ದಿಲ್ಲಿಗೆ ಬಾಂಬ್ ಬಿದ್ದಿದೆ, ಪ್ರಧಾನಿ ಮೋದಿ ಎಂದಿನಂತೆ ವಿದೇಶ ಪ್ರವಾಸದಲ್ಲಿದ್ದಾರೆ!

Date:

ದೇಶದ ಮೇಲೆ ದಾಳಿಗಳು ನಡೆದಾಗ, ಮೋದಿಯವರು ವಿದೇಶ ಪ್ರವಾಸದಲ್ಲಿರುತ್ತಾರೆ; ಇಲ್ಲವೇ ರಾಜಕೀಯ ಸಭೆಗಳಲ್ಲಿ ಭಾಗಿಯಾಗಿರುತ್ತಾರೆ. ಪ್ರಧಾನಿಗಳ ಈ ನಡೆಯನ್ನು ಪ್ರತಿಪಕ್ಷಗಳು, 'ಬಿಸಿನೆಸ್ ಆಸ್ ಯೂಝುಯಲ್' ಎಂದು ವ್ಯಂಗ್ಯವಾಡುತ್ತವೆ...

ದೇಶದ ರಾಜಧಾನಿ ದಿಲ್ಲಿಯಲ್ಲಿ ನವೆಂಬರ್ 10ರಂದು ಸಂಜೆ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಈವರೆಗೆ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 

ದೆಹಲಿಯಲ್ಲಿ ನಡೆದ ಈ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಕೇವಲ 13 ಕೀ.ಮೀ ದೂರದಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಎಂದಿನಂತೆ ವಿದೇಶ ಪ್ರವಾಸಕ್ಕೆ ವಿಮಾನ ಹತ್ತಿದ್ದಾರೆ. ಟಾಟಾ ಬೈ ಬೈ ಹೇಳಿದ್ದಾರೆ. ಭೂತಾನ್ ದೇಶಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಪ್ರಧಾನಿ ಮೋದಿಯವರ ಈ ನಡೆ ಹೊಸದೇನೂ ಅಲ್ಲ. ದೇಶದ ಮೇಲೆ ಈ ರೀತಿಯ ದಾಳಿಗಳು ನಡೆದಾಗ, ಮೋದಿಯವರು ವಿದೇಶ ಪ್ರವಾಸದಲ್ಲಿರುತ್ತಾರೆ; ಇಲ್ಲವೇ ರಾಜಕೀಯ ಸಭೆಗಳಲ್ಲಿ ಭಾಗಿಯಾಗಿರುತ್ತಾರೆ. ಇದನ್ನು ಗಮನಿಸಿರುವ ಪ್ರತಿಪಕ್ಷಗಳು ಪ್ರಧಾನಿಗಳ ಈ ನಡೆಯನ್ನು ‘ಬಿಸಿನೆಸ್ ಆಸ್ ಯೂಝುಯಲ್’ ಎಂದು ವ್ಯಂಗ್ಯವಾಡಿದ್ದೂ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಮೋದಿ, ಶಾ ಬೆಂಬಲದ ಬಲಪಂಥೀಯ ಶಕ್ತಿಗಳು ದೆಹಲಿ ಬಾಂಬ್ ಸ್ಫೋಟ ನಡೆಸಿರುವ ಸಾಧ್ಯತೆ: ಆದರ್ಶ್ ಅಯ್ಯರ್ ಆರೋಪ

ಈ ಕ್ಷಣದಲ್ಲಿ ನಾವು ಗಮನಿಸಬೇಕಾದ ಬಹು ಮುಖ್ಯವಾದ ವಿಚಾರವೆಂದರೆ- ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಡೆಯನ್ನು; ಅವರಿಗೂ ಇವರಿಗೂ ಇರುವ ವ್ಯತ್ಯಾಸವನ್ನು; ಜನಪರ ಪ್ರಧಾನಿ ಯಾರು ಎನ್ನುವುದನ್ನು.

ಅದಕ್ಕೆ ಒಂದು ಉತ್ತಮ ಉದಾಹರಣೆಯಾಗಿ ಇದನ್ನು ನೋಡಬಹುದು.  

