ಭಗತ್‌ ಸಿಂಗ್‌ ಯುವ ಜನಾಂಗದ ಕ್ರಾಂತಿಯ ಚಿಲುಮೆ

Date:

“ನಾವು ಪ್ರಭುತ್ವದ ವಿರುದ್ಧ ಸಮರ ಸಾರಿದ್ದೇವೆ. ಹಾಗಾಗಿ ಯುದ್ಧ ಖೈದಿಗಳಾಗಿದ್ದೇವೆ ಎಂದು ಹೇಳಲಿಚ್ಛಿಸುತ್ತೇನೆ. ನಮ್ಮನ್ನು ಯುದ್ಧ ಖೈದಿಗಳಂತೆಯೇ ಪರಿಗಣಿಸಲು ಆಗ್ರಹಿಸುತ್ತೇವೆ. ಅರ್ಥಾತ್ ನಮ್ಮನ್ನು ಗಲ್ಲಿಗೇರಿಸುವ ಬದಲು ನೇರವಾಗಿ ಗುಂಡಿಟ್ಟು ಕೊಲ್ಲುವಂತೆ ಕೋರುತ್ತೇವೆ.

ಭಾರತದ ಇತಿಹಾಸದಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಉಳಿಯುವ ಅದಮ್ಯ ಚೇತನವೇ ಭಗತ್ ಸಿಂಗ್. ಕೇವಲ 23 ವಯಸ್ಸಿನಲ್ಲಿ ದೇಶಕ್ಕಾಗಿ ನೇಣುಗಂಬ ಏರಿದ ಏಕೈಕ ಸ್ವಾತಂತ್ರ್ಯ ಸಂಗ್ರಾಮದ ವೀರ, ಭಗತ್ ಸಿಂಗ್ ಯುವ ಸಮುದಾಯಕ್ಕೆ ಪ್ರೇರಕ ಶಕ್ತಿಯಾಗಿದ್ದಾನೆ. ಭಗತ್ ‌ಸಿಂಗ್ ನ ಆದರ್ಶಗಳನ್ನು ಕೇವಲ ಹುತಾತ್ಮ ‌ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೀಮಿತಗೊಳಿಸುವ ಬದಲು ಆತನು ಪ್ರತಿಪಾದಿಸಿದ ಸಿದ್ಧಾಂತವನ್ನು ಇಂದಿನ ಸಮಾಜ ಅರ್ಥೈಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ.

