ʼಶಿಕ್ಷಣ ನೀತಿ ಕರ್ನಾಟಕದ ಮಾದರಿʼ ಹೇಗಿರಬೇಕು ; ದುಂಡು ಮೇಜಿನ ಸಭೆಯ ಸಲಹೆಗಳೇನು? ಇಲ್ಲಿದೆ ವಿವರ

Date:

ಬೆಂಗಳೂರಿನಲ್ಲಿ ಶುಕ್ರವಾರ  ಜಾಗೃತ ಕರ್ನಾಟಕ ಆಯೋಜಿಸಿದ್ದ ’ಶಿಕ್ಷಣ ನೀತಿಗಾಗಿ ಕರ್ನಾಟಕದ ಮಾದರಿʼ ದುಂಡುಮೇಜಿನ ಸಭೆಯಲ್ಲಿ ಹಲವು ಕ್ಷೇತ್ರದ ತಜ್ಞರು, ವಿದ್ಯಾರ್ಥಿಗಳು ಭಾಗವಹಿಸಿದ್ದರು

ಪುಟ್ಟ ಪುಟ್ಟ ಹಳ್ಳಿಗಳಿಗೂ ತಲುಪುವ ರೀತಿಯಲ್ಲಿ ರಾಜ್ಯ ಶಿಕ್ಷಣ ನೀತಿ ಜಾರಿಯಾಗಬೇಕು. ಶಿಕ್ಷಣದ ಜೊತೆಗೆ ಸರ್ಕಾರವನ್ನು ಎಂಗೇಜ್‌ ಮಾಡುವ ಮೆಕ್ಯಾನಿಸಂ ಬೇಕು. 0-18 ವರ್ಷದೊಳಗಿನ ಮಕ್ಕಳು ರಾಜ್ಯ ಶಿಕ್ಷಣ ನೀತಿಗೆ ಒಳಪಡಬೇಕು. ಸಾರ್ವಜನಿಕ ಹೂಡಿಕೆ ಮೇಲೆ ನಿಗಾ ಇಡಲು ಜಂಟಿ ಕ್ರಿಯಾ ಸಮಿತಿ ಬೇಕು. ಮಾತೃಭಾಷೆಯ ಸ್ಥಾನದ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕು; ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ ಬಗ್ಗೆ ಗೊಂದಲ ಇರಬಾರದು. ಇತಿಹಾಸವನ್ನು ಇತಿಹಾಸವಾಗಿಯೇ ಉಳಿಸಬೇಕು; ಬದಲಾಯಿಸಲು ಅವಕಾಶ ಇರಬಾರದು. ಕೆಲವು ಡೆಡ್‌ ಸಬ್ಜೆಕ್ಟ್‌ಗಳನ್ನು ಉಳಿಸಿಕೊಳ್ಳಬೇಕೇ ಬೇಡವೇ ಎಂಬ ನಿರ್ಧಾರವಾಗಬೇಕು. ಬಡ ಮಕ್ಕಳ ಸಬಲೀಕರಣಕ್ಕೆಂದೇ ಇರುವ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ ಪ್ರವೇಶಕ್ಕೆ ಇರುವ ಪರೀಕ್ಷೆ ರದ್ದುಪಡಿಸಬೇಕು. ಐದನೇ ತರಗತಿಯವರೆಗೆ ಕನ್ನಡದಲ್ಲೇ ಕಡ್ಡಾಯವಾಗಿ ಶಿಕ್ಷಣ ನೀಡಬೇಕು; ಆರನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು.

ಬೆಂಗಳೂರಿನಲ್ಲಿ ಜಾಗೃತ ಕರ್ನಾಟಕ ಆಯೋಜಿಸಿದ್ದ ʼಶಿಕ್ಷಣ ನೀತಿಗಾಗಿ ಕರ್ನಾಟಕದ ಮಾದರಿʼ ದುಂಡುಮೇಜಿನ ಸಭೆಯಲ್ಲಿ ಇಂತಹ ಹಲವು ಸಲಹೆಗಳು ಬಂದವು. ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಿದ್ದರಾಮಯ್ಯ ಸರ್ಕಾರ ಸಿದ್ಧತೆಗಳನ್ನು ಮಾಡಲು ಶುರು ಮಾಡಿರುವ ಬೆನ್ನಲ್ಲೇ ಪ್ರಗತಿಪರ ಮನಸ್ಸುಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಮುಖಂಡರು ಸೇರಿ ಮಾದರಿ ಶಿಕ್ಷಣ ನೀತಿಯನ್ನು ರೂಪಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಿದರು.

