ಬಂಗಾಳ ಚುನಾವಣೆ | ಒಂದು ರೀಲ್‌ಗೆ 80,000 ರೂ.; ಇನ್‌ಫ್ಲುಯನ್ಸರ್‌ಗಳಿಗೆ BJP ಭಾರೀ ಆಮಿಷ

Date:

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿನ ಇನ್‌ಫ್ಲುಯನ್ಸರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ರಾಜಕೀಯ ಪಕ್ಷದ ಪರವಾಗಿ ರೀಲ್‌ ಮಾಡುವವರಿಗೆ 80,000 ರೂ.ವರೆಗೆ ಹಣ ಪಾವತಿಸುವುದಾಗಿ ಬಿಜೆಪಿ ಆಮಿಷವೊಡ್ಡಿದೆ ಎಂದು ವರದಿಯಾಗಿದೆ.

ಇಂತಹ ಆಮಿಷದ ಸಂದೇಶ ಪಡೆದವರಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಒಟ್ಟು 43,000ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಕೋಲ್ಕತ್ತಾ ಮೂಲದ ಕಂಟೆಂಟ್ ಕ್ರಿಯೇಟರ್ ಶಾಲಿನಿ ಮುಖರ್ಜಿ ಬ್ಯಾನರ್ಜಿ ಕೂಡ ಒಬ್ಬರು. ಅವರಿಗೆ ಕಳೆದ ವಾರ ಬಿಜೆಪಿ ಪರವಾದ ಏಜೆನ್ಸಿವೊಂದರಿಂದ ಇ-ಮೇಲ್‌ ಬಂದಿದೆ. ಅದರಲ್ಲಿ, ‘ಬಿಜೆಪಿಯ ರಾಜಕೀಯ ಪ್ರಚಾರಕ್ಕಾಗಿ ಸಹಯೋಗ ನೀಡುವ ಸಾಮಾಜಿಕ ಜಾಲತಾಣ ಇನ್‌ಫ್ಲುಯನ್ಸ್‌ರ್‌ಗಳಿಗಾಗಿ ಹುಡುಕುತ್ತಿರುವುದಾಗಿಯೂ, ಸಹಯೋಗ ನೀಡಿದರೆ, ಹಣ ಪಾವತಿಸುವುದಾಗಿಯೂ’ ಏಜೆನ್ಸಿ ಹೇಳಿದೆ ಎಂದು ವರದಿಯಾಗಿದೆ.

ಏಜೆನ್ಸಿ ಕಳಿಸಿದ್ದ ಇ-ಮೇಲ್‌ ಪ್ರಕಾರ, ಬಿಜೆಪಿಯ ಪ್ರಚಾರಕ್ಕೆ ಸಹಯೋಗ ನೀಡಲು ಬಯಸುವವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕನಿಷ್ಠ 20,000 ಫಾಲೋವರ್‌ಗಳನ್ನು ಹೊಂದಿರಬೇಕು. ಸರಾಸರಿ 10,000-15,000 ವೀಕ್ಷಣೆಗಳು ಇರಬೇಕು. ಅಂತಹ ಇನ್‌ಫ್ಲುಯನ್ಸರ್‌ಗಳಿಗೆ ಪ್ರತಿ ರೀಲ್ಸ್‌ಗೆ 10,000 ರೂ.ಗಳಿಂದ 80,000 ರೂ.ವರೆಗೆ ಹಣ ಪಾವತಿ ಮಾಡುವುದಾಗಿ ಏಜೆನ್ಸಿ ಮಾನಂಡ ಹಾಕಿಕೊಂಡಿದೆ. 43,000 ಫಾಲೋವರ್‌ಗಳನ್ನು ಹೊಂದಿರುವ ಶಾಲಿನಿ ಅವರಿಗೆ ಪ್ರತಿ ರೀಲ್‌ಗೆ 20,000 ರೂ. ಹಣದ ಆಫರ್‌ಅನ್ನು ಏಜೆನ್ಸಿ ನೀಡಿದೆ ಎಂದು ವರದಿಗಳು ಹೇಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸ್ವಂತ ಕಂಪನಿ ನಡೆಸುತ್ತಿರುವ ಶಾಲಿನಿ ಅವರು ಈ ಇಮೇಲ್‌ನ ಸ್ಕ್ರೀನ್‌ಶಾಟ್ಅನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಆಫರ್‌ಅನ್ನು ತಿರಸ್ಕರಿಸಿದ್ದೇನೆ ಎಂದು ಶಾಲಿಇ ಹೇಳಿಕೊಂಡಿದ್ದಾರೆ. ಇಂತಹ ಆಫರ್‌ಗಳನ್ನು ಇ-ಮೇಲ್‌ ಮೂಲಕ ಬಂದಿರುವುದು ಶಾಲಿನಿ ಅವರಿಗೆ ಮಾತ್ರವಲ್ಲ, ಹಲವಾರು ಮಂದಿಗೆ ಬಿಜೆಪಿ ಪರವಾಗಿ ಆಫರ್‌ಗಳು ಬಂದಿವೆ. ಆಡಳಿತಾರೂಢ ಟಿಎಂಸಿ ಕೂಡ ಇದೇ ರೀತಿಯ ಆಫರ್‌ಗಳನ್ನು ನೀಡಿದೆ ಎಂದು ‘ದಿ ಟೆಲಿಗ್ರಾಫ್‌’ ಪತ್ತೆ ಮಾಡಿದೆ.

