ರೈತರಿಗೆ ಲಾಭ ಸಿಗಬಾರದೆನ್ನುವುದು ನಮ್ಮ ಹವಣಿಕೆಯೇ? ಅಷ್ಟಕ್ಕೂ ನಾವು ಯಾರ ವಿರುದ್ಧ?

Date:

ಟೊಮೆಟೊ ಬೆಳೆದ ರೈತ ತಮಗೆ ಸರಿಯಾದ ಬೆಲೆ ಸಿಗದೆ ಟೊಮೆಟೊವನ್ನು ರಸ್ತೆಯಲ್ಲಿ ಚೆಲ್ಲಿ ಗೋಳಾಡಿದಾಗ ಯಾಕೆ ನಮ್ಮೊಳಗಿನ ಎಕಾನಮಿಸ್ಟು ಮಿಸುಕಾಡಿರಲಿಲ್ಲ. ಬಂಡವಾಳಿಗರ, ಉದ್ದಿಮೆದಾರರ ಕೋಟ್ಯಂತರ ಸಾಲ ಮನ್ನಾ ಮಾಡಿದಾಗ ಸುಮ್ಮನಿರುವುದೇಕೆ? ನಾವು ರೈತನಿಗೆ ಲಾಭ ಎಂದಾಕ್ಷಣ ಗೊಣಗುವುದೇಕೆ? ಅಷ್ಟಕ್ಕೂ ನಾವು ಯಾರ ವಿರುದ್ಧ?

ಒಂದುಕ್ಷಣ ಯೋಚಿಸಿ ನೋಡಿ. ಟೊಮೆಟೊ ಬೆಲೆ ಹೆಚ್ಚಾಗಿದೆ ಅಂತ ನಾವೆಲ್ಲ ಬೊಬ್ಬೆ ಹಾಕುತ್ತಿದ್ದೇವೆ. ಈರುಳ್ಳಿ ಬೆಲೆ ಹೆಚ್ಚಾದಾಗಲೂ ಇದೇ ರೀತಿ ಬೊಬ್ಬೆ ಹಾಕಿದ್ದೆವು. ಮತ್ತು ಮುಂದೆಯೂ ಹಾಕುತ್ತೇವೆ. ಆದರೆ ಅಡುಗೆ ಎಣ್ಣೆ ಬೆಲೆ ಹೆಚ್ಚಾದಾಗ, ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾದಾಗ, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾದಾಗ ಇಷ್ಟೇ ತೀವ್ರವಾಗಿ ಬೊಬ್ಬೆ ಹಾಕುತ್ತೇವಾ? ಅವು ನಿರಾತಂಕವಾಗಿ ನಮ್ಮ ಸುಲಿಗೆ ಮಾಡುತ್ತಿದ್ದರೂ, ಗೊಣಗಿಕೊಂಡು ಜೇಬು ಖಾಲಿ ಮಾಡಿಕೊಳ್ಳುತ್ತಲೇ ಇರುತ್ತೇವೆ.

ಯಾಕೆಂದರೆ ಅವುಗಳು ಕೋಟ್ಯಧಿಪತಿಗಳ ಉತ್ಪನ್ನಗಳು. ಯಾವ ರೈತನೂ ತನ್ನ ಹೊಲದಲ್ಲಿ ಬೆಳೆಯಲಾರದ ವಸ್ತುಗಳು. ಅದೇ, ರೈತ ಬೆಳೆಯುವ ಟೊಮೆಟೊ, ಈರುಳ್ಳಿ, ತರಕಾರಿ ಬೆಲೆ ಹೆಚ್ಚಾದಾಕ್ಷಣ ಪ್ರಪಂಚವೇ ಮುಳುಗಿ ಹೋಗುವಂತೆ ವರ್ತಿಸುತ್ತೇವೆ. ಯಾಕೆ? ಬಂಡವಾಳಿಗರಿಗೆ ಲಾಭ ಸಿಕ್ಕಷ್ಟು ಸಲೀಸಾಗಿ ನಮ್ಮ ರೈತರಿಗೆ ಯಾವತ್ತೂ ಲಾಭ ಸಿಗಬಾರದೆನ್ನುವುದು ನಮ್ಮ ಹವಣಿಕೆಯೇ?

