2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಯಾವುದೇ ವಿಚಾರಣೆಗಳಿಲ್ಲದೆ, ಜಾಮೀನೂ ದೊರೆಯದೆ ಜೈಲಿನಲ್ಲಿರುವ ಉಮರ್ ಖಾಲಿದ್ ಅವರನ್ನು ಬೆಂಬಲಿಸಿ ಟಿಎಂಸಿ ಸಂಸದೆ ಮೊಹುವಾ ಮಹಿತ್ರಾ ಕವಿತೆ ಬರೆದಿದ್ದಾರೆ.
‘ನೀವು ಎದ್ದು ನಿಲ್ಲುವಿರಿ, ಉಮರ್ ಖಾಲಿದ್’ ಶೀರ್ಷಿಕೆಯಲ್ಲಿ ಬರೆದಿರುವ ಕವಿಕೆಯನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಬರೆದಿರುವ ಕವಿತೆ ಹೀಗಿದೆ;
ನೀವು ನನ್ನನ್ನು ಇತಿಹಾಸದಲ್ಲಿ ನಿಮ್ಮ ಕಹಿ, ತಿರುಚಿದ ಸುಳ್ಳುಗಳಿಂದ ಬರೆಯಬಹುದು;
ನನ್ನನ್ನು ಮಣ್ಣಿನಲ್ಲಿ ತುಳಿಯಬಹುದು;
ಆದರೂ ಧೂಳಿನಂತೆ ನಾನು ಎದ್ದು ನಿಲ್ಲುತ್ತೇನೆ.
ನಿಮ್ಮ ಮಾತುಗಳಿಂದ ನನ್ನ ಮೇಲೆ ದಾಳಿ ಮಾಡಬಹುದು,
ನಿಮ್ಮ ಕಣ್ಣುಗಳಿಂದ ನನ್ನನ್ನು ಕತ್ತರಿಸಬಹುದು,
ನಿಮ್ಮ ದ್ವೇಷದಿಂದ ನನ್ನನ್ನು ಕೊಲ್ಲಬಹುದು;
ಆದರೂ ಗಾಳಿಯಂತೆ ನಾನು ಎದ್ದು ನಿಲ್ಲುತ್ತೇನೆ.
You Will Rise @UmarKhalidJNU
— Mahua Moitra (@MahuaMoitra) January 7, 2026
You may write me down in history
With your bitter, twisted lies,
You may trod me in the very dirt
But still, like dust, I'll rise…
You may shoot me with your words,
You may cut me with your eyes,
You may kill me with your hatefulness,
But still,…
2020ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಪಿತೂರಿ ರೂಪಿಸುವಲ್ಲಿ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮುಹಮ್ಮದ್ ಸಲೀಮ್ ಖಾನ್ ಹಾಗೂ ಶಾದಾಬ್ ಅಹ್ಮದ್ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಅವರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ 2020ರಲ್ಲಿಯೇ ಬಂಧಿಸಲಾಗಿತ್ತು. ಅಂದಿನಿಂದಲೂ ಸರಿಯಾದ ವಿಚಾರಣೆಗಳು ನಡೆಯದೆ, ಜಾಮೀನು ದೊರೆಯದೆ ಎಲ್ಲ ಆರೋಪಿಗಳನ್ನು ಜೈಲಿನಲ್ಲಿಯೇ ಇರಿಸಲಾಗಿತ್ತು. ಇತ್ತೀಚೆಗೆ, ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರನ್ನು ಹೊರತುಪಡಿಸಿ, ಉಳಿದ ಆರೋಪಿಗಳಿಗೆ ಜಾಮೀನು ನೀಡಿದೆ.