ಜರ್ಮನಿಯಲ್ಲಿ ಪಾಲಿಸಿ ಅನಲಿಸ್ಟ್‌ ಆಗಿರುವ ಸುಚಿತ್ರಾ ಅವರು, ರಾಜ್ಯ ಶಿಕ್ಷಣ ನೀತಿ ರೂಪಿಸುವವರಲ್ಲಿ ಯಾರು ಇರಬೇಕು ಮತ್ತು ಏನೆಲ್ಲ ಇರಬೇಕು ಎಂಬುದು ಮುಖ್ಯ. ತಳಮಟ್ಟದ ಸಮಸ್ಯೆಗಳನ್ನು, ಅಗತ್ಯಗಳನ್ನು ಅರಿತವರು ಸಮಿತಿಯಲ್ಲಿ ಇರಬೇಕು. ಪುಟ್ಟ ಪುಟ್ಟ ಹಳ್ಳಿಗಳಿಗೂ ತಲುಪುವಂತಹ ಶಿಕ್ಷಣ ನೀತಿ ರೂಪಿಸಬೇಕು. ಇದರಲ್ಲಿ ರಾಜ್ಯ, ದೇಶ, ವಿದೇಶಗಳ ಭವಿಷ್ಯ ನಿಂತಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶಿಕ್ಷಣ ತಜ್ಞ ಬಿ ಶ್ರೀಪಾದ್‌ ಭಟ್‌ ಮಾತನಾಡಿ, ಇದುವರೆಗಿನ ಯಾವುದೇ ಶಿಕ್ಷಣ ನೀತಿ ಸರಿಯಾಗಿ ಜಾರಿಯಾಗಿಲ್ಲ. ಶಿಕ್ಷಣ ನೀತಿ ಪಿಎಚ್‌ಡಿ ತರ ಆಗಬಾರದು. ಶಿಕ್ಷಣದ ಜೊತೆಗೆ ಸರ್ಕಾರವನ್ನು ಎಂಗೇಜ್‌ ಆಗಿ ಇಡುವಂತಹ ಮೆಕ್ಯಾನಿಸಂ ಬೇಕು. ಸಾರ್ವಜನಿಕ ಶಿಕ್ಷಣ ಸಬಲೀಕರಣ ಆಯೋಗ ರಚನೆಯಾಗಬೇಕು. ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಮಾಡಬೇಕು. ಬಹುಶಿಸ್ತೀಯ ಮತ್ತು ಅಂತರ್‌ಶಿಸ್ತೀಯ ಬೋಧನಾ ಪದ್ದತಿ ಇರಬೇಕು. ಸಾಂಪ್ರದಾಯಿಕ ಶಿಕ್ಷಣ ಪದ್ದತಿ ಮುಂದುವರೆಯಬಾರದು ಎಂದು ಸಲಹೆ ನೀಡಿದರು.

ಬರಹಗಾರ ವಿಕಾಸ್‌ ಆರ್‌ ಮೌರ್ಯ ಅವರು, ದುರ್ಬಲ ವರ್ಗದ ಮಕ್ಕಳ ಸಬಲೀಕರಣ ರಾಜ್ಯ ಶಿಕ್ಷಣ ನೀತಿಯ ಮುಖ್ಯ ಗುರಿಯಾಗಬೇಕು. ವಸತಿ ಶಾಲೆಗಳಿಗೆ ಇರುವ ಪ್ರವೇಶ ಪರೀಕ್ಷೆ ರದ್ದು ಮಾಡಬೇಕು. ಸರ್ಕಾರವೇ ಸಂಜೆ ಶಾಲೆಗಳನ್ನು ತೆರೆಯಬೇಕು ಎಂಬ ಸಲಹೆ ನೀಡಿದರು.

ಶಿಕ್ಷಣ ತಜ್ಞೆ ಯು ಟಿ ಫರ್ಜಾನಾ ಅವರು ಹೆಣ್ಣುಮಕ್ಕಳ ಪರವಾದ ಸಲಹೆಗಳನ್ನು ನೀಡಿದರು. ಬೇರೆ ಬೇರೆ ರಾಜ್ಯದ ಜನರ ಆದ್ಯತೆಗಳು ಬೇರೆ ಬೇರೆ ಇರುತ್ತವೆ. ಹಾಗಿರುವಾಗ ಇಡೀ ದೇಶಕ್ಕೆ ಒಂದು ಬಗೆಯ ನಿಯಮ ಮಾಡುವುದು ಸರಿಯಲ್ಲ. ಎನ್‌ಇಪಿಯಲ್ಲಿ ಇನ್‌ ಅಂಡ್‌ ಎಕ್ಸಿಟ್‌ಗೆ ಅವಕಾಶ ಇದೆ. ಆದರೆ ಹೆಣ್ಣುಮಕ್ಕಳು ಒಮ್ಮೆ ಎಕ್ಸಿಟ್‌ ಆದರೆ ಮತ್ತೆ ಇನ್‌ ಆಗುವ ಸ್ಥಿತಿ ಇಲ್ಲ. ರಾಜ್ಯ ಶಿಕ್ಷಣ ನೀತಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.

