ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶನಿವಾರ ಬಿಹಾರದ ಸರನ್ ಜಿಲ್ಲೆಯಲ್ಲಿ ‘ಮತದಾರ ಅಧಿಕಾರ ಯಾತ್ರೆ’ಯಲ್ಲಿ ಭಾಗಿಯಾಗಿದ್ದಾರೆ. ಅಖಿಲೇಶ್ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಬಿಹಾರದ ವಿಪಕ್ಷ ನಾಯಕ ತೇಜಸ್ವಿ ಯಾದವ್ ಜೊತೆ ಸೇರಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, “ದೇಶದ ಪ್ರಜಾಪ್ರಭುತ್ವವನ್ನು ನಾಶಮಾಡಲು ಪ್ರಯತ್ನ ನಡೆಸುತ್ತಿರುವ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಯಾದವ್ ದೃಢವಾದ ಮಿತ್ರ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರದಲ್ಲಿ ರಾಹುಲ್ ಗಾಂಧಿ ‘ಮತದಾರರ ಅಧಿಕಾರ ಯಾತ್ರೆ’
“ಇಂದು ಬೆಳಿಗ್ಗೆ, ಯುಪಿಯ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಸರನ್‌ನಲ್ಲಿ ‘ಮತದಾರ ಅಧಿಕಾರ ಯಾತ್ರೆ’ಯಲ್ಲಿ ಜೊತೆಯಾದರು. ಪ್ರಜಾಪ್ರಭುತ್ವವನ್ನು ರಕ್ಷಿಸುವ ಈ ಐತಿಹಾಸಿಕ ಆಂದೋಲನಕ್ಕೆ ಅವರನ್ನು ಸ್ವಾಗತಿಸಲಾಯಿತು. ಬಿಜೆಪಿ ನಮ್ಮ ಪ್ರಜಾಪ್ರಭುತ್ವವನ್ನು ನಾಶಮಾಡುವುದರ ವಿರುದ್ಧದ ನಮ್ಮ ಹೋರಾಟದಲ್ಲಿ ಅವರು ದೃಢ ಮಿತ್ರರಾಗಿದ್ದಾರೆ. ಯುಪಿ ಮತ್ತು ದೇಶಾದ್ಯಂತ ಬಡವರು ಮತ್ತು ಹಿಂದುಳಿದವರಿಗೆ ಬಲವಾದ ಧ್ವನಿಯಾಗಿದ್ದಾರೆ” ಎಂದು ವೇಣುಗೋಪಾಲ್ ಪೋಸ್ಟ್ ಮಾಡಿದ್ದಾರೆ.
आज सुबह, उत्तर प्रदेश के पूर्व मुख्यमंत्री श्री अखिलेश यादव जी सारण में वोटर अधिकार यात्रा में शामिल हुए!
— K C Venugopal (@kcvenugopalmp) August 30, 2025
लोकतंत्र की रक्षा के लिए इस ऐतिहासिक आंदोलन में उनका स्वागत है। वे भाजपा के इशारों पर हो रहे लोकतंत्र के विनाश के खिलाफ हमारी लड़ाई में एक अडिग सहयोगी रहे हैं और उत्तर… pic.twitter.com/cgi7XV8o7c
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕಿ ತೇಜಸ್ವಿ ಯಾದವ್ ಅವರನ್ನು ಯಾದವ್ ಭೇಟಿಯಾದ ಛಾಯಾಚಿತ್ರಗಳನ್ನೂ ಹಂಚಿಕೊಂಡಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ ಕೂಡ ಹಾಜರಿದ್ದರು. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಆಚಾರ್ಯ ಅವರು ಸರನ್‌ನಿಂದ ಸ್ಪರ್ಧಿಸಿ, ಆ ಸ್ಥಾನವನ್ನು ಗೆಲ್ಲುವಲ್ಲಿ ವಿಫಲರಾಗಿದ್ದರು.
ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಆಗಸ್ಟ್ 17ರಂದು ರೋಹ್ತಾಸ್ ಜಿಲ್ಲೆಯ ಸಸಾರಾಮ್‌ನಿಂದ ಕಾಂಗ್ರೆಸ್ ‘ಮತದಾರ ಅಧಿಕಾರ ಯಾತ್ರೆ’ಯನ್ನು ಆರಂಭಿಸಿದ್ದಾರೆ. ಈ ಯಾತ್ರೆಗೆ ಇಂಡಿಯಾ ಒಕ್ಕೂಟವೂ ಬೆಂಬಲ ನೀಡಿದೆ. ಸೆಪ್ಟೆಂಬರ್ 1ರಂದು ಪಟನಾದಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.
ಯಾತ್ರೆಯು ಇಲ್ಲಿಯವರೆಗೆ ಗಯಾಜಿ, ನವಾಡ, ಶೇಖ್‌ಪುರ, ಲಖಿಸರೈ, ಮುಂಗೇರ್, ಕಟಿಹಾರ್, ದರ್ಭಂಗಾ, ಮಧುಬನಿ, ಸೀತಾಮರ್ಹಿ, ಮುಜಫರ್‌ಪುರ, ಪೂರ್ಣಿಯಾ, ಪಶ್ಚಿಮ ಚಂಪಾರಣ್, ಗೋಪಾಲ್‌ಗಂಜ್, ಪೂರ್ವ ಚಂಪಾರಣ್ ಮತ್ತು ಸಿವಾನ್ ಜಿಲ್ಲೆಗಳನ್ನು ದಾಟಿ ಸಾಗಿದೆ. ಇನ್ನು ಭೋಜ್‌ಪುರ ಮತ್ತು ಪಟನಾ ಮೂಲಕ ಸಾಗಲಿದೆ.