image 104

ಮತ್ತೊಬ್ಬ ಇನ್‌ಫ್ಲುಯನ್ಸರ್‌, ಲೈಫ್‌ಸ್ಟೈಲ್ ವ್ಲಾಗರ್ ಕೋನಿನಿಕಾ ಡೇ ಅವರು ಕೂಡ ತಮಗೆ ಆಫರ್‌ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. “ಡಿಜಿಟಲ್ ಪ್ರಚಾರಕ್ಕಾಗಿ ಎರಡೂ ಪಕ್ಷಗಳು ನನ್ನನ್ನು ಸಂಪರ್ಕಿಸಿವೆ. ಪ್ರತಿ ರೀಲ್‌ಗೆ ಸುಮಾರು 80,000 ರೂ. ಸಂಭಾವನೆಯನ್ನು ನೀಡುವ ಪ್ರಸ್ತಾಪಗಳು ಬಂದಿವೆ. ನಾನು ಆಫರ್‌ಗಳನ್ನು ತಿರಸ್ಕರಿಸಿದ್ದೇನೆ” ಎಂದು ಹೇಳಿದ್ದಾರೆ.

ಬಿಜೆಪಿ ಪರವಾದ ಏಜೆನ್ಸಿಯು, 10,000 ಅಥವಾ ಅದಕ್ಕಿಂತ ಕಡಿಮೆ ಫಾಲೋವರ್‌ಗಳನ್ನು ಹೊಂದಿರುವವರನ್ನು ‘ನ್ಯಾನೋ-ಇನ್‌ಫ್ಲುಯನ್ಸರ್’ಗಳೆಂದು, 10,000ದಿಂದ 1 ಲಕ್ಷ ಫಾಲೋವರ್‌ ಹೊಂದಿದ್ದರೆ, ‘ಮೈಕ್ರೋ-ಇನ್‌ಫ್ಲುಯನ್ಸರ್’ಗಳಾಗಿ, 1 ಲಕ್ಷದಿಂದ 10 ಲಕ್ಷ ಫಾಲೋವರ್‌ಗಳು ಇದ್ದರೆ, ‘ಮ್ಯಾಕ್ರೋ-ಇನ್‌ಫ್ಲುಯನ್ಸರ್’ಗಳೆಂದು ಹಾಗೂ 10 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದರೆ ‘ಮೆಗಾ ಇನ್‌ಫ್ಲುಯೆನ್ಸರ್’ಗಳೆಂದು ಪರಿಗಣಿಸುತ್ತಿದೆ ಎಂದು ‘ಟೆಲಿಗ್ರಾಫ್‌’ ವರದಿ ಮಾಡಿದೆ.

ರಾಜಕೀಯ ಪಕ್ಷಗಳು ತಮ್ಮ ಪ್ರಚಾರದ ಉದ್ದೇಶ ಮತ್ತು ಬಜೆಟ್‌ಗೆ ಅನುಗುಣವಾಗಿ ಇನ್‌ಫ್ಲುಯನ್ಸರ್‌ಗಳನ್ನು ಆಯ್ಕೆ ಮಾಡುತ್ತವೆ. ನ್ಯಾನೋ ಮತ್ತು ಮೈಕ್ರೋ ಇನ್‌ಫ್ಲುಯನ್ಸರ್‌ಗಳು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಂಪರ್ಕ ಸಾಧಿಸಲು ಸಹಾಯ ಮಾಡಿದರೆ, ಮ್ಯಾಕ್ರೋ ಮತ್ತು ಮೆಗಾ ಇನ್‌ಫ್ಲುಯನ್ಸರ್‌ಗಳು ದೊಡ್ಡ ಪ್ರಮಾಣದಲ್ಲಿ ಜನರಿಗೆ ಸಂದೇಶವನ್ನು ಹರಡಬಲ್ಲರು ಎಂದು ಪಕ್ಷಗಳು ಭಾವಿಸಿವೆ.

