ಸಾಮಾನ್ಯರ ತರಹ ಕಾಣುವ ಅಸಾಮಾನ್ಯ ಕೋಣಂದೂರು ಲಿಂಗಪ್ಪ

Date:

ನಂಬಿದ ಸಿದ್ಧಾಂತದ ಬದುಕಿನೊಳಗೆ ಸರಳತೆಯನ್ನು ರೂಢಿಸಿಕೊಳ್ಳಲು ಕೆಲವರಿಗಷ್ಟೇ ಆಗುತ್ತದೆ. ಎಲ್ಲಾ ಮಾನವೀಯ ಗುಣಗಳನ್ನು ಇಟ್ಟುಕೊಂಡು ಸರಳ-ಸಹಜ ಆಗಲಿಕ್ಕೆ ಅವರಿಗೆ ಬುದ್ಧನ ಬದ್ಧತೆ ಬೇಕಾಗುತ್ತದೆ. ಅಂತಹ ಬದ್ಧತೆ ಉಳ್ಳವರು ಕೋಣಂದೂರು ಲಿಂಗಪ್ಪನವರು... 

ಸುಳ್ಳುಗಳ ಸರಮಾಲೆ, ದುರಾಸೆ, ವಂಚನೆ, ಸ್ವಜನ ಪಕ್ಷಪಾತದ ನಿರ್ದಯಿ ರಾಜಕಾರಣ ನೋಡುತ್ತಿರುವ ಕರ್ನಾಟಕದಲ್ಲಿ ಒಮ್ಮೆ ಸಮಾಜವಾದ ನಂಬಿದ ರಾಜಕಾರಣಿಗಳು ಇದ್ದರು ಎಂದು ನಂಬದಂತಹ ಸ್ಥಿತಿ ಈಗ ಇದೆ. ಕೆಲವು ಸಮಾಜವಾದಿಗಳು ಸುಲಭಕ್ಕೆ ಆಮಿಷಗಳಿಗೆ ತುತ್ತಾಗಿ ಭ್ರಷ್ಟರಾಗಿದ್ದು ಕಣ್ಣಮುಂದೆ ಇದೆ. ಕೋಣಂದೂರು ಲಿಂಗಪ್ಪನವರು ಮಾತ್ರ ಮೇಲೆ ಹೇಳಿದ ಯಾವುದೇ ಅಪವಾದಗಳಿಗೆ ಒಳಗಾಗದೆ ಸರಳ ಸಜ್ಜನರಾಗಿ ಉಳಿದ ಮನುಷ್ಯ. ಅವರನ್ನು ಹಲವು ದಶಕಗಳಿಂದ ಬಲ್ಲ ನನಗೆ ಅವರ ಕೆಲವು ನೇರ ಸರಳ ನಡೆಗಳಿಂದ ವಿಚಲಿತನಾಗಿದ್ದೇನೆ. ಮತ್ತೆ ಮತ್ತೆ ಅವರ ಜೊತೆ ಕಳೆದ ಕೆಲವು ದಿನಗಳು ನೆನಪಿಗೆ ಬರುತ್ತವೆ. ಒಬ್ಬ ವ್ಯಕ್ತಿ ಇಷ್ಟೊಂದು ಸಹಜ-ಸರಳವಾಗಿ ಇರಲು ಸಾಧ್ಯವೆ? ನನಗೆ ನಮ್ಮ ಅತ್ಯುತ್ತಮ ಸಾಂಸ್ಕೃತಿಕ ಮತ್ತು ರಾಜಕೀಯ ಒಡನಾಟ ಇತ್ತು. ಇದರಲ್ಲಿ ಮತ್ತೆ ಮತ್ತೆ ನನಗೆ ಕೋಣಂದೂರರ ಜೊತೆ ಘಟನೆಗಳು ನೆನಪಾಗುತ್ತವೆ. ಒಬ್ಬ ವ್ಯಕ್ತಿ ಅವರ ತರಹ ಇರಲು ಮಹಾನ್‌ ಗುಂಡಿಗೆಯ ಧೈರ್ಯ ಬೇಕಿರುತ್ತದೆ ಅಂದುಕೊಂಡಿದ್ದೇನೆ.

