ರಾಜಸ್ಥಾನದಲ್ಲಿ ನಿನ್ನೆ ಚುನಾವಣಾ ಭಾಷಣ ಮಾಡುತ್ತಾ, ಮುಸಲ್ಮಾನರ ವಿರುದ್ಧ ಖುದ್ದು ದ್ವೇಷ ಭಾಷಣಗೈದಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶಾದ್ಯಂತ ವಿವಾದಕ್ಕೆ ನಾಂದಿ ಹಾಡಿದ ಬೆನ್ನಲ್ಲೇ ಇಂದು ಯೂ ಟರ್ನ್ ಹೊಡೆದಿದ್ದಾರೆ.
ನಿನ್ನೆ(ಏ.21) ಮಾತನಾಡುತ್ತಾ, ‘ದೇಶದ ಸಂಪತ್ತನ್ನು ಒಟ್ಟುಗೂಡಿಸಿ, ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುವುದು ಕಾಂಗ್ರೆಸ್ನ ಪ್ರಣಾಳಿಕೆ’ ಎಂದು ಕಾಂಗ್ರೆಸ್ನ ಪ್ರಣಾಳಿಕೆಯನ್ನು ಟೀಕಿಸುವ ಭರದಲ್ಲಿ ಪ್ರಧಾನಿ ಮೋದಿ ದ್ವೇಷ ಭಾಷಣಗೈದಿದ್ದರು.
BIG BREAKING 🚨
Narendra Modi already on backfoot after delivering a self-goal yesterday ⚡
Modi today said he wants 𝗵𝗶𝘀 𝗠𝘂𝘀𝗹𝗶𝗺 𝗯𝗿𝗼𝘁𝗵𝗲𝗿𝘀 & 𝘀𝗶𝘀𝘁𝗲𝗿𝘀 to go for Haj & he is working for them.
It’s funny how he is trying to makeup for yesterday’s hate speech… pic.twitter.com/rC1nKJduVO
— Ankit Mayank (@mr_mayank) April 22, 2024
ಇದು ವ್ಯಾಪಕ ವಿವಾದವಾಗುತ್ತಿದ್ದಂತೆಯೇ ಇಂದು ಯೂ ಟರ್ನ್ ಹೊಡೆದಿದ್ದು, ತಮ್ಮ ಇಂದಿನ ಭಾಷಣದಲ್ಲಿ ತ್ರಿವಳಿ ತಲಾಖ್, ಹಜ್ ಕೋಟಾಗಳನ್ನು ಪ್ರಸ್ತಾಪಿಸುತ್ತಾ ‘ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾಗಿದ್ದಾರೆ.
ಇಂದು ಉತ್ತರ ಪ್ರದೇಶದ ಅಲೀಘಡ್ನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಹಿಂದೆ, ಕಡಿಮೆ ಹಜ್ ಕೋಟಾದ ಕಾರಣ, ಸಾಕಷ್ಟು ಹೊಡೆದಾಟಗಳು ನಡೆಯುತ್ತಿದ್ದವು. ಲಂಚವು ಅಲ್ಲಿ ಸಾಮಾನ್ಯವಾಗಿತ್ತು ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಹಜ್ಗೆ ಹೋಗಲು ಅವಕಾಶವಿತ್ತು. ಆದರೆ, ಇಂದು ಭಾರತದಲ್ಲಿನ ಹಜ್ ಕೋಟಾವನ್ನು ಹೆಚ್ಚಿಸುವಂತೆ ನಾನು ಸೌದಿ ಅರೇಬಿಯಾದ ಯುವರಾಜನಿಗೆ ಮನವಿ ಮಾಡಿದ್ದೆ. ಅಲ್ಲದೇ, ವೀಸಾ ನಿಯಮಗಳನ್ನು ಕೂಡ ನಮ್ಮ ಸರ್ಕಾರವು ಮುಸ್ಲಿಮರಿಗೆ ಸುಲಭಗೊಳಿಸಿದೆ” ಎಂದು ಹೇಳಿದ್ದಾರೆ.