ಆ ರೈತನ ಸಾಲ ಮನ್ನಾ ಮಾಡಿದರೆ ದೇಶದ ಹಣಕಾಸು ವ್ಯವಸ್ಥೆ ಹದಗೆಟ್ಟು ಹೋಗುತ್ತದೆ ಎನ್ನುತ್ತೇವೆ, ಬಂಡವಾಳಿಗರ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುತ್ತೇವೆ! ರೈತ ಮತ್ತು ಅವನ ಕುಟುಂಬಕ್ಕೆ ಏನಾದರು ಒಂದಿಷ್ಟು ಅನುಕೂಲ ಮಾಡಿಕೊಡಲು ಮುಂದಾದರೆ, ‘ಬಿಟ್ಟಿ ಭಾಗ್ಯಗಳು’ ಎಂದು ಲೇವಡಿ ಮಾಡುತ್ತೇವೆ, ಅವುಗಳಿಂದ ಆರ್ಥಿಕತೆ ನೆಲ ಕಚ್ಚುತ್ತೆ ಎಂದು ಎಕನಾಮಿಸ್ಟುಗಳಾಗುತ್ತೇವೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಷ್ಟೋ ಸಲ ಇದೇ ಟೊಮೆಟೊ ಬೆಳೆದ ರೈತ ತಮಗೆ ಸರಿಯಾದ ಬೆಲೆ ಸಿಗದೆ ಟೊಮೆಟೊವನ್ನು ರಸ್ತೆಯಲ್ಲಿ ಚೆಲ್ಲಿ ಗೋಳಾಡಿದ ದೃಶ್ಯಗಳನ್ನು ನಾವು ಕಂಡಿದ್ದೇವೆ. ಆಗ ಯಾಕೆ ನಮ್ಮೊಳಗಿನ ಎಕಾನಮಿಸ್ಟು ಮಿಸುಕಾಡಿರಲಿಲ್ಲ. ನಾವೆಲ್ಲ ಹೊಟ್ಟೆಗೆ ತಿನ್ನುವುದು ಅನ್ನವೇ ಆಗಿರುವುದರಿಂದ, ಇಲ್ಲಿ ಪಕ್ಷ ರಾಜಕಾರಣವನ್ನು ಪಕ್ಕಕ್ಕಿಡೋಣ. ಯಾರೋ ಒಬ್ಬರಿಗಾಗಿ, ಅಥವಾ ಒಂದು ಪಕ್ಷಕ್ಕಾಗಿ ಪೆಟ್ರೋಲ್-ಡೀಸೆಲ್ ರೇಟು ನೂರಲ್ಲ, ಇನ್ನೂರು, ಐನೂರು ರೂಪಾಯಿಯಾದ್ರೂ ನಡೆದುಕೊಂಡು ಹೋಗಿ ಓಟು ಹಾಕ್ತೀವಿ ಅನ್ನುವ ನಾವು; ಕಷ್ಟಪಟ್ಟು ಬೆಳೆದ ರೈತನಿಗೆ ತುಸು ಲಾಭ ಸಿಗುತ್ತದೆ ಅನ್ನುವುದಾದರೆ ಟೊಮೆಟೊ ಬೆಲೆಯನ್ನೂ ಸ್ವಲ್ಪ ಕಾಲ ಸಹಿಸಿಕೊಳ್ಳುತ್ತೇವೆ ಎಂದೇಕೆ ಹೇಳುವುದಿಲ್ಲ? ಇಂತಹ ನಮ್ಮ ‘ಕನ್‌ಫ್ಯೂಸ್ಡ್ ಪೊಲಿಟಿಕಲ್ ಆಟಿಟ್ಯೂಡ್‌ನಿಂದ ಲಾಭ ಆಗುತ್ತಿರುವುದು ಬಂಡವಾಳಿಗರಿಗೆ, ಲುಕ್ಸಾನು ರೈತರಿಗೆ!

ಇದನ್ನು ಓದಿದ್ದೀರಾ?: ನೆಲೆ ಮತ್ತು ನೆಲದ ಒಡೆತನವಿಲ್ಲದ ದಮನಿತ ಅಲೆಮಾರಿ, ಆದಿವಾಸಿಗಳ ಬದುಕಿಗೆ ಗ್ಯಾರಂಟಿ ಸಿಗುವುದು ಯಾವಾಗ..?

ಇಲ್ಲಿ ಸಂಘರ್ಷ ಇರುವುದು ಯಾವ್ಯಾವುದೋ ಪೊಲಿಟಿಕಲ್ ಪಾರ್ಟಿಗಳು ಹಾಗೂ ಆ ಪಾರ್ಟಿಗಳನ್ನು ಸಮರ್ಥಿಸಿಕೊಳ್ಳುವ ಸೋಶಿಯಲ್ ಮೀಡಿಯಾದ ಆಕ್ಟಿವಿಸ್ಟುಗಳ ನಡುವೆ ಅಲ್ಲ; ಕೇವಲ, ಬಂಡವಾಳಿಗರು ಹಾಗೂ ರೈತರ ನಡುವೆ! ಸರ್ಕಾರದಿಂದ ಸಾಕಷ್ಟು ರಿಯಾಯಿತಿ ಪಡೆದು ತಮ್ಮ ಕಂಪನಿಯನ್ನೋ, ಕಾರ್ಖಾನೆಯನ್ನೋ ನಿರ್ಮಿಸಿಕೊಂಡ ಬಂಡವಾಳಿಗರು ತಮ್ಮ ಉತ್ಪನ್ನಗಳಿಗೆ ಕೊಂಚ ತೊಂದರೆಯಾದರೂ, ತಮಗೆ ಎಳ್ಳಷ್ಟು ಕಿರಿಕಿರಿಯಾದರೂ ಸರ್ಕಾರದ ಕೊರಳಪಟ್ಟಿ ಹಿಡಿದು ಸರಿ ಮಾಡಿಸಿಕೊಳ್ಳುತ್ತಾರೆ, ನಿಮ್ಮ ರಾಜ್ಯ ಅಥವಾ ದೇಶದಿಂದ ಹೊರಹೋಗುತ್ತೇವೆ ಅಂತ ಬೆದರಿಕೆ ಹಾಕುತ್ತಾರೆ. ಆಗ ಸರ್ಕಾರ ಯಾವ ಮುಲಾಜೂ ಇಲ್ಲದೆ ನಮ್ಮ ಜೇಬುಗಳಿಗೆ ನಿರಾತಂಕವಾಗಿ ಕೈತೂರಿಸಿ ಅವರನ್ನು ಸಂತೈಸುತ್ತದೆ.

