ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಬಿಜೆಪಿಯವರೇ, ಬೊಮ್ಮಾಯಿಯವರು ಎಷ್ಟು ಸಲ ರಾಜೀನಾಮೆ ಕೊಟ್ಟಿದ್ರು?

Date:

ಇನ್ನು ತಲೆ ಬುಡ ಇಲ್ಲದ ಆರೋಪ ಮಾಡುವುದು, ಎಲ್ಲಾ ಹಗರಣಗಳಿಗೂ ಸಿಎಂ ರಾಜೀನಾಮೆ ಕೇಳುವ ಬಿಜೆಪಿಯವರು ತಮ್ಮ ಅವಧಿಯಲ್ಲಿ ಹಗರಣಗಳ ಆರೋಪ ಬಂದಾಗ ತನಿಖೆಯನ್ನೂ ಮಾಡಿಲ್ಲ ಯಾಕೆ? ಧೈರ್ಯ ಇರಲಿಲ್ಲವಾ, ಅಥವಾ ತಾವು ಸಾಚಾ ಎಂದು ಸಮಾಜಕ್ಕೆ ತೋರಿಸುವ ಪ್ರಯತ್ನವಾ?

 

ಆಡಳಿತ ಪಕ್ಷದ ತಪ್ಪುಗಳನ್ನು ಗುರುತಿಸುವುದು, ಪ್ರಶ್ನಿಸುವುದು ಪ್ರತಿಪಕ್ಷ ಕೆಲಸ. ಪ್ರಜಾಪ್ರಭುತ್ವದಲ್ಲಿ ಅದು ಇರಬೇಕಾದ್ದೆ. ಆದರೆ ಪ್ರತಿಪಕ್ಷ ಪ್ರಬುದ್ಧತೆಯಿಂದ ವರ್ತಿಸುವ ಪಕ್ವತೆಯನ್ನು ಬೆಳೆಸಿಕೊಳ್ಳಬೇಕು.
ಅನೇಕ ಪ್ರಕರಣದಲ್ಲಿ ಬಿಜೆಪಿ ಮಾಡಿದ ನಿರ್ಧಾರಗಳೇ ಈಗ ಜಾರಿಗೆ ಬಂದಾಗಲೂ ಏಕಾಏಕಿ ವಿರೋಧಿಸಿ ನಗೆಪಾಟಲಿಗೆ ಈ ಪ್ರತಿಪಕ್ಷ ಒಳಗಾಗಿದೆ.

ಮಾಡುವ ಆರೋಪಗಳ ಬಗ್ಗೆ ಗಟ್ಟಿಯಾದ ದಾಖಲೆಗಳೂ ಇರಬೇಕು. ಸರ್ಕಾರದಿಂದ ತಪ್ಪು ಆಗಿದೆ ಅನ್ನುವ ಪ್ರಕರಣದಲ್ಲಿ, ಸರ್ಕಾರವೇ ಕಾನೂನು ಕ್ರಮ ಜರುಗಿಸದ ನಂತರವೂ ಬೊಬ್ಬೆ ಹೊಡೆಯುವುದು ಬಿಜೆಪಿಗರ ಚಟವಾಗಿದೆ. ಹತ್ಯೆ ಪ್ರಕರಣವೊಂದರಲ್ಲಿ ಆರೋಪಿಯನ್ನು ಹಿಡಿದು ಜೈಲಿಗಟ್ಟಿ, ಸಂತ್ರಸ್ತನಿಗೆ ಪರಿಹಾರ ನೀಡಿ, ಶೀಘ್ರವಾಗಿ ತನಿಖೆ ಮಾಡಲು ವಿಶೇಷ ನ್ಯಾಯಾಲಯ ಸ್ಥಾಪಿಸದ ಮೇಲೂ ಇವರು ಪ್ಲಕಾರ್ಡ್‌ ಹಿಡಿದು ಬೀದಿಗೆ ಇಳಿಯುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನು ತಲೆ ಬುಡ ಇಲ್ಲದ ಆರೋಪ ಮಾಡುವುದು, ಎಲ್ಲಾ ಹಗರಣಗಳಿಗೂ ಸಿಎಂ ರಾಜೀನಾಮೆ ಕೇಳುವ ಬಿಜೆಪಿಯವರು ತಮ್ಮ ಅವಧಿಯಲ್ಲಿ ಹಗರಣಗಳ ಆರೋಪ ಬಂದಾಗ ತನಿಖೆಯನ್ನೂ ಮಾಡಿಲ್ಲ ಯಾಕೆ? ಧೈರ್ಯ ಇರಲಿಲ್ಲವಾ, ಅಥವಾ ತಾವು ಸಾಚಾ ಎಂದು ಸಮಾಜಕ್ಕೆ ತೋರಿಸುವ ಪ್ರಯತ್ನವಾ?

