ಅನಂತಕುಮಾರ್‌ ಹೆಗಡೆ ಇನ್ನೂ ರಾಜಮಹಾರಾಜರ ಕಾಲದಲ್ಲಿ ಇದ್ದಾರಾ?

Date:

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಬರುವ ಮೊದಲು ರಾಜ ಮಹಾರಾಜರು ಯುದ್ಧ ‌ಮಾಡಿ ಅನೇಕರ ರುಂಡ ಕತ್ತರಿಸುತ್ತಾ ಇದ್ದರು. ನೂರಾರು ವರ್ಷಗಳ ಸುದೀರ್ಘ ಹೋರಾಟದ ಬಳಿಕ ಇವತ್ತು ಪ್ರಜಾಪ್ರಭುತ್ವ ಇಷ್ಟು ಗಟ್ಟಿ ಆಗಿ ನಿಂತಿರುವಾಗ ಈ ಅನಂತ ಕುಮಾರ್‌ ಹೆಗಡೆ ಸದಾ ಹೊಡಿ ಬಡಿ ಮಾತುಗಳನ್ನೇ ಆಡುವುದು ನೋಡಿದರೆ ಅವರು ಇನ್ನೂ ಸಾವಿರ ವರ್ಷಗಳ ಹಿಂದಿನ ವಿಷಯಗಳನ್ನು ನಿನ್ನೆ ಮೊನ್ನೆ ನಡೆದಂತೆ ಹೇಳಿ ಜನರನ್ನು ಕೆರಳಿಸಿ ಚುನಾವಣೆಯಲ್ಲಿ ಗೆಲ್ಲುವ ವಿಚಾರದಿಂದ ಹೊರ ಬಂದಿಲ್ಲ ಅನಿಸುತ್ತದೆ.

ಅವರು ಇಂದು ಆಡಿದ ಮಾತುಗಳು ಕಾನೂನಿನ ಪ್ರಕಾರ ದ್ವೇಷ ಭಾಷಣ, ಅದರಿಂದ ಅವರು ಚುನಾವಣೆ ಗೆಲ್ಲಬಹುದು, ಆದರೆ ಸಮಾಜದ ಮೇಲೆ ಆಗುವ ದುಷ್ಪರಿಣಾಮವನ್ನು ಅವರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಯಾವುದೋ ಕಾಲಘಟ್ಟದಲ್ಲಿ ಬಾಬರ ಮಾಡಿದ ಕೆಲಸಕ್ಕೆ ನಮ್ಮ ನೆರೆಮನೆಯವರನ್ನು ನಾವು ದ್ವೇಷಿಸಬೇಕೆಂಬ ಪ್ರಚೋದನೆಯನ್ನು ಈ ಹೆಗಡೆ ನೀಡುತ್ತಾ ಇದ್ದಾರೆ. ಇವರೇನು ಸಮಸ್ತ ಹಿಂದೂಗಳ ಮನಸಿನ ಮಾತನ್ನಾಡುವುದಿಲ್ಲ. ಹಿಂದೂಗಳು ಎಲ್ಲರೂ ಸೇರಿ ಇವರಿಗೆ ಯಾವ ವಿಷಯದ ಗುತ್ತಿಗೆಯನ್ನೂ ನೀಡಿಲ್ಲ. ಸಾವಿರ ವರ್ಷಗಳ ಸೇಡು ತೀರಿಸಲು ಹೆಗಡೆಯವರನ್ನು ಸೇರಿಸಿ ಈಗ ಇದ್ದವರು ಆಗ ಯಾರೂ ಭೂಮಿ ಮೇಲೆ ಇರಲಿಲ್ಲ. ಇವರು ಯಾವ ಸೇಡು ಯಾರ ವಿರುದ್ಧ ತೀರಿಸುವುದು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಲ್ಲಾ ಮಸೀದಿ ಒಡೆಯಲಿಕ್ಕೆ ಇವರು ಹೊರಟರೆ ಸರಕಾರ ಏನು ಕಣ್ಣು ಮುಚ್ಚಿ ಕೂರುತ್ತದಾ? ಸಂಸದ ಆದರೇನು ಕಾನೂನಿಗಿಂತ ಮೇಲಾ ಇವರು? ದುರಾದೃಷ್ಟಕರ ಏನೆಂದರೆ ಇವರ ಮಾತನ್ನು ಕೇಳಿ ಕೆಲವು ಯುವಕರು ಮುಸಲ್ಮಾನರನ್ನು ದ್ವೇಷಿಸುತ್ತಾ ಮಸೀದಿಗಳಿಗೆ ಕಲ್ಲು ಬಿಸಾಡಿ ಜೈಲು ಪಾಲಾಗುತ್ತಾರೆ.

ಹೆಗಡೆಯವರಿಗೆ ಉತ್ತರ ಕನ್ನಡದಲ್ಲಿ ತಾನು ಮಾಡಿದ ಒಂದೇ ಒಂದು ಸಾಧನೆ ಹೇಳಿಕೊಳ್ಳಲಿಕ್ಕೆ ಇಲ್ಲ. ಇಂತಹ ಉದ್ರೇಕಕಾರಿ ಭಾಷಣ‌ ಮಾಡಿದ್ದಕ್ಕೆ ಕರ್ನಾಟಕ ಸರಕಾರ ತಕ್ಷಣ ಇವರನ್ನು‌ ಬಂಧಿಸಬೇಕು ಹಾಗೂ ಯುವಜನರ ಭವಿಷ್ಯವನ್ನೂ ಕಾನೂನು ಸುವ್ಯವಸ್ಥೆಯನ್ನೂ ಸಾಮಾಜಿಕ ಸೌಹಾರ್ದತೆಯನ್ನೂ ಕಾಪಾಡಬೇಕು.

WhatsApp Image 2025 11 17 at 3.16.03 PM
ಅಮೃತ್‌ ಶೆಣೈ
+ posts

ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಪೋಸ್ಟ್ ಹಂಚಿಕೊಳ್ಳಿ:

ಅಮೃತ್‌ ಶೆಣೈ
ಅಮೃತ್‌ ಶೆಣೈ
ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...