ತ್ಯಾಜ್ಯದ ಶಾಖದಿಂದ ಶುದ್ಧ ವಿದ್ಯುತ್: ಆವಿಷ್ಕಾರದ ಭಾಗವಾದ ಮಂಗಳೂರಿನ ಡಾ. ಸಂಧ್ಯಾ ಶೆಣೈ

Date:

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಮುಕ್ಕಾದ ಶ್ರೀನಿವಾಸ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಮಟೀರಿಯಲ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಹಾಗೂ ಪ್ರಧಾನ ಸಂಶೋಧನಾ ವಿಜ್ಞಾನಿ ಡಾ. ಸಂಧ್ಯಾ ಶೆಣೈ ಅವರು ಅಪರೂಪದ ಆವಿಷ್ಕಾರವೊಂದರ ಭಾಗವಾಗಿದ್ದಾರೆ. ಉಷ್ಣ ವಿದ್ಯುತ್‌ (Thermoelectric) ವಸ್ತುಗಳ ಮೂಲಕ ತ್ಯಾಜ್ಯದ ಶಾಖ(Waste Heat)ವನ್ನು ಶುದ್ಧ ವಿದ್ಯುತ್‌ (Electricity) ಆಗಿ ಪರಿವರ್ತಿಸುವ ಸಂಶೋಧನೆಯ ಮೂಲಕ ಸತತ ಮೂರನೇ ಬಾರಿಗೆ ಶೇ.2 ರಷ್ಟಿರುವ ವಿಶ್ವದ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಕಳೆದ ಸೆಪ್ಟೆಂಬರ್ 19ರಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಪ್ರಮಾಣೀಕೃತ ಉಲ್ಲೇಖ ಸೂಚಕಗಳ ಆಧಾರದ ಮೇಲೆ ಸಿದ್ಧಪಡಿಸಲಾದ ವಿಜ್ಞಾನ-ವೈಡ್ ಡೇಟಾಬೇಸ್‌ನಿಂದ ಈ ಮಾಹಿತಿ ಲಭಿಸಿದೆ. ಜಗತ್ತಿನ ವಿವಿಧ ವಿಜ್ಞಾನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಸಂಶೋಧಕರಲ್ಲಿ ಅತ್ಯಧಿಕ ಪ್ರಭಾವ ಬೀರಿದ ವಿಜ್ಞಾನಿಗಳನ್ನು ಈ ಪಟ್ಟಿಯಲ್ಲಿ ಗುರುತಿಸಲಾಗುತ್ತದೆ. ಮಟೀರಿಯಲ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಡಾ. ಸಂಧ್ಯಾ ಶೆಣೈ ಅವರು ನಡೆಸಿರುವ ಉನ್ನತ ಮಟ್ಟದ ಸಂಶೋಧನೆ, ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಗೊಂಡಿರುವ ವೈಜ್ಞಾನಿಕ ಲೇಖನಗಳು ಹಾಗೂ ಅವುಗಳಿಗೆ ದೊರೆತ ಜಾಗತಿಕ ಉಲ್ಲೇಖಗಳೇ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಅವರ ಸಂಶೋಧನಾ ಕೆಲಸಗಳು ನ್ಯಾನೋ ಮಟೀರಿಯಲ್ಸ್ ಮತ್ತು ಸುಸ್ಥಿರ ವಸ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿವೆ.

