ಅಂಬೇಡ್ಕರ್‌ ಚಿತ್ರದ ಅರ್ಧ ಭಾಗಕ್ಕೆ ಅಖಿಲೇಶ್ ಯಾದವ್ ಫೋಟೋ; ವ್ಯಾಪಕ ಆಕ್ರೋಶ

Date:

ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಎಡಿಟ್‌ ಮಾಡಿ, ಅಂಬೇಡ್ಕರ್ ಚಿತ್ರದ ಅರ್ಧ ಭಾಗಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಚಿತ್ರವನ್ನು ಸೇರಿಸಿ, ಫೋಟೋ ಫ್ರೇಮ್‌ ಮಾಡಲಾಗಿದೆ. ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಅರ್ಧ ಅಂಬೇಡ್ಕರ್ ಚಿತ್ರ, ಇನ್ನರ್ಧ ಅಖಿಲೇಶ್ ಚಿತ್ರವಿರುವ ಫೋಟೋವೊಂದು ಬುಧವಾರ ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ವೈರಲ್ ಆಗಿರುವ ಚಿತ್ರದಲ್ಲಿ ಡಾ. ಅಂಬೇಡ್ಕರ್ ಮತ್ತು ಅಖಿಲೇಶ್ ಅವರ ತಲೆ ಮತ್ತು ಭುಜಗಳ ಅರ್ಧ ಕಟೌಟ್‌ಗಳನ್ನು ಪರಸ್ಪರ ಹತ್ತಿರದಲ್ಲಿ ಅಂಟಿಸಲಾಗಿದೆ. ಇಬ್ಬರ ಚಿತ್ರವನ್ನು ಬಿಳಿ ರೇಖೆಯೊಂದು ವಿಭಜಿಸಿದೆ.

ಅಂಬೇಡ್ಕರ್ ಮತ್ತು ಅಖಿಲೇಶ್ ಇರುವ ಚಿತ್ರವನ್ನು ಸಮಾಜವಾದಿ ಪಕ್ಷದ ಕಾರ್ಯಕ್ರಮಕ್ಕೆ ಜನರನ್ನು ಸ್ವಾಗತಿಸುವ ಸಂದೇಶದ ಪೋಸ್ಟರ್‌ಗಾಗಿ ಎಡಿಡ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಡಿಟ್ ಮಾಡಿರುವ ಚಿತ್ರವನ್ನು ಬಿಜೆಪಿ ಟೀಕಿಸಿದೆ. ‘ಭಾರತದ ಸಂವಿಧಾನದ ಶಿಲ್ಪಿಗೆ ಇದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ’ ಎಂದು ಹೇಳಿದೆ.

ಕೇಂದ್ರ ಕಾನೂನು ಸಚಿವ, ಬಿಜೆಪಿ ನಾಯಕ ಅರ್ಜುನ್ ರಾಮ್ ಮೇಘವಾಲ್, ಬಿಜೆಪಿ ಸಾಮಾಜಿಕ ಮಾಧ್ಯಮದ ಉಸ್ತುವಾರಿ ಅಮಿತ್ ಮಾಳವೀಯ, “ಅಖಿಲೇಶ್‌ ಯಾದವ್ ಅವರು ಸಂವಿಧಾನವನ್ನು ರಚಿಸಿದ ಪ್ರಸಿದ್ಧ ವಕೀಲ, ದಲಿತ ನಾಯಕ ಡಾ. ಅಂಬೇಡ್ಕರ್ ಅವರನ್ನು ಅಗೌರವಿಸಿದ್ದಾರೆ. ಬಿಜೆಪಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ಅಂಬೇಡ್ಕರರ ಪರಂಪರೆಯ ಕುರಿತು ಆಗ್ಗಾಗ್ಗೆ ಜಗಳವಾಡುತ್ತವೆ” ಎಂದು ಹೇಳಿದ್ದಾರೆ.

“1952ರ ಚುನಾವಣೆಯಲ್ಲಿ ಬಾಬಾಸಾಹೇಬರನ್ನು ಸೋಲಿಸುವಲ್ಲಿ ಪಾತ್ರ ವಹಿಸಿದ್ದ ಪಕ್ಷದೊಂದಿಗೆ (ಕಾಂಗ್ರೆಸ್‌) ಸಮಾಜವಾದಿ ಪಕ್ಷ ಕೆಲಸ ಮಾಡುತ್ತಿದೆ. ಸಮಾಜವಾದಿ ಪಕ್ಷದ ಸಂಸ್ಥಾಪಕರು (ಮುಲಾಯಂ ಸಿಂಗ್) ಮತ್ತು ಅಂಬೇಡ್ಕರ್ ಸ್ವಜನಪಕ್ಷಪಾತವನ್ನು ವಿರೋಧಿಸುತ್ತಿದ್ದರು. ಆದರೆ, ಅಖಿಲೇಶ್ ಅವರ ಸಿದ್ಧಾಂತಗಳು ಅಂಬೇಡ್ಕರರ ಆಶಯಗಳಿಗೆ ಹೊಂದಿಕೆಯಾಗುವುದಿಲ್ಲ” ಎಂದು ಅರ್ಜುನ್ ಮೇಘವಾಲ್ ಹೇಳಿದ್ದಾರೆ.

“ಅಖಿಲೇಶ್ ಮತ್ತು ಅವರ ಪಕ್ಷವು ಅಂಬೇಡ್ಕರ್ ಪರಂಪರೆಗೆ ತಕ್ಕಂತೆ ಬದುಕಲು ಸಾಧ್ಯವಿಲ್ಲ. ಅಂಬೇಡ್ಕರರ ಮುಖವನ್ನು ವಿರೂಪಗೊಳಿಸಿ ಅಖಿಲೇಶ್ ಯಾದವ್ ಅವರ ಮುಖವನ್ನು ಅದರ ಮೇಲೆ ಹೇರುವುದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ. ಅಖಿಲೇಶ್ ಯಾದವ್ ಎಷ್ಟೇ ಬಾರಿ ಪುನರ್ಜನ್ಮ ಪಡೆದರೂ ಅಂಬೇಡ್ಕರರಂತೆ ಶ್ರೇಷ್ಠತೆಯನ್ನು ಪಡೆಯಲು ಸಾಧ್ಯವಿಲ್ಲ” ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ಈ ಪೋಸ್ಟರ್‌ಅನ್ನು ಟೀಕಿಸಿದ್ದಾರೆ. “ಎಸ್‌ಪಿಯ ಭ್ರಷ್ಟ ಮನಸ್ಥಿತಿಯ ಪ್ರತಿಬಿಂಬ ಮತ್ತು ಬಾಬಾಸಾಹೇಬ್ ಅವರನ್ನು ಅವಮಾನಿಸುವ ಉದ್ದೇಶಪೂರ್ವಕ ಪ್ರಯತ್ನಿವಿದು” ಎಂದಿದ್ದಾರೆ.

ಈ ಪೋಸ್ಟರ್ ವಿವಾದದ ಬಗ್ಗೆ ಅಖಿಲೇಶ್ ಯಾದವ್ ಆಗಲೀ,

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...