91-92ರ ಸಮಯ. ಹೆಗಡೆ-ಬೊಮ್ಮಾಯಿ ಸರ್ಕಾರ ಹೋಗಿ ಕಾಂಗ್ರೆಸ್ ಬಂದು ವಿರೇಂದ್ರ ಪಾಟೀಲರು ಹೋಗಿ ಬಂಗಾರಪ್ಪ ಬಂದಿದ್ದರು. ಕೋಣಂದೂರು ಆಗ ಎಂಎಲ್‌ಸಿ ಆಗಿದ್ದರು. ಅವರು ಶಾಸನ ಸಭೆಗಳಲ್ಲಿ ಮಾತನಾಡುತ್ತಿದ್ದುದನ್ನು ಬೇರೊಂದು ಸಂಪುಟದಲ್ಲಿ ತರಬಹುದು. ಏಕೆಂದರೆ ಅವರು ಕೇಳುತ್ತಿದ್ದ ಪ್ರಶ್ನೆಗಳು ಮತ್ತು ಚರ್ಚೆಗಳು ನಮ್ಮ ರಾಜ್ಯದ ಸ್ಥಿತಿ-ಗತಿ ಜೊತೆಗೆ ನಮ್ಮ ಶಾಸನ ಸಭೆ ನಡೆಯುತ್ತಿದ್ದ ಬಗೆಯನ್ನು ಏಕಕಾಲಕ್ಕೆ ನಾವು ಅವುಗಳಿಂದ ನೋಡಬಹುದು. ಕೋಣಂದೂರರ ಬದ್ಧತೆಯನ್ನು ಇವುಗಳಿಂದ ನಾವು ಪಡೆದುಕೊಳ್ಳಬಹುದು.

ಇದನ್ನು ಓದಿದ್ದೀರಾ?: ಸಿದ್ದರಾಮಯ್ಯರ ‘ಸಾವಿರದ ಸರ್ಕಾರ’ದಲ್ಲಿ ಸತ್ತಂತಿರುವವರು…!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಂದು ಸಂಜೆ ನನಗೆ ಅವರು ಫೋನ್‌ ಮಾಡಿ ಬೆಳಿಗ್ಗೆ ಬೇಗ ಬಾ ಪಟೇಲರನ್ನು ನೋಡಬೇಕು– ಅಂತ ಹೇಳಿದರು. ಅದರಂತೆ ಬೆಳಿಗ್ಗೆಯೇ ಅವರ ರೂಂಗೆ ಹೋದೆ. ಹಳೆಯ ಶಾಸಕರ ಭವನದ ಕಟ್ಟಡದ ಮೊದಲನೇ ಮಹಡಿಯಲ್ಲಿ ಅವರ ರೂಂ ಇತ್ತು. ಹಿಂದಿನ ದಿನ ಶಿವಮೊಗ್ಗದಿಂದ ಬಂದವರು ಮಲಗಿರಬಹದು ಎಂದುಕೊಂಡಿದ್ದ ನನಗೆ ಸ್ನಾನ ಮಾಡಿ ಕುಳಿತಿದ್ದ ಅವರನ್ನು ಕಂಡು ಆಶ್ಚರ್ಯವಾಯ್ತು. ‌’ಸಾರ್ ಕಾಫಿ ತರಿಸಲಾ…’ ‘ಛೇ ಛೇ ತರಿಸೋದು ಏನು ಅಲ್ಲಿಗೆ ಹೋಗೋಣವಂತೆ, ಅದಕ್ಕೂ ಮೊದಲು ಜುಬ್ಬ ಇಸ್ತ್ರಿ ಆಗಬೇಕು…’ ಅಂದು ಹೇಳಿ ಒಂದು ಹಳೆಯ ಜುಬ್ಬ ಏರಿಸಿಕೊಂಡರು. ನಾನು ಇವರೇ ಹೋಗುವುದು ಸರಿಯಲ್ಲ ಅನ್ನಿಸಿ ‘ಇಲ್ಲೊಬ್ಬ ಜವಾನ ಓಡಾಡ್ತಿರ್ತಾನಲ್ಲ ಅವನ್ನ ಕರೀತೇನೆ… ಅವನು ಮಾಡಿಸಿಕೊಂಡು ಬರ್ತಾನೆ…’ ಎಂದೆ. ‘ನನಗೇನಾಗಿದೆ ದಾಡಿ… ಅವನು ಯಾರದ್ದೋ ಕೆಲಸ ಮಾಡ್ತಿರಬೇಕು…’ ‘ಸರಿ ಬಿಡಿ, ನೀವು ಇಲ್ಲೇ ಇರಿ, ನಾನು ಮಾಡಿಸಿಕೊಂಡು ಬರ್ತೇನೆ’ ಅಂದೆ. ‘ನೋಡು ಕೃಷ್ಣ ನಮ್ಮ ಕೈಯಲ್ಲಾಗುವ ನಮ್ಮ ಕೆಲಸಕ್ಕೆ ಆಳುಗಳನ್ನು ಉಪಯೋಗಿಸೋದು ಒಂಥರಾ ವಂಚನೆ… ನಡಿ ನಡಿ…’ ಎಂದು ಹೊರಟರು.

