ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ: ಏನಿದು, ಬೆಲೆ ಎಷ್ಟು, ಪ್ರಯೋಜನವೇನು?

Date:

ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಜುಲೈ 1ರಿಂದ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್ ಕಡ್ಡಾಯಗೊಳಿಸಲಾಗಿದೆ. ಏನಿದು ಸ್ಮಾರ್ಟ್ ಮೀಟರ್, ಗ್ರಾಹಕರಿಗೆ ಏನು ಪ್ರಯೋಜನ, ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದೇಕೆ?

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ(ಬೆಸ್ಕಾಂ) ಗ್ರಾಮೀಣ ಪ್ರದೇಶಗಳಲ್ಲಿ ಜುಲೈ 1ರಿಂದ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್ ಕಡ್ಡಾಯಗೊಳಿಸಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಅದರಂತೆ ಬೆಸ್ಕಾಂ ವ್ಯಾಪ್ತಿಗೆ ಬರುವ ಬೆಂಗಳೂರು, ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ.

ಸ್ಮಾರ್ಟ್‌ ಮೀಟರ್ ಅಳವಡಿಕೆ ಮಾಡುವ ಕುರಿತಾಗಿ 2024ರ ಮಾರ್ಚ್ 6ರಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಈಗಾಗಲೇ ನಗರ ಪ್ರದೇಶಗಳಲ್ಲಿ ಫೆಬ್ರವರಿ 15ರಿಂದಲೇ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಇದೀಗ ಗ್ರಾಮಾಂತರ ಪ್ರದೇಶದಲ್ಲಿಯೂ ಸ್ಮಾರ್ಟ್‌ ಮೀಟರ್ ಕಡ್ಡಾಯಗೊಳಿಸಲಾಗಿದೆ.

ಇದನ್ನು ಓದಿದ್ದೀರಾ? ಸ್ಮಾರ್ಟ್‌ ಮೀಟರ್ ಕಡ್ಡಾಯ – ಖರೀದಿ; ಬಿಜೆಪಿ ಹಗರಣ ಆರೋಪ, ಕಾಂಗ್ರೆಸ್‌ ಸ್ಪಷ್ಟನೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸ್ಮಾರ್ಟ್‌ ಮೀಟರ್‌ ಖರೀದಿ ಮತ್ತು ಬೆಲೆ

ಗ್ರಾಹಕರು ಬೆಸ್ಕಾಂನಲ್ಲಿ ಅರ್ಜಿ ಸಲ್ಲಿಸಿ, ಬೆಸ್ಕಾಂ ನೋಂದಾಯಿತ ಮಳಿಗೆಗಳಿಂದ ಸ್ಮಾರ್ಟ್‌ ಮೀಟರ್‌ಗಳನ್ನು ಖರೀದಿಸಬಹುದು. ಇದನ್ನು ಅಧಿಕೃತ ಮಾರಾಟಗಾರರಿಂದ ಮಾತ್ರವೇ ಖರೀದಿಸಬೇಕು. ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ಬೆಲೆ 5 ಸಾವಿರ ರೂಪಾಯಿ, ತ್ರೀ ಫೇಸ್ ಕನೆಕ್ಷನ್​ಗೆ ಸ್ಮಾರ್ಟ್ ಮೀಟರ್ ದರ 8,800 ರೂಪಾಯಿಯಾಗಿದೆ.

ಸ್ಮಾರ್ಟ್‌ ಮೀಟರ್ ಎಂದರೇನು, ವೈಶಿಷ್ಟ್ಯವೇನು?

