ನ್ಯಾ. ಕುನ್ಹಾ ವಿರುದ್ಧ ಮಾಜಿ ಸಚಿವ ಸುಧಾಕರ್‌ ಆರೋಪ ಸಲ್ಲದು : ಜಸ್ಟಿಸ್ ಗೋಪಾಲಗೌಡ

Date:

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ಪಿಎಸ್‌ಐ ಹಗರಣ, ಕೋವಿಡ್‌ ಸ್ಕ್ಯಾಮ್, 40% ಕಮಿಷನ್‌ ಸಂಬಂಧ ನ್ಯಾಯಾಂಗ ತನಿಖೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆರಂಭಿಸಿದೆ. ತನಿಖಾ ಸರಣಿ ಶುರುವಾದ ಬೆನ್ನಲ್ಲೇ ಮಾಜಿ ಸಚಿವ ಡಾ.ಕೆ.ಸುಧಾಕರ್‌‌ ಅಪಸ್ವರ ಎತ್ತಿದ್ದು, ತನಿಖೆಗೆ ನೇಮಿಸಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ವಿರುದ್ಧವೇ ಆರೋಪಗಳನ್ನು ಮಾಡಿದ್ದಾರೆ.

ಪಿಎಸ್‌ಐ ಹಗರಣ ಸಂಬಂಧ ಜಸ್ಟಿಸ್ ಬಿ.ವೀರಪ್ಪ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ, 40% ಕಮಿಷನ್ ಪಡೆಯಲಾಗಿದೆ ಎಂದು ಗುತ್ತಿಗೆದಾರರು ಆರೋಪಿಸಿರುವ ಸಂಬಂಧದ ತನಿಖೆಗೆ ಜಸ್ಟಿಸ್‌ ಎಚ್‌.ಎನ್.ನಾಗಮೋಹನದಾಸ್ ನೇತೃತ್ವದಲ್ಲಿ ಸಮಿತಿ, ಕೋವಿಡ್ ಅವಧಿಯಲ್ಲಿ ನಡೆದಿವೆ ಎನ್ನಲಾದ ಹಗರಣಗಳ ತನಿಖೆಗೆ ಜಸ್ಟೀಸ್‌ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿ ಸರ್ಕಾರ ಆದೇಶ ಮಾಡಿದೆ.

ಕೋವಿಡ್‌ ಹಗರಣದ ತನಿಖೆ ಮುನ್ನೆಲೆಗೆ ಬಂದ ಮೇಲೆ ಸುದ್ದಿಯಲ್ಲಿರುವ ಕೆ.ಸುಧಾಕರ್‌, “ನೀವು (ಕಾಂಗ್ರೆಸ್‌ನವರು) ಪಕ್ಷಪಾತಿ ನ್ಯಾಯಾಮೂರ್ತಿಗಳನ್ನು ಏಕೆ ಆಯ್ಕೆ ಮಾಡುತ್ತಿದ್ದೀರಿ? ಕಾಂಗ್ರೆಸ್‌ನವರು ಲೋಕಸಭೆ ಚುನಾವಣೆ ಬರುವ ವೇಳೆಗೆ ವರದಿಯನ್ನು ಪಡೆಯಲು ಬಯಸಿದ್ದಾರೆ, ಬಿಜೆಪಿ ಸರ್ಕಾರ ಭ್ರಷ್ಟಗೊಂಡಿತ್ತು ಎಂದು ತೋರಿಸಲು ಎಫ್‌ಐಆರ್‌ ದಾಖಲಿಸುತ್ತಾರೆ” ಎಂದು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನ್ಯಾಯಮೂರ್ತಿಗಳ ಕುರಿತು ಸುಧಾಕರ್‌ ನೀಡಿರುವ ಹೇಳಿಕೆಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಖಂಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಆರಂಭಿಸಿರುವ ತನಿಖೆಗಳ ಸಂಬಂಧ ’ಈದಿನ.ಕಾಂ’ ಜೊತೆ ಮಾತನಾಡಿದ ಅವರು, “ಸುಧಾಕರ್‌ ಅವರು ಈ ರೀತಿಯ ಆರೋಪಗಳನ್ನು ಮಾಡುವುದು ಸಲ್ಲದು. ಮಾಜಿ ಸಚಿವರ ಹೇಳಿಕೆಯು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಸುದ್ದಿಯಲ್ಲಿ ನ್ಯಾಯಮೂರ್ತಿ ಜಾನ್‌ ಕುನ್ಹಾ ಅವರ ಫೋಟೋವನ್ನು ಬಳಸಲಾಗಿದೆ. ಜಾನ್‌ ಕುನ್ಹಾ ಅವರು ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲೇ ಗಮನ ಸೆಳೆದಿರುವ ಪ್ರಾಮಾಣಿಕ ನ್ಯಾಯಮೂರ್ತಿ. ಭ್ರಷ್ಟಾಚಾರ ಹಗರಣ ಸಂಬಂಧ ತಮಿಳುನಾಡಿನ ಜಯಲಲಿತಾ ಅವರಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಮೂರ್ತಿ ಜಾನ್ ಕುನ್ಹಾ. ಅವರು ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ. ಕೋವಿಡ್‌ ಹಗರಣಗಳ ತನಿಖೆಗೆ ಕುನ್ಹಾ ಅಂಥವರ ನೇತೃತ್ವದಲ್ಲಿ ಆಯೋಗವನ್ನು ಮಾಡಿದಾಗ ಪಕ್ಷಪಾತಿ ನ್ಯಾಯಮೂರ್ತಿಗಳನ್ನು ನೇಮಿಸುತ್ತಿದ್ದೀರಿ ಎಂದು ಆರೋಪಗಳನ್ನು ಮಾಡುವುದು ಸಲ್ಲದು. ಇದಕ್ಕೆ ಆಧಾರವೇನಿದೆ?” ಎಂದು ಪ್ರಶ್ನಿಸಿದರು.