“ವ್ಯಕ್ತಿಗಳನ್ನು ಕೊಲ್ಲಬಹುದು, ಆದರೆ ಅವರ ವಿಚಾರಗಳನ್ನಲ್ಲ” ಎಂದು ನುಡಿದ ಭಗತ್‍ ಸಿಂಗ್‍ ಇಂದು ನಮ್ಮೊಂದಿಗೆ ಇಲ್ಲ. ಆದರೆ ಆತನೇ ಹೇಳಿದಂತೆ ಭಗತ್‌ ಸಿಂಗ್ ವಿಚಾರ, ಆದರ್ಶ ಸಿದ್ಧಾಂತ, ಕ್ರಾಂತಿಯ ವಿಚಾರಧಾರೆ ಮಾತ್ರ ಇಂದಿಗೂ ಜೀವಂತವಾಗಿ ನೆಲೆಯೂರಿವೆ. ಭಗತ್ ಸಿಂಗ್ ನನ್ನು ನಾವು ಕೇವಲ ‘ದೇಶಪ್ರೇಮಿ’ ‘ಹುತಾತ್ಮ’ ಎಂದು ಬಿಂಬಿಸುವ ಮೂಲಕ ಆರಾಧನೆಯಷ್ಟೇ ಮಾಡುವುದಲ್ಲ, ಭಗತ್ ಸಿಂಗ್ ಎಂದರೆ ಅದೊಂದು ಕ್ರಾಂತಿಯ ಚಿಲುಮೆ, ಅಮೋಘ ಶಕ್ತಿ ಎಂದು ಅರಿಯಬೇಕಿದೆ. ಉನ್ನತ ಧ್ಯೇಯ ಮತ್ತು ಆದರ್ಶ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ಹಿಡಿದ ಕನ್ನಡಿಯಂತಿವೆ. ಆತನ ಕ್ರಾಂತಿಕಾರಿ ಚಿಂತನೆಗಳನ್ನು ಮನಗಂಡು ನಾವೆಲ್ಲರೂ ಮುನ್ನಡೆಯಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶಾಹಿದ್ ಭಗತ್ ಸಿಂಗ್, 28ನೆಯ ಸೆಪ್ಟೆಂಬರ್ 1907ರಂದು ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರಿಗೆ ಮೂರನೆಯ ಮಗನಾಗಿ ಜನಿಸಿದನು. ದೇಶಪ್ರೇಮದ ಹಿನ್ನೆಲೆಯುಳ್ಳ ಕ್ರಾಂತಿಕಾರಿ ವಿಚಾರಧಾರೆಯ ಕುಟುಂಬದಲ್ಲಿ ಹುಟ್ಟಿದ ಭಗತನಿಗೆ ಹುಟ್ಟುತ್ತಲೇ ದೇಶಪ್ರೇಮದ ಕಿಚ್ಚು ಮೊಳಕೆಯೊಡೆಯಿತು. ಅದು 1919ರ ವೇಳೆ ಜಲಿಯಾನ್ ವಾಲಾಬಾಗದಲ್ಲಿ ಸಂಭವಿಸಿದ ಹತ್ಯಾಕಾಂಡ ಭಗತ್ ಸಿಂಗ್ ನಿಗೆ ಅತಿಯಾಗಿ ಕಾಡಿತ್ತು. ಅಂದಿನ ಆ ಘಟನೆ ಭಗತ್ ಸಿಂಗ್ ನನ್ನು ಒಬ್ಬ ಅಪ್ರತಿಮ ಹೋರಾಟದ ನಾಯಕನಾಗಿ ರೂಪಿಸಿದ್ದು, ಮುಂದೆ ಬ್ರಿಟೀಷ್ ರಿಗೆ ಸಿಂಹಸ್ವಪ್ನವಾಗಿ, ಭವಿಷ್ಯ ಭಾರತಕ್ಕಾಗಿ, ಶೋಷಣೆ ಮುಕ್ತ ಸಮಾಜಕ್ಕಾಗಿ ಭಗತ್ ಸಿಂಗ್ ಮಿಡಿದಿರುವುದು ಸ್ಪಷ್ಟವಾಗಿ ತೋರುತ್ತದೆ. 

ಭಾರತದ ಸ್ವಾತಂತ್ರ್ಯ ಚಳವಳಿಗೆ ಬ್ರಿಟೀಷರ ವಿರುದ್ಧ ಸಮರ ಸಾರಿರುವ ಭಗತ್‍ಸಿಂಗ್, ಮತ್ತು ಆತನ ಸಂಗಾತಿಗಳಾದ ರಾಜಗುರು ಸುಖದೇವ್ ಮೊದಲಿಗರು. ಭಗತ್ ಸಿಂಗ್ ಕೇವಲ ಬ್ರಿಟೀಷ್ ವಸಾಹತುಶಾಹಿಯ ಸಾಮ್ರಾಜ್ಯದ ವಿರುದ್ಧ ಹೋರಾಡಲಿಲ್ಲ, ಶಾಂತಿ ಮತ್ತು ಸೌಹಾರ್ದತೆಗಾಗಿ ಹೋರಾಡಿದ. “ಭಾರತದ ನೆಲದಲ್ಲಿ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಗೊಳಿಸಿ ಸಮಾಜವಾದಿ ಗಣತಂತ್ರವನ್ನು ಸ್ಥಾಪಿಸುವವರೆಗೂ ನಮ್ಮ ಅವಿರತ ಹೋರಾಟ ದಿಟ್ಟತನದಿಂದ, ದೃಢತೆಯಿಂದ ಮತ್ತು ಅಪರಿಮಿತ ವಿಶ್ವಾಸದಿಂದ ನಡೆಯುತ್ತದೆ” ಎಂದು ಹೇಳುವ ಮೂಲಕ ಮೌಲಿಕ ಚಿಂತನೆಗಳು ಮಂಡಿಸಿದ. 

