ಖ್ಯಾತ ಗಾಯಕ ಝುಬಿನ್ ಗರ್ಗ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್‌ಪಿ) ಸಂದೀಪನ್ ಗರ್ಗ್ ಅವರನ್ನು ಬಂಧಿಸಲಾಗಿದೆ. ಸಂದೀಪನ್ ಅವರು ಝುಬಿನ್ ಅವರ ಸಂಬಂಧಿಯೂ ಆಗಿದ್ದಾರೆ.
ಗಾಯಕ ಝುಬಿನ್ ಗರ್ಗ್ ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪನ್ ಸೇರಿದಂತೆ ಒಟ್ಟು ಐವರ ಬಂಧನ ಮಾಡಲಾಗಿದೆ.
ಇದನ್ನು ಓದಿದ್ದೀರಾ? ದುರಂತದಲ್ಲಿ ಮರೆಯಾಗಿ ಜನಸಾಗರವ ಸೆಳೆದ ಈ ಹಾಡುಗಾರ ಯಾರು?
ಸೆಪ್ಟೆಂಬರ್ 19ರಂದು ಈ ಘಟನೆ ನಡೆದ ಸಂದರ್ಭದಲ್ಲಿ ಸಂದೀಪನ್ ಗರ್ಗ್ ಕೂಡಾ ಸ್ಥಳದಲ್ಲಿದ್ದರು. ಸದ್ಯ ಈ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು ಹಲವು ಸುತ್ತಿನ ವಿಚಾರಣೆ ನಡೆದಿದೆ. ಅದಾದ ನಂತರ ಸಿಐಡಿ ವಶಕ್ಕೆ ಪಡೆದಿದೆ.
ಸಂದೀಪನ್ ಅವರ ಬಂಧನವನ್ನು ಸಿಐಡಿ ವಿಶೇಷ ಡಿಜಿಪಿ ಮುನ್ನಾ ಪ್ರಸಾದ್ ಗುಪ್ತಾ ದೃಢಪಡಿಸಿದ್ದು ಸದ್ಯ ಕಾನೂನು ಪ್ರಕ್ರಿಯೆ ನಡೆಯುತ್ತಿವೆ ಎಂದು ಹೇಳಿದ್ದಾರೆ. “ನಮ್ಮ ತಂಡ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ನಾವು ಪೊಲೀಸ್ ಕಸ್ಟಡಿಗೆ ಕೋರುತ್ತೇವೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉತ್ಸವ ಆಯೋಜಕ ಶ್ಯಾಮಕಾನು ಮಹಾಂತ, ಗಾಯಕನ ವ್ಯವಸ್ಥಾಪಕ ಸಿದ್ಧಾರ್ಥ್ ಶರ್ಮಾ ಮತ್ತು ಬ್ಯಾಂಡ್ ಸದಸ್ಯರಾದ ಶೇಖರ್ ಜ್ಯೋತಿ ಗೋಸ್ವಾಮಿ ಮತ್ತು ಅಮೃತ್ ಪ್ರಭಾ ಮಹಾಂತ ಅವರನ್ನು ಸಹ ಬಂಧಿಸಲಾಗಿದೆ. ಎಲ್ಲರೂ ಪೊಲೀಸ್ ಕಸ್ಟಡಿಯಲ್ಲಿಯೇ ಇದ್ದಾರೆ.