ಸಾಂಪ್ರದಾಯಿಕ ಮೀಟರ್‌ಗಳಂತೆ ಸ್ಮಾರ್ಟ್ ಮೀಟರ್‌ಗಳು ವಿದ್ಯುತ್ ಬಳಕೆಯನ್ನು ಅಳೆಯುವ ಸಾಧನ. ಇದು ಇಂಧನ ಪೂರೈಕೆದಾರರಿಗೆ ಇಂಧನ ಬಳಕೆಯ ಬಗ್ಗೆ ನಿಖರ ಮಾಹಿತಿಯನ್ನು ನೀಡುತ್ತದೆ. ಸ್ಮಾರ್ಟ್ ಮೀಟರ್‌ಗಳು ಸಾಮಾನ್ಯವಾಗಿ ಸ್ಮಾರ್ಟ್ ಮೀಟರ್ ಮಾನಿಟರ್‌ ಅನ್ನು ಹೊಂದಿರುತ್ತದೆ. ನೀವು ಎಷ್ಟು ವಿದ್ಯುತ್ ಬಳಸಿದ್ದೀರಿ, ಎಷ್ಟು ವೆಚ್ಚವಾಗುತ್ತಿದೆ ಎಂಬುದನ್ನು ನಿಖರವಾಗಿ ತೋರಿಸುತ್ತದೆ. ಮೊದಲೇ ಹಣ ಪಾವತಿಸಿ ಬಳಿಕ ವಿದ್ಯುತ್ ಬಳಸುವ ವ್ಯವಸ್ಥೆಯೂ ಇದೆ. ಇದರಿಂದಾಗಿ ಇಂಧನ ಬಳಕೆಯನ್ನು ನಿಯಂತ್ರಿಸಬಹುದು ಎಂಬ ಅಭಿಪ್ರಾಯಗಳಿವೆ. ಬೆಸ್ಕಾಂ ಅಡಿಯಲ್ಲಿ ಈ ಸ್ಮಾರ್ಟ್‌ ಮೀಟರ್‌ ಪ್ರಿಪೇಯ್ಡ್ ಆಗಿದೆ. ನೀವು ಮೊಬೈಲ್‌ಗಳಿಗೆ ಮೊದಲೇ ರೀಚಾರ್ಜ್ ಮಾಡಿ ಬಳಸುವಂತೆ ವಿದ್ಯುತ್‌ಗೂ ಮೊದಲೇ ಹಣ ಪಾವತಿಸಿ ಬಳಸಬೇಕಾಗುತ್ತದೆ.

ಪ್ರಯೋಜನವೇನು, ಅನಾನುಕೂಲವೇನು?

ಸ್ಮಾರ್ಟ್‌ ಮೀಟರ್‌ನಿಂದಾಗಿ ನಿಖರ ಬಿಲ್ ಪಡೆಯಬಹುದು. ನೀವು ಯಾವ ಸಮಯದಲ್ಲಿ ಬೇಕಾದರೂ ನೀವು ಎಷ್ಟು ವಿದ್ಯುತ್ ಬಳಸಿದ್ದೀರಿ, ಎಷ್ಟು ಹಣ ವೆಚ್ಚವಾಗಿದೆ ಎಂದು ಮೊಬೈಲ್‌ನಲ್ಲೇ ತಿಳಿಯಬಹುದು. ಇದರಿಂದಾಗಿ ವಿದ್ಯುತ್ ಬಳಕೆಯನ್ನು ನಿಯಂತ್ರಿಸಬಹುದು ಎಂಬುದು ಸರ್ಕಾರದ ಅಭಿಪ್ರಾಯ. ಆದರೆ ಸ್ಮಾರ್ಟ್‌ ಮೀಟರ್‌ನಲ್ಲಿ ಯಾವುದೇ ಸಣ್ಣ ಸಮಸ್ಯೆಯಾದರೂ ನಿಮಗೆ ವಿದ್ಯುತ್ ಬಿಲ್ಲಿಂಗ್ ಸಮಸ್ಯೆ ಉಂಟಾಗಬಹುದು. ಸಿಗ್ನಲ್ ಕೊರತೆ ಮೊದಲಾದವುಗಳು ಇಕ್ಕಟ್ಟಿಗೆ ಸಿಲುಕಿಸಬಹುದು. ಈ ವಾದವೂ ಇದೆ.

ಇದನ್ನು ಓದಿದ್ದೀರಾ? ಹಾಲಿ- ಹೊಸ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯವೇ? ಬೆಸ್ಕಾಂನಿಂದ ಮಹತ್ವದ ಮಾಹಿತಿ ಪ್ರಕಟ