ಜುಬ್ಬ ಮತ್ತು ಪೈಜಾಮವನ್ನು ಶಿವಮೊಗ್ಗದಿಂದ ಬಂದವರೇ ರಾತ್ರಿ ತೊಳೆದು ಫ್ಯಾನ್‌ ಗಾಳಿಗೆ ಹಾಕಿದ್ದರಂತೆ. ಎರಡನ್ನೂ ಪತ್ರಿಕೆಯಲ್ಲಿ ಸುತ್ತಿ ಕ್ಯೆಯಲ್ಲಿ ಹಿಡಿದುಕೊಂಡರು. ಇದನ್ನು ಕಂಡು ನನಗೆ ಕಸಿವಿಸಿ ಅನ್ನಿಸಿ ಅವರ ಕೈಯಿಂದ ಕವರ್‌ ಅನ್ನು ಇಸಿದುಕೊಳ್ಳಲು ಹೋದೆ. ‘ಇಷ್ಟೊತ್ತು ನಿನ್ನ ಹತ್ತಿರ ಏನು ಹೇಳಿದೆ. ಮತ್ತೆ ನೀನು ಅದನ್ನೇ ಮಾಡ್ತಾ ಇದ್ದೀಯಾ?’ ಎಂದು ಸಣ್ಣದಾಗಿ ಗದರಿದರು. ನಾನು ಸುಮ್ಮನೆ ಅವರನ್ನು ಹಿಂಬಾಲಿಸಿದೆ. ರೆಸ್ಟೋರೆಂಟ್‌ ಪಕ್ಕದಲ್ಲಿಯೇ ಲಾಂಡ್ರಿ ಇದ್ದು ಅವನು ಇವರನ್ನು ಕಂಡ ಕೂಡಲೇ ಸ್ವಂತದವರಂತೆ ನಕ್ಕು ‘ಒಂದು ಮಾತು ಹೇಳಿದ್ರೆ ನಾನೇ ಬರ್ತಾ ಇದ್ದೆನಲ್ಲಾ ಸಾರ್…‌ ಅರೇ… ಇನ್ನೂ ಹಸಿ ಇದೆ ನೀವೇ ತೊಳಕಂಡ ಹಾಗೆ ಇದೆ…’ ಎಂದು ಲೊಚಗುಟ್ಟಿದ. ‘ಹೌದು… ಮಾರಾಯ ಈ ಬಸ್ಸುಗಳಲ್ಲಿ ಈ ಬಿಳಿ ಖಾದಿ ಬಟ್ಟೆಗಳು ಬಲು ಬೇಗ ಕೊಳೆಯಾಗಿಬಿಡ್ತವೆ ನೋಡು… ನಮ್ಮ ಜೊತೆ ತಿಂಡಿ ತಿನ್ನಕೆ ಬರ್ತಿಯಾ?’ ಎಂದು ಕೇಳುತ್ತಾ… ಇಲ್ಲ ಎಂದ ಅವನಿಗೆ ಸಣ್ಣ ತಮಾಷೆ ಮಾಡಿ ನನ್ನ ಜೊತೆ ನಡೆದರು.

