಚರಣೆಯಲ್ಲಿ ನಾನು ಭಾಗವಹಿಸುತ್ತೇನೆ ಮತ್ತು ನೀವು ನನ್ನ ಹಬ್ಬದ ಆಚರಣೆಯಲ್ಲಿ ಸೇರಿಕೊಳ್ಳುತ್ತೀರಿ. ಇದೇ ಬಂಗಾಳದ ಸಂಸ್ಕೃತಿ” ಎಂದು ಮುಸ್ಲಿಮರನ್ನು ಉದ್ದೇಶಿಸಿ ಹೇಳಿದ್ದಾರೆ.

ಬಿಜೆಪಿಯ ಹೆಸರನ್ನು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದ ಅಭಿಷೇಕ್, “ಹೆಸರುಗಳನ್ನು ಅಳಿಸುವ ಮೂಲಕ ಮತ್ತು ಸಹೋದರರ ನಡುವೆ ಜಗಳ ಹಚ್ಚುವ ಮೂಲಕ ಜನರನ್ನು ಈ ದೇಶದಿಂದ ಹೊರಹಾಕಬಹುದು ಎಂದು ಭಾವಿಸುವವರು ನೆನಪಿಡಬೇಕು; ಜನರು ಪ್ರಾಣತ್ಯಾಗಕ್ಕೂ ಸಿದ್ಧರಿದ್ದಾರೆ. ಎಂದಿಗೂ ತಲೆಬಾಗುವುದಿಲ್ಲ. ಪ್ರಸಿದ್ಧ ಕವಿ ರಾಹತ್ ಇಂದೋರಿ ಅವರ ಸಾಲುಗಳನ್ನು ನಾನು ನೆನಪಿಸಲು ಬಯಸುತ್ತೇನೆ — ‘ಅಧಿಕಾರಕ್ಕೆ ಬರುವವರು ಬಾಡಿಗೆ ಮನೆಯ ಬಾಡಿಗೆದಾರರಿದ್ದಂತೆ. ಅವರು ಎಂದಿಗೂ ತಮ್ಮನ್ನು ಮಾಲೀಕರು ಎಂದು ಭಾವಿಸಬಾರದು’. ಭಾರತವು ಯಾವುದೇ ವ್ಯಕ್ತಿಯ ಆಸ್ತಿಯಲ್ಲ. ಈ ದೇಶವು ಎಲ್ಲರಿಗೂ ಸೇರಿದ್ದು. ಭಾರತದಲ್ಲಿ ದೇವಸ್ಥಾನದ ಗಂಟೆಗಳು ಮತ್ತು ನಮಾಜಿನ ಧ್ವನಿಗಳು ಸಮಾನವಾಗಿ ಪ್ರತಿಧ್ವನಿಸುತ್ತವೆ” ಎಂದಿದ್ದಾರೆ.

“ಹಿಂದು ಮತ್ತು ಮುಸ್ಲಿಮರ ನಡುವೆ ಜಗಳ ಹಚ್ಚುವವರು ನೆನಪಿಡಿ, ನಿಮ್ಮ ಹೀನಾಯ ಸಂಚಿನ ಹೊರತಾಗಿಯೂ ಬಂಗಾಳದ ಭ್ರಾತೃತ್ವದ ಸ್ಫೂರ್ತಿ ಹಾಗೆಯೇ ಉಳಿಯುತ್ತದೆ. ಕೆಲವರು ಹಿಂದುಗಳು ಅಪಾಯದಲ್ಲಿದ್ದಾರೆ ಎನ್ನುತ್ತಾರೆ, ಇನ್ನು ಕೆಲವರು ಮುಸ್ಲಿಮರು ಅಪಾಯದಲ್ಲಿದ್ದಾರೆ ಎನ್ನುತ್ತಾರೆ. ಅವರು ತಮ್ಮ ಕೋಮುವಾದಿ ಕನ್ನಡಕವನ್ನು ತೆಗೆದಿರಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಏಕೆಂದರೆ ಆಗ ಮಾತ್ರ ನಮ್ಮ ದೇಶ ಭಾರತವು ಅಪಾಯದಲ್ಲಿದೆ ಎಂಬುದು ಅವರಿಗೆ ಅರಿವಾಗುತ್ತದೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...