ಪುಲ್ವಾಮಾ ದಾಳಿಗೆ ಏಳು ವರ್ಷ | ಇಂದಿಗೂ ಪ್ರಶ್ನೆಗಳೇ ಹೆಚ್ಚು; ಉತ್ತರಿಸಬೇಕಾದವರು ಗಪ್‌ಚುಪ್!

Date:

ಆನಂದೋ ಭಕ್ತೊ ಪ್ರಕಟಿಸಿದ ತನಿಖಾ ವರದಿಗಳು ರಾಷ್ಟ್ರಮಟ್ಟದಲ್ಲಿ ಹೆಚ್ಚು ಗಮನ ಸೆಳೆದಿರುವಂತದ್ದು. ಭಕ್ತೊ ನಡೆಸಿದ ತನಿಖೆ ಪ್ರಕಾರ ಪುಲ್ವಾಮಾ ದಾಳಿಗೂ ಮುನ್ನವೇ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯು ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಬಗ್ಗೆ ಸುಮಾರು 11-12 ಗುಪ್ತಚರ ಎಚ್ಚರಿಕೆಗಳು ಬಂದಿದ್ದವು.

ಏಳು ವರ್ಷಗಳ ಹಿಂದೆ ಇದೇ ದಿನ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜಿಲ್ಲೆಯ ಲೆಥ್ಪೊರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಭದ್ರತಾ ಸಿಬ್ಬಂದಿಗಳಿದ್ದ ವಾಹನದ ಮೇಲೆ ಬಾಂಬ್ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿಕ 2019ರ ಫೆಬ್ರವರಿ 26ರಂದು ಪುಲ್ವಾಮಾ ಪ್ರತೀಕಾರವಾಗಿ ಎಲ್‌ಒಸಿ ದಾಟಿ ಪಾಕಿಸ್ತಾನದ ಬಾಲಕೋಟ್‌ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿದೆ ಎಂದು ಹೇಳಿತು. ಈ ಎಲ್ಲಾ ಘಟನೆ ನಡೆದು ಏಳು ವರ್ಷಗಳಾಗಿವೆ. ಆದರೆ ಇಂದಿಗೂ ಹಲವು ಪ್ರಶ್ನೆಗಳು ಉತ್ತರವಿಲ್ಲದೆ ಉಳಿದಿದೆ. ಉತ್ತರ ನೀಡಬೇಕಾದವರು ಗಪ್‌ಚುಪ್ ಆಗಿದ್ದಾರೆ ಮತ್ತು ಇತರರನ್ನೂ ಮೌನವಾಗಿಸುತ್ತಿದ್ದಾರೆ!

ಈ ದಾಳಿಗಳಿಗೂ 2019ರ ಲೋಕಸಭೆ ಚುನಾವಣೆಗೂ ನಂಟು ಹೆಣೆದುಕೊಂಡಿದ್ದು, ಬರೀ ವಿಪಕ್ಷಗಳಲ್ಲ. ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸೇರಿದಂತೆ ಕೆಲವು ಬಿಜೆಪಿಯ ನಾಯಕರು, ಅದರಲ್ಲೂ ಮುಖ್ಯವಾಗಿ ಬಿಜೆಪಿ ಹಿನ್ನೆಲೆಯುಳ್ಳ ಆಗಿನ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಎತ್ತಿದ ಪ್ರಶ್ನೆಗಳು ಪ್ರಧಾನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಅದರಲ್ಲೂ 2021ರ ಫೆಬ್ರವರಿಯಲ್ಲಿ ಆಂಗ್ಲ ಪತ್ರಿಕೆ ಫ್ರಂಟ್‍ಲೈನ್‍ನ ಸಂಚಿಕೆಯಲ್ಲಿ ಹಿರಿಯ ಸಂಪಾದಕ ಆನಂದೋ ಭಕ್ತೊ ಬಹಿರಂಗಪಡಿಸಿದ ಮಾಹಿತಿ ನಮ್ಮೆಲ್ಲರವನ್ನೂ ಹುಬ್ಬೇರಿಸಿ ನೋಡುವಂತೆ ಮಾಡಿತ್ತು. ಆದರೆ ಗೋದಿ ಮಾಧ್ಯಮಗಳಿಗೆ ಮಾತ್ರ ಇಂದಿಗೂ ಈ ಎಲ್ಲಾ ಅನುಮಾನ, ಪ್ರಶ್ನೆಗಳು ಸಾಸಿವೆಯಷ್ಟು ಸಣ್ಣದಾಗಿಯಾದರೂ ಕಣ್ಣಿಗೆ ಕಾಣುತ್ತಿಲ್ಲ.

ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ ಗೆಲ್ಲಲು ಮತ್ತೆ ‘ಪುಲ್ವಾಮಾ, ಬಾಲಕೋಟ್’ ರೀತಿಯ ದಾಳಿ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆನಂದೋ ಭಕ್ತೊ ಪ್ರಕಟಿಸಿದ ತನಿಖಾ ವರದಿಗಳು ರಾಷ್ಟ್ರಮಟ್ಟದಲ್ಲಿ ಹೆಚ್ಚು ಗಮನ ಸೆಳೆದಿರುವಂತದ್ದು. ಭಕ್ತೊ ನಡೆಸಿದ ತನಿಖೆ ಪ್ರಕಾರ ಪುಲ್ವಾಮಾ ದಾಳಿಗೂ ಮುನ್ನವೇ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯು ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಬಗ್ಗೆ ಸುಮಾರು 11-12 ಗುಪ್ತಚರ ಎಚ್ಚರಿಕೆಗಳು ಬಂದಿದ್ದವು. ಅಷ್ಟು ಮಾತ್ರವಲ್ಲದೆ ದಾಳಿಯ ಮಾಸ್ಟರ್‌ಮೈಂಡ್ ಎಂದು ಕರೆಯಲಾಗುವ ಮುದಾಸಿರ್ ಅಹ್ಮದ್ ಖಾನ್ ಬಗ್ಗೆಗಿನ ಮಾಹಿತಿ, ಬಾಂಬ್ ದಾಳಿಗೆ ನಡೆಸುತ್ತಿರುವ ಸಂಚಿನ ಬಗ್ಗೆ ಹಲವು ದಿನಗಳ ಮುನ್ನವೇ ಮಾಹಿತಿ ತಿಳಿದಿತ್ತು. ಇವೆಲ್ಲವನ್ನೂ ಭಕ್ತೊ ತಮ್ಮ ತನಿಖಾ ವರದಿಯಲ್ಲಿ ದಾಖಲೆ ಸಹಿತವಾಗಿ ವಿವರಿಸಿದ್ದಾರೆ.

2019ರ ಫೆಬ್ರವರಿ 13ರಂದು ಅಂದರೆ ಪುಲ್ವಾಮಾ ದಾಳಿ ನಡೆಯುವ ಒಂದು ದಿನಕ್ಕೂ ಮುನ್ನವೇ ಐಇಡಿ ದಾಳಿಯ ಬಗ್ಗೆ ನಿರ್ದಿಷ್ಟ ಸುಳಿವು ಸಿಕ್ಕಿದ್ದರೂ ಮರುದಿನ 2,500ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದ ಬೃಹತ್ ಬೆಂಗಾವಲು ಪಡೆಗೆ ರಸ್ತೆಯ ಮೂಲಕ ಪ್ರಯಾಣಿಸಲು ಸರ್ಕಾರ ಅವಕಾಶ ನೀಡಿದ್ದು ಯಾಕೆ ಎಂದು ಬೊಟ್ಟು ಮಾಡಿ ಕೇಳಿದಾಗ ಬರುವ ಉತ್ತರ ‘ಚುಪ್’. ಬಿಜೆಪಿಯ ಸತ್ಯಪಾಲ್ ಮಲಿಕ್‌ ಜತೆಯೂ ನಡೆದುಕೊಂಡಿರುವುದು ಹೀಗೆಯೇ.