“ತನಿಖಾ ಆಯೋಗಗಳನ್ನು ರಚಿಸಿರುವುದರಿಂದಲೇ ಭಯಭೀತರಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಅನಿಸುತ್ತಿದೆ. ಇಂತಹ ಹೇಳಿಕೆಗಳಿಂದ ಎದೆಗುಂದದೆ ನ್ಯಾಯಮೂರ್ತಿಗಳು ಮುನ್ನುಗ್ಗಬೇಕು” ಎಂದು ತಿಳಿಸಿದರು.

“ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಆಸ್ಪತ್ರೆಗಳು ಸಾಕಷ್ಟು ಹಣ ಮಾಡಿವೆ. ಕೋಟ್ಯಂತರ ರೂಪಾಯಿ ಕಮಿಷನ್ ಪಡೆದಿರುವ ಸಂಬಂಧ ನಮ್ಮ ಬಳಿ ಮಾಹಿತಿ ಇದೆ. ಆಸ್ಪತ್ರೆಗಳಿಂದ ದಾಖಲೆಗಳನ್ನು ಪಡೆದುಕೊಳ್ಳಬೇಕು. ಆಸ್ಪತ್ರೆಗಳ ಆದಾಯ ಏರಿಕೆಯಾಗಿದೆಯೇ? ಎಷ್ಟು ಬೆಡ್‌ಗಳಿದ್ದವು? ಎಷ್ಟು ದಾಖಲೆಗಳನ್ನು ನೀಡಿದ್ದಾರೆ? ಎಷ್ಟು ಖರ್ಚಾಗಿದೆ? ಆಕ್ಸಿಜನ್‌ ದುರಂತದಿಂದ ಸತ್ತವರೆಷ್ಟು? ಸರ್ಕಾರದ ಮಾಹಿತಿ ಸರಿ ಇದೆಯೇ, ಇಲ್ಲವೇ? ಇದೆನ್ನೆಲ್ಲ ಹೇಳಬೇಕಲ್ಲವೇ? ಮಾಜಿ ಸಚಿವರೇಕೆ ನ್ಯಾಯಮೂರ್ತಿಗಳನ್ನು ಪಕ್ಷಪಾತಿ ಎನ್ನುತ್ತಿದ್ದಾರೆ?” ಎಂದು ಪ್ರಶ್ನಿಸಿದರು.

“ಅತ್ಯುತ್ತಮ ಸೇವೆ ಸಲ್ಲಿಸಿ, ನಿಷ್ಪಕ್ಷಪಾತವಾಗಿ ತೀರ್ಪುಗಳನ್ನು ನೀಡಿ ಗೌರವಯುತವಾಗಿ ಬದುಕುತ್ತಿರುವ ನಿವೃತ್ತ ನ್ಯಾಯಮೂರ್ತಿಗಳ ಕುರಿತು, ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿರುವ ವ್ಯಕ್ತಿಯು ಇಂತಹ ಹೇಳಿಕೆಯನ್ನು ನೀಡುವುದು ಸರಿಯಲ್ಲ” ಎಂದು ಟೀಕಿಸಿದರು.