image 104 1

ಕಳೆದ ವರ್ಷವಷ್ಟೇ ಲೈಫ್‌ಸ್ಟೈಲ್ ವ್ಲಾಗರ್ ಆಗಿ ವೃತ್ತಿ ಆರಂಭಿಸಿದ ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿನಿಯೊಬ್ಬರು, ತಾವು ಒಂದು ರಾಜಕೀಯ ಪಕ್ಷಕ್ಕಾಗಿ ಒಂದು ರೀಲ್ ಮಾಡಿರುವುದಾಗಿ ತಿಳಿಸಿದ್ದಾರೆ. “ರಾಜಕೀಯ ಪಕ್ಷವೊಂದರ ಪರವಾಗಿ ಒಂದು ರೀಲ್ಸ್‌ ಮಾಡಿದೆ. ಆ ನಂತರ, ಅದು ಸರಿಯಲ್ಲವೆಂದು ನನಗೆ ಅರಿವಾಯಿತು. ಆ ಬಳಿಕ, ರಾಜಕೀಯ ರೀಲ್ಸ್‌ ಮಾಡುವುದನ್ನು ನಿಲ್ಲಿಸಿದೆ. ಕೆಲವು ಇನ್‌ಫ್ಲುಯನ್ಸರ್‌ಗಳು ಈ ಆಫರ್‌ಗಳನ್ನು ಒಪ್ಪಿಕೊಂಡಿದ್ದಾರೆ. ಅವರು ಈಗ ಪೋಸ್ಟ್ ಮಾಡುತ್ತಿರುವ ಕಂಟೆಂಟ್ ನೋಡಿದರೆ, ಅದು ಅವರ ಸಾಮಾನ್ಯ ಕಂಟೆಂಟ್‌ಗಿಂತ ಭಿನ್ನವಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ” ಎಂದು ಹೇಳಿದ್ದಾರೆ.

ಗಮನಾರ್ಹವಾಗಿ, ಕಳೆದ (2025) ನವೆಂಬರ್‌ನಲ್ಲಿ ಕೋಲ್ಕತ್ತಾದ ಹೋಟೆಲ್ ಒಂದರಲ್ಲಿ ಬಿಜೆಪಿ ಸುಮಾರು 60 ಇನ್‌ಫ್ಲುಯನ್ಸರ್‌ಗಳಿಗಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. “ವಿರೋಧ ಪಕ್ಷಗಳನ್ನು ಟೀಕಿಸುತ್ತಾ ಬಿಜೆಪಿಯನ್ನು ಹೊಗಳುವ ಕಂಟೆಂಟ್ ಮಾಡಲು ಬಿಜೆಪಿ ಪರವಿರುವವರು ಹಣದ ಆಫರ್ ನೀಡಿದ್ದರು. ಆದರೆ, ಅವರ ರಾಜಕೀಯ ಸಿದ್ಧಾಂತದ ಮೇಲೆ ನನಗೆ ಒಲವಿಲ್ಲದ ಕಾರಣ ನಾನು ಅದನ್ನು ನಿರಾಕರಿಸಿದೆ” ಎಂದು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಲ್ಕತ್ತಾದ ಕಂಟೆಂಟ್ ಕ್ರಿಯೇಟರ್ ಒಬ್ಬರು ತಿಳಿಸಿದ್ದಾರೆ.

image 104 2

ಸುಮಾರು 65,000 ಫಾಲೋವರ್‌ಗಳನ್ನು ಹೊಂದಿರುವ ಮತ್ತೊಬ್ಬ ಇನ್‌ಫ್ಲುಯನ್ಸರ್‌, “ರಾಜಕೀಯ ಪಕ್ಷಗಳು ತಮ್ಮ ಕಂಟೆಂಟ್ (ರೀಲ್‌ಗಳು) ಸ್ವತಂತ್ರವಾಗಿ ಕಾಣಬೇಕೆಂದು ಬಯಸುತ್ತವೆ. ಯಾವುದೇ ರಾಜಕೀಯ ಪಕ್ಷದೊಂದಿಗೆ ನೇರ ಸಂಬಂಧ ಇರುವುದು ತಿಳಿಯಬಾರದು ಎನ್ನುತ್ತವೆ. ಇಲ್ಲಿ ಖಂಡಿತವಾಗಿಯೂ ಪಾರದರ್ಶಕತೆಯ ಕೊರತೆಯಿದೆ,” ಎಂದು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ರಾಜಬಂಶಿ, ಮತುವಾಗಳ ಬೆಂಬಲಕ್ಕಾಗಿ TMC ಮತ್ತು BJP ಸೆಣೆಸಾಟವೇಕೆ?