2008ರಲ್ಲಿ ಮುಂಬೈನ ತಾಜ್ ಹೋಟೆಲ್ ಸೇರಿದಂತೆ ಹಲವು ಸ್ಥಳಗಳ ಮೇಲೆ ಭಯೋತ್ಪಾದಕರು ದಾಳಿ ಮಾಡಿ, ಹಲವರ ಸಾವು ನೋವಿಗೆ ಕಾರಣವಾಗಿದ್ದರು. ಆಗ ಪ್ರಧಾನಿಗಳಾಗಿದ್ದ ಡಾ. ಮನಮೋಹನ್ ಸಿಂಗ್, ಆ ತಕ್ಷಣವೇ ಮುಂಬೈಗೆ ತೆರಳಿ, ಸುದ್ದಿಗಾರರ ಮುಂದೆ ನಿಂತು ಭಯೋತ್ಪಾದಕರ ಕೃತ್ಯವನ್ನು ಖಂಡಿಸಿದ್ದರು. ಮತ್ತು ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಭಯೋತ್ಪಾದಕರ ದಾಳಿಯಾಗಿ ನಾಲ್ಕು ದಿನಗಳ ನಂತರ, ಭದ್ರತಾ ವೈಫಲ್ಯವನ್ನು ಒಪ್ಪಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದು, ಪ್ರಜಾಪ್ರಭುತ್ವದಲ್ಲಿ ಸರ್ಕಾರವೊಂದು ಸ್ಪಂದಿಸಬೇಕಾದ ರೀತಿ, ಜನ ನಿರೀಕ್ಷಿಸುವ ನಡೆ. ಆದರೆ ಮೋದಿಯವರ ಹನ್ನೊಂದು ವರ್ಷಗಳ ಆಳ್ವಿಕೆಯಲ್ಲಿ ಈ ರೀತಿಯ ನಡೆ ಮತ್ತು ನಿರೀಕ್ಷೆಗಳನ್ನು ಕಂಡಿದ್ದೀರಾ?

2019ರಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ CRPF ಕನ್‌ವಾಯ್ ಮೇಲೆ ಸುಸೈಡ್ ಬಾಂಬ್ ದಾಳಿಯಾಯಿತು. 40ಕ್ಕೂ ಹೆಚ್ಚು ಸೇನಾ ಯೋಧರು ಅಸುನೀಗಿದರು. ಅಸುನೀಗಿದವರು ಸಾಮಾನ್ಯರಲ್ಲ, ದೇಶದ ರಕ್ಷಣೆಗೆ ನಿಂತ ಯೋಧರು. ಆದರೂ ಪ್ರಧಾನಿ ಮೋದಿಯವರು ಪತ್ರಿಕಾಗೋಷ್ಠಿ ಕರೆಯಲಿಲ್ಲ, ಕೃತ್ಯವನ್ನು ಖಂಡಿಸಲಿಲ್ಲ.

ಬದಲಿಗೆ, ಮೋದಿಯವರು ಉತ್ತರಾಖಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್‌ನಲ್ಲಿ ಕ್ಯಾಮರಾಗಳ ಮುಂದೆ ನಿಂತು ಹಲ್ಕಿರಿಯುತ್ತಿದ್ದರು, ಡಾಕ್ಯುಮೆಂಟರಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ದಾಳಿಯಾಗಿ ಎರಡು ಗಂಟೆಗಳ ನಂತರ ಅವರು ರಾಜಕೀಯ ಸಭೆಯಲ್ಲಿ ಭಾಗವಹಿಸಿದರು. ಅದೂ ಫೋನ್ ಮೂಲಕ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ, ದಾಳಿಯ ಬಗ್ಗೆ ಚಕಾರ ಎತ್ತಲಿಲ್ಲ. ಅಷ್ಟೇ ಅಲ್ಲ, ದಾಳಿಯಾದ 7 ದಿನಗಳ ನಂತರ ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡರು.

