ಮದ್ಯ ಹಗರಣದಿಂದಲೇ ಎಎಪಿ-ಕೇಜ್ರಿವಾಲ್ ಸೋಲು: ಅಣ್ಣಾ ಹಜಾರೆ

Date:

ದೆಹಲಿಯಲ್ಲಿ ಎಎಪಿ ಸೋಲಿಗೆ ಅರವಿಂದ್ ಕೇಜ್ರಿವಾಲ್ ಅವರೆ ಕಾರಣ, ಎಎಪಿ ನಾಯಕರು ಭ್ರಷ್ಟಾಚಾರ-ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿಂದಲೇ ಪಕ್ಷ ಸೋತಿದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

2013ರಲ್ಲಿ ಅಣ್ಣಾ ಹಜಾರೆ ‘ಭ್ರಷ್ಟಚಾರ ವಿರೋಧಿ ಆಂದೋಲನ’ ಆರಂಭಿಸಿದ್ದರು. ಅವರೊಂದಿಗೆ ಅರವಿಂದ್ ಕೇಜ್ರಿವಾಲ್ ಕೂಡ ಸಕ್ರಿಯರಾಗಿದ್ದರು. ಆಂದೋಲನದಿಂದ ದೇಶಾದ್ಯಂತ ಗುರುತಿಸಿಕೊಂಡ ಕೇಜ್ರಿವಾಲ್ ಎಎಪಿ ಕಟ್ಟಿದ್ದರು. ಆದಾಗ್ಯೂ, 2014ರ ಲೋಕಸಭಾ ಚುನಾವಣೆ ಆ ನಂತರದಲ್ಲಿ ಅಣ್ಣಾ ಹಜಾರೆ ಕಾಣೆಯಾಗಿದ್ದರು. ಇದೀಗ, ಎಎಪಿ ಸೋಲು ಖಚಿತವಾಗುತ್ತಿದ್ದಂತೆ ಮತ್ತೆ ಮಾಧ್ಯಮಗಳ ಮುಂದೆ ಬಂದಿರುವ ಹಜಾರೆ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಚುನಾವಣೆಯಲ್ಲಿ ಅಭ್ಯರ್ಥಿಗಳು ಬಲವಾದ ವ್ಯಕ್ತಿತ್ವ, ಒಳ್ಳೆಯ ಆಲೋಚನೆಗಳು ಹಾಗೂ ಸ್ವಚ್ಛ ಇಮೇಜ್ ಹೊಂದಿರಬೇಕು. ಆದರೆ, ಎಎಪಿ ನಾಯಕರಿಗೆ ಅದು ಇರಲಿಲ್ಲ. ಮದ್ಯ ಮತ್ತು ಹಗರಣಗಳಲ್ಲಿ ಎಎಪಿ ನಾಯಕರು ಸಿಲುಕಿಕೊಂಡಿದ್ದರು. ಈ ಆರೋಪಗಳು ಕೇಜ್ರಿವಾಲ್ ಇಮೇಜ್‌ಅನ್ನು ಅಳಿಸಿಹಾಕಿದೆ” ಎಂದು ಹಜಾರೆ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...