ಅಯೋಧ್ಯೆ ಭೂ ವ್ಯವಹಾರ | ರಾಜಕಾರಣಿಗಳು – ಅಧಿಕಾರಿಗಳೇ ರಿಯಲ್‌ ಎಸ್ಟೇಟ್‌ ದಂಧೆಕೋರರು

Date:

ಅಯೋಧ್ಯೆಯಲ್ಲಿ ಇದೇ ವರ್ಷದ ಜನವರಿಯಲ್ಲಿ ಪ್ರಧಾನಿ ಮೋದಿ ರಾಮಮಂದಿರವನ್ನು ಉದ್ಘಾಟಿಸಿದ್ದರು. ಅದೇ ರಾಮಮಂದಿರವನ್ನು ಮುಂದಿಟ್ಟುಕೊಂಡು 2024ರ ಲೋಕಸಭಾ ಚುನಾವಣೆಯಲ್ಲಿ ಮತಬೇಟೆಗೆ ಇಳಿದರು. ಆದರೆ, ಅಯೋಧ್ಯೆಯಲ್ಲಿಯೇ (ಫೈಜಾಬಾದ್) ರಾಮ ಬಿಜೆಪಿ ಕೈಹಿಡಿಯಲಿಲ್ಲ. ಆಡಳಿತಾರೂಢ ಬಿಜೆಪಿ ಹೀನಾಯ ಸೋಲು ಕಂಡಿತು. ಅಲ್ಲಿ, ಎಸ್‌ಪಿ ಅಭ್ಯರ್ಥಿಗೆ ಗೆಲುವು ಸಾಧಿಸಿದರು.