ಹೈಕೋರ್ಟ್‌ನಲ್ಲಿ ಸ್ಮಾರ್ಟ್ ಮೀಟರ್ ವಿರುದ್ಧ ಅರ್ಜಿ

ಈಗಾಗಲೇ ಸ್ಮಾರ್ಟ್ ಮೀಟರ್ ಕಡ್ಡಾಯ ವಿರುದ್ಧವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಕಳುಹಿಸಿದ್ದು ಮಾತ್ರವಲ್ಲದೇ ಸ್ಮಾರ್ಟ್ ಮೀಟರ್ ಬೆಲೆ ವಿಚಾರವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ವಿದ್ಯುತ್‌ ಸಂಪರ್ಕಕ್ಕೆ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯವೇಕೆ? ಈ ಹಿಂದೆ ಎರಡು ಸಾವಿರ ರೂಪಾಯಿ ಇದ್ದ ಮೀಟರ್ ಬೆಲೆಯನ್ನು 10 ಸಾವಿರ ರೂಪಾಯಿ ಮಾಡಲಾಗಿದೆ. ಬಡವರು ಏಕಾಏಕಿ ಈ ರೀತಿ ಹಣ ನೀಡಲು ಹೇಗೆ ಸಾಧ್ಯ? ಅಷ್ಟಕ್ಕೂ ಉಚಿತ ವಿದ್ಯುತ್ ನೀಡಿ ಎಂದು ನಿಮ್ಮನ್ನು ಕೇಳಿದವರು ಯಾರು? ಹೊರ ಗುತ್ತಿಗೆದಾರರ ಮೂಲಕ ಖರೀದಿ ಅಪಾಯವಲ್ಲವೇ? -ಹೀಗೆ ಹಲವು ಪ್ರಶ್ನೆಗಳನ್ನು ಹೈಕೋರ್ಟ್ ಸರ್ಕಾರದ ಮುಂದಿಟ್ಟಿದೆ. ಇನ್ನು ಇತರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಬೆಲೆ 900 ರೂಪಾಯಿ ಆಗಿರುವಾಗ ನಮ್ಮಲ್ಲಿ 10 ಸಾವಿರದವರೆಗೂ ಬೆಲೆ ಇರುವುದು ಎಷ್ಟು ಸರಿ? ಎಂಬುದು ಅರ್ಜಿದಾರರ ವಾದ.

ವಿಪಕ್ಷಗಳ ಆರೋಪ, ಸರ್ಕಾರದ ಸ್ಪಷ್ಟಣೆ

ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿಎಲ್) ಅಳವಡಿಸುವ ಸ್ಮಾರ್ಟ್ ಮೀಟರ್‌ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಈ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಬಿಜೆಪಿ ಲೋಕಾಯುಕ್ತಕ್ಕೆ ದೂರು ನೀಡಿದೆ. ನಿಯಮ ಪಾಲಿಸದ ರಾಜಶ್ರೀ ಎಲೆಕ್ಟಿಕಲ್ಸ್ ಪ್ರೈವೇಟ್ ಲಿಮಿಟೆಡ್‌ ಎಂಬ ಕಂಪನಿಯ ಜೇಬು ತುಂಬಿಸಲಾಗುತ್ತಿದೆ. ಸಾರ್ವಜನಿಕರಿಗೆ ಸೇರಿದ ಬರೋಬ್ಬರಿ 15,568 ಕೋಟಿ ರೂಪಾಯಿ ಹಣ ಲೂಟಿಯಾಗುತ್ತಿದೆ, ಇದು ಹಗರಣ ಎಂಬುದು ವಿಪಕ್ಷ ಬಿಜೆಪಿ ಆರೋಪವಾಗಿದೆ. ಆದರೆ ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತ್ರ ಸ್ಮಾರ್ಟ್ ಮೀಟರ್ ಟೆಂಡರ್‌ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಬಿಜೆಪಿ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದೆ. ಕೆಟಿಪಿಪಿ ಕಾಯ್ದೆ ಪ್ರಕಾರವಾಗಿಯೇ ಟೆಂಡರ್ ಕರೆದು ಬಿಡ್ ಪೂರ್ವ ಸಭೆಯಲ್ಲಿ ಆಸಕ್ತ ಬಿಡ್ಡುದಾರರ ಪ್ರಶ್ನೆಗಳಿಗೆ ಉತ್ತರಿಸಲಾಗಿತ್ತು. ಬಳಿಕ ಅತಿ ಕಡಿಮೆ ಬಿಡ್ ಮಾಡಿದ್ದ ರಾಜಶ್ರೀ ಎಂಟರ್‌ಪ್ರೈಸಸ್‌ನವರಿಗೆ ಗುತ್ತಿಗೆ ನೀಡಲಾಗಿದೆ ಎಂದೂ ಸಚಿವರು ಹೇಳಿಕೊಂಡಿದ್ದಾರೆ.

ಇದೇನೇ ಆದರೂ ಸದ್ಯ ಜನರ ಮುಂದಿರುವುದು ಸ್ಮಾರ್ಟ್ ಮೀಟರ್‌ಗೆ ಅಷ್ಟೊಂದು ಬೆಲೆ ಏಕೆ ಎಂಬ ಪ್ರಶ್ನೆ. ಇತರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್‌ ಬೆಲೆ 900 ರೂಪಾಯಿ ಆಗಿದೆ. ಹೀಗಿರುವಾಗ ನಾಲ್ಕು ಪಟ್ಟು ಅಧಿಕ ಬೆಲೆಯನ್ನು ವಿಧಿಸಿರುವುದು ಏಕೆ? ಈ ರೀತಿ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿದರೆ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಬಡವರು ಹಣ ಹೊಂದಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗಳು ಸದ್ಯ ಚರ್ಚೆಯಲ್ಲಿವೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...