ಪಾಟ್ನಾ ಮತ್ತು ನೋಯ್ಡಾದಂತಹ ದೂರದ ನಗರಗಳಲ್ಲಿರುವ ಏಜೆನ್ಸಿಗಳೂ ಸಹ ಕೋಲ್ಕತ್ತಾದ ಇನ್‌ಫ್ಲುಯನ್ಸರ್‌ಗಳನ್ನು ಸಂಪರ್ಕಿಸಿವೆ ಮತ್ತು ದೀರ್ಘಕಾಲದ ಸಂಬಂಧದ ಭರವಸೆ ನೀಡಿವೆ ಎಂದು ಹಲವರು ತಿಳಿಸಿದ್ದಾರೆ. ಪಾಟ್ನಾದ ಮಾರ್ಕೆಟಿಂಗ್ ಏಜೆನ್ಸಿಯೊಂದು ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂರು ತಿಂಗಳ ರಾಜಕೀಯ ಪ್ರಚಾರಕ್ಕಾಗಿ ಇನ್‌ಫ್ಲುಯನ್ಸರ್‌ ಒಬ್ಬರನ್ನು ಸಂಪರ್ಕಿಸಿದೆ. ಇದರಲ್ಲಿ, ‘ನಾನ್-ಕೊಲಾಬ್’ (ಪಕ್ಷದ ಹೆಸರು ತೋರಿಸದ) ರೀಲ್ ಮತ್ತು ಸ್ಟೋರಿಗಳನ್ನು ಹಾಕಬೇಕೆಂದು ಸೂಚಿಸಿತ್ತು ಎಂದು ವರದಿಯಾಗಿದೆ.

ಬೆದರಿಕೆಗಳೂ ಇವೆ
ಆಫರ್‌ಗಳನ್ನು ನಿರಾಕರಿಸಿದಾಗ ಬೆದರಿಕೆಗಳು ಬಂದಿವೆ ಎಂದು ಕೋನಿನಿಕಾ ಡೇ ಅವರಂತಹ ಇನ್‌ಫ್ಲುಯನ್ಸರ್‌ಗಳು ಹೇಳಿದ್ದಾರೆ. “ನನಗೆ ಮೊದಲ ಸಹಯೋಗದ ಆಫರ್‌ ಬಂದಿತು. ಅದನ್ನು ನಾನು ನಿರಾಕರಿಸಿದ್ದಕ್ಕಾಗಿ ನನಗೆ ಅತ್ಯಾಚಾರದ ಬೆದರಿಕೆಗಳು ಬಂದಿವೆ. ಆ ಬೆದರಿಕೆಗಳನ್ನು ನಾನು ನಿರ್ಲಕ್ಷಿಸಿದೆ. ಒಂದು ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವುದು ವೈಯಕ್ತಿಕ ಆಯ್ಕೆ. ಒಂದು ಪಕ್ಷವು ಮತ್ತೊಂದಕ್ಕಿಂತ ಉತ್ತಮವೆಂದು ನಂಬುವಂತೆ ನಾನು ಜನರನ್ನು ಪ್ರಚೋದಿಸಲು ಸಾಧ್ಯವಿಲ್ಲ. ವೈಯಕ್ತಿಕ ನಂಬಿಕೆಯನ್ನು ವ್ಯವಹಾರದಿಂದ ದೂರವಿಡುವುದು ಉತ್ತಮ” ಎಂದು ಅವರು ಹೇಳಿದ್ದಾರೆ.

ಬಂಗಾಳ ಸರ್ಕಾರದ ಉದ್ಯೋಗಿಯೂ ಆಗಿರುವ ಫುಡ್ ವ್ಲಾಗರ್ ಒಬ್ಬರು ತಮಗೆ ಬಿಜೆಪಿ ಪರ ಏಜೆನ್ಸಿಯಿಂದ ಇಮೇಲ್ ಬಂದಿದೆ ಎಂದು ಹೇಳಿದ್ದಾರೆ. “ಅವರು ನನ್ನ ಹಿನ್ನೆಲೆಯನ್ನು ಪರಿಶೀಲಿಸದೆಯೇ ಆಫರ್ ನೀಡಿದ್ದರು. ನಾನು ಅದನ್ನು ನಿರ್ಲಕ್ಷಿಸಿದೆ,” ಎಂದಿದ್ದಾರೆ.

