ವಕ್ಫ್‌ ಆಸ್ತಿ ದೇವರ ಹೆಸರಿನಲ್ಲಿ ಮುಸ್ಲಿಮರೇ ನೀಡಿದ ದಾನ; ರಾಜಕೀಯ ಕಾರಣಕ್ಕೆ ಕೆಸರೆರಚಾಟ ಸಲ್ಲದು

Date:

ವಕ್ಫ್‌ ಎನ್ನುವುದು ಇಸ್ಲಾಂ ಧರ್ಮ ಪಾಲನೆ ಮಾಡುವ ಯಾವುದೇ ವ್ಯಕ್ತಿ ತನಗೆ ಸೇರಿರುವ ಆಸ್ತಿಯನ್ನು ಸ್ವಯಂಕೃತವಾಗಿ ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ದೇವರ ಹೆಸರಿನಲ್ಲಿ ನೀಡುವ ದಾನವಾಗಿದೆ. ಈ ಆಸ್ತಿಯು ವಕ್ಫ್‌ ಆಗುತ್ತದೆ. ಒಮ್ಮೆ ಈ ರೀತಿ ನೀಡಿದ ಆಸ್ತಿಯು ಸದಾ ವಕ್ಫ್‌ ಆಗಿರುತ್ತದೆ. ಅದನ್ನು ಸದುಪಯೋಗ ಮಾಡಬಹುದು. ಆದರೆ, ಮಾರಾಟ ಮಾಡಲು ಬರುವುದಿಲ್ಲ.

ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ 2024ರ ಮಂಡನೆ ಮಾಡಿದ ನಂತರ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಲವಾರು ಜನ ವಕ್ಫ್‌ ಎನ್ನುವುದು “ಅನ್ಯರ ಜಮೀನು ಕಬ್ಜಾ ಮಾಡಲು ಇರುವ ವ್ಯವಸ್ಥೆ” ಎಂದು ತಿಳಿದಂತಿದೆ. ವಿಶೇಷವಾಗಿ ಬಿಜೆಪಿ ನಾಯಕರು ಇದೊಂದು ಹಿಂದೂ-ಮುಸ್ಲಿಮರ ನಡುವೆ ಇರುವ ಸಮಸ್ಯೆ ಎಂದೂ, ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಸಂತೃಪ್ತಿಪಡಿಸಲು ಮಾಡಿರುವ ಕುತಂತ್ರವೆಂದು ಗುಲ್ಲೆಬ್ಬಿಸಲಾಗುತ್ತಿದೆ. ಯಾರದ್ದೋ ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಘೋಷಿಸುತ್ತದೆ, ವಕ್ಫ್‌ ಮಂಡಳಿಯಲ್ಲಿ ಮಹಿಳೆಯರಿಗೆ ಅವಕಾಶವಿಲ್ಲವೆಂದು ಅಪಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರ ವಕ್ಫ್‌ ತಿದ್ದುಪಡಿ ಮಸೂದೆ 2024ಯನ್ನು ಮಂಡನೆ ಮಾಡುವಾಗ ದೇಶದ ಜನರ ದಾರಿ ತಪ್ಪಿಸುವ ರೀತಿ ಹೇಳಿಕೆ ನೀಡಿರುವುದು ದೇಶದ ದುರಂತ. ವಕ್ಫ್‌ ಎಂದರೇನು ಎಂದು ತಿಳಿಯದೇ ಇರುವವರು ಸಹ ವಕ್ಫ್‌ ಬಗ್ಗೆ ಮಾತನಾಡುತ್ತಿದ್ದಾರೆ. ಸರ್ಕಾರ ನಡೆಸುವವರೇ ವಕ್ಫ್‌ ಕುರಿತು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