ಇದೆಲ್ಲದರ ನಡುವೆ, ರಾಮಮಂದಿರ ಉದ್ಘಾಟನೆಯಾದ ಬಳಿಕ ಅಯೋಧ್ಯೆಯಲ್ಲಿ ಭೂಮಿಯು ಬೃಹತ್ ಸಾರ್ವಜನಿಕ-ಖಾಸಗಿ ಅಭಿವೃದ್ಧಿ ಪ್ಯಾಕೇಜ್‌ನಿಂದಾಗಿ ‘ರಿಯಲ್ ಎಸ್ಟೇಟ್’ ಭೂಮಿಯಾಗಿ ಪರಿವರ್ತನೆಯಾಗಿದೆ. ಕೃಷಿ ಭೂಮಿಗಳನ್ನು ಸ್ವಾಧೀನಪಡಿಸಿಕೊಂಡು, ಅಭಿವೃದ್ಧಿಯ ಹೆಸರಿನಲ್ಲಿ ಸೈಟ್‌ಗಳನ್ನಾಗಿ ಪರಿವರ್ತಿಸಲಾಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿದ ಬಳಿಕ, 2019ರ ನವೆಂಬರ್ ಮತ್ತು 2024ರ ಮಾರ್ಚ್‌ ನಡುವೆ ಅಯೋಧ್ಯೆ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಭೂ ವ್ಯವಹಾರಗಳ ಸಂಖ್ಯೆ 25ರಿಂದ 30% ಹೆಚ್ಚಾಗಿದೆ. ಅಯೋಧ್ಯೆಯಿಂದ ಕೇವಲ 15 ಕಿಮೀ ವ್ಯಾಪ್ತಿಯಲ್ಲಿದ್ದ ಗೊಂಡಾ ಮತ್ತು ಬಸ್ತಿ ಪ್ರದೇಶಗಳು ಈಗ ಭೂ ವ್ಯವಹಾರದ ಕೇಂದ್ರಗಳಾಗಿವೆ. ಈ ಭೂ ವ್ಯವಹಾರಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಕುಟುಂಬಸ್ಥರು ಹಾಗೂ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವವರೇ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ ಎಂದು ‘ಟಿಐಇ’ ತನಿಖಾ ವರದಿಯಲ್ಲಿ ವಿವರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
  1. ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿ ಚೌನಾ ಮೇನ್: ಅವರ ಮಕ್ಕಳಾದ ಚೌ ಕಾನ್ ಸೆಂಗ್ ಮೇನ್ ಮತ್ತು ಆದಿತ್ಯ ಮೇನ್ ಅವರು ಅಯೋಧ್ಯೆ ಮತ್ತು ಗೊಂಡಾವನ್ನು ಬೇರ್ಪಡಿಸುವ ಸರಯೂ ನದಿಯ ದಡದಲ್ಲಿರುವ ಮಹೇಶ್‌ಪುರದಲ್ಲಿ (ಅಯೋಧ್ಯೆಯಿಂದ 8 ಕಿ.ಮೀ) 2022 ಸೆಪ್ಟೆಂಬರ್‌ ಮತ್ತು 2023ರ ಸೆಪ್ಟೆಂಬರ್‌ ನಡುವೆ 3.72 ಕೋಟಿ ರೂ.ಗೆ 3.99 ಹೆಕ್ಟೇರ್ ಭೂಮಿ ಖರೀದಿಸಿದ್ದಾರೆ. ಅಲ್ಲದೆ, 2023ರ ಏಪ್ರಿಲ್ 25ರಂದು ಅವರು 0.768 ಹೆಕ್ಟೇರ್ ಭೂಮಿಯನ್ನು 98 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಆದಿತ್ಯ ಮೇನ್, ‘ನಾವು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಭೂಮಿಯನ್ನು ಖರೀದಿಸಿದ್ದೇವೆ. ನಾವು ಹೋಟೆಲ್ ನಿರ್ಮಿಸುತ್ತೇವೆ’ ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ, ಅವರು ಕಳೆದ ತಿಂಗಳು ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
  2. ಮಾಜಿ ಸಂಸದ ಬ್ರಿಜ್ ಭೂಷಣ್ ಸಿಂಗ್: ಅವರ ಪುತ್ರ ಕರಣ್ ಭೂಷಣ್ ಅವರು ‘ನಂದಿನಿ ಇನ್‌ಫ್ರಾಸ್ಟ್ರಕ್ಚರ್‌’ ಕಂಪನಿಯನ್ನು ಹೊಂದಿದ್ದಾರೆ. ಆ ಸಂಸ್ಥೆಯು ಅದೇ ಮಹೇಶ್‌ಪುರದಲ್ಲಿ 0.97 ಹೆಕ್ಟೇರ್‌ ಭೂಮಿಯನ್ನು 2023ರ ಜನವರಿಯಲ್ಲಿ 1.15 ಕೋಟಿ ರೂ.ಗೆ ಖರೀದಿಸಿತು. ಅಲ್ಲದೆ, ಆ ಭೂಮಿಯ ಪೈಕಿ 635.72 ಚ.ಮೀ.ಅನ್ನು 60.96 ಲಕ್ಷ ರೂ.ಗೆ 2023ರ ಜುಲೈನಲ್ಲಿ ಮಾರಾಟ ಮಾಡಿದರು.
    ಇದೀಗ, 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕರಣ್ ಭೂಷಣ್, ಕೈಸರ್‌ಗಂಜ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದಾರೆ. ಅಲ್ಲದೆ, ಅವರು ರಾಷ್ಟ್ರೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷರಾಗಿದ್ದರು.
  1. ಯುಪಿ ಪೊಲೀಸ್ ಎಸ್‌ಟಿಎಫ್ ಎಡಿಜಿಪಿ ಅಮಿತಾಭ್ ಯಶ್ (ಐಪಿಎಸ್): ಅವರ ತಾಯಿ ಗೀತಾ ಸಿಂಗ್ ಅವರು ರಾಮಮಂದಿರದಿಂದ 8-13 ಕಿಮೀ ದೂರದಲ್ಲಿರುವ ಮಹೇಶ್‌ಪುರ, ದುರ್ಗಗಂಜ್ (ಗೊಂಡಾ) ಹಾಗೂ ಮೌ ಯದುವಂಶ್ ಪುರದಲ್ಲಿ (ಅಯೋಧ್ಯೆ) 9.955 ಹೆಕ್ಟೇರ್ ಕೃಷಿ ಭೂಮಿಯನ್ನು 4.04 ಕೋಟಿ ರೂ.ಗೆ 2022ರ ಫೆಬ್ರವರಿ ಮತ್ತು 2024ರ ಫೆಬ್ರವರಿಯಲ್ಲಿ ಖರೀದಿಸಿದ್ದಾರೆ. ಇವುಗಳಲ್ಲಿ, ಮಹೇಶ್‌ಪುರದಲ್ಲಿನ 0.505 ಹೆಕ್ಟೇರ್‌ ಭೂಮಿಯನ್ನು 20.40 ಲಕ್ಷ ರೂ.ಗೆ 2023ರ ಆಗಸ್ಟ್ 16ರಂದು ಮಾರಾಟ ಮಾಡಿದ್ದಾರೆ.