ಕೋಣಂದೂರು ಜೊತೆ ನನಗೆ ಬಹಳ ಒಡನಾಟ. ಅವರು ನನ್ನ ‘ನಂಬಿಕೆಗಳು’ ಸಿನಿಮಾದಲ್ಲಿ ನಟಿಸಿದರು. ಅನಂತ್‌ನಾಗ್‌, ತಾರಾ, ಬಿ.ಜಯಶ್ರಿ, ಏಣಗಿ ನಟರಾಜ್‌ ಅವರೆಲ್ಲಾ ಇವರ ಜೊತೆ ನಟಿಸಿದ್ದರು. ಅಲ್ಲದೆ ನನ್ನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಈಚೆಗೆ ಘಟಿಸಿದ ಒಂದು ಭೇಟಿಯನ್ನು ನೆನಸಿಕೊಳ್ಳುತ್ತೇನೆ. ಕೊರೋನಾ ಕಡೆಯಿಂದ ನಾನು ನನ್ನ ಮಾಸಡಿ ತೋಟದಲ್ಲಿ ಕಳೆಯುವಂತೆ ಆಗಿತ್ತು. ಓಡಾಡಲು ಅನುಮತಿ ಬಂದ ನಂತರ ವಿನೋಭನಗರದಲ್ಲಿರುವ ಅವರ ಮನೆಗೆ ನನ್ನ ಸ್ನೇಹಿತನ ಜೊತೆ ಹೋಗಿದ್ದೆ. ಅಂದೇನೋ ಹಬ್ಬವೆಂದು ಅವರ ಮನೆಯರೆಲ್ಲಾ ಬೇರೆಡೆ ಹೋಗಿದ್ದರು. ನೆಂಟರ ಮನೆಗೆ ಹೋಗಲು ತಯಾರಾಗುತ್ತಿದ್ದರು. ನಾನು ಬಂದಿದ್ದು ಕಂಡು ಒಂದೆರಡು ಗಂಟೆ ಹರಟೆ ಹೊಡೆದು ಮನೆಗೆ ಬೀಗ ಹಾಕಿ ಒಂದು ಹಳೆಯ ಮೊಪೆಡ್‌ ಲೂನಾ ಅನ್ನಿಸುತ್ತೆ ಹೊರತೆಗೆದರು. ನಾನು ನನ್ನ ಕಾರಿನಲ್ಲಿ ಬಿಡುತ್ತೇನೆ ಬನ್ನಿ ಎಂದರೂ ಕೇಳದೆ ಟರ್‌ಟರ್‌… ಶಬ್ಧ ಮಾಡುತ್ತಾ ಹೊರಟರು.

Konandur Lingappa Thirthahalli 1

ನನ್ನೊಂದಿಗೆ ಬಂದ ನನ್ನ ಸ್ನೇಹಿತನಿಗೆ ಅವರನ್ನು ಮತ್ತು ಅವರ ಮನೆಯನ್ನು ನೋಡಿ ಮೂರ್ಛೆ ಹೋಗುವಷ್ಟು ಆಶ್ಚರ್ಯ. ಒಂದೇಸಮನೆ ‘ಏನ್‌ ಮರಾಯ ಇದು… ಅಂತಹ ದೊಡ್ಡ ಮನುಷ್ಯರ ಮನೆಯಾ ಇದು… ಯಕಃಶ್ಚಿತ್‌ ಪಂಚಾಯಿತಿ ಮೆಂಬರ್‌ ಹೋಗಲಿ ಗುಮಾಸ್ತನ ಮನೆಯಲ್ಲೂ ಫಾರಿನ್‌ ಸೋಫಾ ಸೆಟ್‌ಗಳು, ಆಡಂಭರದ ಐಷರಾಮಿ ವಸ್ತುಗಳು ಇರ್ತಾವೆ. ಇವರ ಮನೆಯಲ್ಲಿ ಈ ತರಹ. ಅದು ಸರಿ ಅವರು ಎಂಥಾ ಗಾಡಿ ಇಟ್ಟಕೊಂಡಿದಾರೆ… ದೇವರೇ… ನನ್ನ ಕಣ್ಣ ನಾನೇ ನಂಬಲಿಕ್ಕೆ ಆಗ್ತಯಿಲ್ಲಾ…’ ಎಂದು ಹೇಳುತ್ತಲೇ ಹೋದ. ಅವನು ಅವರ ಬಗ್ಗೆ ಹೇಳಿದ ಯಾವುವು ನನಗೆ ವಿಶೇಷ ಅನ್ನಿಸಲಿಲ್ಲ. ಏಕೆಂದರೆ ಅವರನ್ನು ಮೊದಲಿನಿಂದಲೂ ನೋಡಿಕೊಂಡು ಬಂದವನಾಗಿದ್ದೆ. ‘ಸಾರ್‌… ಈ ಮೊಪೆಡ್‌, ಬೇಡ ಒಂದು ಆಟೋ ಮಾಡ್ಕಂಡು ಓಡಾಡಿ’ ಎಂದರೆ, ‘ಕೃಷ್ಣ… ನಾನಿನ್ನು ಆರೋಗ್ಯದಿಂದ ಇದ್ದೇನೆ…’ ಎನ್ನುತ್ತಾ ಕಣ್ಣು ಮಿಟಿಕಿಸಿದರು.

