ನಮ್ಮೆಲ್ಲರಿಗೂ ಅತೀ ಹೆಮ್ಮೆಯ ವಿಚಾರ ಅಂದರೆ ಟಿಪ್ಪು ಸುಲ್ತಾನ್ ಕರ್ನಾಟಕದವರು, ಕನ್ನಡದವರು. ಆದರೆ, ದೊರೆ ಟಿಪ್ಪುವಿನ ಕೊಡುಗೆ ಕೇವಲ ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಸೀಮಿತವಲ್ಲ. ಯಾಕೆ ಅಂದರೆ ಬ್ರೀಟಿಷರು ಹೆದರುತ್ತಿದ್ದ, ಬೆಚ್ಚಿ ಬೀಳುತ್ತಿದ್ದ ನಮ್ಮ ದೇಶದ ಏಕೈಕ ದೊರೆ ಹಜರತ್ ಟಿಪ್ಪು ಸುಲ್ತಾನ್. ಕನ್ನಡದೇ ನೆಲದಲ್ಲೇ ಹುಟ್ಟಿ ಕನ್ನಡದ ನೆಲದಲ್ಲೇ ತನ್ನ ನೆತ್ತರು ಹರಿಸಿದವರು ಟಿಪ್ಪು ಸುಲ್ತಾನ್. ಬ್ರೀಟಿಷರು ಎಷ್ಟೇ ಕಾಡಿದರೂ ಬೆದರದ ದೊರೆ ಟಿಪ್ಪು ಸುಲ್ತಾನ್.
ಅಂದು ಮೇ 4, 1799. ಮಟ ಮಟ ಮಧ್ಯಾಹ್ನ. ಟಿಪ್ಪು ಸುಲ್ತಾನ್ ಇನ್ನಿಲ್ಲ ಎಂದು ಗೊತ್ತಾಗಿದ್ದೇ ತಡ. ಆಗಿನ ಗವರ್ನರ್ ಜನರಲ್ ಆಗಿದ್ದ ವೆಲ್ಲಸ್ಲಿ, ಕೈಯಲ್ಲಿ ಮಧ್ಯದ ಬಾಟಲಿಯನ್ನು ಹಿಡಿದು ‘ಭಾರತದಲ್ಲಿ ನಮಗೆ ತಡೆಗೋಡೆಯಾಗಿದ್ದ ಟಿಪ್ಪು ಸುಲ್ತಾನ್ ಇನ್ನಿಲ್ಲ’ ಎಂದು ಕೂಗಿದ್ದ. ಅಷ್ಟೆ ಅಲ್ಲ, ಭಾರತದ ಈ ಹೆಣ ಇನ್ನಿಲ್ಲ ಎಂದು ಸಂಭ್ರಮಾಚರಣೆ ಮಾಡಿದ್ದ. ನಮಗೆ ಇನ್ನೇನು ಬೇಕು ಪುರಾವೆ. ಬ್ರಿಟೀಷರನ್ನೇ ಬೆಚ್ಚಿ ಬೀಳಿಸಿದ್ದ ದೊರೆ ಟಿಪ್ಪು ಸುಲ್ತಾನ್ ಅವರು ಕೇವಲ ನಮ್ಮ ಕರ್ನಾಟಕದ ಆಸ್ತಿ ಅಲ್ಲ. ನಮ್ಮ ದೇಶದ ಆಸ್ತಿ. ಇದನ್ನು ಬ್ರಿಟೀಷರೇ ಒಪ್ಪಿಕೊಂಡಿದ್ದರು ಕೂಡ. ಹಾಗಾಗಿ ವೆಲ್ಲಸ್ಲಿ ಟಿಪ್ಪು ಸುಲ್ತಾನ್ ರವರು ಸಾವನ್ನಪ್ಪಿದಾಗ ಭಾರತದ ಹೆಣ ಎಂದನೇ ಹೊರತು ಕರ್ನಾಟಕದ ಹೆಣ ಎನ್ನಲಿಲ್ಲ. ಬ್ರಿಟೀಷರೇ ಅದನ್ನು ಒಪ್ಪಿಕೊಂಡ ಮೇಲೆ ನಮಗೇನು ದಾಡಿ? ಹಾಗಾಗಿ ಹಜರತ್ ಟಿಪ್ಪು ಸುಲ್ತಾನ್ ಭಾರತದ ಆಸ್ತಿಯೇ ಹೊರತು ಕೇವಲ ಕರ್ನಾಟಕದ ಆಸ್ತಿಯಲ್ಲ.