2019ರ ಪುಲ್ವಾಮಾ ದಾಳಿಯ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದವರು ದಿವಂಗತ ಸತ್ಯಪಾಲ್ ಮಲಿಕ್. ಕೇಂದ್ರ ಸರ್ಕಾರದ ವಿರುದ್ಧ ಗಂಭೀರವಾದ ಭದ್ರತಾ ಲೋಪದ ಆರೋಪಗಳನ್ನು ಮಾಡಿದ್ದರು. ಬಿಜೆಪಿಯ ಮಲಿಕ್ ಹೇಳುವಂತೆ, “ಸಿಆರ್‌ಪಿಎಫ್ ಯೋಧರನ್ನು ಕರೆದೊಯ್ಯಲು 5 ವಿಮಾನಗಳ ವ್ಯವಸ್ಥೆ ಮಾಡಬೇಕು ಎಂದು ಗೃಹ ಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರವು ಈ ಮನವಿಯನ್ನು ತಿರಸ್ಕರಿಸಿದೆ. ಇದರಿಂದಾಗಿ ಯೋಧರು ರಸ್ತೆ ಮಾರ್ಗವಾಗಿ ಪ್ರಯಾಣಿಸುವಂತಾಯಿತು. ಇದು ದಾಳಿಗೆ ಪ್ರಮುಖ ಕಾರಣ”.

ಅಷ್ಟು ಮಾತ್ರವಲ್ಲದೆ ಈ ಭದ್ರತಾ ಲೋಪಗಳ ಬಗ್ಗೆ ಎಲ್ಲಿಯೂ ಮಾತನಾಡದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಮಗೆ ಸೂಚಿಸಿದ್ದರು. ಕೇಂದ್ರ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಿ, 2019ರ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಈ ಘಟನೆಗಳನ್ನು ಬಳಸಿಕೊಂಡಿತ್ತು ಎಂದೂ ಮಲಿಕ್ ದೂರಿದ್ದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಬಾಯಿಂದ ಹೊರಳಿದ ಸತ್ಯವನ್ನೂ ನೆನಪಿಸೋಣ. 2019ರಲ್ಲಿ ಯಡಿಯೂರಪ್ಪ ಅವರು, “ಬಾಲಾಕೋಟ್ ವೈಮಾನಿಕ ದಾಳಿಯು ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ 22ಕ್ಕೂ ಅಧಿಕ ಲೋಕಸಭೆ ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡಲಿದೆ” ಎಂದು ಹೇಳಿದ್ದರು. ಅಂದರೆ ಭದ್ರತಾ ವೈಫಲ್ಯ ನಿರ್ಲಕ್ಷಿಸಿ ದಾಳಿ ನಡೆಯಲು ಅವಕಾಶ ಮಾಡಿಕೊಟ್ಟಿದ್ದು, ಚುನಾವಣೆಯ ಲಾಭಕ್ಕಾಗಿಯೇ?

ಇದನ್ನು ಓದಿದ್ದೀರಾ? ನಿರ್ಲಕ್ಷ್ಯವೇ ಅಥವಾ ಪಿತೂರಿಯೇ? ಪುಲ್ವಾಮಾದ ಸಂಪೂರ್ಣ ಸತ್ಯ ದೇಶ ಕೇಳುತ್ತಿದೆ…