Sandhya shenoy
Dr. Sandhya shenoy

ಥರ್ಮೋಇಲೆಕ್ಟ್ರಿಕ್ ಸಾಧನಗಳು ಸೀಬೆಕ್ ಪರಿಣಾಮದ ತತ್ವದ ಮೇಲೆ ಕಾರ್ಯನಿರ್ವಹಿಸುತ್ತವೆ. ಅಂದರೆ, ಒಂದು ವಸ್ತುವಿನ ಎರಡು ತುದಿಗಳ ನಡುವೆ ತಾಪಮಾನದಲ್ಲಿ ವ್ಯತ್ಯಾಸ ಇದ್ದಾಗ ವಿದ್ಯುತ್ ವೋಲ್ಟೇಜ್ ಉತ್ಪತ್ತಿಯಾಗುತ್ತದೆ. ಇದರ ವಿರುದ್ಧವಾಗಿ ಪೆಲ್ಟಿಯರ್ ಪರಿಣಾಮದಲ್ಲಿ ವಿದ್ಯುತ್ ಪ್ರವಾಹವನ್ನು ಹರಿಸಿದರೆ ತಾಪಮಾನ ವ್ಯತ್ಯಾಸ ಉಂಟಾಗುತ್ತದೆ. ಈ ತತ್ವಗಳನ್ನು ಆಧರಿಸಿ, ಕೈಗಾರಿಕೆಗಳಲ್ಲಿ ನಷ್ಟವಾಗುವ ತಾಪವನ್ನು ವಿದ್ಯುತ್ ಆಗಿ ಪರಿವರ್ತಿಸುವಲ್ಲಿ ಥರ್ಮೋಇಲೆಕ್ಟ್ರಿಕ್ ವಸ್ತುಗಳು ಬಹಳ ಮುಖ್ಯವಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಂದು ವಸ್ತು ತಾಪವನ್ನು ವಿದ್ಯುತ್ ಆಗಿ ಪರಿವರ್ತಿಸುವ ಸಾಮರ್ಥ್ಯವನ್ನು ZT ಎಂಬುದರ ಮೂಲಕ ಅಳೆಯಲಾಗುತ್ತದೆ. ZT ಮೌಲ್ಯ ಹೆಚ್ಚು ಇದ್ದರೆ ಆ ವಸ್ತುವಿನ ಕಾರ್ಯಕ್ಷಮತೆಯೂ ಹೆಚ್ಚು ಎಂದಅರ್ಥ. ಮ್ಯಾಂಗನೀಸ್ ಮಿಶ್ರಿತ ಸಿಲ್ವರ್–ಕಾಪರ್ ಟೆಲ್ಯುರೈಡ್ ಎಂಬ ಹೊಸ ವಸ್ತುವಿನಲ್ಲಿ ಈ ಅಗತ್ಯ ಗುಣಗಳ ಸಮತೋಲನವನ್ನು ಸಾಧಿಸುವಲ್ಲಿ QUT (Queensland University of Technology-Sydney) ಸಂಶೋಧನಾ ತಂಡ ಯಶಸ್ವಿಯಾಗಿದೆ. ಇದು ಭವಿಷ್ಯದಲ್ಲಿ ತಾಪ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ತಂತ್ರಜ್ಞಾನಗಳಿಗೆ ಮಹತ್ವದ ಹೆಜ್ಜೆಯಾಗಿದೆ.

ಉಷ್ಣ ವಿದ್ಯುತ್ ವಸ್ತುಗಳು (ಥರ್ಮೋಇಲೆಕ್ಟ್ರಿಕ್ ಮಟೀರಿಯಲ್ಸ್) ತ್ಯಾಜ್ಯ ಶಾಖವನ್ನು ಯಾವುದೇ ಇಂಧನ ದಹನ ಅಥವಾ ಚಲಿಸುವ ಭಾಗಗಳಿಲ್ಲದೆ ನೇರವಾಗಿ ಶುದ್ಧ ವಿದ್ಯುತ್ ಆಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿವೆ. ಕೈಗಾರಿಕೆಗಳು, ವಾಹನ ಎಂಜಿನ್‌ಗಳು, ವಿದ್ಯುತ್ ಸ್ಥಾವರಗಳು ಮತ್ತು ಗೃಹೋಪಯೋಗಿ ಸಾಧನಗಳಲ್ಲಿ ಅಪಾರ ಪ್ರಮಾಣದ ಶಾಖವು ವ್ಯರ್ಥವಾಗುತ್ತದೆ. ಈ ವ್ಯರ್ಥವಾಗುವ ಶಾಖವನ್ನೇ ಉಪಯುಕ್ತ ಶಕ್ತಿಯಾಗಿ ಪರಿವರ್ತಿಸುವುದು ಉಷ್ಣ ವಿದ್ಯುತ್ ತಂತ್ರಜ್ಞಾನಗಳ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: ಕಣ್ಣು ಕಾಣದ ಜಾಗಕ್ಕೂ ಹಾರುವ ಮೈಕ್ರೋಬೋಟ್;‌ ಜೀವರಕ್ಷಣಾ ಕ್ಷೇತ್ರದಲ್ಲಿ MITಯ ಮೈಲಿಗಲ್ಲು

ಈ ತಂತ್ರಜ್ಞಾನವು ಪರಿಣಾಮ ಬೀರಬಹುದಾದ ಪ್ರಮುಖ ಕ್ಷೇತ್ರಗಳು:

1.ಉಷ್ಣ ವಿದ್ಯುತ್ ವಸ್ತುಗಳಿಂದ ಉತ್ಪಾದಿಸುವ ವಿದ್ಯುತ್‌ನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಕೈಗಾರಿಕಾ ಘಟಕಗಳಲ್ಲಿ ಯಂತ್ರಗಳು ಮತ್ತು ಭಟ್ಟಿಗಳಿಂದ ಹೊರಬರುವ ಭಾರೀ ಪ್ರಮಾಣದ ತ್ಯಾಜ್ಯ ಶಾಖವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಿ, ಅದನ್ನೇ ಯಂತ್ರಗಳ ನಿಯಂತ್ರಣ ವ್ಯವಸ್ಥೆ, ಸೆನ್ಸರ್‌ಗಳು ಮತ್ತು ಸಹಾಯಕ ಉಪಕರಣಗಳಿಗೆ ಉಪಯೋಗಿಸಲಾಗುತ್ತದೆ. ಇದರಿಂದ ಹೊರಗಿನ ವಿದ್ಯುತ್ ಅವಲಂಬನೆ ಕಡಿಮೆಯಾಗುತ್ತದೆ.

2.ವಾಹನ ಕ್ಷೇತ್ರದಲ್ಲೂ ಈ ವಿದ್ಯುತ್ ಬಳಕೆ ಹೆಚ್ಚುತ್ತಿದೆ. ಕಾರು, ಟ್ರಕ್ ಮತ್ತು ರೈಲುಗಳ ಎಂಜಿನ್‌ಗಳಿಂದ ಹೊರಬರುವ ಶಾಖವನ್ನು ವಿದ್ಯುತ್ ಆಗಿ ಪರಿವರ್ತಿಸಿ ಬ್ಯಾಟರಿ ಚಾರ್ಜ್ ಮಾಡಲು ಮತ್ತು ಒಳಾಂಗಣ ಎಲೆಕ್ಟ್ರಾನಿಕ್ ವ್ಯವಸ್ಥೆಗಳಿಗೆ ಬಳಸಲಾಗುತ್ತದೆ. ಇದರಿಂದ ಇಂಧನ ದಕ್ಷತೆ ಹೆಚ್ಚಾಗುತ್ತದೆ.

3.ಅಂತರಿಕ್ಷ ತಂತ್ರಜ್ಞಾನದಲ್ಲಿ ಉಷ್ಣ ವಿದ್ಯುತ್ ಮಹತ್ವದ ಪಾತ್ರ ವಹಿಸುತ್ತದೆ. ಸೂರ್ಯನ ಬೆಳಕು ಕಡಿಮೆ ಇರುವ ಪ್ರದೇಶಗಳಲ್ಲಿ ಉಪಗ್ರಹಗಳು ಮತ್ತು ಬಾಹ್ಯಾಕಾಶ ಯಾನಗಳಿಗೆ ಅಗತ್ಯವಾದ ವಿದ್ಯುತ್ ಒದಗಿಸಲು ಇದನ್ನು ಬಳಸಲಾಗುತ್ತದೆ.

4.ವೈದ್ಯಕೀಯ ಕ್ಷೇತ್ರದಲ್ಲಿ ದೇಹದ ಉಷ್ಣತೆಯಿಂದ ವಿದ್ಯುತ್ ಉತ್ಪಾದಿಸಿ ಸಣ್ಣ ಸಾಧನಗಳು ಮತ್ತು ಇಂಪ್ಲಾಂಟ್‌ಗಳನ್ನು ಚಾಲನೆ ಮಾಡಲು ಪ್ರಯೋಗಗಳು ನಡೆಯುತ್ತಿವೆ.

ಇದಲ್ಲದೆ, ದೂರದ ಪ್ರದೇಶಗಳಲ್ಲಿ ಸ್ಥಾಪಿಸಿರುವ ಸೆನ್ಸರ್‌ಗಳು, ಪರಿಸರ ಮೇಲ್ವಿಚಾರಣಾ ಸಾಧನಗಳು, ತೈಲ ಮತ್ತು ಅನಿಲ ಪೈಪ್‌ಲೈನ್‌ಗಳ ಮೇಲೆ ನಿಗಾವಹಿಸುವ ವ್ಯವಸ್ಥೆಗಳು ಹಾಗೂ ಸ್ಮಾರ್ಟ್ ಧರಿಸಬಹುದಾದ ಸಾಧನಗಳಲ್ಲಿ ಉಷ್ಣ ವಿದ್ಯುತ್‌ನ ಬಳಕೆ ಹೆಚ್ಚುತ್ತಿದೆ. ತ್ಯಾಜ್ಯ ಶಾಖದಿಂದ ಉತ್ಪಾದಿಸಿದ ವಿದ್ಯುತ್ ಭವಿಷ್ಯದ ಶಕ್ತಿ ಪರಿಹಾರೋಪಾಯಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...