“ಈ ಹಿಂದೆ ನಮ್ಮ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರು ಹಜ್ಗೆ ಏಕಾಂಗಿಯಾಗಿ ಹೋಗಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಮುಹ್ರಿಮ್(ಮೇಲುಸ್ತುವಾರಿ) ಇಲ್ಲದೆ ಹಜ್ಗೆ ಹೋಗಲು ಆಗುತ್ತಿರಲಿಲ್ಲ. ಈಗ ನಮ್ಮ ಸರ್ಕಾರವು ಮುಹ್ರಿಮ್ ಇಲ್ಲದೆಯೂ ಹಜ್ಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ಹಲವು ಮುಸ್ಲಿಂ ತಾಯಂದಿರ ಹಜ್ಗೆ ತೆರಳುವ ಕನಸು ಈಡೇರಿದೆ” ಎಂದು ಮೋದಿ ತಮ್ಮ ಭಾಷಣದಲ್ಲಿ ನುಡಿದಿದ್ದಾರೆ.
#WATCH | Uttar Pradesh: Addressing a public rally in Aligarh, PM Narendra Modi says, “Parties like Congress and SP have always done appeasement politics and have never done anything for the political, social and economic upliftment of Muslims. When I discuss the plight of… pic.twitter.com/ttV6Oh0nfD
— ANI (@ANI) April 22, 2024
“ಕಾಂಗ್ರೆಸ್ ಮತ್ತು ಎಸ್ಪಿಯಂತಹ ಪಕ್ಷಗಳು ಯಾವಾಗಲೂ ತುಷ್ಟೀಕರಣದ ರಾಜಕಾರಣ ಮಾಡುತ್ತಿವೆ. ಮುಸ್ಲಿಮರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗಾಗಿ ಎಂದಿಗೂ ಏನನ್ನೂ ಮಾಡಿಲ್ಲ. ತ್ರಿವಳಿ ತಲಾಖ್ಗೆ ಬಲಿಯಾದ ಅನೇಕ ಹೆಣ್ಣುಮಕ್ಕಳ ಜೀವನವು ನಾಶವಾಯಿತು. ತ್ರಿವಳಿ ತಲಾಖ್ನಿಂದಾಗಿ ಮಗಳು, ಅವಳ ತಂದೆ, ಸಹೋದರ ಮತ್ತು ಕುಟುಂಬ ಎಲ್ಲರೂ ತೊಂದರೆಗೀಡಾಗುತ್ತಿದ್ದರು. ನಾನು ದೇಶದಲ್ಲಿ ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿ ಮಾಡುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳ ಜೀವನವನ್ನು ಭದ್ರಪಡಿಸಿದ್ದೇನೆ” ಎಂದು ಪ್ರಧಾನಿ ನರೇಂದ್ರ ಮೋದಿ, ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದಾರೆ.
ರಾಜಸ್ಥಾನ | ಮುಸಲ್ಮಾನರ ವಿರುದ್ಧ ಖುದ್ದು ದ್ವೇಷ ಭಾಷಣಗೈದ ಪ್ರಧಾನಿ ನರೇಂದ್ರ ಮೋದಿ!
‘ದೇಶದ ಸಂಪತ್ತನ್ನು ಒಟ್ಟುಗೂಡಿಸಿ, ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುವುದು ಕಾಂಗ್ರೆಸ್ನ ಪ್ರಣಾಳಿಕೆ’ ಎಂದ ಮೋದಿ!
ವಿಡಿಯೋ ವೈರಲ್: ವಿವಾದಕ್ಕೆ ನಾಂದಿ ಹಾಡಿದ ಪ್ರಧಾನಿ#ModiTohGayo #NarendraModi #LokSabhaElections2024 pic.twitter.com/IhX7RZs7QV
— eedina.com (@eedinanews) April 21, 2024