ಕ್ರಾಂತಿಯ ಮೂಲಕ ಸಾಮಾಜಿಕ ಬದಲಾವಣೆ ಬಯಸಿದ ಭಗತ್ ಸಿಂಗ್ ಕ್ರಾಂತಿ ಎಂದರೆ ಕ್ರಿಯೆ, ಹಾಗೂ ಪವಿತ್ರವಾದದ್ದು ಎಂದು ತಿಳಿದವನು. ಸಂಘಟಿತರಾಗಿ, ವ್ಯವಸ್ಥಿತವಾದ ಕಾರ್ಯ ಯೋಜನೆಯ ಮೂಲಕ ಉದ್ದೇಶಪೂರ್ವಕವಾಗಿ ಬದಲಾವಣೆ ತರುವುದನ್ನು ಕ್ರಾಂತಿ ಎನ್ನಲಾಗುತ್ತದೆ ಎಂದು ಹೇಳಿದನು. ಕ್ರಾಂತಿಕಾರಿಗಳು ಸಂಪೂರ್ಣ ಕ್ರಾಂತಿಗಾಗಿ ಹೋರಾಡುತ್ತೇವೆ. ಆದರೆ, ಸಂಪ್ರದಾಯವಾದಿಗಳು ಕ್ರಾಂತಿಕಾರಿ ಶಕ್ತಿಯನ್ನು ಭಂಗಗೊಳಿಸಿ ಹೋರಾಟವನ್ನು ವಿಫಲಗೊಳಿಸುತ್ತಾರೆ. ಹಾಗಾಗಿ ಇಂತಹ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ನಾವು ಗೊಂದಲಕ್ಕೆ ಒಳಗಾಗದೇ ಧ್ಯೇಯವನ್ನು ಸಾಧಿಸಬೇಕು ಎಂದು ಎಚ್ಚರಿಸುತ್ತಾನೆ. 

ಇನ್ನೂ ಭಗತ್ ಸಿಂಗ್ ಒಬ್ಬ ನಾಸ್ತಿಕವಾದಿಯೇ? ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ. ನಾನು ಆಸ್ತಿಕ ಹಾಗೂ ನಾಸ್ತಿಕ ಎಂಬ ಎರಡು ಗುಂಪಿಗೂ ಸೇರಿದವನಲ್ಲ. ನಾನು ಸರ್ವವ್ಯಾಪಿ, ಸರ್ವಶಕ್ತ, ಸ್ವರ್ವಾಂತರ್ಯಾಮಿ, ಸರ್ವಗ್ರಾಹಿ ದೇವರ ಅಸ್ತಿತ್ವವನ್ನೆ ನಿರಾಕರಿಸುತ್ತೇನೆಂದು ಹೇಳುತ್ತಾನೆ. ಮನುಷ್ಯ ಜೀವನದಲ್ಲಿ ದೇವರ ಶಿಕ್ಷೆ ಅಥವಾ ಉಡುಗೊರೆಯ ಬಗ್ಗೆ ನಮಗೆ ನಂಬಿಕೆ ಇಲ್ಲ. ಹಾಗಾಗಿ ನಮಗೆ ಬದುಕು ಮತ್ತು ಸಾವು ಭೌತಿಕ ನೆಲೆಯಲ್ಲಿ ಮಾತ್ರವೇ ಪ್ರಸ್ತುತ ಎನಿಸುತ್ತದೆ. “ದೇವರ ಸಾಮ್ರಾಜ್ಯದಲ್ಲಿ ಎಲ್ಲವೂ ಸೌಖ್ಯವಿದೆಯೇ?” ಎಂದು ಪ್ರಶ್ನಿಸುತ್ತಾ ನಾನು ನಾಸ್ತಿಕವಾದಿ ಹಾಗೂ ವಾಸ್ತವವಾದಿಯೂ ಹೌದು ಎನ್ನುವ ನಿರ್ಧಾರಕ್ಕೆ ಬರುತ್ತಾನೆ. 