ಕೇಂದ್ರ ಬಿಜೆಪಿ ಕಳ್ಳರಿಂದ, ಸುಲಿಗೆಕೋರರಿಂದ ಎಲೆಕ್ಟೋರಲ್‌ ಬಾಂಡ್‌ ಹೆಸರಿನಲ್ಲಿ ದೇಣಿಗೆ ಪಡೆದ ಲೆಕ್ಕ ಪಡೆಯಲು ಸುಪ್ರೀಂ ಆದೇಶ ಬೇಕಾಯಿತು. ನೀಟ್ ಪ್ರಶ್ನೆಪತ್ರಿಕೆ ತನಿಖೆಗೆ ಸುಪ್ರೀಂ ಪ್ರವೇಶಿಸಬೇಕಾಯಿತು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ, ಡಾ. ಸುಧಾಕರ್‌ ಮೇಲೆ ಕೊರೋನ ವೈದ್ಯಕೀಯ ಪರಿಕರ ಖರೀದಿ ಆರೋಪ ಬಂದರೂ ಯಾಕೆ ರಾಜೀನಾಮೆ ಪಡೆದಿಲ್ಲ?

ಬಿಟ್‌ ಕಾಯಿನ್‌ ಹಗರಣ ನಡೆದಾಗ ಬೊಮ್ಮಾಯಿ ಗೃಹಮಂತ್ರಿ, ಅಷ್ಟೇ ಅಲ್ಲ ಹಗರಣ ಸಂಬಂಧ ದೂರು ದಾಖಲಾಗಿ ತನಿಖೆ ನಡೆಯುತ್ತಿರುವಾಗ ಅವರೇ ಸಿಎಂ. ಡಿಜಿಟಲ್‌ ದಾಖಲೆ ತಿರುಚಿದ ಆರೋಪ ಇದೆ. ಅವರು ರಾಜೀನಾಮೆ ಕೊಡಲಿಲ್ಲ ಯಾಕೆ? ಈ ಹಗರಣದಲ್ಲಿ ಬೊಮ್ಮಾಯಿ ಮತ್ತು ಆಗಿನ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್‌ಕುಮಾರ್‌ ಕಟೀಲ್‌ ಸಹೋದರನ ಹೆಸರೂ ಕೇಳಿ ಬಂದಿತ್ತು. ಪ್ರಧಾನಿ ಮೋದಿ ವಿದೇಶಕ್ಕೆ ಹೋಗಿದ್ದಾಗ ಅಲ್ಲಿನ ಅಧಿಕಾರಿಗಳು ಈ ಬಗ್ಗೆ ಪ್ರಧಾನಿಗೆ ತಿಳಿಸಿದ ನಂತರ ಕೇಂದ್ರದಿಂದ ತನಿಖೆ ನಡೆಸುವಂತೆ ಆದೇಶ ಬಂದಿತ್ತು.

ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಡಾ ಅಶ್ವತ್ಥನಾರಾಯಣ ಹೆಸರು ಕೇಳಿ ಬಂದಿತ್ತು. ಆತನ ಸಂಬಂಧಿಗೆ ಹೆಚ್ಚು ಅಂಕ ನೀಡಲಾಗಿತ್ತು. ಆಗ ಬಿಜೆಪಿ ಅವರ ರಾಜೀನಾಮೆ ಪಡೆದಿತ್ತಾ?