ವಕ್ಫ್‌ ಎನ್ನುವುದು ಇಸ್ಲಾಂ ಧರ್ಮದಲ್ಲಿ ಇರುವ ಒಂದು ವ್ಯವಸ್ಥೆ. ಇಸ್ಲಾಂ ಧರ್ಮ ಪಾಲನೆ ಮಾಡುವ ಯಾವುದೇ ವ್ಯಕ್ತಿ ತನಗೆ ಸೇರಿರುವ ಆಸ್ತಿಯನ್ನು ಸ್ವಯಂಕೃತವಾಗಿ ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ದೇವರ ಹೆಸರಿನಲ್ಲಿ ನೀಡುವ ದಾನವಾಗಿದೆ. ಈ ಆಸ್ತಿಯು ವಕ್ಫ್‌ ಆಗುತ್ತದೆ. ಒಮ್ಮೆ ಈ ರೀತಿ ನೀಡಿದ ಆಸ್ತಿಯು ಸದಾ ವಕ್ಫ್‌ ಆಗಿರುತ್ತದೆ. ಅದನ್ನು ಸದುಪಯೋಗ ಮಾಡಬಹುದು. ಆದರೆ, ಮಾರಾಟ ಮಾಡಲು ಬರುವುದಿಲ್ಲ. ಇದು ಇಸ್ಲಾಂನ ಕೊನೆಯ ಪ್ರವಾದಿ ಹಜರತ ಮೊಹಮ್ಮದ (ಸ. ಅ.ವ. ಸ.) ಅವರ ಅವಧಿಯಿಂದ ಪ್ರಾರಂಭವಾಗಿದೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 1923ರಲ್ಲಿ ಮುಸ್ಲಿಂ ವಕ್ಫ್‌ ಕಾಯ್ದೆ ಜಾರಿಯಾಗಿದೆ.ಇದು ವಕ್ಫ್‌ ಆಸ್ತಿಯನ್ನು ನಿರ್ವಹಣೆ ಮಾಡುವ ಒಂದು ವ್ಯವಸ್ಥೆ.

ದೇಶದಲ್ಲಿ ಸಂವಿಧಾನ ಜಾರಿಯಾದ ನಂತರ ವಕ್ಫ ನಿರ್ವಹಣೆಗೆ ವಕ್ಫ್‌ ಕಾಯ್ದೆ 1955ನ್ನು ಜಾರಿಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿಯೊಂದು ರಾಜ್ಯಕ್ಕೆ ಒಂದು ವಕ್ಫ್‌ ಮಂಡಳಿ ರಚನೆ ಮಾಡಲು ಅವಕಾಶ ನೀಡಿದೆ. ಅಲ್ಲದೇ, ಜಿಲ್ಲಾ ಮಟ್ಟದಲ್ಲಿ ವಕ್ಫ್‌ ಸಲಹಾ ಸಮಿತಿ ರಚಿಸಲು ಅವಕಾಶ ನೀಡಲಾಗಿದೆ. ನಂತರ 1995ರಲ್ಲಿ ವಕ್ಫ್‌ ಕಾಯ್ದೆ 1955ರ ಬದಲಾಗಿ ಮತ್ತೊಂದು ಹೊಸ ಕಾಯ್ದೆ ಜಾರಿ ಮಾಡಲಾಗಿದೆ. 2013ರಲ್ಲಿ ವಕ್ಫ್‌ ಕಾಯ್ದೆ 1995ನ್ನು ತಿದ್ದುಪಡಿ ಮಾಡಲಾಗಿದೆ. ವಕ್ಫ್‌ ಮಂಡಳಿ ಮುಸ್ಲಿಮರಿಗೆ ಸೇರಿದ ವಕ್ಫ್‌ ಆಸ್ತಿ ನಿರ್ವಹಣೆ ಮಾತ್ರ ಮಾಡುವುದರಿಂದ ಮಂಡಳಿಯಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹಿಂದೂ ದತ್ತಿ ಕಾಯ್ದೆಯಲ್ಲಿ ಕೇವಲ ಹಿಂದೂಗಳಿಗೆ ಅವಕಾಶ ನೀಡಿದಂತೆ.

waqf board

ಆದರೆ, ಈಗ ಕೇಂದ್ರ ಸರಕಾರ ಮಾಡಲು ಹೊರಟಿರುವ ತಿದ್ದುಪಡಿಯಲ್ಲಿ ಮುಸ್ಲಿಮರೇತರರನ್ನು ಅದರಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ. ವಕ್ಫ್‌ ಟ್ರಿಬ್ಯೂನಲ್ ನಲ್ಲಿ ನೀಡಲಾದ ತೀರ್ಪೇ ಅಂತಿಮ. ಅದನ್ನು ದೇಶದ ಯಾವುದೇ ಕೋರ್ಟಿನಲ್ಲಿ ಪ್ರಶ್ನಿಸಲು ಬರುವುದಿಲ್ಲ. ಇದೆಂತಹ ಕಾನೂನು ಎಂದು ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಇದೊಂದು ಅಪ್ಪಟ ಸುಳ್ಳು. ಈಗಾಗಲೇ ದೇಶದ ಹಲವಾರು ಹೈಕೋರ್ಟ್‌ಗಳಲ್ಲಿ, ಸುಪ್ರೀಂ ಕೋರ್ಟ್‌ಗಳಲ್ಲಿ ವಕ್ಫ್‌ ಸಂಬಂಧಪಟ್ಟ ಕೇಸುಗಳಿವೆ. ವಕ್ಫ್‌ ಕಾಯ್ದೆಯಲ್ಲಿ ಇರುವಂತೆಯೇ ವಕ್ಫ್ ಟ್ರಿಬ್ಯೂನಲ್‌ನಲ್ಲಿ ನೀಡಲಾದ ತೀರ್ಪೇ ಅಂತಿಮ ಎನ್ನುವುದು ವಕ್ಫ್‌ ಮಂಡಳಿಯ ಆಡಳಿತಾತ್ಮಕ ಆದೇಶಗಳಿಗೆ ಮಾತ್ರ ಅನ್ವಯಿಸುತ್ತದೆ. ಅದು ವಕ್ಫ್‌ ಆಸ್ತಿಗಳಿಗೆ ಅನ್ವಯಿಸುವುದಿಲ್ಲ. ಇದೇ ರೀತಿಯ ಅಂಶ ಹಿಂದೂ ದತ್ತಿ ಕಾಯ್ದೆಯಲ್ಲಿಯೂ ಇದೆ.