ಇನ್ನು ಇತ್ತೀಚಿಗೆ ನಡೆದ ಘಟನೆಯನ್ನು ನೆನಪಿಸಿಕೊಳ್ಳುವುದಾದರೆ… 2025ರ ಏಪ್ರಿಲ್‌ನಲ್ಲಿ ನಡೆದ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗಳ ಮೇಲೆ ನಡೆದ ಭಯೋತ್ಪಾದಕರ ದಾಳಿಗೆ 26 ಜನ ಅಮಾಯಕರು ಅಸುನೀಗಿದರು.

ಆ ಸಂದರ್ಭದಲ್ಲೂ ಅಷ್ಟೇ… ಪ್ರಧಾನಿ ಮೋದಿಯವರು ಸೌದಿ ಅರೇಬಿಯಾ ಪ್ರವಾಸದಲ್ಲಿದ್ದರು. ಸುದ್ದಿ ತಿಳಿದ ತಕ್ಷಣ ಪ್ರವಾಸವನ್ನು ಮೊಟಕುಗೊಳಿಸಿ, ಭಾರತಕ್ಕೆ ಬಂದು ಸುದ್ದಿಗಾರರ ಮುಂದೆ ಬಂದು ನಿಲ್ಲಲಿಲ್ಲ. ಭಯೋತ್ಪಾದಕರ ಕೃತ್ಯ ಖಂಡಿಸಲಿಲ್ಲ. ಬದಲಿಗೆ, ಸಚಿವ ಸಂಪುಟ ಸಭೆ ಕರೆದರು. ನಂತರ ಬಿಹಾರಕ್ಕೆ ತೆರಳಿ, ರಾಜಕೀಯ ಸಭೆಯಲ್ಲಿ ಭಾಗಿಯಾದರು. ವೀರಾವೇಷದ ಭಾಷಣ ಬಿಗಿದರು. ಆನಂತರ, 25 ದಿನಗಳ ನಂತರ ಯಥಾಪ್ರಕಾರ, ವಿದೇಶಕ್ಕೆ ಹಾರಿದರು.

modi 1751432123408 1751432135463

ಹೋಗಲಿ, ವಿದೇಶ ಪ್ರವಾಸ ಮಾಡುವ ಮೂಲಕವಾದರೂ ದೇಶಕ್ಕೆ ಅನುಕೂಲವಾಗಿದೆಯೇ ಎಂದರೆ, ಅದೂ ಇಲ್ಲ. ಪ್ರಧಾನಿ ಮೋದಿಯವರು ಇಲ್ಲಿಯವರೆಗೆ, 2014ರಿಂದ 2025ರವರೆಗೆ, ಸುಮಾರು 92 ಅಂತಾರಾಷ್ಟ್ರೀಯ ಪ್ರವಾಸಗಳನ್ನು ಕೈಗೊಂಡಿದ್ದಾರೆ. 78 ದೇಶಗಳನ್ನು ಸುತ್ತಿದ್ದಾರೆ. ಅಗ್ರಮಾನ್ಯ ನಾಯಕರನ್ನು ಭೇಟಿ ಮಾಡಿದ್ದಾರೆ.

ಮೋದಿಯವರ ವಿದೇಶ ಪ್ರವಾಸ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ‘100ಕ್ಕೂ ಹೆಚ್ಚು ವಿದೇಶ ಪ್ರವಾಸ ಕೈಗೊಂಡರೂ, ಭಾರತದ ಮೇಲಾಗುತ್ತಿರುವ ಭಯೋತ್ಪಾದಕರ ದಾಳಿಯ ವಿರುದ್ಧ ಜಾಗತಿಕ ಬೆಂಬಲ ಪಡೆಯಲಾಗಿಲ್ಲ’ ಎನ್ನುವುದು ಮೋದಿಯವರ ನಾಯಕತ್ವವನ್ನು ನಿಕಷಕ್ಕೆ ಒಡ್ಡುತ್ತದೆ. ಹಾಗೆಯೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ‘ಬಿಸಿನೆಸ್ ಆಸ್ ಯೂಝುಯಲ್’ ಎನ್ನುವ ಹೇಳಿಕೆಗೆ ಪುಷ್ಟಿ ನೀಡುತ್ತದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...