ಬಿಜೆಪಿ ಅವಧಿಯಲ್ಲಿ ಹಲವು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆಗ ಗೃಹ ಮಂತ್ರಿ ರಾಜೀನಾಮೆ ಕೊಟ್ಟದ್ದುಂಟಾ? ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಎಂದು ಜನ ಟೀಕಿಸುತ್ತಾರೆ. ಇಲ್ಲಿ ಯಾವುದೇ ಪ್ರಕರಣ ಆದಾಗ ಸರ್ಕಾರದ ವರ್ತನೆ ಹೇಗೆ ಅನ್ನುವುದು ಮುಖ್ಯ. ಸರ್ಕಾರ ತನಿಖೆಯನ್ನೇ ಮಾಡದಿದ್ದಾಗ ಹೋರಾಟ ಸರಿ. ಬಿಜೆಪಿ ಅವರ ಆಡಳಿತದಲ್ಲಿ ಬೆಳಕಿಗೆ ಬಂದ ಹಲವು ಪ್ರಕರಣಗಳಲ್ಲಿ ತನಿಖೆಯನ್ನೂ ಮಾಡಿಲ್ಲ ಅನ್ನುವುದು ನಮ್ಮ ಪ್ರಮುಖ ಆರೋಪ.

ಕಾಂಗ್ರೆಸ್ ನಾಯಕರು ಹಿಂದೂ ನಾಯಕರು ಶಾಸಕರ ಮೇಲೆ ಕೇಸ್ ಹಾಕುತ್ತಿದೆ ಅನ್ನುತ್ತಾರೆ. ಹಿಂದೂ ಕಾರ್ಯಕರ್ತರ ಮೇಲೆ ಅತೀ ಹೆಚ್ಚು ಕೇಸ್ ಆದದ್ದು ಯಡಿಯೂರಪ್ಪ ಕಾಲದಲ್ಲಿ. ಆರ್‌ ಅಶೋಕ ಗೃಹ ಮಂತ್ರಿಯಾದಾಗ ಹಿಂದೂ ನಾಯಕರ ಮೇಲೇ ಕೇಸ್ ಆಗಿದೆ. ಬಿಜೆಪಿ ಸರ್ಕಾರವೇ ಮುತಾಲಿಕ್ ರಿಗೆ ಕೆಲವು ಜಿಲ್ಲೆಗೆ ಬಾರದಂತೆ ತಡೆ ಹೇರಿದ್ದು. ಬೇಕಾದಷ್ಟು ಹಿಂದೂ ಯುವಕರ ಮೇಲೆ ಗೂಂಡಾ ಕಾಯಿದೆ ಹಾಕಿದ್ದು.

ಬಿಜೆಪಿ ಶಾಸಕರು ಮತ್ತು ಪ್ರತಿಪಕ್ಷದ ನಾಯಕರು ಪ್ರಬುದ್ಧವಾಗಿ ವರ್ತಿಸಿದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ನಿಮ್ಮನ್ನು ಮೂಲೆಗೆ ಎಸೆಯುತ್ತಾರೆ. ಮೋದಿ ಹೆಸರಿನಲ್ಲಿ ಗೆಲ್ಲುತ್ತೇವೆ ಎಂಬುವ ಭ್ರಮೆಯಿದ್ದರೆ ಅದಕ್ಕೆ ಈಗಾಗಲೇ ಮೋದಿಯವರನ್ನೂ ತಿರಸ್ಕರಿಸಿದ್ದಾರೆ. ಪ್ರತಿಪಕ್ಷ ಪ್ರಬುದ್ಧವಾಗಲಿ.

ಪೋಸ್ಟ್ ಹಂಚಿಕೊಳ್ಳಿ:

ಎಂ ಜಿ ಹೆಗಡೆ, ಮಂಗಳೂರು
ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...