“ನ್ಯಾಯಾಂಗ ತನಿಖೆಗಳನ್ನು ಆರಂಭಿಸಿರುವುದು ಸ್ವಾಗತಾರ್ಹ. ಆದರೆ ಕಾಲಮಿತಿಯೊಳಗೆ ವರದಿಗಳನ್ನು ನ್ಯಾಯಮೂರ್ತಿಗಳು ಸರ್ಕಾರಕ್ಕೆ ಸಲ್ಲಿಸುವಂತಹ ನಿಟ್ಟಿನಲ್ಲಿ ಸೌಲಭ್ಯಗಳನ್ನು ಒದಗಿಸಬೇಕು. ಸಾರ್ವಜನಿಕರ ಬೆಂಬಲ ಅಗತ್ಯವಿರುತ್ತದೆ. ವರದಿಗೆ ಬೇಕಾದ ಕಡತಗಳನ್ನು ಅಧಿಕಾರಿಗಳು ಒದಗಿಸಬೇಕು. ಸಾಮಾಜಿಕ ಕಾರ್ಯಕರ್ತರು, ಸಂಬಂಧಪಟ್ಟ ಜನರು ದಾಖಲೆಗಳನ್ನು ತನಿಖೆಗೆ ಒದಗಿಸಬೇಕು” ಎಂದರು.

ಇದನ್ನೂ ಓದಿರಿ: ಬೆಂಗಳೂರು | ಗೃಹಲಕ್ಷ್ಮಿ ಯೋಜನೆಗೆ 6 ಲಕ್ಷ ಫಲಾನುಭವಿಗಳ ಹೆಸರು ನೋಂದಣಿ

“ಬಿಜೆಪಿ ಅವಧಿಯಲ್ಲಿ ಆಗಿರುವ ಹಗರಣಗಳ ತನಿಖೆಯನ್ನಷ್ಟೇ ಮಾಡಬಾರದು. ಹಿಂದಿನ ಸರ್ಕಾರದ ಅವಧಿಯ ಸ್ಕ್ಯಾಮ್‌ಗಳ ಕುರಿತೂ ತನಿಖೆ ಮಾಡಿರಿ ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವುದನ್ನೂ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು” ಎಂದು ಆಶಿಸಿದರು.

“ಆಯೋಗಗಳನ್ನು, ತನಿಖಾ ಸಮಿತಿಗಳನ್ನು ಕೇವಲ ನಾಮಕಾವಸ್ಥೆಗೆ ರಚನೆ ಮಾಡಿ, ಕೇವಲ ವರದಿ ಪಡೆದರೆ ಏನೂ ಪ್ರಯೋಜನವಾಗುವುದಿಲ್ಲ. ಈವರೆಗೆ ರಚನೆಯಾದ ನ್ಯಾಯಾಂಗ ತನಿಖೆಗಳಿಂದ ಬಂದ ವರದಿಗಳಿಗೆ ಸಂಬಂಧಿಸಿದಂತೆ ಕ್ರಮ ಜರುಗಿಸಿದ ಉದಾಹರಣೆಗಳು ಕಡಿಮೆ” ಎಂದು ವಿಷಾದಿಸಿದರು.

“ಹಲವು ತನಿಖಾ ಸಮಿತಿಗಳನ್ನು ಸರ್ಕಾರ ಈವರೆಗೆ ಮಾಡಿದೆ. ಕೆಂಪಣ್ಣ ಸಮಿತಿ ನೀಡಿದ ವರದಿ ಏನಾಯಿತು? ನೈಸ್‌ ರಸ್ತೆ ಹಗರಣದ ಕುರಿತು ನೀಡಲಾದ ವರದಿ ಏನಾಯಿತು?” ಎಂದು ಕೇಳಿದರು.

ಧರ್ಮಸ್ಥಳದ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಮರುತನಿಖೆಯ ಕುರಿತು ಮಾತನಾಡಿದ ಅವರು, “ಸುಪ್ರೀಂಕೋರ್ಟ್ ನೀಡಿರುವ ಹಲವು ತೀರ್ಪುಗಳ ಪ್ರಕಾರ ಮರುತನಿಖೆಗೆ ಅವಕಾಶವಿದೆ. ಹೋರಾಟದ ಸ್ಥಳಕ್ಕೆ ಸಂತ್ರಸ್ತ ಕುಟುಂಬ ಹೋದರೂ ತಡೆದವರು ಯಾರು? ಯಾಕೆ ಅವರಿಗೆ ಭಯ? ಗೃಹಸಚಿವರು ಕಡತವನ್ನು ಪಕ್ಕಕ್ಕೆ ಇಟ್ಟಿರುವುದು ಏತಕ್ಕೆ? ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇದೆ ಎನ್ನಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...