ಕರ್ನಾಟಕ ರೀಜನಲ್‌ ಕಮಿಷನ್‌ ಫಾರ್‌ ಎಜುಕೇಷನ್‌ ಕಾರ್ಯದರ್ಶಿ ಡಾ. ಫ್ರಾನ್ಸಿಸ್‌ ಅಲ್ಮೇಡಾ, ಒಬ್ಬ ವ್ಯಕ್ತಿಯ ಪರಿಪೂರ್ಣ ಜೀವನಕ್ಕೆ ಅನುಕೂಲ ಮಾಡುವಂತಹ ಶಿಕ್ಷಣ ನೀತಿ ಬೇಕು. ಒಂಭತ್ತನೇ ತರಗತಿಯವರೆಗೆ ಅನುತ್ತೀರ್ಣಗೊಳಿಸದೇ ಇರುವ ನಿಯಮ ಬೇಕೇ ಎಂಬ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಬೇಕು. ಅಷ್ಟೇ ಅಲ್ಲ ಹೆಣ್ಣಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪೋಕ್ಸೊ ಕಾಯ್ದೆಯನ್ನು ಶಿಕ್ಷಣದಲ್ಲಿ ಅಳವಡಿಸುವ ಬಗ್ಗೆ, ಎಲ್ಲಾ ಮಕ್ಕಳನ್ನು ಸಮಾನವಾಗಿ ನೋಡುವಂತಹ ರೀತಿಯ ಶೈಕ್ಷಣಿಕ ವಾತಾವರಣ ಸೃಷ್ಟಿಸುವಂತಹ ಅಂಶಗಳು ಶಿಕ್ಷಣ ನೀತಿಯಲ್ಲಿ ಇರಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ ಈ ದಿನ ಸಂಪಾದಕೀಯ | ಶೇ 50ರಷ್ಟು ಮಹಿಳಾ ಮುಖ್ಯಮಂತ್ರಿಗಳು !- ಹೇಳಿಕೆಯಾಗೇ ಉಳಿಯದಿರಲಿ, ಅನುಷ್ಠಾನಕ್ಕೂ ಬರಲಿ 

ಪ್ರೊ. ಎಂ ವಿ ರಾಜೀವಗೌಡ ಅವರು ಎನ್‌ಇಪಿಯ ಸಮಸ್ಯೆಗಳ ಬಗ್ಗೆ ಮಾತನಾಡಿದರು.  ಪದವಿಯ ಅವಧಿಯನ್ನು ಮೂರು ವರ್ಷಗಳಿಂದ ನಾಲ್ಕು ವರ್ಷಕ್ಕೆ ವಿಸ್ತರಿಸಿ ಫ್ಲೆಕ್ಸಿಬಿಲಿಟಿ ತಂದಿದ್ದೇವೆ ಎಂದಿದ್ದಾರೆ. ಅಂದರೆ ಮೂರನೇ ವರ್ಷಕ್ಕೆ ಪದವಿಯನ್ನು ಮುಕ್ತಾಯಗೊಳಿಸಬಹುದು. ಆದರೆ, ನಾಲ್ಕು ವರ್ಷ ಪೂರೈಸದವರಿಗೆ ಸಂಶೋಧನಾ ಕ್ಷೇತ್ರಕ್ಕೆ ಪ್ರವೇಶಾತಿ ಸಿಗುವುದಿಲ್ಲ. ಬಡ ವರ್ಗದ ಮಕ್ಕಳು ನಾಲ್ಕು ವರ್ಷದ ಪದವಿ ಪಡೆಯಲು ಹಿಂಜರಿಯುತ್ತಾರೆ. ಡಿಪ್ಲೊಮಾ ಮಾಡುವವರ ಸಂಖ್ಯೆ ಹೆಚ್ಚುತ್ತದೆ. ಸಂವಿಧಾನದ ಸಾಮಾಜಿಕ ನ್ಯಾಯ, ಸಮಾನತೆಯ ಆಶಯಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ ಎಂದರು.
ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಲಾಗುತ್ತದೆ. ರಾಜ್ಯದ ಜನರ ಅಬಿಪ್ರಾಯಗಳನ್ನು ಪಡೆಯಲಾಗುತ್ತದೆ. ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ವಿಜ್ಞಾನಿಗಳು ಹೀಗೆ ಎಲ್ಲ ವರ್ಗದ ಜನರ ಅಭಿಪ್ರಾಯ ಪಡೆಯಲಾಗುತ್ತದೆ. ಆಗ ಈ ಸಭೆಯಲ್ಲಿ ಬಂದ ಸಲಹೆಗಳನ್ನೂ ಪರಿಗಣಿಸಲಾಗುತ್ತದೆ ಎಂದರು.

ಆಮ್‌ ಆದ್ಮಿ ಪಕ್ಷದ ಮುಖಂಡ ರಮೇಶ್‌ ಬೆಲ್ಲಕೊಂಡ, ಹಿಂದಿ ಹೇರಿಕೆಯನ್ನು ತಡೆಯಲು ದ್ವಿಭಾಷಾ ನೀತಿ ರೂಪಿಸಲು ಸಲಹೆ ನೀಡಿದರು. ಹಲವು ವಿದ್ಯಾರ್ಥಿಗಳು, ಬರಹಗಾರರು, ಪತ್ರಕರ್ತರು, ಹೋರಾಟಗಾರರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...