ಈ ಸಂದರ್ಭದಲ್ಲಿ ಪುಲ್ವಾಮಾ ದಾಳಿ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್, ಸಮಾಜವಾದಿ ಪಕ್ಷದ ಸಂಸದ ಸನಾತನ್ ಪಾಂಡೆ ನೀಡಿರುವ ಹೇಳಿಕೆಗಳನ್ನೂ ಒಮ್ಮೆ ನೆನಪಿಸಿಕೊಳ್ಳೋಣ. 2025ರ ಡಿಸೆಂಬರ್ 31ರಂದು ಸನಾತನ್ ಪಾಂಡೆ “ಪುಲ್ವಾಮಾ ದಾಳಿಯು 2019ರ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹೂಡಿದ ರಾಜಕೀಯ ಪಿತೂರಿ. ನೀಡಿದ ಭರವಸೆ ಈಡೇರಿಸಲಾಗದ ಕಾರಣ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ದಾಳಿಗಳನ್ನು ಸಂಘಟಿಸಲಾಗಿದೆ” ಎಂದು ಹೇಳಿಕೆ ನೀಡಿದ್ದು, ಅದು ವಿವಾದಕ್ಕೆ ಕಾರಣವಾಗಿತ್ತು. ಇನ್ನೊಂದೆಡೆ 2024ರ ಏಪ್ರಿಲ್‌ನಲ್ಲಿ ಪರಮೇಶ್ವರ್ ಅವರು ಪುಲ್ವಾಮಾ ದಾಳಿಯಲ್ಲಿ ಕೇಂದ್ರ ಸರ್ಕಾರದ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬ್ರಿಟಿಷ್ ಪತ್ರಿಕೆ ‘ದಿ ಗಾರ್ಡಿಯನ್’ ಪ್ರಕಟಿಸಿದ ವರದಿ ಉಲ್ಲೇಖಿಸಿದ್ದ ಪರಮೇಶ್ವರ್ ಅವರು, 2019ರ ಚುನಾವಣೆಗೂ ಮುನ್ನ ನಡೆದ ಈ ದಾಳಿಯ ಹಿಂದೆ ಬಿಜೆಪಿಯ ತಂತ್ರವಿತ್ತೇ ಎಂಬರ್ಥದಲ್ಲಿ ಪ್ರಶ್ನಿಸಿದ್ದರು. ಪುಲ್ವಾಮಾ ದಾಳಿ ದೊಡ್ಡ ಮಟ್ಟದ ಗುಪ್ತಚರ ವೈಫಲ್ಯ ಎಂದು ಟೀಕಿಸಿದ್ದರು. ದಾಳಿಯ ಹೊಣೆಯನ್ನು ಜೈಶ್-ಎ-ಮೊಹಮ್ಮದ್ ಹೊತ್ತಿರುವಾಗ ನಿಮ್ಮ ತಗಾದೆ ಯಾಕೆ ಎಂಬುದು ಬಿಜೆಪಿಗರ ಪ್ರಶ್ನೆ.

ಪುಲ್ವಾಮಾದಲ್ಲಿ ದಾಳಿ ನಡೆಸಿದ್ದು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (JeM). ಆ ಸಂಘಟನೆಯೇ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಪುಲ್ವಾಮಾ ಜಿಲ್ಲೆಯ ಕಾಕಪೋರಾ ನಿವಾಸಿ, ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್ ದಾರ್ (22 ವರ್ಷ) ಎಂಬಾತ ಸ್ಫೋಟಕಗಳನ್ನು ಹೊಂದಿದ್ದ ವಾಹನವನ್ನು ಸಿಆರ್‌ಪಿಎಫ್ ಬೆಂಗಾವಲು ಪಡೆಗೆ ಗುದ್ದಿಸಿ ಈ ದಾಳಿಯನ್ನು ನಡೆಸಿದ್ದನು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಲ್ಲಿಸಿದ ಆರೋಪಪಟ್ಟಿಯ ಪ್ರಕಾರ, ಈ ದಾಳಿಯ ಮುಖ್ಯ ಸಂಚುಕೋರ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್. ಹೀಗಿರುವಾಗ ದಾಳಿ ರಾಜಕೀಯ ಲಾಭಕ್ಕಾಗಿ ನಡೆದ ಪಿತೂರಿ ಎನ್ನುವುದು ‘ದೇಶದ್ರೋಹ’ ಎಂಬುದು ಬಿಜೆಪಿಗರ ವಾದ.

ಆದರೆ ಸುಮಾರು 11-12 ಗುಪ್ತಚರ ಎಚ್ಚರಿಕೆಗಳು ಬಂದಿದ್ದರೂ ಸರ್ಕಾರ ನಿರ್ಲಕ್ಷಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಬಿಜೆಪಿಗರಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿ ಬಳಿಯಾಗಲಿ ಉತ್ತರವಿಲ್ಲ! ದೇಶಭಕ್ತಿ, ದೇಶದ್ರೋಹ ಎಂಬ ಚರ್ಚೆಗೆ ಇಳಿದು ಈ ಭದ್ರತಾ ವೈಫಲ್ಯದ ಬಗ್ಗೆ ಜನರು ಮರೆಯುವಂತೆ ಮಾಡುವುದು ಅಲ್ಲವೇ? ಗುಪ್ತಚರ ಮಾಹಿತಿ ಇದ್ದರೂ ಅದನ್ನು ನಿರ್ಲಕ್ಷಿಸಿ 40 ಜೀವಗಳನ್ನು ಬಲಿಪಡೆದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳುವುದಾದರೂ ಯಾವಾಗ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...