ಬಿಜೆಪಿ ಮತ್ತು ಟಿಎಂಸಿ ನಿರಾಕರಣೆ
ರಾಜಕೀಯ ಪ್ರಚಾರದ ಸಹಯೋಗಕ್ಕಾಗಿ ಸಾಮಾಜಿಕ ಜಾಲತಾಣ ಇನ್‌ಫ್ಲುಯನ್ಸರ್‌ಗಳನ್ನು ಕೇಳುತ್ತಿರುವ ಆರೋಪವನ್ನು ಬಂಗಾಳ ಬಿಜೆಪಿಯ ಸೋಶಿಯಲ್ ಮೀಡಿಯಾ ವಿಭಾಗದ ಸಂಚಾಲಕ ಸಪ್ತರ್ಷಿ ಚೌಧರಿ ನಿರಾಕರಿಸಿದ್ದಾರೆ. ಬಿಜೆಪಿ ಯಾವುದೇ ಏಜೆನ್ಸಿಯನ್ನು ಬಳಸುತ್ತಿಲ್ಲ. ಅಂತಹ ಯಾವುದೇ ಸಂದೇಶ ಅಥವಾ ಇಮೇಲ್ ಅನ್ನು ಪಕ್ಷವು ಯಾರಿಗೂ ಕಳುಹಿಸಿಲ್ಲ” ಎಂದು ಹೇಳಿಕೊಂಡಿದ್ದಾರೆ.

ಇನ್ನು, ಟಿಎಂಸಿ ಸೋಶಿಯಲ್ ಮೀಡಿಯಾ ಮುಖ್ಯಸ್ಥ ದೇಬಾಂಶು ಭಟ್ಟಾಚಾರ್ಯ ಕೂಡ ಆರೋಪವನ್ನು ತಳ್ಳಿಹಾಕಿದ್ದಾರೆ. “ಪಕ್ಷವು ಇನ್‌ಫ್ಲುಯನ್ಸರ್‌ಗಳನ್ನು ತನ್ನ ಸಿದ್ಧಾಂತದ ಅಡಿಯಲ್ಲಿ ತರಲು ಪ್ರಯತ್ನಿಸುತ್ತದೆಯೇ ಹೊರತು, ಹಣ ಪಾವತಿಯೊಂದಿಗೆ ಸಹಯೋಗ ಕೇಳಿಲ್ಲ. ನಾವು ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿಲ್ಲ. ರಾಜಕೀಯ ಸಿದ್ಧಾಂತವನ್ನು ಮೀರಿ ಬಂಗಾಳದ ಶತ್ರುಗಳ ವಿರುದ್ಧ ಹೋರಾಡಲು ಎಲ್ಲ ಇನ್‌ಫ್ಲುಯನ್ಸರ್‌ಗಳಿಗೆ ನಾವು ಬಹಿರಂಗ ಕರೆಯನ್ನಷ್ಟೇ ನೀಡಿದ್ದೇವೆ. ನಮಗೆ ಬಿಜೆಪಿ ಇರುವಷ್ಟು ದೊಡ್ಡ ಮೊತ್ತದ ಹಣದ ಚೀಲಗಳಿಲ್ಲ” ಎಂದು ಹೇಳಿದ್ದಾರೆ.

ಬಂಗಾಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಹನ್ ಮಿತ್ರ, “ಇನ್‌ಫ್ಲುಯನ್ಸರ್‌ಗಳನ್ನು ನೇಮಿಸಿಕೊಳ್ಳಲು ನಮ್ಮಲ್ಲಿ ಹಣ ಎಲ್ಲಿದೆ? ಹಲವು ವರ್ಷಗಳ ನಂತರ ಬಂಗಾಳದ ಎಲ್ಲ 294 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ಅಭ್ಯರ್ಥಿಗಳಿಗೆ ಪಕ್ಷದ ಬಾವುಟ ಮತ್ತು ಗೋಡೆ ಬರಹಕ್ಕೆ ಹಣ ಕೊಡುವುದೇ ನಮಗೆ ದೊಡ್ಡ ಸವಾಲಾಗಿದೆ. ಇನ್ನು, ಇನ್‌ಫ್ಲುಯನ್ಸರ್‌ಗಳು ಈಗಾಗಲೇ ದೊಡ್ಡ ಪಕ್ಷಗಳ ಜೊತೆಗಿದ್ದಾರೆ. ನಮಗೆ ಅಷ್ಟು ಹಣ ನೀಡಲು ಸಾಧ್ಯವಿಲ್ಲ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...