ದೇಶದ ಮೂಲೆ ಮೂಲೆಯಲ್ಲಿಯೂ ಮಸ್ಜೀದ್‌, ದರ್ಗಾ, ಆಶುರಖಾನಾ ಹೆಸರಿನಲ್ಲಿ ವಕ್ಫ್‌ ಸಂಸ್ಥೆಗಳಿವೆ. ಅವುಗಳನ್ನು ನಿರ್ವಹಣೆ ಮಾಡಲು ಸ್ಥಳೀಯ ಆಡಳಿತ ಮಂಡಳಿ ರಚನೆ ಮಾಡಲಾಗಿದೆ. ಅಥವಾ ವಂಶ ಪಾರಂಪರ್ಯವಾಗಿ ಮುತವಲ್ಲಿಗಳ ನೇಮಕ ಮಾಡಲಾಗಿದೆ. ಸದರಿ ವಕ್ಫ್‌ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಕುಟುಂಬಗಳ ಹೆಸರಿನಲ್ಲಿ ವಕ್ಫ್‌ ಇನಾಂ ಆಸ್ತಿಗಳು ಇವೆ. ಇವುಗಳನ್ನು ಸೇವೆ ಸಲ್ಲಿಸುವ ಅವಧಿಗೆ ಉಪಯೋಗ ಮಾಡಲು ಅವಕಾಶ ಇದೆ. ಆದರೆ, ಕೆಲವು ಕಡೆ ಮುತವಲ್ಲಿಗಳು ಅಥವಾ ಅವರ ಕಟುಂಬದವರು ಸದರಿ ಆಸ್ತಿಗಳನ್ನು ಪಟ್ಟಾ ಜಮೀನು ಎಂದು ಮಾರಾಟ ಮಾಡಿರುವ ಉದಾಹರಣೆ ಇದೆ. ಅಂತಹ ಜಮೀನುಗಳನ್ನು ವಕ್ಫ್‌ ಮಂಡಳಿ ಆಸ್ತಿ ದಾಖಲೆಗಳಲ್ಲಿ ವಕ್ಫ್‌ ಮಂಡಳಿಗೆ ಸೇರಿದೆ ಎಂದು ನಮೂದಿಸುತ್ತಿದೆ. ಮಾರಾಟ ಮಾಡಿದ ಮುತವಲ್ಲಿಗಳು ಸದರಿ ಆಸ್ತಿಗಳ ಮಾಲೀಕರಲ್ಲದೇ ಇರುವುದರಿಂದ ಅವರು ಮಾರಾಟ ಮಾಡಿದ ಆಸ್ತಿಯು ಕಾನೂನಿನಲ್ಲಿ ಅಕ್ರಮವಾಗುತ್ತದೆ. ಅದನ್ನು ಖರೀದಿ ಮಾಡಿದವರು ತೊಂದರೆಗೆ ಸಿಲುಕುತ್ತಿದ್ದಾರೆ.

