ಸ್ವಾತಂತ್ರ್ಯೋತ್ತರ ಭಾರತದ ಮೊದಲ ಭೀಕರ ದಲಿತ ‘ಕಿಲ್ವೇನ್ಮಣಿ ಹತ್ಯಾಕಾಂಡ’

Date:

ಭೂರಹಿತ ದಲಿತ ಕೂಲಿ ಕಾರ್ಮಿಕರಿಗೆ ಸ್ವಂತ ಭೂಮಿ ದೊರಕಿಸಿಕೊಡುವ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೊಂದುವಂತೆ ಮಾಡುವ ಅನಿವಾರ್ಯತೆಯನ್ನು ಕಿಲ್ವೇನ್ಮಣಿ ಹತ್ಯಾಕಾಂಡದಂತಹ ಘಟನೆ ಒತ್ತಿ ಹೇಳಿತು. ಆದರೆ ಆಳುವವರ ತಲೆಯ ತುಂಬಾ ಜಾತಿ ಶ್ರೇಷ್ಠತೆಯ ವಿಕಾರವೇ ತುಂಬಿರುವುದರಿಂದಾಗಿ ದಲಿತರು ಸ್ವಾವಲಂಬಿಗಳಾಗುವುದು ಯಾವತ್ತೂ ಅನಿವಾರ್ಯವಾಗಿ ನಮ್ಮ ಸಮಾಜಕ್ಕೆ ಕಂಡಿಲ್ಲ.

ಭೂರಹಿತ ದಲಿತ ಕೂಲಿ ಕಾರ್ಮಿಕರಿಗೆ ಸ್ವಂತ ಭೂಮಿ ದೊರಕಿಸಿಕೊಡುವ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೊಂದುವಂತೆ ಮಾಡುವ ಅನಿವಾರ್ಯತೆಯನ್ನು ಕಿಲ್ವೇನ್ಮಣಿ ಹತ್ಯಾಕಾಂಡದಂತಹ ಘಟನೆ ಒತ್ತಿ ಹೇಳಿತು. ಆದರೆ ಆಳುವವರ ತಲೆಯ ತುಂಬಾ ಜಾತಿ ಶ್ರೇಷ್ಠತೆಯ ವಿಕಾರವೇ ತುಂಬಿರುವುದರಿಂದಾಗಿ ದಲಿತರು ಸ್ವಾವಲಂಬಿಗಳಾಗುವುದು ಯಾವತ್ತೂ ಅನಿವಾರ್ಯವಾಗಿ ನಮ್ಮ ಸಮಾಜಕ್ಕೆ ಕಂಡಿಲ್ಲ.

1927ರ ಡಿಸೆಂಬರ್ ಇಪ್ಪತ್ತೈದರಂದು ಮಹಾಡ್ ಸತ್ಯಾಗ್ರಹದ ಸಂದರ್ಭದಲ್ಲಿ ಬಾಬಾಸಾಹೇಬರು ಹಿಂದೂ ಧರ್ಮದ ಆಧಾರವಾಗಿರುವ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟು ಹಾಕುವ ಮೂಲಕ ಶ್ರೇಣೀಕೃತ ವ್ಯವಸ್ಥೆಯನ್ನು ಎತ್ತಿ ಹಿಡಿಯುವ, ದಲಿತರು ಮತ್ತು ಮಹಿಳೆಯರ ಘನತೆಯನ್ನು ಕಳೆಯುವುದಕ್ಕೆಂದೆ ರಚನೆಯಾಗಿ ಚಾಲನೆಯಲ್ಲಿರುವ ಧರ್ಮಶಾಸ್ತ್ರಗಳಿಗೆ ಸಾಂಕೇತಿಕವಾಗಿ ಪ್ರತಿರೋಧ ವ್ಯಕ್ತಪಡಿಸಿದರು. ಅದಾದ ನಂತರ ಇದೆ ಡಿಸೆಂಬರ್ 25, 1968ರಂದು ಸ್ವಾತಂತ್ರ್ಯೋತ್ತರ ಭಾರತದ ಮೊದಲ ಭೀಕರ ದಲಿತ ಹತ್ಯಾಕಾಂಡವಾದ ‘ಕಿಲ್ವೇನ್ಮಣಿ ಹತ್ಯಾಕಾಂಡ’ ನಡೆಯಿತು.

ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಕಿಲ್ವೆನ್ಮಣಿಯಲ್ಲಿ 44 ಜನ ದಲಿತರನ್ನು ಜೀವಂತವಾಗಿ ಸುಟ್ಟು ಹತ್ಯೆ ಮಾಡಲಾಯಿತು. ಮೇಲ್ಜಾತಿಯ ಭೂಮಾಲೀಕರ ಭೂಮಿಯಲ್ಲಿ ಕೃಷಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದ ಕಿಲ್ವೇನ್ಮಣಿಯ ದಲಿತರು ತಮಗೆ ಕೊಡುತ್ತಿದ್ದ ಕೂಲಿಯನ್ನು ಹೆಚ್ಚಿಸುವಂತೆ‌ ಕೇಳಿದ್ದು ಭೂಮಾಲೀಕರು ಮತ್ತು ದಲಿತರ ನಡುವಿನ ಘರ್ಷಣೆಗೆ ಕಾರಣವಾಗುತ್ತದೆ. ಅಷ್ಟಕ್ಕೂ ಆಗ ದಲಿತರು ಹೆಚ್ಚುವರಿ ಕೂಲಿಯಾಗಿ ಕೇಳಿದ್ದು ಒಂದಷ್ಟು ಭತ್ತವನ್ನು ಮಾತ್ರ. ಆದರೆ ತಾವು ಕೊಡುವುದನ್ನು ತೆಗೆದುಕೊಂಡು ಕೆಲಸ ಮಾಡಿಕೊಂಡು ಹೋಗದೆ ದಲಿತರು ಕೂಲಿ ಹೆಚ್ಚಿಸುವಂತೆ ‘ಕೇಳಿದ್ದು’ ಭೂಮಾಲೀಕರು ದಲಿತರಿಗೆ ‘ಬುದ್ದಿ ಕಲಿಸುವುದಕ್ಕೆ’ ಪ್ರಚೋದಿಸುತ್ತದೆ‌. ರೂಢಿಯಂತೆ ಆ ಊರಿನ ಭೂಮಾಲೀಕರು ಕಿಲ್ವೇನ್ಮಣಿಯ ದಲಿತರನ್ನು ಕೂಲಿಗೆ ಕರೆಯುವುದನ್ನು ನಿಲ್ಲಿಸಿ ಬೇರೆ ಊರಿಂದ ಕೂಲಿಯಾಳುಗಳನ್ನು ಕರೆತರುವುದಕ್ಕೆ ಶುರು ಮಾಡುತ್ತಾರೆ‌. ಆಗ ಕಿಲ್ವೇನ್ಮಣಿಯ ದಲಿತರು ಸಂಘಟಿತರಾಗಿ ಪ್ರತಿಭಟನೆಗೆ ಇಳಿಯುತ್ತಾರೆ. ಈ ಘರ್ಷಣೆಯಲ್ಲಿ ಬೇರೆ ಊರಿಂದ ಕೂಲಿಯಾಳುಗಳನ್ನು ಕರೆತರುತ್ತಿದ್ದ ಕೂಲಿಕಾರ್ಮಿಕರ ಏಜೆಂಟನೊಬ್ಬನು ಸಾವನ್ನಪ್ಪುತ್ತಾನೆ‌. ದಲಿತರು ಹೆಚ್ಚುವರಿ ಕೂಲಿ ಕೇಳಿದ್ದಷ್ಟೆ ಅಲ್ಲದೆ ತಮ್ಮ ವಿರುದ್ಧ ನಿಲ್ಲುವುದಕ್ಕೆ ಮುಂದಾಗಿದ್ದನ್ನು ನೋಡಿ ಕೆರಳುವ ಮೇಲ್ಜಾತಿಯ ಜನ ದಲಿತರಿಗೆ ತಕ್ಕ ಪಾಠ ಕಲಿಸುವುದಕ್ಕೆ ಮುಂದಾಗುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭೂಮಾಲೀಕರ ಕಡೆಯ ಮೇಲ್ಜಾತಿಯ ನೂರಾರು ಜನ 1968 ರ ಕ್ರಿಸ್‌ಮಸ್ ರಾತ್ರಿ ಕಿಲ್ವೇನ್ಮಣಿಯ ದಲಿತ ಕೇರಿಗೆ ನುಗ್ಗಿ ದಾಂದಲೆ ಶುರು ಮಾಡುತ್ತಾರೆ. ಆ ದಲಿತ ಕೇರಿಯಿಂದ ತಪ್ಪಿಸಿಕೊಂಡು ಹೋಗದಂತೆ ಅಲ್ಲಿದ್ದ ಎಲ್ಲ ದಾರಿಗಳನ್ನು ಬಂದು ಮಾಡಿ ದಲಿತರ ಮೇಲೆ ಹಲ್ಲೆ ಮಾಡುವುದಕ್ಕೆ ಶುರು ಮಾಡುತ್ತಾರೆ. ಮೇಲ್ಜಾತಿಯ ಗೂಂಡಾಗಳ ಹಲ್ಲೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೇರಿಯಲ್ಲಿದ್ದ ಹೆಂಗಸರು, ಮಕ್ಕಳು ಮತ್ತು ಮುದುಕರು ತಮ್ಮ ಗುಡಿಸಲುಗಳ ಒಳಕ್ಕೆ ಹೋಗಿ ಬಾಗಿಲು ಮುಚ್ಚಿಕೊಳ್ಳುತ್ತಾರೆ. ಆಗ ಮೇಲ್ಜಾತಿಯ ಜನ ಆ ಗುಡಿಸಲುಗಳಿಗೆ ಬೆಂಕಿ ಹಚ್ಚಿ ನಲವತ್ತನಾಲ್ಕು ಮಂದಿ ದಲಿತರನ್ನು(ಅವರಲ್ಲಿ ಹೆಚ್ವಿನವರು ಮಹಿಳೆಯರು, ಮಕ್ಕಳು ಮತ್ತು ಒಂದಿಬ್ಬರು ವಯಸ್ಸಾದವರು) ಸಜೀವವಾಗಿ ಸುಟ್ಟುಬಿಡುತ್ತಾರೆ. ಜಾತಿ ವಿಕಾರಕ್ಕೆ ನಲವತ್ತನಾಲ್ಕು ಜನ ದಲಿತರು ತಮ್ಮ‌ಪ್ರಾಣಗಳನ್ನು ಕಳೆದುಕೊಳ್ಳುತ್ತಾರೆ.