bhagatsingh

“ನಾನು ನನ್ನ ಅಂತಿಮ ಕ್ಷಣಗಳು ಎದುರಾದಾಗ ನಾನು ದೇವರನ್ನು ನಂಬಲು ಆರಂಭಿಸಿದರೆ ನನ್ನ ನೈತಿಕ ಅಧಃಪತನ ಹಾಗೂ ಅವಮಾನದ ಸಂಕೇತವಾಗುತ್ತದೆ. ಇಂತಹ ಕ್ಷುಲ್ಲಕ ಸ್ವಾರ್ಥ ಉದ್ದೇಶಗಳಿಗೆ ನಾನು ದೇವರಿಗೆ ಪ್ರಾರ್ಥಿಸಲಾರೆ” ಎಂದು ಹೇಳುವ ಭಗತ್ ಸಿಂಗ್ ತಾನು ನಂಬಿರುವ ಸಿದ್ಧಾಂತಕ್ಕೆ ಕೊನೆಯವರೆಗೂ ಬದ್ಧನಾಗಿರುವುದನ್ನು ಗಮನಿಸಬಹುದು.

ಇಂದು ಭಗತ್ ಸಿಂಗ್ 116ನೇ ಜನ್ಮದಿನದ ಈ ಸಂದರ್ಭದಲ್ಲಿ ಭಗತ್ ಸಿಂಗ್ ನನ್ನು ನಾವು ಕೇವಲ ಹುತಾತ್ಮ ದೇಶಭಕ್ತ ಎಂದೇ ಬಿಂಬಿಸಿದ್ದೇವೆ. ಆತನ ಮೂಲ ತ್ವತ್ವಾದರ್ಶ ಸಿದ್ಧಾಂತಗಳು ಮೂಲೆಗುಂಪು ಮಾಡುವ ಹುನ್ನಾರದಿಂದ ಕೇವಲ ದೇಶಭಕ್ತಿಯ ಚೌಕಟ್ಟಿನಲ್ಲಿ ಪೂಜಿಸುತ್ತಿರುವುದು ವಿಪರ್ಯಾಸವೇ ಸರಿ. 

ಭಗತ್ ‌ಸಿಂಗ್, ರಾಜಗುರು ಹಾಗೂ ಸುಖದೇವ್ ಸೇರಿದಂತೆ ಅಸಂಖ್ಯಾತ ಸಂಗಾತಿಗಳನ್ನು ನಾವು ಹುತಾತ್ಮರೆಂದು ನೆನೆಯುತ್ತಿದ್ದೇವೆ. ಆದರೆ ಇಂದಿನ ಯುವ ‌‌ಸಮುದಾಯವನ್ನು ಒಗ್ಗೂಡಿಸಿ ಕ್ರಾಂತಿಯ ಮಾರ್ಗದಲ್ಲಿ ಕೊಂಡೊಯ್ಯಬಲ್ಲ ಸಾಮರ್ಥ್ಯ ಇರುವುದು ಭಗತ್ ಸಿಂಗ್ ಚಿಂತನೆಗಳಲ್ಲಿ ಮಾತ್ರ. ಅಂದಿನ ‘ರಿಯಲ್ ಹೀರೋ’ ಗಳೇ ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂತಃಕರಣವಿರುವವರ ನಿದ್ದೆಗೆಡಿಸುವ ಮೂರು ಸುದ್ದಿಗಳು

ಭಗತ್‌ ಸಿಂಗ್‌ ಎಂಬ ಅದಮ್ಯ ಚೇತನಕ್ಕೆ ನಾವು ಗೌರವಿಸಿ, ಆದರ್ಶವಾಗಿ ಸ್ವೀಕರಿಸೋಣ. ಇಂಥ ಕ್ರಾಂತಿಕಾರಿ ಮಹಾತ್ಮ ಹುಟ್ಟಿದ ನೆಲದಲ್ಲಿ ನಾವು ಜನಿಸಿರುವುದು ನಮ್ಮೆಲ್ಲರ ಸೌಭಾಗ್ಯ ಅಲ್ಲವೇ?

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...