ಈ ವರದಿ ಓದಿದ್ದೀರಾ?: ಅಯೋಧ್ಯೆ | ಬಿಜೆಪಿ ನಂಟಿನ ಸಂಸ್ಥೆಯಿಂದ ಪರಿಸರ ಸೂಕ್ಷ್ಮ ಭೂಮಿ ಖರೀದಿಸಿದೆ ಅದಾನಿ ಸಮೂಹ

ಇವಲ್ಲದೆ, ಉತ್ತರ ಪ್ರದೇಶದ ಗೃಹ ಇಲಾಖೆ ಕಾರ್ಯದರ್ಶಿ ಸಂಜೀವ್ ಗುಪ್ತಾ (ಐಪಿಎಸ್), ಉತ್ತರ ಪ್ರದೇಶದ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಅರವಿಂದ್ ಕುಮಾರ್ ಪಾಂಡೆ, ರೈಲ್ವೆ ಉಪ ಮುಖ್ಯ ಇಂಜಿನಿಯರ್ ಮಹಾಬಲ್ ಪ್ರಸಾದ್, ಉತ್ತರ ಪ್ರದೇಶ ಪ್ರಧಾನ ಮುಖ್ಯ ಸಿಬ್ಬಂದಿ ಅಧಿಕಾರಿ (ಉತ್ತರ ಮಧ್ಯ ರೈಲ್ವೆ) ಅನುರಾಗ್ ತ್ರಿಪಾಠಿ, ಹರಿಯಾಣ ಯೋಗ ಆಯೋಗದ ಅಧ್ಯಕ್ಷ ಜಯದೀಪ್ ಆರ್ಯ, ಉತ್ತರ ಪ್ರದೇಶ ಬಿಜೆಪಿ ಶಾಸಕ ಅಜಯ್ ಸಿಂಗ್, ಗೋಸೈಗಂಜ್ ನಗರ ಪಂಚಾಯತಿ ಅಧ್ಯಕ್ಷೆ ವಿಜಯ್ ಲಕ್ಷ್ಮಿ ಜೈಸ್ವಾಲ್ (ಬಿಜೆಪಿ), ಅಮೇಥಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೇಶ್ ಅಗ್ರಹರಿ (ಬಿಜೆಪಿ) ಕೂಡ ಅಯೋಧ್ಯೆ ಬಳಿ ಭೂಮಿ ಖರೀದಿಸಿರುವ ಪ್ರಮುಖ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಎಂದು ವರದಿಯಾಗಿದೆ.

ಈಗ ಹೇಳಿ, ರಾಮಮಂದಿರ ಸ್ಥಾಪಿಸಿದ್ದು ಯಾರಿಗಾಗಿ? ದೇವರು, ಧರ್ಮವನ್ನು ಮುಂದಿಟ್ಟು ಮೋದಿಯವರು ಮತ್ತೊಮ್ಮೆ ಪ್ರಧಾನಿಯಾದರೆ, ಅವರ ಹಿಂಬಾಲಕರು, ಪಕ್ಷದವರು ರಾಮಮಂದಿರದ ಸುತ್ತಮುತ್ತಲ ಜಮೀನು ಖರೀದಿಸಿ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ. ಅಮಾಯಕ ಜನ ಇವರನ್ನು ಹಿಂದೂ ಧರ್ಮದ ರಕ್ಷಕರೆಂದು, ಮತ ನೀಡಿ ಗೆಲ್ಲಿಸಿ ತಮಗೆ ತಾವೇ ಮೋಸ ಹೋಗುತ್ತಿದ್ದಾರೆ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...