ದೇಶದಲ್ಲಿ ಲಕ್ಷಾಂತರ ಎಕರೆ ವಕ್ಫ್‌ ಆಸ್ತಿ ಇದೆ. ಒಮ್ಮೆ ವಕ್ಫ್‌ ಎಂದು ಘೋಷಿಸಿದ ನಂತರ ಅದನ್ನು ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಆದರೆ, 1974ರಲ್ಲಿ ಭೂಸುಧಾರಣೆ ಕಾಯ್ದೆ ಜಾರಿಯಾದ ನಂತರ ಹಲವು ರೈತರು ಭೂ ನ್ಯಾಯ ಮಂಡಳಿಯಲ್ಲಿ ವಕ್ಫ್‌ ಆಸ್ತಿಯನ್ನು ತಮ್ಮ ಹೆಸರಿಗೆ ಮಂಜೂರು ಮಾಡಲು ಕೋರಿರುತ್ತಾರೆ. ಅದೇ ಸಂದರ್ಭದಲ್ಲಿ ಹಲವು ಕಡೆ ವಕ್ಫ್‌ ಮಂಡಳಿಯವರು ತಕರಾರು ಸಲ್ಲಿಸದೇ ಇರುವುದರಿಂದ ವಕ್ಫ್‌ ಆಸ್ತಿ ರೈತರ ಹೆಸರಿಗೆ ಮಂಜೂರಾಗಿದೆ. ಅದರ ಬಗ್ಗೆ ವಕ್ಫ್‌ ಮಂಡಳಿ ಯಾವುದೇ ತಕರಾರು ತೆಗೆಯುತ್ತಿಲ್ಲ. ವಕ್ಫ್‌ ಸಂಸ್ಥೆಗಳಿಗೆ ನಿರ್ವಹಣೆ ಮಾಡಲು ಸ್ಥಳೀಯವಾಗಿ ಆಡಳಿತ ಮಂಡಳಿಗಳಿವೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಹೊಸ ಆಡಳಿತ ಮಂಡಳಿ ರಚನೆ ಮಾಡುವ ವ್ಯವಸ್ಥೆ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ ವಕ್ಫ್‌ ಆಸ್ತಿ | ಬಿಜೆಪಿ ಅವಧಿಯಲ್ಲೂ ರೈತರಿಗೆ ನೋಟಿಸ್, ಎಂ ಬಿ ಪಾಟೀಲ್ ದಾಖಲೆ ಬಿಡುಗಡೆ

ಈಗ ರಾಜ್ಯಾದ್ಯಂತ ಬಿಜೆಪಿ ಎಬ್ಬಿಸಿರುವ ವಕ್ಫ್‌ ಜಮೀನುಗಳ ಪ್ರಕರಣಗಳನ್ನು ಕೂಲಂಕಷವಾಗಿ ಪರಿಗಣಿಸುವ ಅವಶ್ಯಕತೆ ಇದೆ. ಒಂದು ವಕ್ಫ್‌ ಜಮೀನು ಭೂ ನ್ಯಾಯ ಮಂಡಳಿಯ ಮೂಲಕ ರೈತರು ಪಡೆದಿದ್ದರೆ, ಅಂತಹ ದಾಖಲೆಗಳಲ್ಲಿ ವಕ್ಫ್‌ ಎಂದು ನಮೂದಿಸಲು ಬರುವುದಿಲ್ಲ. ಅಂತಹ ಆಸ್ತಿಗಳ ಬಗ್ಗೆ ನ್ಯಾಯಾಲಯದ ಮೂಲಕವೇ ಪರಿಹಾರ ಕಂಡುಹಿಡಿಯಬೇಕು. ಎರಡನೆಯದು ವಕ್ಫ್‌ ಆಸ್ತಿಯಿದ್ದು, ಮುತವಲ್ಲಿಗಳು ಮಾರಾಟ ಮಾಡಿದಲ್ಲಿ ಅಂತಹ ಆಸ್ತಿಗಳ ದಾಖಲೆಗಳಲ್ಲಿ ವಕ್ಫ್‌ ಮಂಡಳಿ ಎಂದು ನಮೂದಿಸಲಾಗುತ್ತಿದೆ. ಇದರಿಂದ ಸದರಿ ಆಸ್ತಿಗಳು ಮತ್ತೊಮ್ಮೆ ಮಾರಾಟ ಮಾಡಲು ಬರುವುದಿಲ್ಲ. ಅವುಗಳನ್ನು ಕಾನೂನು ಮೂಲಕ ವಕ್ಫ್‌ ಮಂಡಳಿ ವಾಪಸ್ ಪಡೆಯಲು ಪ್ರಯತ್ನಿಸುತ್ತದೆ. ನನ್ನ ಆಸ್ತಿ ಬೇರೊಬ್ಬರು ಮಾರಾಟ ಮಾಡಿದರೆ, ಅದನ್ನು ಪ್ರಶ್ನೆ ಮಾಡಬಾರದೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ವಕ್ಫ್‌ ಆಸ್ತಿ ಉಳಿಸುವುದೇ ವಕ್ಫ್‌ ಮಂಡಳಿಯ ಉದ್ದೇಶ. ಅದರಲ್ಲಿ ಹಿಂದೂ ಮುಸ್ಲಿಂ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೂ ರಾಜಕೀಯ ಕಾರಣಕ್ಕೆ ಕೆಸರೆರಚಾಟ ನಡೆಯುತ್ತಿದೆ.

WhatsApp Image 2025 11 17 at 3.55.49 PM
ಡಾ ರಝಾಕ್‌ ಉಸ್ತಾದ್‌
+ posts

ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಡಾ ರಝಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...