1988-89ರಲ್ಲಿ ನಾನು ನಿಜಲಿಂಗಪ್ಪನವರ ಬಗ್ಗೆ ಸಾಕ್ಷ್ಯಚಿತ್ರ ಮಾಡಿದೆ. ಅವರ ಜೊತೆ ಮೂರು ತಿಂಗಳು ಎಡತಾಗುತ್ತಿದ್ದೆ. ಒಮ್ಮೆ ಅವರು ಉಳಿದ ಕುಮಾರ ಕೃಪದ ರೂಂನ ಬಾಗಿಲು ಹಾಕದೆ ಬಂದು ಬಿಟ್ಟರು. ‘ಸಾರ್‌… ಬಾಗಿಲು ಹಾಕಿಲ್ಲವಂತೆ… ನಾನು ಹಾಕಿ ಬರುತ್ತೇನೆ…’ ಅಂದೆ. ಅದಕ್ಕೆ ನಿಜಲಿಂಗಪ್ಪನವರು ‘ಅಲ್ಲಿ ತೆಗೆದುಕೊಂಡು ಹೋಗುವಂತಹದ್ದು ಏನೂ ಇಲ್ಲ. ಒಂದೆರಡು ಬಟ್ಟೆಗಳನ್ನು ಬಿಟ್ಟರೆ. ಅಕಸ್ಮಾತ್‌ ಒಯ್ದರು ಅಂತಿಟ್ಟುಕೊಳ್ಳಿ ಹಾಗಾದರೂ ಖಾದಿ ತೊಡಲಿ ಬಿಡಿ…’ ಎಂದು ನಿಜಲಿಂಗಪ್ಪ ಹೇಳಿದ್ದು ಮತ್ತೆ ಮತ್ತೆ ನೆನಪಾಗುತ್ತದೆ. ನಂಬಿದ ಸಿದ್ಧಾಂತದ ಬದುಕಿನೊಳಗೆ ಸರಳತೆಯನ್ನು ರೂಢಿಸಿಕೊಳ್ಳಲು ಕೆಲವರಿಗಷ್ಟೇ ಆಗುತ್ತದೆ. ಎಲ್ಲಾ ಮಾನವೀಯ ಗುಣಗಳನ್ನು ಇಟ್ಟುಕೊಂಡು ಸರಳ-ಸಹಜ ಆಗಲಿಕ್ಕೆ ಅವರಿಗೆ ಬುದ್ಧನ ಬದ್ಧತೆ ಬೇಕಾಗುತ್ತದೆ ಎಂದು ನನಗೆ ಅನ್ನಿಸಿದ್ದಿದೆ.

ನನಗೆ ಗೊತ್ತಿರುವ ಕೋಣಂದೂರು ಲಿಂಗಪ್ಪ ಮೇಲಿನ ಬದ್ಧತೆ ಉಳ್ಳವರು ಎಂಬುದು ನನ್ನ ನಂಬಿಕೆ.

-ಕೃಷ್ಣ ಮಾಸಡಿ

Konandur Lingappa 1 2
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...