ಆದರೆ ಅದೇ ರೈತನಿಗೆ ತುಸುವೇ ಬೆಲೆ ಕೈಗತ್ತುತ್ತದೆ ಎನ್ನುವಾಗ ನಾವು ಸರ್ಕಾರದ ಕೊರಳಪಟ್ಟಿಗೆ ಕೈಹಾಕುತ್ತೇವೆ, ರೈತನಿಗೆ ಲುಕ್ಸಾನು ಮಾಡಿ ನಿಟ್ಟುಸಿರು ಬಿಡುತ್ತೇವೆ. ಈಗಲೂ ಅಷ್ಟೇ, ಪೆಟ್ರೋಲ್-ಡೀಸೆಲ್-ಗ್ಯಾಸ್ ಏರಿಕೆಗಳ ವಿರುದ್ಧದ ನಮ್ಮ ಗೊಣಗಾಟಕ್ಕೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಆರಾಮಾಗಿದ್ದ ಸರ್ಕಾರಗಳು, ಟೊಮೆಟೊ ವಿರುದ್ಧದ ನಮ್ಮ ಆಕ್ರೋಶಕ್ಕೆ ತಕ್ಷಣವೇ ಕಾರ್ಯತತ್ಪರವಾಗಿ ಏನೋ ಒಂದು ಸಾಹಸ ಮಾಡಿ, ರೇಟನ್ನು ಇಳಿಸಿ ಹಾಕುತ್ತವೆ. ಬೆಳೆದ ರೈತ ಮುಳುಗಿ ಹೋಗುತ್ತಾನೆ.

ಅದೃಷ್ಟ ಚೆನ್ನಾಗಿದ್ದ ಪಕ್ಕದ ಹೊಲದ ರೈತನ ಇಳುವರಿ ಈ ಅವಧಿಯಲ್ಲೇ ಬಂದಿದ್ದರಿಂದ ಕೈಗೆ ಒಂದಿಷ್ಟು ಕಾಸು ಮಾಡಿಕೊಂಡಿರುತ್ತಾನೆ, ಅವನನ್ನು ಕಂಡು ತನಗೂ ಈ ಸಲ ಒಂದಷ್ಟು ಕಾಸು ಕೈಗತ್ತಬಹುದು, ಮಗಳ ಮದುವೆಗೋ, ಮಗನ ಓದಿಗೋ ಕೊಂಚ ನೆರವಾಗಬಹುದು ಎಂಬ ಆಸೆಯಿಂದ ಮತ್ತೋರ್ವ ರೈತ ತನ್ನ ಫಸಲು ಕಟಾವು ಮಾಡುವ ಹೊತ್ತಿಗೆ, ನಮ್ಮ ಈ ಬೊಬ್ಬೆಯಿಂದ ರೇಟು ದಿಢೀರನೆ ಬಿದ್ದು ಹೋಗಿರುತ್ತೆ. ಆಗ ಆ ರೈತನಿಗಾಗುವ ಹತಾಶೆ ಎಂಥದ್ದು ಅನ್ನೋದರ ಅಂದಾಜು ನಮಗಿದೆಯಾ? ಈ ಲಾಟರಿ ಆಟದಲ್ಲಿ, ಅವನು ಆತ್ಮಹತ್ಯೆ ಮಾಡಿಕೊಳ್ಳದೇ ಇರಲು ಸಾಧ್ಯವಾಗುವುದಾದರೂ ಹೇಗೆ?

ಈಗ, ತಿನ್ನುವ ಅನ್ನದ ತುತ್ತು ನಮ್ಮ ಕೈಯಲ್ಲಿದೆ ಎಂದುಕೊಂಡು ಈ ಪ್ರಶ್ನೆ ಕೇಳಿಕೊಳ್ಳೋಣ, ನಿಜಕ್ಕೂ ನಾವು ಇರುವುದು ಯಾರ ವಿರುದ್ಧ?

ಪೋಸ್ಟ್ ಹಂಚಿಕೊಳ್ಳಿ:

ಗಿರೀಶ್ ತಾಳಿಕಟ್ಟೆ
ಗಿರೀಶ್ ತಾಳಿಕಟ್ಟೆ
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...