ಅಲ್ಲಿ ಮೇಲ್ಜಾತಿಯ ಜನ ರೊಚ್ಚಿಗೆದ್ದಿದ್ದು ಕೇವಲ ದಲಿತರು ಕೂಲಿ ಹೆಚ್ಚಿಸಿ ಅಂತ ಕೇಳಿದ್ದಕ್ಕಲ್ಲ.  ಪರಂಪರಾತವಾಗಿ ವಿಧೇಯತೆಯಿಂದ ಬದುಕುತ್ತಿದ್ದವರು ಎದರು ನಿಂತು ಮಾತಾಡುವ ಧೈರ್ಯ ಮಾಡಿದ್ದಕ್ಕಾಗಿ. ಇದು ಕೇವಲ ಭೂಮಾಲೀಕರು ಮತ್ತು ಕೂಲಿಕಾರ್ಮಿಕರ ನಡುವೆ ತಮ್ಮ ದುಡಿಮೆಗೆ ತಕ್ಕ ಕೂಲಿಗಾಗಿ ನಡೆದ ವರ್ಗ ಹೋರಾಟ ಮಾತ್ರವಲ್ಲ. ಸಾಂಪ್ರದಾಯಿಕ ಸಮಾಜದಲ್ಲಿ ದಲಿತರು ಸ್ವಲ್ಪ ಸೆಟೆದು ನಿಲ್ಲುವುದಕ್ಕೆ ಶುರು ಮಾಡಿದರೆ ಕೆರಳುವ ಜಾತಿವಿಕಾರದ ವಿರುದ್ಧದ ಹೋರಾಟ.

ಹದಿನೈದು ವರ್ಷಗಳ ಕಾಲ ಕೋರ್ಟಿನಲ್ಲಿ ಕೇಸು ನಡೆಯುತ್ತದೆ. ಯಥಾಪ್ರಕಾರ ದಲಿತರ ಮೇಲೆ ದೌರ್ಜನ್ಯದ ಪ್ರಕರಣಗಳು ನಡೆದಾಗ ಆಗುವಂತೆ ಸಾಕ್ಷಿಗಳ ಕೊರತೆ, ಆ ಹತ್ಯಾಕಾಂಡಕ್ಕೆ ಕಾರಣ ಜಾತಿ ಅಲ್ಲ ಅನ್ನುವ ವಾದ, ಪತ್ರಿಕೆಗಳ ನಿರ್ಲಕ್ಷ್ಯದ ಕಾರಣಗಳಿಂದಾಗಿ ಹತ್ಯಾಕಾಂಡದ ಆರೋಪಿಗಳಿಗೆ ಅವರು ಎಸಗಿದ ಕ್ರೌರ್ಯಕ್ಕೆ ತಕ್ಕ ಶಿಕ್ಷೆಯೂ ಆಗುವುದಿಲ್ಲ, ಹತ್ಯಾಕಾಂಡದಿಂದ ಸಂತ್ರಸ್ತರಾದವರಿಗೆ ಸಿಗಬೇಕಾದ ಸೂಕ್ತ ನ್ಯಾಯವೂ ಸಿಗುವುದಿಲ್ಲ.