ನಮ್ಮಲ್ಲಿ ಜಾತಿ ಎಂಬ ವಿಷಬೀಜ ಹೇಗೆ ಬಿತ್ತಿದೆ ಎಂದು ತಿಳಿಯಲು ನಮಗೆ ಇದಕ್ಕಿಂತಾ ಮತ್ತೊಂದು ಪುರಾವೆ ಬೇಕಿಲ್ಲ. ಯಾಕೆ ಅಂದರೆ ಈಗಿನ ಕಾಲದಲ್ಲಿ ಕೆಲವರು ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದಿಲ್ಲ. ಮನುಷ್ಯರಲ್ಲಿ ಹಿಂದೂವನ್ನು ಕಾಣುತ್ತಾರೆ, ಮುಸ್ಮಿಂರನ್ನು ಕಾಣುತ್ತಾರೆ. ಕ್ರೈಸ್ತನನ್ನು ಕಾಣುತ್ತಾರೆ. ಟಿಪ್ಪು ವಿಷಯದಲ್ಲೂ ಇದೇ ಆಗಿದ್ದು, ಆಗುತ್ತಿರುವುದು. ಕೇವಲ ಟಿಪ್ಪು ಸುಲ್ತಾನ್ ಎಂಬ ಹೆಮ್ಮೆಯ ದೊರೆ ಮುಸ್ಲಿಮ್ ಎಂದು ಈ ರೀತಿ ದ್ವೇಷಿಸುವುದು ಸರಿಯಲ್ಲ. ನಾವು, ನಮ್ಮವರು, ನಮ್ಮ ಹೆಮ್ಮೆ ಎಂದು ಹಜರತ್ ಟಿಪ್ಪು ಸುಲ್ತಾನ್ ರವರ ಬಗ್ಗೆ ಪ್ರತಿಯಬ್ಬರೂ ಹೆಮ್ಮೆ ಪಡಲೇಬೇಕು. ಟಿಪ್ಪು ಕೇವಲ ಮುಸಲ್ಮಾನರ ಆಸ್ತಿಯಲ್ಲ, ಕೇವಲ ಕನ್ನಡದ ಹೆಮ್ಮೆಯಲ್ಲ. ಇಡೀ ನಮ್ಮ ದೇಶದ ಹೆಮ್ಮೆ. ಶಾಲಾ ದಿನಗಳಲ್ಲಿ ನಾವೆಲ್ಲರೂ ಟಿಪ್ಪು ಬಗ್ಗೆ ಓದಿಲ್ಲವೇ? ಆಗ ನಮಗೆ ಈ ದೊರೆಯ ಬಗ್ಗೆ ಆಕ್ಷೇಪವಿರಲಿಲ್ಲ? ಸುಳ್ಳು ಕಥೆ ಕಟ್ಟಿ, ಪಠ್ಯಪುಸ್ತಕದಲ್ಲಿ ಸೇರಿಸಿದ್ದರು ಎಂಬ ಕಥೆ ಬೇರೆ… ಅಂಥವರಿಗೆ ನನ್ನ ಪ್ರಶ್ನೆ ಸುಳ್ಳು ಕಥೆ ಕಟ್ಟಿ ಮಕ್ಕಳು ಅದನ್ನು ಓದುವಂತೆ ಮಾಡಲು ಸರ್ಕಾರಕ್ಕೆ ಇದರಿಂದ ಸಿಗುವುದಾದರೇನು? ನಮ್ಮ ನಾಡಿಗಾಗಿ ವೀರಮರಣವನ್ನಪ್ಪಿದ ವೀರನ ಬಗ್ಗೆ ನಾವೆಲ್ಲರು ಹೆಮ್ಮೆ ಪಡೋಣ. ನಮ್ಮ ಟಿಪ್ಪು ನಮ್ಮ ಭಾರತದ ಹುಲಿ.
(ಫೇಸ್ ಬುಕ್ ವಾಲ್ ನಿಂದ)