ದಲಿತ ಚಳುವಳಿ ಇನ್ನೂ ಹುಟ್ಟಿರದ ಆ ಕಾಲದಲ್ಲಿ ಸಿಪಿಎಂ ಕಿಲ್ವೇನ್ಮಣಿ ಹತ್ಯಾಕಾಂಡವನ್ನು ಖಂಡಿಸಿ ದಲಿತರ ಪರ ಹೋರಾಟವನ್ನು ರೂಪಿಸಿತ್ತು. ಹತ್ಯಾಕಾಂಡದ ನಂತರದ ಘಟನಾವಳಿಗಳನ್ನು ಹೋರಾಟಗಾರ್ತಿ ಕಾಮ್ರೆಡ್ ಮೈಥಿಲಿ ಸಿವರಾಮನ್‌ ದಾಖಲು ಮಾಡಿದ್ದಾರೆ.

ಇದನ್ನು ಓದಿದ್ದೀರಾ?:‘ಮಾದಿಗ ಮುನ್ನಡೆ’ ಹೆಸರಲ್ಲಿ ’ಮನುವಾದ ಮುನ್ನಡೆ’; ಆರ್‌ಎಸ್‌ಎಸ್ ಹುನ್ನಾರ ಅರಿಯುವರೇ ದಲಿತರು?

ಬ್ರಾಹ್ಮಣ್ಯದ ಅಪಾಯಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ ದ್ರಾವಿಡ ಚಳುವಳಿಯ ತವರು ತಮಿಳುನಾಡಿನಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಮೊದಲ ಭೀಕರ ಹತ್ಯಾಕಾಂಡ ನಡೆದುಹೋಯಿತು.

ಭೂರಹಿತ ದಲಿತ ಕೂಲಿ ಕಾರ್ಮಿಕರಿಗೆ ಸ್ವಂತ ಭೂಮಿ ದೊರಕಿಸಿಕೊಡುವ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೊಂದುವಂತೆ ಮಾಡುವ ಅನಿವಾರ್ಯತೆಯನ್ನು ಕಿಲ್ವೇನ್ಮಣಿ ಹತ್ಯಾಕಾಂಡದಂತಹ ಘಟನೆ ಒತ್ತಿ ಹೇಳಿತು. ಆದರೆ ಆಳುವವರ ತಲೆಯ ತುಂಬಾ ಜಾತಿ ಶ್ರೇಷ್ಠತೆಯ ವಿಕಾರವೇ ತುಂಬಿರುವುದರಿಂದಾಗಿ ದಲಿತರು ಸ್ವಾವಲಂಬಿಗಳಾಗುವುದು ಯಾವತ್ತೂ ಅನಿವಾರ್ಯವಾಗಿ ನಮ್ಮ ಸಮಾಜಕ್ಕೆ ಕಂಡಿಲ್ಲ. ಹಾಗಾಗಿಯೇ ಕಿಲ್ವೇನ್ಮಣಿ, ಕರಂಚೇಡು, ಚಂಡೂರು, ಬೆಲ್ಚಿ, ಖೈರ್ಲಾಂಜಿ, ಕಂಬಾಲಪಲ್ಲಿ, ನಾಗಮಾಲಪಲ್ಲಿ, ಹಥ್ರಾಸ್ ಹತ್ಯಾಕಾಂಡಗಳು ಒಂದಾದಮೇಲೊಂದರಂತೆ ನಡೆಯುತ್ತಲೇ ಇವೆ… ಈ ನೆಲದ ಮೇಲೆ ದಲಿತರ ರಕ್ತ ಹರಿಯುತ್ತಲೇ ಇದೆ.

We never forget, we never forgive.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...